ಒಡನಾಡಿಗೆ ಶುಭನುಡಿ

ಸಿದ್ಧಾಪುರದ ಕನ್ನಡ ಸಾಹಿತ್ಯ ಪರಿಷತ್ ಘಟಕ ಚುರುಕಾಗಿ ಸಾಹಿತ್ಯ ಚಟುವಟಿಕೆಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಸಂಘಟಿಸುತ್ತಿದೆ ಎಂದು ಹೆಸರಾಗುತಿದ್ದಾಗ ನಮ್ಮೊಂದಿಗಿದ್ದವರು ಎಂ.ಕೆ.ನಾಯ್ಕ, ತಮ್ಮಣ್ಣ ಬೀಗಾರ್, ಕಮಲಾಕರ ಭಂಡಾರಿ, ರತ್ನಾಕರ ನಾಯ್ಕ, ನರೇಂದ್ರ ಹಿರೇಕೈ, ಎಂ.ವಿಠ್ಠಲ, ಭಾಸ್ಕರ್ ನಾಯ್ಕ ಸೇರಿದ ಅನೇಕರು.
ಸಿದ್ಧಾಪುರದಲ್ಲಿ ಜಿಲ್ಲಾ ಘಟಕ ನೆಲೆ ನಿಂತು, ಸಾಹಿತ್ಯ ಚಟುವಟಿಕೆ, ಪರಿಷತ್ ಪಾಮರರಿಗಲ್ಲ ಎನ್ನುವ ವಾತಾವರಣವಿದ್ದಾಗ ಸಾಹಿತ್ಯದ ಸಾಧ್ಯತೆಗಳ ವಿಸ್ತರಣೆಗೆ ಹೆಗಲುಕೊಟ್ಟವರು ಇವರೆಲ್ಲಾ.
ಬೇಡ್ಕಣಿಯಲ್ಲಿ ತಾ.ಕ.ಸಾ.ಪ.ದ ಮೊದಲ ಸಮ್ಮೇಳನ! ನಂತರ ನಮ್ಮ ಅವಧಿಯಲ್ಲಿ ನಿರಂತರ ಮೂರು ಅದ್ಧೂರಿ ಸಮ್ಮೇಳನಗಳು, ಹೊಸ ರಕ್ತ, ಹೊಸ ಚಿಂತನೆ, ವಿನ್ಯಾಸ ತಲೆ ಎತ್ತುತ್ತಿರುವುದಕ್ಕೆ ಸಾಕ್ಷಿಯಾದವರು ಡಾ.ಆರ್.ಪಿ.ಹೆಗಡೆ, ನಾಗೇಶ್ ಹೆಗಡೆ, ಸುಬ್ರಾಯ ಮತ್ತೀಹಳ್ಳಿ, ಗೋಪಾಲ ನಾಯ್ಕ ಮಾಸ್ತರ್ ಇತ್ಯಾದಿ……
ಹೀಗೆ ಹಳೆಬೇರು, ಹೊಸ ಚಿಗುರುಗಳ ಸಮ್ಮಿಳನದ ಸಾಹಿತ್ಯ ಚಟುವಟಿಕೆ,ಸಮ್ಮೇಳನ, ಸಂಘಟನೆ, ಸಂಭ್ರಮ ಎಲ್ಲವೂ ವಿನೂತನ ಆಗಿದ್ದುದು ನಮ್ಮೆಲ್ಲರ ಆಸಕ್ತಿ- ಅಭಿರುಚಿಯ ಕಾರಣಕ್ಕೆ.
ಈ ಕ್ಷಣಗಳೆಲ್ಲಾ ಬಿಡಿಬಿಡಿಯಾಗಿ ದಾಖಲಾದದ್ದಿದೆ. ಆದರೆ ಇವುಗಳನ್ನು ಇಡಿಯಾಗಿ ಪೋಣಿಸುವುದೆಂದರೆ ಕೈಗೆ ಸಿಗದ ಹೂಗಳನ್ನು ಜೋಡಿಸಿ, ಹೆಣೆದಂತೆ.
ಈ ಎಲ್ಲಾ ವಾಸ್ತವದ ಕ್ಷಣಗಳಿಗೆ ಸಾಕ್ಷಿಯಾದವರು ರತ್ನಾಕರ ನಾಯ್ಕ ಮತ್ತವರ ಸಮಾನಮನಸ್ಕರ ನಮ್ಮ ಸ್ನೇಹಿತರ ಕೂಟ.
