

ಎಲ್ಲೆಡೆ ಕನ್ನಡ ರಾಜ್ಯೋತ್ಸವ ಸಂಬ್ರಮ ಸಿದ್ಧಾಪುರದಲ್ಲಿ ಸಲ್ಲದ ಹೊಸ ಸಂಪ್ರದಾಯಕ್ಕಾಗಿ ಕಾದು ಸುಸ್ತಾದ ವಿದ್ಯಾರ್ಥಿಗಳು
ದೇಶದ ಪ್ರಾಂತವಾರು ವಿಂಗಡನೆ ಹಿನ್ನೆಲೆಯಲ್ಲಿ ಭಾಷೆಗೊಂದು ರಾಜ್ಯ ಕಲ್ಫನೆಯಲ್ಲಿ ಒಡಮೂಡಿದ ರಾಜ್ಯೋತ್ಸವವನ್ನು ಇಂದು ದೇಶದಾದ್ಯಂತ ಸಂಬ್ರಮದಿಂದ ಆಚರಿಸಲಾಯಿತು.
ಕನ್ನಡಾಂಬೆ, ಕನ್ನಡತಾಯಿ ಕಲ್ಫನೆಯಲ್ಲಿ ಧಾರ್ಮಿಕವಾಗಿ, ಸಾಂಸ್ಕøತಿಕವಾಗಿ ಏಕೀಕರಣವನ್ನು ಸ್ಮರಿಸಲು ಈ ದಿನವನ್ನು ಮೀಸಲಿಡಲಾಯಿತು. ಇದೇ ದಿನ ಹಲವೆಡೆ ಏಕೀಕರಣಕ್ಕೆ, ಕನ್ನಡಕ್ಕೆ, ಕನ್ನಡ ನಾಡು,ನುಡಿಗಾಗಿ ದುಡಿದವರನ್ನು ಸ್ಮರಿಸಿ ಕನ್ನಡ ದೇವಿಯ ಹಬ್ಬವನ್ನು ಆಚರಿಸಲಾಯಿತು. ಸಿದ್ದಾಪುರದಲ್ಲಿ ಭುವನಗಿರಿಯಲ್ಲಿ ಮಾತೃವಂದನೆ,ರಾಜ್ಯೋತ್ಸವ ಮೆರವಣಿಗೆಗೆ ಭುವನಗಿರಿಯಿಂದ ಜ್ಯೋತಿ ತರುವ ಆಚರಣೆಗಳೆಲ್ಲಾ ಇತ್ತೀಚಿನ ದಿನಗಳಲ್ಲಿ ಪ್ರಾರಂಭವಾದವುಗಳು.
ಇಂದು ಭುವನಗಿರಿಯಲ್ಲಿ ಮಾತೃವಂದನೆ ಮಾಡಿ ಕೆಲವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಗರದಲ್ಲಿ ನಡೆಯುವ ರಾಜ್ಯೋತ್ಸವ ಮೆರವಣಿಗೆಗೆ ಭುವನಗಿರಿಯಿಂದ ಜ್ಯೋತಿ ತರುವ ಹೊಸ ರೂಢಿಯನ್ನು ಕಳೆದ ವರ್ಷ ತಹಸಿಲ್ಧಾರ ಪಟ್ಟರಾಜಗೌಡ ಪ್ರಾರಂಭಿಸಿದ್ದರು.
