ಶೇ.10 ಮೀಸಲಾತಿ ಮೇಲುಜಾತಿ ಬಡವರಿಗೆ ವರದಾನವೇ?

  1. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಾಗದೇಶದಲ್ಲಿ ಶೇ.70ರಷ್ಟು ಬಡವರಿದ್ದರು. ಬಡತನ ನಿವಾರಣೆಗಾಗಿ ಸರ್ಕಾರ ಹಲವು ಯೋಜನೆಗಳನ್ನು ಹಾಗು ಆರ್ಥಿಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ ಪರಿಣಾಮವಾಗಿಇಂದು ಬಡತನವನ್ನು ಶೇ.22ಕ್ಕೆ ಇಳಿಸಿದ್ದೇವೆ. ಇದು ಮಹತ್ತರ ಸಾಧನೆ. ಆದರೆ ಸರ್ಕಾರದ ಹಲವು ಜನವಿರೋಧಿ ಹಾಗು ಅವೈಜ್ಞಾನಿಕ ನೀತಿಗಳ ಪರಿಣಾಮವಾಗಿ ಕೃಷಿ ಮತ್ತುಕೈಗಾರಿಕಾ ಕ್ಷೇತ್ರಗಳು ಬಿಕ್ಕಟ್ಟಿನಲ್ಲಿವೆ. ಸ್ವಾಭಿಮಾನ ಮತ್ತು ಸ್ವಾವಲಂಬನೆಯಿಂದಜೀವನ ಮಾಡುತ್ತಿದ್ದರೈತರುಆರ್ಥಿಕವಾಗಿ, ನೈತಿಕವಾಗಿ ಹಾಗು ಸಾಂಸ್ಕøತಿಕವಾಗಿ ದಿವಾಳಿಯಾಗಿದ್ದಾರೆ. ರೈತರುಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹಳ್ಳಿಗಳಿಂದ ಯುವಕರು ನಗರಗಳಿಗೆ ಗುಳೆ ಹೋಗುತ್ತಿದ್ದಾರೆ. ನಗರಗಳಲ್ಲಿ ಕೊಳಚೆ ಪ್ರದೇಶಗಳು ಬೆಳೆಯುತ್ತಿವೆ. ಜಾಗತೀಕರಣದ ಪರಿಣಾಮವಾಗಿ ಕೈಗಾರಿಕೆಗಳು ಮುಚ್ಚುತ್ತಿವೆ. ಕಾರ್ಮಿಕರು ಬೀದಿ ಪಾಲಾಗುತ್ತಿದ್ದಾರೆ. ಕೋಟಿಗಟ್ಟಲೇಯುವಜನರು ನಿರುದ್ಯೋಗಿಗಳಾಗಿದ್ದಾರೆ. ಕೋಟ್ಯಂತರಜನರನ್ನು ಹಸಿವು, ಅಭದ್ರತೆ, ಹಿಂಸೆ, ಕ್ರೌರ್ಯ ಇತ್ಯಾದಿಗಳು ಕಾಡುತ್ತಿವೆ.
