

ಸಿದ್ಧಾಪುರತಾಲೂಕಿನ ಕಲ್ಯಾಣಪುರದಲ್ಲಿ ಮಳೆ, ಪ್ರವಾಹದಿಂದಾಗಿ ತೋಟ, ಗದ್ದೆಗಳೆಲ್ಲಾ ನೀರಿನಲ್ಲಿ ಮುಳುಗಿವೆ. ಮನೆಯ ಹಿಂದಿನ ಜರಿ(ಧರೆ) ಮನೆಯೆಡೆಗೆ ನಿಧಾನ ಕುಸಿಯುತ್ತಿರುವುದರಿಂದ ಕಲ್ಯಾಣಪುರದ 8 ಮನೆಗಳ ಜನರು ಆತಂಕದಿಂದ ದಿನದೂಡುವಂತಾಗಿದೆ.
ಧರೆ ಕುಸಿದು ಮನೆಯ ಗೋಡೆಗೆ ಒರಗಿರುವುದರಿಂದ ಕೆಲವು ಕುಟುಂಬಗಳು ಮನೆಯಿಂದ ಹೊರಗೆ ವಾಸ್ತವ್ಯಮಾಡುತ್ತಿವೆ.
ಈ ಅಪಾಯದ ಹಿನ್ನೆಲೆಯಲ್ಲಿ ಇಂದು ಈ ಗ್ರಾಮಕ್ಕೆ ಭೇಟಿ ನೀಡಿದ ಕಂದಾಯ ಇಲಾಖೆಯ ಅಧಿಕಾರಿಗಳ ತಂಡ 6 ಕುಟುಂಬಗಳನ್ನು ಕಲ್ಯಾಣಪುರದ ಪ್ರಾಥಮಿಕ ಶಾಲೆಗೆ ಸ್ಥಳಾಂತರಿಸಿ, ಪುನರ್ವಸತಿ ವ್ಯವಸ್ಥೆ ಮಾಡಿತು. ಜನಪ್ರತಿನಿಧಿಗಳು,ಮಾಧ್ಯಮಪ್ರತಿನಿಧಿಗಳು, ಅಧಿಕಾರಿಗಳ ತಂಡ ಕಲ್ಯಾಣಪುರಕ್ಕೆ ತೆರಳಿದಾಗ ಜನರು ತಮ್ಮ ಆತಂಕ ತೋಡಿಕೊಂಡರು.
ನಾಟಿಮಾಡಿದ ಗದ್ದೆ, ಅಡಿಕೆ, ಬಾಳೆ ಬೆಳೆಗಳೆಲ್ಲಾ ನೀರುಪಾಲಾಗಿವೆ. ಮನೆಗೆ ಮನೆಹಿಂದಿನ ಧರೆ ಒರಗುತ್ತಿದೆ. ಮನೆ ಮೇಲಿನ ದೊಡ್ಡಮರಗಳು ಬೀಳುವ ಅಪಾಯವಿದೆ. ನಮಗೆ ಭಯರಹಿತ ವಾತಾವರಣದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿ ಎಂದರು.
ಇದೇ ಕಲ್ಯಾಣಪುರದಿಂದ ಗದ್ದೆ ಬಯಲಿಗೆ ತೆರಳಿ ವಾಸ್ತವ್ಯ ಹೂಡಿದ ಮನೆಗಳಿಗೆ ನೀರು ತುಂಬಿದೆ. ಮನೆಗೆ ಹೋಗುವ ರಸ್ತೆ ಮುಚ್ಚಿದೆ. ಹೀಗಾದರೆ ಏನು ಮಾಡುವುದು ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ತಹಸಿಲ್ಧಾರ ಗೀತಾಸಿ.ಜಿ. ಯವರೊಂದಿಗೆ ತಾ.ಪಂ. ಸದಸ್ಯ ನಾಶಿರ್ಖಾನ್ ಮತ್ತು ತಾ.ಪಂ. ಮಾಜಿ
ಸದಸ್ಯ ವಸಂತ ನಾಯ್ಕ ಜೊತೆಯಾಗಿದ್ದರು.

ಶಾಲೆ,2 ತೂಗುಸೇತುವೆ ಆಹುತಿಪಡೆದ ಮಳೆ
ಮಳೆಯ ತೀವೃತೆ ತುಸು ಕಡಿಮೆಯಾಗುತ್ತಿರುವ ಸಂದರ್ಭದಲ್ಲೇ ಸಿದ್ಧಾಪುರ ತಾಲೂಕಿನ ಬಳ್ಳಟ್ಟೆಯ ಕಿರಿಯ ಪ್ರಾಥಮಿಕ ಶಾಲೆ ಉರುಳಿ ಬಿದ್ದಿದೆ. ಕಾನಗೋಡು ಗ್ರಾಮ ಪಂಚಾಯತ್ ನ ಬಳ್ಳಟ್ಟೆ, ಐಗೋಡು ಉರ್ದುಶಾಲೆ ಮತ್ತು ಕಾನಗೋಡು ಹಿರಿಯ ಪ್ರಾಥಮಿಕ ಶಾಲೆಗಳಲ್ಲೆಲ್ಲಾ ಕಟ್ಟಡದ ಸಮಸ್ಯೆ ಇತ್ತು ಈ ಬಗ್ಗೆ ಸ್ಥಳಿಯ ಅಧಿಕಾರಿಗಳ ಗಮನಕ್ಕೆ ತಂದರೂ ಅವರು ಸ್ಫಂದಿಸಿರಲಿಲ್ಲ. ಶಾಲಾ ರಜಾ ಅವಧಿಯಲ್ಲಿ ಈ ಘಟನೆ ಸಂಭವಿಸಿರುವುದರಿಂದ ಜೀವಹಾನಿಯಾಗಿಲ್ಲ. ಈ ತೊಂದರೆಯ ಹೊಣೆಯನ್ನು ಸ್ಥಳಿಯ ಅಧಿಕಾರಿಗಳೇ ಹೊರಬೇಕು ಎಂದು ಗ್ರಾ.ಪಂ. ಸದಸ್ಯ ಶಿವಾನಂದ ಎಚ್. ಕೆ.ಪ್ರತಿಕ್ರೀಯಿಸಿದ್ದಾರೆ.
ಕಳೆದ 3-4 ದಿವಸಗಳ ನಿರಂತರ ಮಳೆ, ಮಹಾಪೂರದಲ್ಲಿ ಸಿದ್ಧಾಪುರ ತಾಲೂಕಿನ ಬಾಳೂರು ಮತ್ತು ಕುಮಟಾ ರಸ್ತೆಯ ಮಾಸ್ತಿಮನೆ ತೂಗುಸೇತುವೆಗಳು ಕೊಚ್ಚಿಹೋಗಿವೆ.


_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