ಈ ಹೊಸ ಆಚರಣೆಗೆ ಕಾರಣ ಹಂಪಿಯಲ್ಲಿರುವ ಭುವನೇಶ್ವರಿ ದೇವಾಲಯದಿಂದ ರಾಜ್ಯೋತ್ಸವ ಆಚರಣೆಗೆ ಜ್ಯೋತಿ ಕೊಂಡೊಯ್ಯಲಾಗುತ್ತಿರುವ ಹಳೆ ಸಂಪ್ರದಾಯ.ಆ ಹಳೆಸಂಪ್ರದಾಯದ ಮಾದರಿಯಲ್ಲಿ ಸಿದ್ದಾಪುರದಲ್ಲಿ ಕಳೆದ ವರ್ಷದಿಂದ ಪ್ರಾರಂಭವಾಗಿರುವ ಜ್ಯೋತಿ ತರುವ ವ್ಯವಸ್ಥೆ ಈ ವರ್ಷ ವ್ಯವಸ್ಥಿತವಾಗಿ ನಡೆಯಿತು.
ಆದರೆ ಈ ಹೊಸ ಸಂಪ್ರದಾಯದಿಂದ ತೊಂದರೆಗೆ ಒಳಗಾದವರು ಹಿರಿಯ ನಾಗರಿಕರು ಮತ್ತು ವಿದ್ಯಾರ್ಥಿ, ವಿದ್ಯಾರ್ಥಿನಿಯರು. ಪೂರ್ವನಿಗದಿಯಂತೆ ಶುಕ್ರವಾರದ ಮುಂಜಾನೆ ಆರು ಗಂಟೆಗೆ ಭುವನಗಿರಿಗೆ ತೆರಳಿ ಜ್ಯೋತಿಯನ್ನು ತರಬೇಕಿತ್ತು. ಅದಕ್ಕೆ ತಗಲಬಹುದಾದ ಅಂದಾಜು ಸಮಯದಂತೆ ನಗರದಲ್ಲಿ ರಾಜ್ಯೋತ್ಸವ ಮೆರವಣಿಗೆಯನ್ನು ಬೆಳಿಗ್ಗೆ ಏಳು ಗಂಟೆಗೆ ಪ್ರಾರಂಭಿಸಬೇಕಿತ್ತು. ತಾಲೂಕಾ ಆಡಳಿತದ ಸೂಚನೆಯಂತೆ ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಸಾರ್ವಜನಿಕರು ಸಿ.ಆರ್. ಹಾಲ್ ಬಳಿ 7 ಗಂಟೆಯ ಮೊದಲೇ ಸೇರಿದ್ದರು.
ಆದರೆ ನಾಡಜ್ಯೋತಿಎಂಟು ಗಂಟೆ ಮೂವತ್ತು ನಿಮಿಷ ಕಳೆದರೂ ನಿಗದಿತ ಸ್ಥಳಕ್ಕೆ ಬರಲೇ ಇಲ್ಲ. ನಿಗದಿಯಂತೆ 9 ಗಂಟೆಗೆ ನೆಹರೂ ಮೈದಾನದಲ್ಲಿ ಸಾರ್ವಜನಿಕ ಧ್ವಜಾರೋಹಣ ನಡೆಯಬೇಕಿತ್ತು. ಮುಂಜಾನೆಯಿಂದ ಪ್ರಾರಂಭವಾದ ವಿಳಂಬ ಮೆರವಣಿಗೆ,ಕಾರ್ಯಕ್ರಮಕ್ಕೂ ತಟ್ಟಿತು.ರಾಜ್ಯೋತ್ಸವಕ್ಕಾಗಿ 5-6 ಗಂಟೆಯ ಸಮಯಕ್ಕೆ ಎದ್ದು ಉಪಹಾರ ಮಾಡದೆ ಬಂದಿದ್ದ ವಿದ್ಯಾರ್ಥಿಗಳಿಗೆ ಎಲ್ಲದಕ್ಕೂ ಅನಾನುಕೂಲವಾಯಿತು.