ಈ ಕೂಟದ ಕೆಲವರು, ಕೆಲವು ದಾಖಲೆಗಳನ್ನು ಅಕ್ಷರರೂಪದಲ್ಲಿ ಜೊತೆಗಿಟ್ಟರೆ ಅದು ಚಂದವಾಗಲಾರದೆ, ಅಂಥ ಚಂದದ ಬಂಧಕ್ಕಾಗಿ ರತ್ನಾಕರ ನೇತೃತ್ವ ವಹಿಸಿದ್ದಾರೆ.
ಬಹುಕಾಲ ಸ್ಮರಣೆ-ದಾಖಲೆಯಲ್ಲಿರಬಹುದಾದ ಸಂಗ್ರಹ ಒಂದಕ್ಕೆ ಒಡನಾಡಿ ಅರ್ಥಪೂರ್ಣ ಶೀರ್ಷಿಕೆ ಕೂಡಾ. ಒಡನಾಡಿಯ ಪ್ರತಿ ಅಕ್ಷರಗಳು ಇಂದಲ್ಲಾ ನಾಳೆ ಎದೆಗೆ ಬಿದ್ದು ಫಲವಾಗಿ ಅರಳುತ್ತವೆ.
ಈ ದಾಖಲಾರ್ಹ ಕೆಲಸಕ್ಕೆ ಕಾರಣೀಭೂತರಾದ ಅಸಂಖ್ಯ ಹಿರಿಯರು, ಇದರ ಫಲಾನುಭವಿಗಳಾದ ಕಿರಿಯರು, ಸರ್ವರಿಗೂ ಈ ಹೊತ್ತಿಗೆ ಆಯಾ ಹೊತ್ತಿಗೆ ಒದಗುವ ಜ್ಞಾನ ಜ್ವಾಲೆಯಾಗಲಿ.
ಸಿದ್ಧಾಪುರ ಸ್ವಾತಂತ್ರ್ಯ ಹೋರಾಟಕ್ಕಿಂತ ಮೊದಲಿನಿಂದಲೂ ಶೂರತನ, ಹೋರಾಟ, ಧೀರತನಕ್ಕೆ ಹೆಸರಾದದ್ದು, ಚರಿತ್ರೆ,ಇತಿಹಾಸ, ಸಾಧಕರ ಪಟ್ಟಿ ಎಲ್ಲದರಲ್ಲೂ ತಪ್ಪಿಸಿಕೊಂಡವರ ಸಂಖ್ಯೆಯೇ ದಾಖಲಾದವರಿಗಿಂತ ಹೆಚ್ಚು. ಬೇಡ್ಕಣಿಯ ಚೌಡಾ ನಾಯ್ಕರು, ಹೊಸೂರಿನ ಗಣಪತಿಯಪ್ಪ, ಹುಸೂರಿನ ರಾಮ-ಲಕ್ಷ್ಮಣರು ಹೀಗೆ ತೆರೆಮರೆಯ ಎಷ್ಟೋ ಜನರು ದಾಖಲಾಗದೆ ವಿಸ್ಮøತಿಗೆ ಸರಿದಂತೆ ನಮ್ಮ ಕಾಲದ ಸಾಹಸ,ಚರಿತ್ರೆಯ ಕತೆಗಳ ಪಾಡೂ ಆಗಬಾರದಲ್ಲವೆ?
ಹಾಗಾಗಿ, ರತ್ನಾಕರರ ಒಡನಾಡಿ ಮಹತ್ವದ್ದು, ಅನನ್ಯ, ನಮ್ಮ ಅಸ್ಮಿತೆಗೆ ಸರಕಾಗಬೇಕಾದದ್ದು. ಇಂಥ ಚರಿತ್ರೆಯ ಕಾರಣಕ್ಕೆ, ಅದು ದಾಖಲಾಗುತ್ತಿರುವ ಕಾರಣಕ್ಕೆ, ದಾಖಲಾಗಲು ಹಲವರು ಒತ್ತಾಸೆಯಾಗಿ ನಿಂತ ಕಾರಣಕ್ಕೆ, ಈ ಚರಿತ್ರೆಯನ್ನು ಈಗ ಮುಂದೆ ಓದಿ, ಸ್ಮರಿಸುವ ಕಾರಣಕ್ಕೆ ಇದು ಮಹತ್ವದ್ದು,ಪ್ರಮುಖದ್ದು.
ಒಡನಾಡಿಯ ಹಿತೈಸಿ ವರ್ಗದ ಸ್ಮರಣೆಗಳೊಂದಿಗೆ……
ಇಂತಿ ನಿಮ್ಮ ಕನ್ನೆಶ್, ಕೋಲಶಿರ್ಸಿ ಸಮಾಜಮುಖಿ 9740598884 (ನಾಳೆ ಬಿಡುಗಡೆಯಾಗಲಿರುವ ಒಡನಾಡಿ ಹೊತ್ತಿಗೆಗೆ ಶುಭ ಹಾರೈಸಿ ಬರೆದ ಶುಭನುಡಿ)

ವಿಧಾನಸಭಾಧ್ಯಕ್ಷರ ಮಗಳ ಮದುವೆ ಆರತಕ್ಷತೆಯಲ್ಲಿ ಆಪ್ತರೇ ನಾಪತ್ತೆ!
ಕಾಗೇರಿ ಪಲಾಯನಕ್ಕೆ ಪೂರ್ವಭಾವಿ ಸಿದ್ಧತೆಯ ನಿರೀಕ್ಷೆ?
ಉತ್ತರ ಕನ್ನಡ ಜಿಲ್ಲೆಯ ಮಟ್ಟಿಗೆ ಈ ವಾರ ಎರಡು ವಿಶೇಶ ಸಂದರ್ಭಗಳು ಸಾರ್ವಜನಿಕ ಆಸಕ್ತಿಯ ಕೇಂದ್ರಗಳಾಗಿದ್ದವು.
ಮೊದಲನೆಯದು ಯಲ್ಲಾಪುರ ಕ್ಷೇತ್ರದ ಉಪಚುನಾವಣೆ,
ಎರಡನೆಯದು ರಾಜ್ಯ ವಿಧಾನಸಭೆಯ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಮಗಳ ಮದುವೆ ಮತ್ತು ಆರತಕ್ಷತೆ.
ಯಲ್ಲಾಪುರ ಉಪಚುನಾವಣೆಯನ್ನು ಪ್ರತಿಷ್ಠೆಯಪ್ರಶ್ನೆ ಯನ್ನಾಗಿಸಿಕೊಂಡ ರಾಜ್ಯ ಬಿ.ಜೆ.ಪಿ. ಮತ್ತು ಯಡಿಯೂರಪ್ಪ ನೇತೃತ್ವದ ಸರ್ಕಾರ ನಿರೀಕ್ಷೆಯಂತೆ ಬಹುಮತದಿಂದ ಯಲ್ಲಾಪುರ ಕ್ಷೇತ್ರವನ್ನು ವಶಪಡಿಸಿಕೊಂಡಿವೆ.
ಈ ಚುನಾವಣೆಯಲ್ಲಿ ಶಿವರಾಮ ಹೆಬ್ಬಾರ್ ಸ್ಫರ್ಧಿಸುವುದು, ಗೆಲ್ಲುವುದು ಪೂರ್ವನಿಯೋಜಿತವಾಗಿತ್ತು. ಇವರ ಎದುರಾಳಿ ಭೀಮಣ್ಣ ನಾಯ್ಕ ಕಾಂಗ್ರೆಸ್ ನ ಅನಿವಾರ್ಯ ಆಯ್ಕೆಯಾಗಿದ್ದರೂ ಕಾಂಗ್ರೆಸ್ ಮುಖಂಡ ಮಾಜಿ ಸಚಿವ ಆರ್.ವಿ.ದೇಶಪಾಂಡೆ ತಮ್ಮ ಮಗ ಅಥವಾ ತಮ್ಮ ತಲೆದಂಡದ ಬದಲು ಭೀಮಣ್ಣ ನಾಯ್ಕರನ್ನು ಬಳಸಿಕೊಂಡರು ಎನ್ನುವ ಆರೋಪಗಳಿವೆ.
ಅದೇನೇ ಇರಲಿ ಭೀಮಣ್ಣ ನಾಯ್ಕ ಶಿರಸಿ ಕ್ಷೇತ್ರದಲ್ಲಿ ಮತ್ತು ಯಲ್ಲಾಪುರ ಕ್ಷೇತ್ರದಲ್ಲಿ ಕೂಡಾ ಕಾಂಗ್ರೆಸ್ ವಿರೋಧದ ಅಲೆ ನಡುವೆ ಅರ್ಧ ಲಕ್ಷ ಮತಗಳನ್ನು ಬಾಚಿರುವುದು ಅವರ ವೈಯಕ್ತಿಕ ಸಾಮಥ್ರ್ಯ ಮತ್ತು ಕಾಂಗ್ರೆಸ್ ಸಾಂಪ್ರದಾಯಿಕ ಮತಗಳ ದೆಸೆಯಿಂದಾಗಿ ಎನ್ನುವುದೂ ಸಾಬೀತಾಗಿದೆ.
ಕಾಂಗ್ರೆಸ್ ಬಹುಸಂಖ್ಯಾತ ದಲಿತ, ಹಿಂದುಳಿದ ವರ್ಗಗಳ ಪರವಾಗಿದೆಯಾದರೂ ಅದು ಭಾರತೀಯ ಕಾಯಸ್ಥ ಜಾತಿ, ಉಚ್ಛವರ್ಗದ ಪರಿವಾರದ ಮನಸ್ಥಿತಿಯಿಂದ ಹೊರಗೆ ಬಂದಿಲ್ಲ. ಹಾಗಾಗಿ ಕಾಂಗ್ರೆಸ್ ನಲ್ಲಿ ಭೀಮಣ್ಣ, ಬಂಗಾರಪ್ಪ, ಸಿದ್ಧರಾಮಯ್ಯ ತರಹದವರು ಒಳಏಟುಗಳ ಜೊತೆಗೆ ಹೊರಏಟುಗಳಿಗೂ ಎದೆಯೊಡ್ಡುವ ಅನಿವಾರ್ಯತೆ ಇದೆ.
ಇಂಥ ಎದೆಗಾರರು ಇರದಿದ್ದರೆ ಬಿ.ಜೆ.ಪಿ. ಮನಸ್ಥಿತಿಯಾದ ಮನುವಾದ ಮತ್ತು ಕಾಂಗ್ರೆಸ್ ನ ಮೃಧು ಹಿಂದುತ್ವವಾದದ ಅವಕಾಶವಾದಿ ಮನುವಾದಿಗಳು ವ್ಯವಸ್ಥೆಯನ್ನು ಹದಗೆಡಿಸಿಬಿಡುತ್ತಾರೆ. ಹಾಗಾಗಿ ಸೋಲು, ನೋವು, ವೈಯಕ್ತಿಕ ಹಾನಿಗಳ ನಡುವೆ ಇಂಥವರು ನಾಯಕತ್ವದ ನೊಗ ಹೊರಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯ ಜಿಲ್ಲೆಯಲ್ಲಿ ಜಾದಳ, ಕಾಂಗ್ರೆಸ್ ಗಳ ಸೋಲು ಬರಲಿರುವ ಗೆಲುವುಗಳಿಗೆ ಅಡಿಪಾಯ.
ಕಾಗೇರಿ ಮಗಳ ಆರತಕ್ಷತೆ-
ಇದೇವಾರ ಶಿರಸಿ ಕಾಗೇರಿಯಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಮಗಳ ಮದುವೆ ಮತ್ತು ಗೋಳಿ ದೇವಸ್ಥಾನದಲ್ಲಿ ಆರತಕ್ಷತೆಗಳು ನಡೆದಿವೆ.
ಕ್ಷೇತ್ರ-ರಾಜ್ಯದ ಪ್ರಮುಖರು, ಜನಸಾಮಾನ್ಯರಾದಿಯಾಗಿ ಎಲ್ಲರನ್ನೂ ಆಹ್ವಾನಿಸಿದ್ದ ಕಾಗೇರಿ ಪರಿವಾರ ತಮ್ಮ ಅಂತಸ್ಥಿಗೆ ತಕ್ಕಂತೆ ತಮ್ಮ ಸರಳತೆ, ಸಜ್ಜನಿಕೆಗಳ ಆರೋಪಗಳನ್ನು ಸುಳ್ಳು ಮಾಡುವಂತೆ ಕೌಟುಂಬಿಕ ಕಾರ್ಯಕ್ರಮ ಮಾಡಿದ್ದಾರೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

Leave a Reply

Your email address will not be published. Required fields are marked *