  2. ಮೀಸಲಾತಿಯೇ ಈ ಸಮಸ್ಯೆಗಳಿಗೆ ಪರಿಹಾರವೆಂದುಗುಜರಾತಿನ ಪಟೇದಾರರು, ಹರಿಯಾಣದಜಾಟ್‍ರು, ರಾಜಾಸ್ಥಾನದಗುಜ್ಜಾರರು, ಮಹಾರಾಷ್ಟ್ರದ ಮರಾಠಿಗಳು, ಆಂಧ್ರಪ್ರದೇಶದ ಕಾಪುಗಳು ಮೀಸಲಾತಿ ಬೇಕೆಂದು ಹೋರಾಟ ಮಾಡುತ್ತಿದ್ದಾರೆ. ಇದರಜೊತೆಗೆ ಬಡ ಬ್ರಾಹ್ಮಣರು ಮತ್ತು ಮುಸಲ್ಮಾನರು ಸಹ ಮೀಸಲಾತಿ ಬೇಕೆಂದು ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿಕೇಂದ್ರ ಸರ್ಕಾರ ಸಂವಿಧಾನದ 103ನೇ ತಿದ್ದುಪಡಿತಂದು ಮೇಲ್‍ಜಾತಿ ಬಡವರಿಗೆ ಶೇ.10ರಷ್ಟು ಮೀಸಲಾತಿಯನ್ನು ನೀಡಿದೆ. 3. ಈ ಮೀಸಲಾತಿ ಸವಲತ್ತನ್ನುಉನ್ನತ ಶಿಕ್ಷಣ ಮತ್ತುಉದ್ಯೋಗಕ್ಕೆ ಸಂಬಂಧಿಸಿದ್ದಾಗಿದೆ. ಸರ್ಕಾರಿ ಹಾಗು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶೇ.10ರಷ್ಟು ಮೀಸಲಾತಿಅನ್ವಯವಾಗುತ್ತೆ. ಆದರೆ ಕೇವಲ ಸರ್ಕಾರಿ ವಲಯದಲ್ಲಿಉದ್ಯೋಗದ ಮೀಸಲಾತಿಅನ್ವಯವಾಗುತ್ತೆ. ಉನ್ನತ ಶಿಕ್ಷಣಕ್ಕೆ ಒಂದು ನೀತಿಉದ್ಯೋಗಕ್ಕೆ ಮತ್ತೊಂದು ನೀತಿಯೆಂಬ ಗೊಂದಲವನ್ನು ಸೃಷ್ಟಿಸಿದೆ. ಶೇ.10ರಷ್ಟು ಮೀಸಲಾತಿ ಪಡೆಯಲು ಮಾನದಂಡವೆಂದರೆ ವಾರ್ಷಿಕ ವರಮಾನ ರೂ.8 ಲಕ್ಷಕ್ಕಿಂತಕಡಿಮೆಇರಬೇಕುಅಥವಾ 5 ಎಕರೆಗಿಂತಕಡಿಮೆಜಮೀನಿರಬೇಕುಅಥವಾ1000 ಚದರಅಡಿಗಿಂತಕಡಿಮೆ ಮನೆ ಇರಬೇಕುಇತ್ಯಾದಿ. ಭಾರತದೇಶದಲ್ಲಿ ರೂ.8 ಲಕ್ಷಕ್ಕಿಂತಕಡಿಮೆ ವಾರ್ಷಿಕವರಮಾನವಿರುವ ಕುಟುಂಬಗಳು ಶೇ.95, 5 ಎಕರೆಗಿಂತಕಡಿಮೆಇರುವ ಕುಟುಂಬಗಳು ಶೇ.86 ಮತ್ತು 1000 ಚದರಡಿಗಿಂತಕಡಿಮೆ ವಸತಿ ಮನೆ ಇರುವವರು ಶೇ.80 ಕುಟುಂಬಗಳು. ಈ ಮಾನದಂಡಗಳ ಪ್ರಕಾರ ಶೇ.90ರಷ್ಟು ಮೇಲ್‍ಜಾತಿಯಜನರು ಒಳಪಡುತ್ತಾರೆ. ಪ್ರಸ್ತುತ ಮೀಸಲಾತಿ ಪಡೆಯಲು ಸ್ಪರ್ಧೆ ಹೆಚ್ಚುತ್ತದೆ ಹೊರತು ನಿಜವಾದ ಬಡವರಿಗೆಯಾವುದೇರೀತಿಯಲ್ಲಿ ಅನುಕೂಲವಾಗುವುದಿಲ್ಲ.
