ಹಳ್ಳಿ ಹುಡುಗರೆ ಕೀಳರಿಮೆ ಬಿಡಿ, ನಾವು ಯಾರಿಗೂ ಕಡಿಮೆಇಲ್ಲ ಎನ್ನುವಂತೆ ಬದುಕಿ ಬಿಡಿ ಹೀಗೆಂದವರು ರಾಜ್ಯದ ಸುಪ್ರಸಿದ್ಧ ವಕೀಲ ಜಯಕುಮಾರ್ ಪಾಟೀಲ್ ಕೋಲಶಿರ್ಸಿ.

ಇವರು ಸಿದ್ದಾಪುರದ ಕೋಲಶಿರ್ಸಿಯವರು. ಸಿದ್ದಾಪುರ, ಧಾರವಾಡಗಳಲ್ಲಿ ಅಧ್ಯಯನ ಮಾಡಿದವರು. 70 ರ ದಶಕದಲ್ಲೇ ಬೆಂಗಳೂರು ಸೇರಿದರು. ಅದೇನೋ ಗೊತ್ತಿಲ್ಲ ಕಾನೂನು ಪ್ರ್ಯಾಕಟೀಸ್ ಮಾಡುವುದಿದ್ದರೆ ಅದು ಬೆಂಗಳೂರಿನಲ್ಲೇ ಎಂದು ಮನೆಯಲ್ಲಿ ಹಠ ಮಾಡಿದ್ದೆ. ಅಣ್ಣ ‘ಸರಿ, ಎಲ್ಲರೂ ಇಲ್ಲಿದ್ದು ಏನು ಮಾಡುವುದು ನಡಿ ಬೆಂಗಳೂರು ಎಂದು ಬೆಂಬಲಿಸಿದರು.
ಅಲ್ಲಿ ಬೆಂಗಳೂರು ನನ್ನನ್ನು ಒಪ್ಪಿಕೊಂಡದ್ದು, ನಾನು ಬೆಂಗಳೂರನ್ನು ಅಪ್ಪಿಕೊಂಡದ್ದು ಎಲ್ಲವೂ ಒಂಥರಾ ವಿಚಿತ್ರ ಎನ್ನುವ ಜಯಕುಮಾರ ಪಾಟೀಲ್ ಈಗ ಬೆಂಗಳೂರಿನ ಪ್ರಸಿದ್ಧ ವಕೀಲ. ಕೆಲವೊಮ್ಮ ನಮ್ಮ ಮೂರ್ಖತನ, ನಾವು ಮಾಡುವ ತಪ್ಪಿನಿಂದ ಹೇಗೆ ಅವಕಾಶ ಕಳೆದುಕೊಳ್ಳುತ್ತೇವೆಂದರೆ… ಬೆಂಗಳೂರಿನ ನನ್ನ ವಕೀಲಕೆಯ ಆರಂಭದ ದಿನಗಳಲ್ಲೇ ನನಗೆ ದೆಹಲಿ ಸರ್ವೋಚ್ಛ ನ್ಯಾಯಾಲಯಕ್ಕೆ ಹೋಗಲು ನನ್ನ ಸಿನೀಯರ್ ಸಲಗೆ ಮಾಡಿ, ಧೈರ್ಯ ತುಂಬಿದ್ದರು. ಆದರೆ ನನಗೆ ಆಗಷ್ಟೆ ನನ್ನ ಅನ್ನ ನಾನು ಸಂಪಾದಿಸುವುದನ್ನು ಕಲಿತಿದ್ದೆ ಆ ಸಮಯದಲ್ಲಿ ಮತ್ತೆ ದೆಹಲಿಗೆ ಹೋಗಿ ನಮ್ಮ ಮನೆಯವರಿಗೆ ಹೊರೆಯಾಗಬಾರದೆಂದು ನಾನು ಸವೋಚ್ಛ ನ್ಯಾಯಾಲಯದ ವಕೀಲನಾಗುವ ಅವಕಾಶ ಕೈಬಿಟ್ಟೆ. ಹೀಗೆಂದು ಪಕ್ಕಾ ಹಳ್ಳಿಮುಕ್ಕನಂತೆ ನಕ್ಕು ಹೇಳುವ ಜಯಕುಮಾರ ಕೋಲಶಿರ್ಸಿಯಿಂದ ಬೆಂಗಳೂರಿಗೆ ಬಂದು ಬೆಳೆದೆ ಹಾಗೆಯೇ ದೆಹಲಿಯಲ್ಲೂ ಹೆಸರು ಮಾಡುವುದು ನನಗೆ ಕಷ್ಟದ ಕೆಲಸವಾಗಿರಲಿಲ್ಲ ಎನ್ನುವ ತಮ್ಮ ಆತ್ಮವಿಶ್ವಾಸವನ್ನು ಪಾಟೀಲ ಹೊರ ಹಾಕಿದ್ದು ಹೀಗೆ.
ಇಂಥ ಉಭಯ ಕುಶಲೋಪರಿಯ ಮಾತುಕತೆಯಿಂದ ಪ್ರಾರಂಭವಾದ ನಮ್ಮ ಸಂಭಾಷಣೆ ಈಗ ಸಮಾಜಮುಖಿಗೆ ಮೂಖಾಮುಖಿಯ ಸರಕಾಗಿದೆ. ನಮ್ಮೂರಿನ ಜೈಕುಮಾರ ಪಾಟೀಲ್ ಸಮಾಜಮುಖಿಗೆ ನೀಡಿದ ವಿಶೇಶ ಸಂದರ್ಶನ ಎನ್ನಬಹುದಾದ ಅನೌಪಚಾರಿಕ ಮಾತುಕತೆಯಲ್ಲಿ ತೆರೆದುಕೊಂಡದ್ದು ಹೀಗೆ.
ಸಮಾಜಮುಖಿ- ವಕೀಲರಾಗಿ ನೀವು ಪ್ರಸಿದ್ಧರಾಗಿದ್ದು ಹೇಗೆ?
ಜ.ಪಾ.- ಪ್ರಸಿದ್ಧ ಸಾಧಕ ಅನ್ನೋ ವಿಶೇಶ ಬಳಸಬೇಡಿ, ಏನೋ ಮೈಕ್ರೋ ಬಯಾಲಜಿ ಸೀಟು ಸಿಕ್ಕಿರಲಿಲ್ಲ. ಅಲ್ಲಿಯವರೆಗೆ ಕಾನೂನು ಪದವಿ ಓದಿದರಾಯಿತು ಎಂದು ಎಲ್.ಎಲ್.ಬಿ. ಪ್ರವೇಶ ಪಡೆದೆ. ನಂತರ ನನ್ನ ಸಹಪಾಠಿಗಳೆದುರು ನಾನು ಕಿರಿಯನಾಗುವ ಅಪಾಯ ಅರಿತು ದಾಷ್ಟ್ಯದಿಂದಲೇ ಮೈಕ್ರೋ ಬಯಾಲಜಿ ಓದುವ ಆಸೆ ಬದಿಗಿರಿಸಿ, ಕಾನೂನು ಪದವಿ ಪಡೆದೆ. ಅಲ್ಲಿವರೆಗೂ ಒಂಥರಾ ಮಜಾ ಜರ್ನಿ. ಆದರೆ ಬೆಂಗಳೂರಿಗೆ ಹೋಗಿ ಕಾನೂನು ಪ್ರಾಕ್ಟೀಸ್ ಪ್ರಾರಂಭಿಸಿದ ಮೇಲೆ ಸೀರಿಯಸ್ ಆದೆ. ನಮ್ಮ ಕ್ಲೈಂಟ್ ಗಳ ಬಗ್ಗೆ ನಮಗೆ ಕಳಕಳಿ ಇರಬೇಕು. ಎಲ್ಲಾ ಕ್ಷೇತ್ರಗಳಂತೆ ಜನರು ನಮ್ಮನ್ನು ತೂಗಿ ನೋಡುತ್ತಾರೆ. ಬದ್ಧತೆ,ಸಾಮಾಜಿಕ ಕಳಕಳಿ, ಪರಿಶ್ರಮ ಇದ್ದರೆ ನಮಗೆ ಪ್ರಾಮುಖ್ಯತೆ ದೊರೆಯುತ್ತಾ ಹೋಗುತ್ತದೆ. ಶಿಸ್ತು, ಬದ್ಧತೆ, ತೊಡಗಿಸಿಕೊಳ್ಳುವಿಕೆಗಳು ಮಾತ್ರ ನಮ್ಮನ್ನು ಉಳಿಸುತ್ತವೆ.
ಸಮಾಜಮುಖಿ-ಪ್ರಾರಂಭಿಕ ಜೀವನ?
ಜ.ಪಾ.- ನಮಗೂ ಬದುಕು ಕಷ್ಟ ಇತ್ತು. ನಮ್ಮ ನೆರೆಹೊರೆಯವರಿಗೆ ನಮಗಿಂತ ಹೆಚ್ಚು ಕಷ್ಟ ಇತ್ತು. ನಮ್ಮಣ್ಣ ಧೈರ್ಯಮಾಡಿ ಬೆಂಗಳೂರಿಗೆ ಕಳುಹಿಸಿಕೊಟ್ಟ, ಕೆಲಸದಲ್ಲಿ ಖುಷಿ ಕಾಣುವುದನ್ನು ಕಲಿತೆ ಉಳಿದದ್ದು ತನ್ನಿಂತಾನೇ ಆಯಿತು. ಪ್ರಾರಂಭದಲ್ಲಿ ಬೆಂಗಳೂರಿನಲ್ಲಿ ಹೊಂದಿಕೊಳ್ಳುವುದೇ ಕಷ್ಟ ಎನಿಸುತಿತ್ತು. ನನ್ನ ಅದೃಷ್ಟಕ್ಕೆ ಸಿರವಂತೆ ವೀರಪ್ಪ ಗೌಡರಿಗೆ ಕೆಳದಿ ವ್ಯಾಜ್ಯದ ವಿಚಾರದಲ್ಲಿ ಕೆ.ಎ.ಸ್ವಾಮಿಯವರ ಸಂಪರ್ಕವಿತ್ತು. ಅವರ ಕಚೇರಿಯಲ್ಲಿ ಮಾಡುವಷ್ಟು ಕೆಲಸ ವಿತ್ತು ಆದರೆ ಕೂಡ್ರಲು ಸ್ಥಳ ಇರಲಿಲ್ಲ. ಅವರೇ ವೀರಭದ್ರಪ್ಪನವರ ಬಳಿ ಸೇರಲು ಹೇಳಿದರು.
ಇಡೀ ಉತ್ತರ ಕರ್ನಾಟಕದ ಕೇಸುಗಳೆಲ್ಲಾ ಈ ಕಛೇರಿಗಳಿಗೇ ಬರುತಿದ್ದವು. ಯತೇಚ್ಛ ಕೆಲಸ, ಕೇಸುಗಳ ನಡುವೆ ನಮಗೆ ಕಲಿಯಲು ಸಾಧ್ಯವಾಯಿತು. ಕೆ.ಎ.ಸ್ವಾಮಿ ಯಾವ ಕಿರಿಯ ವಕೀಲರಿಗೆ ಕರೆಯಬಹುದೆನ್ನುವ ಸ್ಫಷ್ಟತೆ ಇರಲಿಲ್ಲ, ಹಾಗಾಗಿ ಡಿಕ್‍ಟೇಶನ್ ಗೆ ನನ್ನನ್ನೇ ಕರೆಯಬಹುದೆಂದು ನಾವೆಲ್ಲಾ ತಡರಾತ್ರಿಯವರೆಗೆ ಕಾಯುತ್ತಾ ಕುಳಿತಿರುತಿದ್ದೆವು ಆ ಅನುಭವ ನಮಗೆ ನೆರವಾಯಿತು.
ಸಮಾಜಮುಖಿ- ಹೊಸ ಪೀಳಿಗೆಯ ಗ್ರಾಮೀಣ ವಕೀಲರಿಗೆ ಸಲಹೆ?
ಜ.ಪಾ.- ಈಗಿನ ರೀತಿ-ನೀತಿ ಬದಲಾಗಿದೆ. ಹೊಸ 5 ವರ್ಷಗಳ ಕಾನೂನು ಪದವಿ ಅನುಕೂಲಕರವಾಗಿದೆ. ಹೊಸ-ಹಳೆ ಹಳ್ಳಿ ಹುಡುಗರ ತೊಂದರೆ ಇಂಗ್ಲೀಷ್ ಮತ್ತು ಕೀಳರಿಮೆ. ಕೀಳರಿಮೆಯಿಂದ ಹೊರಬಂದು ನಾನೇನೂ ಮಾಡಬಲ್ಲೆ ಎಂದು ಹೊರಟರೆ ಸಾಧನೆ ಸಾಧ್ಯ. ಹಳ್ಳಿಗಾಡಿನ ಯುವಕರು ಹುಂಬತನದಿಂದಲೇ ಮುನ್ನುಗ್ಗಬೇಕು. ವಕೀಲಕೆಗೆ ಹುಂಬುತನವೂ ಗುಣವೇ. ಶೃದ್ಧೆ, ಶ್ರಮ, ಬದ್ಧತೆ ಇವುಗಳಿಂದ ಸಾಧನೆ ಸಾಧ್ಯ. ಮೈಕ್ರೋ ಬಯಾಲಜಿ ಸೀಟು ಸಿಗದ ನನಗೆ ಜೆ.ಎಸ್.ಎಸ್. ಕಾನೂನು ಮಹಾವಿದ್ಯಾಲಯದಲ್ಲಿ ರ್ಯಾಂಕ್ ಬಂತು. ನ್ಯಾಯವಾದಿಯಾದರೆ ಬೆಂಗಳೂರಿನಲ್ಲೇ ಎಂದುಕೊಂಡಿದ್ದ ನಾನು ಕೆಳ ಹಂತಗಳಲ್ಲೆಲ್ಲೂ ಎನ್ರೋಲ್ ಮಾಡದೆ, ತಡಮಾಡಿ ಬೆಂಗಳೂರಿನಲ್ಲೇ ಮಾಡಿದೆ.ವೃತ್ತಿ ಮಾತ್ಸರ್ಯ, ಸ್ಫರ್ಧೆ ಎಲ್ಲವೂ ಇತ್ತು. ಆದರೆ ಶ್ರಮ-ಗುಣಕ್ಕೆ ಎಲ್ಲೂ ಗೌರವ ದೊರೆಯುತ್ತದೆ.
ಸಮಾಜಮುಖಿ- ನೀವು ನ್ಯಾಯಾಧೀಶರಾಗಲಿಲ್ಲ ಯಾಕೆ?
ಜ.ಪಾ.- ಅದೊಂಥರಾ ಕತ್ತೆ ಕೆಲಸ. ಯಾವ ಕೆಲಸ ಮಾಡಿದರೂ ಅದರಲ್ಲಿ ಖುಷಿ ಕಾಣಬೇಕೆನ್ನುವವನು ನಾನು. ನನಗೆ ನ್ಯಾಯಾಧೀಶನಾಗಿ ಆ ಕೆಲಸದಲ್ಲಿ ಖುಷಿಕಾಣುವ ನಂಬಿಕೆ ಇರಲಿಲ್ಲ ಹಾಗಾಗಿ ನಾನು ಅದಾಗಲು ಇಷ್ಟಪಡಲಿಲ್ಲ.
ಸಮಾಜಮುಖಿ- ಬಾರ್‍ಕೌನ್ಸಿಲ್ ಅಧ್ಯಕ್ಷರಾಗಿದ್ದು ಹೇಗೆ?
ಜ.ಪಾ.- ಅದೂ ಆಕಸ್ಮಿಕವೇ. ಹುರುಪಿನಿಂದ ಚುನಾವಣೆ ಸ್ಫರ್ಧಿಸಿದೆ. ಒಂದು, ಎರಡು, ಪ್ರತಿಬಾರಿ ನಮ್ಮ ಜಿಲ್ಲೆಯಲ್ಲಿ ಕಡಿಮೆ ಮತಗಳು ಬಂದವು. ನನಗೆ ಉತ್ತರಕರ್ನಾಟಕದ ಸಂಪರ್ಕ, ವಕೀಲರ ಸ್ನೇಹವಿತ್ತಲ್ಲ ಅಲ್ಲಲ್ಲಿಯ ಕಡಿಮೆ ಮತಗಳೇ ಸೇರಿ ನಿರಂತರ ನಾಲ್ಕು ಬಾರಿ ಬಾರ್ ಕೌನ್ಸಿಲ್ ಸದಸ್ಯನಾದೆ. ಅದೊಂಥರಾ ಟ್ರೇನಿಂಗ್. ಅಲ್ಲಿಯೂ ಕಲಿತೆ.ಹೊಸತನ, ಹೊಸಕನಸಿನ ಹಸಿವು ನಮ್ಮನ್ನು ಎಲ್ಲೆಲ್ಲೋ ಕರೆದುಕೊಂಡು ಹೋಗುತ್ತೆ ಹೋಗಬೇಕಷ್ಟೆ.
ಸಮಾಜಮುಖಿ- ನಿಮ್ಮ ಮುಂದಿನ ನಡೆ?
ಜ.ಪಾ.- ಗೊತ್ತಿಲ್ಲ, ನಾವು ಅಂದುಕೊಂಡಂತೆ ಆಗಬಹುದು, ಆಗದೇ ಇರಬಹುದು. ಪ್ರಾರಂಭದಿಂದಲೂ ನಿಶ್ಚಿತವಲ್ಲದ ಮಾರ್ಗ ನನ್ನದು, ಬಾರ್ ಕೌನ್ಸಿಲ್ ಸದಸ್ಯತ್ವ, ಹಿರಿಯ ಶ್ರೇಣಿ ವಕೀಲನಾಗಿದ್ದು ಎಲ್ಲವೂ ಅಸಹಜ ಅನ್ನುವಂತೆಯೇ ಆಗಿಹೋಗಿವೆ. ಯಾವಾಗಲೂ ಹೀಗೆ ಆಗಬೇಕೆಂದೇನೂ ಇಲ್ಲ. ಬದುಕು ರೋಚಕವಾಗಿ ಕಂಡಿದ್ದೇ ಅದೃಷ್ಟ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

ಸೌಭಾಗ್ಯಲಕ್ಷ್ಮಿ -a small story of amruta preetam

(ಕರ್ಮಾವಾಲಿ) ‌  ಮೂಲಕತೆ: ಅಮೃತಾ ಪ್ರೀತಮ್‌ ಅನುವಾದ: ನಿವೇದಿತಾ ಎಚ್. ತಂದೂರಿ ಒಲೆಯಲ್ಲಿ  ಹದವಾಗಿ ಬೆಂದು ತಟ್ಟೆಗೆ ಬಂದು ಬೀಳುತ್ತಿದ್ದ ರೋಟಿಗಳು ಎಂತಹವರಲ್ಲೂ ಹಸಿವನ್ನು ...

ಅಕಾಲಿಕ ಮಳೆ, ಜಾತ್ರೆ, ವಾರ್ಷಿಕೋತ್ಸವಗಳಿಗೆ ಅಡ್ಡಿ… ಶಾಸಕರ ಮಿಂಚಿನ ಸಂಚಾರ!

ಮಲೆನಾಡು ಕರಾವಳಿಯ ಅಕಾಲಿಕ ಮಳೆ ಬೇಸಿಗೆಯ ಉಷ್ಣವನ್ನು ಶಮನ ಮಾಡಿದ್ದರೆ… ಪೂರ್ವನಿಶ್ಚಿತ ಧಾರ್ಮಿಕ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಅಡ್ಡಿ ಮಾಡಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *