

ಕರೋನಾ ಮಾರಿ ಊರು ಸೇರಬಾರದೆಂದು ಗ್ರಾಮೀಣ ಯುವಕರು ತಮ್ಮ ಗ್ರಾಮಗಳ ರಸ್ತೆಗಳಿಗೆ ಮರ-ಮುಳ್ಳು, ಕಲ್ಲುಗಳನ್ನಿಟ್ಟು ತಾವೇ ತಮ್ಮೂರ ರಸ್ತೆ ಬಂದ್ ಮಾಡಿದ್ದಾರೆ. ಇದರಿಂದ ನಿಶ್ಚಿತ ಉದ್ದೇಶ ಈಡೇರುವುದಕ್ಕಿಂತ ಗ್ರಾಮಸ್ಥರಿಗೇ ತೊಂದರೆ ಎನ್ನುವ ಅಭಿಪ್ರಾಯ ವ್ಯಾಪಕವಾಗುತ್ತಿದೆ. ಹೊರ ಊರಿನ ಜನ ತಮ್ಮೂರಿಗೆ ಬರಬಾರದು ನಿಜ ಆದರೆ ಹೊರೂರುಗಳಿಂದ ಈಗಾಗಲೇ ಅವರವರ ಊರು ಸೇರಿಕೊಂಡವರಿಗೆ ಏನು ಮಾಡುವುದು? ಸ್ವಂಯಂ ತಿಳುವಳಿಕೆ ಸ್ವಯಂ ಶಿಸ್ತು, ಸ್ವಯಂ ನಿಯಂತ್ರಣ ಗಳ ಮೂಲಕವೇ ಜಾಗೃತರಾಗಬೇಕು. ಪ್ರತಿ ಗ್ರಾಮ, ಊರು,ನಗರಗಳ ಜನ ಮಾಮೂಲಿ ಅನಾರೋಗ್ಯ, ಆಪತ್ತುಗಳಿಗೆ ಒಳಗಾಗುವ ಸಾಧ್ಯತೆಗಳಿರುತ್ತವೆ. ಅಂತಹ ಸಮಯದಲ್ಲಿ ನಾವು ಬೇರೆಯವರಿಗೆ ಹಾಕುವ ದಿಗ್ಭಂಧನ ನಮಗೇ ಮಾರಕವಾಗಬಹುದು ಈ ಬಗ್ಗೆ ನೀವೇನಂತೀರಿ ಪ್ರತಿಕ್ರೀಯಿಸಿ
ಪ್ರತಿಕ್ರೀಯೆಗಳು-
ಮುಳ್ಳಿನ ಬೇಲಿ ಹಾಕಿ ನಿರ್ಬಂಧ ಹೇರುವದು ಸರಿಯಾದ ಕ್ರಮವಲ್ಲ. ಸ್ವಯಂ ಪ್ರೇರಣೆಯಿಂದ ಮನೆಯಲ್ಲೇ ಇರೋದು ಗಟ್ಟಿತನ. ಆ ಸಂಕಲ್ಪದಿಂದ ಹಳ್ಳಿಯಿಂದ ದಿಲ್ಲಿಯವರೆಗೂ ಲಾಕ್ ಡೌನ್ ಆಗಬೇಕಿದೆ.ಮಾನ್ಯ ಪ್ರಧಾನಿಯವರ ಆದೇಶದ ದಿನಾಂಕ ಮುಗಿಯುವವರೆಗಾದರೂ ತಾಳ್ಮೆ ಗುಂದದೆ, ಧೃತಿಗೆಡದೆ ಕೊರೊನಾ ಚಕ್ರವ್ಯೂಹ ಭೇದಿಸಬೇಕಿದೆ. ಈ ತಾಂತ್ರಿಕ ಹಾಗೂ ಮುಂದುವರಿದ ಯುಗದಲ್ಲೂ ಮುಳ್ಳು ಹಾಕಿ ನಿರ್ಬಂಧ ಸಂದೇಶಿಸುವದು, ಸಂಕೇತಿಸುವದು ಒಂದು ರೀತಿಯಲ್ಲಿ,ದೇಶದ ಅನಕ್ಷರತೆಯನ್ನು,ಅಜ್ಞಾನವನ್ನು, ಬಿಂಬಿಸುವ ನಿಟ್ಟಿನಲ್ಲಿ ನಾವು ಇಪ್ಪತ್ತೊಂದು ವರುಷ ಹಿಂದೆ ಹೋದಂತೆ ಭಾಸವಾಗುವ ಪೂರಕ ಸೂತಕ ವಾತಾವರಣ ನಿರ್ಮಿಸುತ್ತದೆ.