  3. ಭಾರತದೇಶದಲ್ಲಿ ಮೇಲ್‍ಜಾತಿಗಳು ಮೇಲ್ ವರ್ಗಗಳು, ಕೆಳ ಜಾತಿಗಳು, ಕೆಳ ವರ್ಗಗಳು, ಜಾತಿ-ಜಾತಿಯ ನಡುವೆರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕøತಿಕಅಸಮಾನತೆ ಈ ಜಾತಿ ವ್ಯವಸ್ಥೆ ಇಚ್ಛೆ ಪಟ್ಟು ಮಾಡಿಕೊಂಡ ಸಹಜ ಸ್ಥಿತಿಯಾಗದೆ, ಬಲವಂತವಾಗಿ ಹೇರಲಾದ ಸ್ಥಿತಿಯಾಗಿದೆ. ವ್ಯಕ್ತಿಯುತನಗೆ ನಿಗದಿಪಡಿಸಿದ ಕೆಲಸವು ಕಡ್ಡಾಯವಾಗಿದ್ದಲ್ಲಿ ಹಾಗೂ ವಂಶಪಾರಂಪರ್ಯವಾಗಿದ್ದಕಾರಣ ಕೆಲಸವನ್ನುಅಥವಾ ಕಸಬನ್ನು ಬದಲಾಯಿಸಿಕೊಳ್ಳುವಂತಿಲ್ಲ. ಕೆಳಜಾತಿಯ ಜನರಿಗೆ ಮತ್ತುಎಲ್ಲಾ ಮಹಿಳೆಯರಿಗೆ ಶಿಕ್ಷಣವನ್ನು ನಿರಾಕರಿಸಲಾಯಿತು. ಸತ್ತ ಹೆಣಗಳನ್ನು ಒಂದೇ ಮಸಣದಲ್ಲಿ ಸುಡುವುದಿಲ್ಲ ಅಥವಾ ಸಮಾಧಿ ಮಾಡುವುದಿಲ್ಲ. ಇದನ್ನುಅರಿತ ನಮ್ಮ ಹಿರಿಯರು ಭಾರತ ಸಂವಿಧಾನದಲ್ಲಿ ಸಾಮಾಜಿಕ ನ್ಯಾಯವನ್ನು ನೀಡುವುದಾಗಿ ಸಂವಿಧಾನದ ಪೀಠಿಕೆಯಲ್ಲಿ, ಅನುಚ್ಚೇದ 15, 16, 17 ಮತ್ತು 340ರಲ್ಲಿ ತಿಳಿಯಪಡಿಸಿದ್ದಾರೆ. 1973ರಲ್ಲಿ ಸರ್ವೋಚ್ಚ ನ್ಯಾಯಾಲಯಕೇಶವಾನಂದ ಭಾರತಿ ಪ್ರಕರಣದಲ್ಲಿ ಸಾಮಾಜಿಕ ನ್ಯಾಯ ನಮ್ಮ ಸಂವಿಧಾನದ ಮೂಲತತ್ವಗಳಲ್ಲಿ ಒಂದುಎಂದುಎತ್ತಿ ಹಿಡಿದಿವೆ.
    ಮೀಸಲಾತಿ ಸಾಮಾಜಿಕನ್ಯಾಯದಒಂದು ಭಾಗ. ಮೀಸಲಾತಿ ಬಡತನವನ್ನು ನಿರ್ಮೂಲನೆ ಮಾಡುವ ಸರ್ಕಾರದ ಕಾರ್ಯಕ್ರಮವೂಅಲ್ಲಅಥವಾ ಅದೊಂದುದಾನವೂಅಲ್ಲ. ಬದಲಾಗಿ ಮೀಸಲಾತಿಒಂದು ಮಾನವ ಹಕ್ಕು, ಸಮಾನತೆಯ ಸಾಧನೆ ಮತ್ತುಎಲ್ಲಾರೀತಿಯ ಪಕ್ಷಪಾತ ಮತ್ತು ಬಹಿಷ್ಕರಣೆಯ ವಿರುದ್ಧಒಂದು ಸಾಧನೆ. ಪ್ರಸ್ತುತ ಶೇ.10 ರಷ್ಟು ಮೀಸಲಾತಿಆರ್ಥಿಕವಾಗಿ ಬಡವರಿಗೆ ನೀಡಿರುವುದು ಸಾಮಾಜಿಕ ನ್ಯಾಯದ ಮೂಲತತ್ವಕ್ಕೆ ವಿರುದ್ಧವಾದದ್ದು.