ಇಂದಿನ ಕಾರ್ಯಕ್ರಮದಲ್ಲಿ ಅಚ್ಚುಕಟ್ಟಾದ ಮೆರವಣಿಗೆ,ಸುವ್ಯವಸ್ಥೆ ಎಲ್ಲವೂ ಧನಾತ್ಮಕ ಅಂಶವಾಗಿ ಗಮನ ಸೆಳೆದರೆ, ಸಮಯಪಾಲನೆಯಾಗದೆ ಎಲ್ಲಾ ಕಾರ್ಯಕ್ರಮ ವಿಳಂಬವಾಯಿತು.ಈ ಬಗ್ಗೆ ವಿಶಾಧಿಸಿದ ಕೆಲವು ಹಿರಿಯ ನಾಗರಿಕರು ಕಳೆದ ವರ್ಷದಿಂದ ಪ್ರಾರಂಭಿಸಿದ ಹೊಸ ವ್ಯವಸ್ಥೆ ಜ್ಯೋತಿ ತರುವ ಪರಿಕಲ್ಫನೆಯಿಂದ ಎಲ್ಲದಕ್ಕೂ ವಿಳಂಬ, ಎಲ್ಲರಿಗೂ ತೊಂದರೆಯಾಯಿತು.ಮುಂದಿನ ವರ್ಷದಿಂದ ಈ ಜ್ಯೋತಿ ತರುವ ಹೊಸ ರೂಢಿಯನ್ನು ನಿಲ್ಲಿಸುವುದೇ ಇದಕ್ಕೆ ಪರಿಹಾರ ಎಂದರು.
ಮರೆತ ಕರನಿರಾಕರಣೆಯ ವೀರ- ಉಳುವರೆ ರಾಮದಾಸ ಗೌq
“ನಾನು ಕರಮರಕರ್‍ರವರಿಗೆ ಭಾಷೆ ಕೊಟ್ಟಿದ್ದೇನೆ. ನಾನು ಸತ್ತು ಹೋದೆ ಅಂತಾ ಅವರಿಗೆ ಕೊಟ್ಟ ಭಾಷೆ ತಪ್ಪಿಸಬೇಡಿ. ಹಾಗೇನಾದ್ರೂ ನಾನು ಸತ್ರೂ ಮೇಲೆ ನರಳೂದು ತಪ್ಪೂದಿಲ್ಲ. ಮಾತು ತಪ್ಪಿಸಬೇಡಿ.” ಇನ್ನೇನು ಕೊನೆಯ ಮಾತೆಂಬಂತೆ ಅಪ್ಪ ತನ್ನ ಮಕ್ಕಳಿಗೆ ಹೇಳುತ್ತಿದ್ದ. ಪಕ್ಕದಲ್ಲೇ ಇದ್ದ ಹೆಂಡತಿಯು ಅದಕ್ಕೆ ಅನುಮೋದನೆ ಎಂಬಂತೆ ಕುಳಿತಿದ್ದಳು.
ಮಕ್ಕಳಂತೂ ಅಪ್ಪನ ಮಾತಿಗೆ ಎದುರಾಡುವವರೇ ಅಲ್ಲ. ಅಪ್ಪ ಹೇಳುವುದಕ್ಕೂ ಮೊದಲೇ ಅಪ್ಪನ ಕೊನೆಯ ಆಸೆ ಇಡೇರಿಸುವುದು ತಮ್ಮ ಕೆಲಸ ಎಂಬಕರ್ತವ್ಯ ಪ್ರಜ್ಞೆ ಅವರಲ್ಲಿ ತುಂಬಿತ್ತು. ಆದರೆ ಆ ಅಪ್ಪ ಈಡೇರಿಸುವಂತೆ ಕೇಳಿದ್ದು ಅಂತಿಂತಹ ಆಸೆಯಲ್ಲ. ಅಪ್ಪನ ಆಸೆಯನ್ನು ಈಡೇರಿಸುವುದಾದಲ್ಲಿ ಆ ಮಕ್ಕಳು ತಮ್ಮ ಆಸ್ತಿ ಪಾಸ್ತಿಯನ್ನೆಲ್ಲ ಬಿಟ್ಟು ಕೊಡಬೇಕಾಗುತ್ತಿತ್ತು.