ಮೇಲಾಗಿ ಗರ್ಭಿಣಿಯರಿಗೆ, ತುರ್ತು ಅನಾರೋಗ್ಯದಿಂದ ಬಳಲುತ್ತಿರುವವರಿಗೆ,ಚಿಕ್ಕ ಮಕ್ಕಳಿಗೆ ,ತುರ್ತು ಪರಿಸ್ಥಿತಿಯ ಅನೀರಕ್ಷಿತ ತೊಂದರೆಗಳಿಗೆ ಗ್ರಾಮದತ್ತ ಧಾವಿಸುವ 108 ಹಾಗೂ ಪೊಲೀಸ್,ಹಾಗೂ ತೀವ್ರ ಬೇಸಿಗೆಯ ತಾಪಮಾನವಿರುವದರಿಂದ ಅಗ್ನಿಶಾಮಕ ದಳ ,ಹೀಗೆ ಅನೇಕ ಸೇವೆಗೆ ತೊಂದರೆಯಾಗಿ ದುರಂತ ಸಂಭವಿಸಬಹುದು. ಹಾಗಾಗಿ ನಾವೆಲ್ಲ ನಮ್ಮ ಕೈ ಇಂದ ತುತ್ತು ತಿನ್ನುವದು ಎಷ್ಟು ಸತ್ಯವೋ ಹಾಗೆ ಮನೆಯಲ್ಲೇ ಇರೋದು ಅಷ್ಟೇ ಪ್ರಾಮಾಣಿಕವಾಗಿ ಪಾಲಿಸೋಣ.ಸಾಮಾಜಿಕ ಅಂತರದ ಮೂಲಕ ಸ್ವಾಸ್ತ್ಯ ಕಾಪಾಡಿ ಬಹು ಬೇಗ ಕೊರೊನಾ ಮುಕ್ತರಾಗೋಣ, ಜೈ ಹಿಂದ್ ಜೈ ಭಾರತ್. ಮಾರ್ಗ ವಂದೇ …ಮನೆಯಲ್ಲೇ ಇರೋದು.
———ಎ.ಕೆ.(ಅರುಣ್ ಕೊಪ್ಪ,ಯುವಕವಿ ಶಿರಸಿ)
ಈ ರೀತಿ ರೋಡಲ್ಲಿ ಹಾಕುವುದು ತಪ್ಪು ಏಕೆಂದರೆ ಅದೆ ಊರಿನವರು ಒಂದು ಜೀವ ಹೋಗ ಸಮಯ ಬಂದ್ರೆ ಆಗ ಗಾಡಿಯಲ್ಲಿ ಕರೆದುಕೊಂಡು ಹೋಗಬೇಕು ಮತ್ತು ಅದನ್ನು ತೆಗಿಯಲಿಕ್ಕೆ 10 ನಿಮಿಷಗಳು ಆಗುತ್ತೆ ಆ 10 ನಿಮಿಷಕ್ಕೆ ನಾವು ಆಸ್ಪತ್ರೆಗೆ ಸೇರಿಸಬಹುದು ಈದನ್ನು ತೆಗಿಯುವುದರೊ ಳಗೆ ಪ್ರಾಣ ಹೋದರೆ ಯಾರು ಹೊಣೆ? ಸುಮ್ಮ ಸುಮ್ಮನೆ ಜಾಸ್ತಿ ಜನ ಹೋದರೆ ಊರಿನ ಜನ ಕೇಳಲಿ ಅದು ಬಿಟ್ಟು ಈ ರೀತಿ ಬೇಲಿ ಹಾಕುವುದು ಕಾನೂನಿ ಪ್ರಕಾರ ಸರಿನಾ? ಹಾಗೂ ಅರ್ಜಂಟ್ ಕೆಲಸ ಇದ್ದರೆ ಒಂದು ಊರಿಂದ ಮ ತ್ತೊಂದು ಊರಿಗೆ ಹೋಗಬೇಕಾದರೆ ಬೇರೆ ಊರಿನ ರಸ್ತೆ ಬೇಕೆ, ಬೇಕು.
– ಹೇಮಂತ್ ಸಿದ್ಧಾಪುರ, ರಣಧೀರ ಪಡೆ
ಈ ಮಾರಕ ಖಾಯಿಲೆ ಬಗ್ಗೆ ಜಾಗೃತಿ ಮುಖ್ಯ. ಜನಸಾಮಾನ್ಯರಿಗೆ ತೊಂದರೆ ಕೊಡದೆ ತಮಗೆ ತಾವೇ ಬೇಲಿ ಹಾಕಿಕೊಳ್ಳುವ ಮೂಲಕ ಕರೋನಾ ಹೊಡೆದೋಡಿಸಬೇಕು – ಉಮೇಶ್ ನಾಯ್ಕ, ಉಪಾಧ್ಯಕ್ಷರು ಬೇಡ್ಕಣಿ ಗ್ರಾ.ಪಂ. ಸಿದ್ಧಾಪುರ (ಉ.ಕ.)





“ದಿಗ್ಬಂಧನ ನೀವೇನಂತೀರಾ?…”
ಎಚ್ಚರ ತಪ್ಪಿದ ಮಾಬ್ ಮೆಂಟಾಲಿಟಿ.