ಸಿದ್ದಾಪುರ ತಾಲೂಕಿನ ಬಿದ್ರಕಾನ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ಸುವರ್ಣಮಹೋತ್ಸವದ ಅಂಗವಾಗಿ ವಿಚಾರ ಗೋಷ್ಠಿ ನಡೆಯಿತು.
ಸಹಕಾರಿ ಸಂಘಗಳಲ್ಲಿ ಸದಸ್ಯರ ಪಾಲ್ಗೊಳ್ಳುವಿಕೆ ಕುರಿತು ಕೆಡಿಸಿಸಿ ಬ್ಯಾಂಕ ಉಪಾಧ್ಯಕ್ಷ ಭಾಸ್ಕರ ಹೆಗಡೆ ಕಾಗೇರಿ ಮಾತನಾಡಿದರು.ಸಹಕಾರಿ ಸಂಘಗಳು ಬಂಡವಾಳಗಾರರ ಸಂಸ್ಥೆ ಅಲ್ಲ. ಬಳಕೆದಾರರ ಸಂಸ್ಥೆ. ಸಹಕಾರಿ ಸಂಘದಲ್ಲಿ ಸಹಕಾರಿ ತತ್ವವನ್ನು ಅರಿತವರು ಇದ್ದರೆ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯ. ಸಂಘದಲ್ಲಿ ಸದಸ್ಯರು ಭಾಗವಹಿಸುವುದು ಮುಖ್ಯ. ಸದಸ್ಯತ್ವ ಪಡೆದವನು ಜವಾಬ್ದಾರಿಯಿಂದ ವ್ಯವಹಾರ ಮಾಡಬೇಕು. ಯಾವುದೇ ಸಹಕಾರಿ ಸಂಘ ವ್ಯಕ್ತಿ ಆಧಾರಿತವಾಗಿರಬಾರದು. ಕಾನೂನು ಚೌಕಟ್ಟಿನಲ್ಲಿ ಇರಬೇಕು. ಸಹಕಾರಿ ಸಂಘಗಳ ಕುರಿತು ಪಠ್ಯವಿಷಯದಲ್ಲಿ ಪಾಠಗಳು ಇದ್ದರೆ ಯುವಕರಿಗೆ ಹೆಚ್ಚಿನ ಜ್ಞಾನ ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಎಂದರು.
ಸಹಕಾರಿ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಕೆ.ರಾಮಪ್ಪ ಸದಸ್ಯರ ಅರಿವು ಮತ್ತು ಸಹಕಾರಿ ಕಾನೂನು ಕುರಿತು ಮಾತನಾಡಿ ಸಹಕಾರಿ ಸಂಘಗಳು ಲಾಭಮಾಡುವ ಉದ್ದೇಶವನ್ನು ಮಾತ್ರ ಹೊಂದದೆ ಸಾಮಾಜಿಕ ಕಳಕಳಿಯನ್ನು ಹೊಂದಿರಬೇಕು. ಸಂಘದಲ್ಲಿ ನಾಮಕಾವಸ್ಥೆ ಸದಸ್ಯರಾಗಿದ್ದರೆ ಏನು ಪ್ರಯೋಜನ ಇಲ್ಲ. ಸಂಘದ ಕುರಿತು ಕಳಕಳಿ ಉಳ್ಳವರಾಗಿರಬೇಕು. ಸಂಸ್ಥೆ ಉತ್ತಮವಾಗಿ ಬೆಳೆಯಬೇಕಾದರೆ ದಕ್ಷ ಆಡಳಿತ ಮಂಡಳಿ, ನಿಷ್ಠಾವಂತ ಸಿಬ್ಬಂದಿ ಹಾಗೂ ಪ್ರಜ್ಞಾವಂತ ಸದಸ್ಯರು ಇರಬೇಕು ಎಂದು ಹೇಳಿ ಸಂಘದಲ್ಲಿ ಸದಸ್ಯರ ಪಾಲ್ಗೊಳ್ಳುವಿಕೆ, ಮತದಾನದ ಕುರಿತು ಮಾತನಾಡಿದರು.