  4. 1992ರಲ್ಲಿ ಸರ್ವೋಚ್ಚ ನ್ಯಾಯಾಲಯಇಂದಿರಾ ಸಹಾನಿ ಪ್ರಕರಣದಲ್ಲಿಎಲ್ಲಾ ವರ್ಗಗಳಿಗೂ ಮೀಸಲಾತಿ ಶೇ.50ನ್ನು ಮೀರಬಾರದೆಂಬ ಮಿತಿಯನ್ನು ಹೇರಿದೆ. ಪ್ರಸ್ತುತ ಮೀಸಲಾತಿಶೇ.60ಕ್ಕೆ ಏರಿಸುತ್ತದೆಆದ್ದರಿಂದ ಈ ಮೀಸಲಾತಿ ನ್ಯಾಯಾಲಯದತೀರ್ಪನ್ನು ಉಲ್ಲಂಘಿಸಿದಂತೆ. ಈ ಕಾರಣದಿಂದ ಶೇ.10ರಷ್ಟು ಮೀಸಲಾತಿ ನ್ಯಾಯಾಲಯದಲ್ಲಿ ಉರ್ಜಿತವಾಗುವುದೇ ಎಂಬ ಪ್ರಶ್ನೆ?
  5. ಉನ್ನತ ಶಿಕ್ಷಣ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗು ಖಾಸಗಿ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ. ಕೇಂದ್ರ ಸರ್ಕಾರ ದಿನೇ ದಿನೇ ಈ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಕೊಡುತ್ತಿರುವಆರ್ಥಿಕ ನೆರವನ್ನು ಕಡಿತಗೊಳಿಸುತ್ತಿದೆ. ಕೇಂದ್ರ ಸರ್ಕಾರ ಈ ಸಂಸ್ಥೆಗಳಿಗೆ ಹೆಚ್ಚುವರಿಅನುದಾನವನ್ನು ನೀಡಿ ಶೇ.10ರಷ್ಟು ಮೀಸಲಾತಿಯನ್ನು ಜಾರಿಗೊಳಿಸಲು ಪ್ರಯತ್ನಿಸಬಹುದು. ಆದರೆರಾಜ್ಯ ಸರ್ಕಾರ ಹಾಗು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುದಾನವನ್ನುಯಾರು ನೀಡುತ್ತಾರೆ. ಪ್ರವೇಶ ಅವಕಾಶಗಳನ್ನು ಹೆಚ್ಚಿಸಬಹುದು, ಆದರೆಅದರ ಪರಿಣಾಮವಾಗಿ ಹೆಚ್ಚುವರಿ ಶಿಕ್ಷಕರು, ಮೂಲ ಸೌಕರ್ಯಗಳು, ಗ್ರಂಥಾಲಯಗಳು ಇತ್ಯಾದಿಗಳ ಬೇಕಾಗುತ್ತವೆ, ಅವುಗಳವೆಚ್ಚವನ್ನುಯಾರು ಬರಿಸುತ್ತಾರೆ. ಈಗಾಗಲೇ ನಮ್ಮದೇಶದಉನ್ನತ ಶಿಕ್ಷಣ ಗುಣಾತ್ಮಕದಕೊರತೆಯಿಂದ ನರಳುತ್ತಿದೆ. ಪ್ರಸ್ತುತ ಮೀಸಲಾತಿ ಮತ್ತಷ್ಟು ಗೊಂದಲಗಳನ್ನು ಸೃಷ್ಟಿಸಿದೆ. ಇದರಿಂದ ನಿಜವಾಗಿ ಮೇಲ್‍ಜಾತಿಯ ಬಡವರಿಗೆ ಸಹಾಯವಾಗುತ್ತೆಂಬುದು ಕೇವಲ ಒಂದು ಭ್ರಮೆ.
  6. ದೇಶದಲ್ಲಿಇಂದು ಶೇ.26ರಷ್ಟು ಅರ್ಹಯುವಜನತೆಉನ್ನತ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಉಳಿದ ಶೇ.74ರಷ್ಟು ಯುವಜನತೆಗೆಉನ್ನತ ಶಿಕ್ಷಣ ಸಿಗುತ್ತಿಲ್ಲ. ಈ ಪರಿಸ್ಥಿತಿಗೆ ಅನೇಕ ಕಾರಣಗಳು. ಪ್ರಮುಖವಾದಕಾರಣವೆಂದರೆಉನ್ನತ ಶಿಕ್ಷಣದ ವೆಚ್ಚವನ್ನು ಬರಿಸಲು ಸಾಧ್ಯವಾಗದೆಇರುವುದು. ಇದರ ಪರಿಣಾಮವಾಗಿ 1917-18ನೇ ಸಾಲಿನಲ್ಲಿ 437 ವೈದ್ಯಕೀಯ, 795 ಡೆಂಟಲ್, 7.9 ಲಕ್ಷತಾಂತ್ರಿಕಹಾಗೂ ಇತರೆಸೀಟುಗಳು ಖಾಲಿ ಬಿದ್ದಿವೆ. ಇಷ್ಟೊಂದುದೊಡ್ಡ ಪ್ರಮಾಣದ ಸೀಟುಗಳು ಉನ್ನತ ಶಿಕ್ಷಣದಲ್ಲಿ ಖಾಲಿ ಇರುವಾಗ ಪ್ರಸ್ತುತ ಶೇ.10ರಷ್ಟು ಮೀಸಲಾತಿ ನೀಡಿದರೂ ಮೇಲ್‍ಜಾತಿಯ ಬಡವರು ಶಿಕ್ಷಣದ ವೆಚ್ಚವನ್ನು ಬರಿಸಲು ಸಾಧ್ಯವೇ. ಆದ್ದರಿಂದ ಈ ಮೀಸಲಾತಿಯಾವ ಪ್ರಯೋಜನಕ್ಕೆ.
  7. ದೇಶದಒಟ್ಟುಉದ್ಯೋಗ ಸೃಷ್ಟಿಯಲ್ಲಿ ಶೇ.2.7ರಷ್ಟು ಸರ್ಕಾರಿಕ್ಷೇತ್ರ ಉಳಿದ ಶೇ.97.3ರಷ್ಟು ಖಾಸಗಿ ಕ್ಷೇತ್ರದ್ದು. ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಅನ್ವಯಿಸುವುದಿಲ್ಲ. 2017ರಲ್ಲಿ ಕೇಂದ್ರಸರ್ಕಾರದಒಟ್ಟು ಉದ್ಯೋಗಗಳು ಸುಮಾರು 48 ಲಕ್ಷ. ಇವುಗಳ ಪೈಕಿ ಸುಮಾರು 15 ಲಕ್ಷ ಉದ್ಯೋಗಗಳು ಮಿಲಟರಿ, ಸಂವಿಧಾನಾತ್ಮಕ ನ್ಯಾಯಾಲಯಗಳು, ರಾಜಕೀಯ ಆಡಳಿತಗಾರರು ಇತ್ಯಾದಿ. ಇಲ್ಲಿ ಮೀಸಲಾತಿಅನ್ವಯಿಸುವುದಿಲ್ಲ. ಉಳಿದ 34 ಲಕ್ಷ ಉದ್ಯೋಗಗಳ ಪೈಕಿ ಇಂದು ಸುಮಾರು 4 ಲಕ್ಷ ಉದ್ಯೋಗಗಳು ಖಾಲಿ ಬಿದ್ದಿವೆ. ಅದೇರೀತಿದೇಶದಎಲ್ಲಾರಾಜ್ಯ ಸರ್ಕಾರಗಳಲ್ಲಿ 1.85 ಕೋಟಿ ಉದ್ಯೋಗಗಳ ಪೈಕಿ ಸುಮಾರು 20 ಲಕ್ಷ ಉದ್ಯೋಗಗಳು ಖಾಲಿ ಬಿದ್ದಿವೆ. ದಿನೇ ದಿನೇ ಸರ್ಕಾರ ನೂರಾರು ಸಾರ್ವಜನಿಕ ಸಂಸ್ಥೆಗಳನ್ನು ಮುಚ್ಚುತ್ತಿದೆ,ಇಲ್ಲವೆಖಾಸಗಿಯವರಿಗೆ ಮಾರುತ್ತಿದೆಅಥವಾ ಕಂಪ್ಯೂಟರೀಕರಣಗೊಳಿಸಿ ಉದ್ಯೋಗ ಅವಕಾಶಗಳನ್ನು ಕಡಿತಗೊಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮೇಲ್‍ಜಾತಿ ಬಡವರಿಗೆ ಎಷ್ಟು ಮಾತ್ರ ಪ್ರಸ್ತುತ ಮೀಸಲಾತಿಉಪಯೋಗವಾಗುತ್ತೆ.
