

ತರಳಿ ಶಿವರಾತ್ರಿ ಜಾತ್ರಾಮಹೋತ್ಸವಕ್ಕೆ ಸರ್ವರನ್ನೂ ಸ್ವಾಗತಿಸುತ್ತಾ ನಾಡಿನ ಸಮಸ್ತರಿಗೆ ಮಹಾಶಿವರಾತ್ರಿ ಶುಭಾಶಯ ಕೋರುವವರು
ಸುಮಂಗಲಾ ವಸಂತ (ಜಿ.ಪಂ. ಸದಸ್ಯರು) ವಸಂತ ನಾಯ್ಕ ಮಳಲವಳ್ಳಿ
(ತಾ.ಪಂ. ಮಾಜಿ ಸ್ಥಾಯಿಸಮೀತಿಅಧ್ಯಕ್ಷರು)
ಹಾಗೂ ಕುಟುಂಬವರ್ಗ
ಮತ್ತು ಅಭಿಮಾನಿ ಬಳಗ,
ಸಿದ್ಧಾಪುರ (ಉ.ಕ.)
ಸಿದ್ದಾಪುರ ತಾಲೂಕಿನ ತರಳಿ ಕ್ಷೇತ್ರ ಈಗ ವರ್ಷದಿಂದ ವರ್ಷಕ್ಕೆ ಪ್ರಸಿದ್ಧವಾಗುತ್ತಿದೆ.
ಸುಮಾರ 30 ವರ್ಷಗಳಿಗಿಂತ ಹಿಂದಿನಿಂದ ಪ್ರತಿವರ್ಷ ಇಲ್ಲಿ ಶಿವರಾತ್ರಿಯಂದು ಆಚರಿಸುವ ಶಿವರಾತ್ರಿ ಜಾತ್ರೆ ಈಗ ಸಾಂಸ್ಕೃತಿಕ ಉತ್ಸವವಾಗಿಯೂ ಗಮನ ಸೆಳೆಯುತ್ತಿದೆ.
ಬಿಳಗಿ ಅರಸರ ಕಾಲಕ್ಕಿಂತ ಹಿಂದಿನಿಂದಲೂ ಈ ಪ್ರದೇಶದಲ್ಲಿ ಜೈನ ಮತಾವಲಂಬಿಗಳ ವಾಸ್ತವ್ಯ, ಆರಾಧನೆಗಳ ಕೇಂದ್ರವಾಗಿದ್ದ ಈ ಸ್ಥಳ ಇತ್ತೀಚಿನ ವರ್ಷಗಳಲ್ಲಿ ದೀವರ ಶೃದ್ಧಾ ಕೇಂದ್ರವಾಗಿ ಬದಲಾಗಿದೆ.
ಪದ್ಮಾವತಿ, ವೆಂಕಟ್ರಮಣ, ಗಣಪತಿ ದೇವರುಗಳಿರುವ ಈ ಪ್ರದೇಶದಲ್ಲೇ ನಾಗಚೌಡೇಶ್ವರಿ ದೇವರನ್ನೂ ಕಾಣಬಹುದು. ಸಂತಾನ ಹೀನತೆಗೆ ಇಲ್ಲಿ ಪರಿಹಾರ ದೊರೆಯುತ್ತದೆ ಎಂದು ನಂಬಲಾಗುವ ಈ ಪ್ರದೇಶ ಇತ್ತೀಚಿನ 40 ವರ್ಷಗಳಿಂದೀಚೆ ತೆರೆದುಕೊಂಡಿದೆ.
ತರಳಿ ದೇವಸ್ಥಾನದ ಸಮೀತಿ, ಇತ್ತೀಚೆಗೆ ನೋಂದಾಯಿತ ತರಳಿ ಸಂಸ್ಥಾನ ಮಠ ಇವುಗಳ ಹಿಂದೆ ತರಳಿಯ ಹನುಮನಾಯ್ಕರು ಅವರ ಜೊತೆಗಿನ ಸ್ಥಳಿಯ ಮುಖಂಡರು ಅವರೊಂದಿಗೆ ತಾಲೂಕಿನ ಮುಖಂಡರು ಸೇರಿ ಪ್ರಾರಂಭಿಸಿದ ಈ ಕ್ಷೇತ್ರದ ಶಿವರಾತ್ರಿ ಉತ್ಸವ ಆಚರಣೆ ಈಗೀಗ ಸಾಂಸ್ಕೃತಿಕ ರೂಪವನ್ನು ಪಡೆದುಕೊಂಡಿದೆ.
ಹಿಂದುಳಿದವರ ಆರಾಧ್ಯ ನಾಯಕರಾದ ದೇವರಾಜ ಅರಸು ಸ್ಮರಣೆ, ಸಾಮಾಜಿಕ ಪರಿವರ್ತನಾಕಾರರಾದ ನಾರಾಯಣ ಗುರುಗಳ ಚಿಂತನೆ, ಜೊತೆಗೆ ದಿ. ಎಸ್.ಬಂಗಾರಪ್ಪನವರು, ಕಾಗೋಡು ತಿಮ್ಮಪ್ಪ ಇವರೊಂದಿಗೆ ಈಗಿನ ಕೆಲವು ರಾಜಕಾರಣಿಗಳು, ಅಧಿಕಾರಿಗಳು, ಸಮಾಜದ ಗಣ್ಯರು ಎಲ್ಲರ ದೂರದೃಷ್ಟಿಯ ಫಲವಾಗಿ ಇಲ್ಲಿ ನೂತನ (ಮಠ) ದೇವಾಲಯದ ಸ್ಥಾಪನೆಗೆ ಮುನ್ನುಡಿ ಬರೆಯಲಾಗಿದೆ.
ಎನ್.ಡಿ.ನಾಯ್ಕರ ನೇತೃತ್ವದಲ್ಲಿ ಅವರ ಸಂಬಂಧಿಗಳಾದ ಡಿ.ಎಸ್.ವೀರಯ್ಯನವರ ನೆರವಿನಿಂದ ಇಲ್ಲಿ ಸಭಾಭವನ ವೊಂದನ್ನು ಸ್ಥಾಪಿಸಲಾಗಿದೆ. ಹೀಗೆ 50 ವರ್ಷಗಳ ಕಾಲಘಟ್ಟದಲ್ಲಿ ಈ ತರಳಿ ಸಂಸ್ಥಾನ ನಿಶ್ಚಿತ ಉದ್ದೇಶದೊಂದಿಗೆ ಗುರಿಮುಟ್ಟುವ ದಿಸೆಯಲ್ಲಿ ಕುಂಟುತಿದ್ದರೂ ಇತ್ತೀಚಿನ ಹೊಸ ಯೋಜನೆ, ಯೋಚನೆಗಳು ಈ ಮಠದ ಅಭಿವೃದ್ಧಿಯ ಮುನ್ಸೂಚನೆ ನೀಡುವಂತಿವೆ. ಪ್ರತಿವರ್ಷ ಇಲ್ಲಿ ಶಿವರಾತ್ರಿಗೆ ಸೇರುವ ಜನರು ಗಣ್ಯರು ಚಿಂತನ-ಮಂಥನ ನಡೆಸುತಿದ್ದು, ಈ ಧಾರ್ಮಿಕ,ಸಾಂಸ್ಕೃತಿಕ ಕೇಂದ್ರವನ್ನು ವಿದ್ಯಾಕೇಂದ್ರವನ್ನಾಗಿ ಮಾಡುವ ಪ್ರಯತ್ನಗಳಿಗೂ ಚಾಲನೆ ನೀಡಲಾಗಿದೆ. ತರಳಿ ಗ್ರಾಮದ ಹಿರಿಯರು, ಯುವಕರು ಗ್ರಾಮ ಅರಣ್ಯ ಸಮೀತಿ ಮತ್ತು ಯುವಕ ಸಂಘಗಳಡಿ ಕೆಲಸ ಮಾಡುತಿದ್ದು ತಮ್ಮ ಗ್ರಾಮದ ಚಾರಿತ್ರಿಕ ತರಳಿಮಠವನ್ನು ಪ್ರಸಿದ್ಧ ಕೇಂದ್ರವನ್ನಾಗಿ ಮಾಡುವ ಹಿನ್ನೆಲೆಯಲ್ಲಿ ಅವರ ಪ್ರಯತ್ನ ಸಾಗಿದೆ.
ಮೋಹನ ಕುರುಡಗಿ ಕಾವ್ಯ ಪ್ರಶಸ್ತಿಗೆ ಅರಿವೇ ಪ್ರಮಾಣು ಆಯ್ಕೆ
2019 ನೇ ಸಾಲಿನ ‘ಮೋಹನ ಕುರುಡಗಿ ಕಾವ್ಯ ಪ್ರಶಸ್ತಿ’ಗೆ ಮಹಾಂತಪ್ಪ ನಂದೂರ ಅವರ ‘ಅರಿವೇ ಪ್ರಮಾಣು’ ಕಾವ್ಯ ಕೃತಿ ಆಯ್ಕೆಯಾಗಿದೆ ಎಂದು ನವಚೇತನ ಸಾಂಸ್ಕøತಿಕ ಕಲಾ ಸಾಹಿತ್ಯ ವೇದಿಕೆಯ ಅಧ್ಯಕ್ಷ ಮಂಜುನಾಥ ಪಟಗಾರ ತಿಳಿಸಿದ್ದಾರೆ.