ಕೃಷಿ ತಜ್ಞ ವಿ.ಎಂ.ಹೆಗಡೆ ಕೃಷಿಯಲ್ಲಿ ಆಧುನಿಕತೆಯ ಅಳವಡಿಕೆ ಕುರಿತು ಮಾತನಾಡಿದರು. ಸಂಘದ ಅಧ್ಯಕ್ಷ ಪರಮೇಶ್ವರ ಹೆಗಡೆ ಹುಲಿಮಕ್ಕಿ ಅಧ್ಯಕ್ಷತೆವಹಿಸಿದ್ದರು. ಆರ್.ಎಸ್.ಹೆಗಡೆ ತುಪ್ಪದ, ವೆಂಕಟ್ರಮಣ ಎಂ.ಹೆಗಡೆ ಉಳ್ಳಾನೆ,ಎಲ್.ಕೆ.ಹೆಗಡೆ ಉಳ್ಳಾನೆ,ಶ್ರೀಕಾಂತ ಭಟ್ಟ ಚಟ್ನಳ್ಳಿ, ಪ್ರಕಾಶ ಹೆಗಡೆ ಮುತ್ತಿಗೆ ಉಪಸ್ಥಿತರಿದ್ದರು.ಭಾಸ್ಕರ ಹೆಗಡೆ ಕೊಡ್ಗಿಬೈಲ್ ಸ್ವಾಗತಿಸಿದರು. ಡಿ.ಜಿ.ಭಟ್ಟ ಮುತ್ತಿಗೆ ನಿರ್ವಹಿಸಿದರು. ಮಂಜುನಾಥ ಗೌಡ ವಂದಿಸಿದರು.
ಸುವರ್ಣಮಹೋತ್ಸವ ಕಾರ್ಯಕ್ರಮ ಮುಂದೂಡಿಕೆ
ಸಿದ್ದಾಪುರತಾಲೂಕಿನ ಬಿದ್ರಕಾನ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ಮಾ.15ರಂದು ನಡೆಯಬೇಕಾಗಿದ್ದ ಸುವರ್ಣ ಮಹೋತ್ಸವ ಹಾಗೂ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ.
ಕರೊನಾ ಸಾಂಕ್ರಾಮಿಕ ರೋಗದ ಹರಡುವಿಕೆಯ ಹಿನ್ನೆಲೆಯಲ್ಲಿ ಸಭೆ, ಸಮಾರಂಭಗಳನ್ನು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದಂತೆ ಮುಂದೂಡಲಾಗಿದೆ ಎಂದು ಸಂಘದ ಅಧ್ಯಕ್ಷ ಪರಮೇಶ್ವರ ಸುಬ್ರಾಯ ಹೆಗಡೆ ಹುಲಿಮಕ್ಕಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೋಗರಸ್ತೆಯಲ್ಲಿ ರಿಕ್ಷಾ ಪಲ್ಟಿ ಒಂದು ಸಾವು, 7 ಜನರಿಗೆ ಗಾಯ
ಸಿದ್ದಾಪುರ,ಮಾ.13- ಜನರು ಪ್ರಯಾಣಿಸುತಿದ್ದ ರಿಕ್ಷಾ ಒಂದಕ್ಕೆ ಎದುರಿನಿಂದ ಬಂದ ದನ ತಪ್ಪಿಸಲು ಪ್ರಯತ್ನಿಸಿದ ರಿಕ್ಷಾ ಪಲ್ಟಿಯಾಗಿ ಇದರಲ್ಲಿ ಪ್ರಯಾಣಿಸುತಿದ್ದ 8ಜನರಲ್ಲಿ ಒಬ್ಬರು ಮೃತರಾಗಿ 7 ಜನರಿಗೆ ಗಾಯಗಳಾದ ದುರ್ಘಟನೆ ಇಂದು ಇಲ್ಲಿಯ ಜೋಗರಸ್ತೆಯ ಕುಂಬಾರಕುಳಿ ಬಳಿ ನಡೆದಿದೆ.