  8. ಒಟ್ಟು ಉದ್ಯೋಗಳಲ್ಲಿ ಸರ್ಕಾರದ ಪಾಲು ಶೇ.2.7ರಷ್ಟು ಅಂದರೆ 2 ಕೋಟಿ 15 ಲಕ್ಷದಷ್ಟು. ಪ್ರತಿ ವರ್ಷ ಸುಮಾರು 7 ಲಕ್ಷ ಉದ್ಯೋಗಿಗಳು ನಿವೃತ್ತಿಯಾಗುತ್ತಾರೆ. ಖಾಲಿಯಾದ ಸ್ಥಾನಗಳ ಪೈಕಿ ಶೇ.50ರಷ್ಟು ಸಾಮಾನ್ಯ ವರ್ಗದಲ್ಲಿ ಬರುತ್ತವೆ. ಇದರ ಪೈಕಿ ಶೇ.10ರಷ್ಟೆಂದರೆ 70 ಸಾವಿರ ಉದ್ಯೋಗಗಳ ಲಭ್ಯವಾಗುತ್ತವೆ. ಆದರೆದೇಶದಲ್ಲಿ 5 ಕೋಟಿ 50 ಲಕ್ಷ ನಿರುದ್ಯೋಗಿಗಳು ಇದ್ದಾರೆ. ಪ್ರತಿ 10 ಉದ್ಯೋಗಗಳ ಪೈಕಿ 8 ಜನಅರೆ ಉದ್ಯೋಗಿಗಳು. ಪ್ರತಿ ತಿಂಗಳು ಸುಮಾರು 13 ಲಕ್ಷ ಉದ್ಯೋಗಗಳು ಸೃಷ್ಟಿಯಾಗಬೇಕು. ಆದರೆ ಕಳೆದ 2 ವರ್ಷಗಳಲ್ಲಿ ಸುಮಾರು 110 ಮಿಲಿಯ ಉದ್ಯೋಗಗಳನ್ನು ಕಳೆದುಕೊಂಡಿದ್ದೇವೆ., ಈ ಹಿನ್ನೆಲೆಯಲ್ಲಿ ಶೇ.10ರಷ್ಟು ಮೀಸಲಾತಿ ಮೇಲ್‍ಜಾತಿಯಲ್ಲಿರುವ ಬಡವರ ಸಮಸ್ಯೆಗಳಿಗೆ ಪರಿಹಾರವೆನ್ನಬಹುದೆ?
  9. ಸಂವಿಧಾನದ 103ನೇ ತಿದ್ದುಪಡಿತರುವುದಕ್ಕೆ ಮುಂಚೆ ಸರ್ಕಾರಯಾವುದೇಅಧ್ಯಯನವನ್ನು ನಡೆಸಲಿಲ್ಲ ಮತ್ತು ಮಾಹಿತಿಯನ್ನು ಸಂಗ್ರಹಿಸಲಿಲ್ಲ. ಪಾರ್ಲಿಮೆಂಟಿನಎಲ್ಲಾ ಸತ್ ಸಂಪ್ರದಾಯಗಳನ್ನು ಬದಿಗೊತ್ತಿಒಂದೇ ದಿವಸದಲ್ಲಿ ಲೋಕಸಭೆಯಲ್ಲಿ ಮತ್ತು ಮರು ದಿವಸವೇ ರಾಜ್ಯಸಭೆಯಲ್ಲಿತಿದ್ದುಪಡಿಯನ್ನುಅಂಗೀಕರಿಸಲಾಯಿತು. ಮೂರನೇ ದಿವಸವೇ ರಾಷ್ಟ್ರಪತಿಗಳ ಈ ತಿದ್ದುಪಡಿಗೆತಮ್ಮಅಂಕಿತವನ್ನು ಹಾಕಿದರು. ಬಹುಪಾಲು ವಿರೋಧ ಪಕ್ಷಗಳು ಸಹ ಸಮರ್ಥಚರ್ಚೆಯನ್ನು ನಡೆಸಲಿಲ್ಲ ಮತ್ತು ಸಮಸ್ಯೆಗೆ ವೈಜ್ಞಾನಿಕಪರಿಹಾರವನ್ನು ಸೂಚಿಸುವಲ್ಲಿ ವಿಫಲವಾದವು. ಒಟ್ಟಾರೆ ಈ ತಿದ್ದುಪಡಿಯ ಪ್ರಕ್ರಿಯೆ ಪಾರ್ಲಿಮೆಂಟರಿ ಪದ್ಧತಿಗೆ ಮತ್ತು ಪ್ರಜಾಪ್ರಭುತ್ವದ ವ್ಯವಸ್ಥೆಗೆಆರೋಗ್ಯಕರ ಬೆಳವಣಿಗೆಯಲ್ಲ.
  10. ಎಲ್ಲಿಯವರೆಗೆ ಸರ್ಕಾರ ಹೆಚ್ಚು ಹೆಚ್ಚುಉದ್ಯೋಗ ಅವಕಾಶಗಳನ್ನು ಸೃಷ್ಟಿಸುವುದಿಲ್ಲವೋ, ದುಡಿಮೆಗೆ ಸಮನಾದ ಪ್ರತಿಫಲವನ್ನು ಮತ್ತುಉದ್ಯೋಗದ ಭದ್ರತೆಯನ್ನು £ೀಡುವುದಿಲ್ಲವೋಅಲ್ಲಿಯವರೆಗೆ ಮೀಸಲಾತಿ, ಒಳಮೀಸಲಾತಿ, ಬಡ್ತಿಯಲ್ಲಿ ಮೀಸಲಾತಿ, ಮೇಲ್‍ಜಾತಿಯವರಿಗೆ ಮೀಸಲಾತಿ, ಧರ್ಮದಆಧಾರದ ಮೇಲೆ ಮೀಸಲಾತಿಇತ್ಯಾದಿ ಬೇಡಿಕೆಗಳು ಮುಂದುವರಿಯುತ್ತವೆ. ಈ ಸಮಸ್ಯೆಗೆ ಶಾಶ್ವತವಾದ ಪರಿಹಾರವೆಂದರೆ ಸರ್ಕಾರತನ್ನ ನೀತಿಯಲ್ಲಿ ಸೂಕ್ತ ಬದಲಾವಣೆಗಳನ್ನು ತಂದು ಹೆಚ್ಚು ಹೆಚ್ಚು ಉದ್ಯೋಗದ ಅವಕಾಶಗಳನ್ನು ಸೃಷ್ಟಿಸಬೇಕಾಗಿದೆ. ಉಚಿತವಾದ ಮತ್ತುಗುಣಾತ್ಮಕ ಶಿಕ್ಷಣ ನೀಡುವ ಕ್ರಮಗಳನ್ನು ಕೈಗೊಳ್ಳಬೇಕು. ಸರ್ಕಾರಕಡ್ಡಾಯವಾಗಿ ಈ ಕೆಲಸ ಮಾಡಬೇಕಾದರೆ ಶಿಕ್ಷಣ ಮತ್ತುಉದ್ಯೋಗ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕಾಗಬೇಕು.

ದಿನಾಂಕ:-05-02-2019 ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನದಾಸ್
ಸ್ಥಳ:- ಬೆಂಗಳೂರು ನಿವೃತ್ತ ನ್ಯಾಯಮೂರ್ತಿಗಳು

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *