

ಕರೋನಾ ಮುನ್ನೆಚ್ಚರಿಕೆ ವಹಿಸದೆ ಕೇಂದ್ರ ಸರ್ಕಾರ ಮಾಡಿಟ್ಟಿರುವ ಲಾಕ್‍ಔಟ್ ನಿಂದಾಗಿ ಕೆಲವೆಡೆ ವ್ಯಾಪಾರಿಗಳು ಹಗಲುದರೋಡೆಗೆ ಇಳಿದಿರುವ ದೂರುಗಳು ಕೇಳಿ ಬರುತ್ತಿವೆ.
ಮನೆಮನೆಗೆ ತರಕಾರಿ,ಆಹಾರ ಸಾಮಗ್ರಿ ಪೂರೈಸುತ್ತಿರುವ ಸರ್ಕಾರಿ ನಿಯಂತ್ರಿತ ವ್ಯವಸ್ಥೆಯ ಲಾಭ ಪಡೆದು ವ್ಯಾಪಾರಿಗಳು ಜನಸಾಮಾನ್ಯರನ್ನು ಲೂಟಿ ಮಾಡುತ್ತಿರುವುದಕ್ಕೆ ಎಲ್ಲೆಡೆ ಆಕ್ಷೇಪಗಳು ವ್ಯಕ್ತವಾಗುತ್ತಿವೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಸೇರಿದಂತೆ ಕೆಲವೆಡೆ ವ್ಯಾಪಾರಿಗಳು ಸರ್ಕಾರದ ನಿಗದಿತ ದರಕ್ಕಿಂತ ಹೆಚ್ಚು ಪಡೆದು ತರಕಾರಿ, ಆಹಾರ ಸಾಮಗ್ರಗಳನ್ನು ಕೊಡುತ್ತಿರುವ ಬಗ್ಗೆ ಪತ್ರಕರ್ತರೊಬ್ಬರು ಆಕ್ಷೇಪಿಸಿದ್ದಾರೆ.


ಇಂಥದ್ದೇ ವ್ಯಾಪಾರಿಗಳು ಸಿದ್ದಾಪುರದಲ್ಲಿ ಒಂದೊಂದು ಕಟ್ಟು ಬಸಳೆ, ಹರವೆ ಸೊಪ್ಪಿನ ಕಟ್ಟಿಗೆ ತಲಾ ನೂರು, ನೂರಾ ಇಪ್ಪತ್ತು ಪಡೆದಿರುವ ಬಗ್ಗೆ ಪ್ರಚಲಿತ ಆಶ್ರಮದ ನಾಗರಾಜ್ ನಾಯ್ಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಸಿದ್ದಾಪುರದ ಕೋಲಶಿರ್ಸಿ ಪಂಚಾಯತ್ ವ್ಯಾಪ್ತಿಯಲ್ಲಿ ತರಕಾರಿಗಳಿಗೆ ಒಂದೊಂದು ಪಾಂಯಿಟ್ ನಲ್ಲಿ ಒಂದೊಂದು ಬೆಲೆಯಲ್ಲಿ ತರಕಾರಿ ಮಾರಿರುವ ಬಗ್ಗೆ ಸ್ಥಳಿಯರು ದೂರಿದ್ದಾರೆ.
ಹೀಗೆ ರಾಜ್ಯದಾದ್ಯಂತ ಕೆಲವು ಆಡಳಿತ ಪಕ್ಷದ ವ್ಯಾಪಾರಿಗಳು ಆಹಾರಧಾನ್ಯಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದು ಈಗ ಅಭಾವಸೃಷ್ಟಿಸಿ ಹೆಚ್ಚಿನ ಬೆಲೆಯಲ್ಲಿ ಮಾರಿ ಲಾಭ ಮಾಡಲು ಹೊಂಚುಹಾಕಿರುವ ವಿದ್ಯಮಾನವೂ ನಡೆದಿದೆ.
ಈ ತೊಂದರೆಗಳ ಬಗ್ಗೆ ಆಯಾ ತಾಲೂಕುಗಳಲ್ಲಿ ತಹಸಿಲ್ದಾರರು ಅಥವಾ ನೇರವಾಗಿ ಜಿಲ್ಲಾಧಿಕಾರಿಗಳ ಮೂಲಕ ತಮ್ಮ ತಕರಾರು ದಾಖಲಿಸಬಹುದಾಗಿದೆ. ಹಬ್ಬ-ಉತ್ಸವ, ಆಚರಣೆ, ಕಾರ್ಯಕ್ರಮಗಳಲ್ಲೆಲ್ಲಾ ಲಾಭ ಮಾಡುವ ವ್ಯಾಪಾರಿವರ್ಗ ಈಗ ಕೊರೋನಾ ಸಂಕಟವನ್ನೂ ತಮ್ಮ ಲಾಭ,ಅನುಕೂಲಕ್ಕೆ ಬಳಸಿಕೊಳ್ಳುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಗ್ರಾ.ಪಂ. ಮಟ್ಟದಿಂದ ನಗರಸಭೆ, ಮಹಾನಗರ ಪಾಲಿಕೆಗಳ ವರೆಗೆ ಇಂಥ ಕಷ್ಟ ಕಾಲದ ದುರುಪಯೋಗದಿಂದ ಲಾಭ ಪಡೆಯುತ್ತಿರುವ ಪಕ್ಕಾ ವ್ಯವಹಾರಸ್ಥರನ್ನು ನಿಯಂತ್ರಿಸಿ, ಜನಸಾಮಾನ್ಯರ ಶೋಷಣೆ ತಡೆಯುವ ಪ್ರಯತ್ನ ಸರ್ಕರದಿಂದ ಆಗಬೇಕಿದೆ.
ಶಿಶು ಮತ್ತು ಮಹಿಳೆಯರಿಗೆ ಮನೆಗೇ ಸೌಲಭ್ಯ, ಬಿಸಿ ಊಟದ ಅಕ್ಕಿ ತರಲು ವಿದ್ಯಾರ್ಥಿಗಳೇಕೆ ಶಾಲೆಗೆ ಹೋಗಬೇಕು?
ರಾಜ್ಯ ಮತ್ತು ದೇಶದಲ್ಲಿ ಶಿಸುಗಳು ಮತ್ತು ಮಹಿಳೆಯರಿಗೆ ಆಹಾರ ಪೂರೈಸುವ ಅಂಗನವಾಡಿಗಳ ಅಡುಗೆ ವ್ಯವಸ್ಥೆ ನಿಲ್ಲಿಸಿ ಫಲಾನುಭವಿಗಳ ಮನೆಗೆ ಆಹಾರ ಸಾಮಗ್ರಿ ಒದಿಸುವ ಸರ್ಕಾರಗಳ ಹೊಸ ಕ್ರಮಕ್ಕೆ ವಿರೋಧ ವ್ಯಕ್ತವಾಗಿದೆ.
ಬಹಳ ವರ್ಷಗಳಿಂದ ಅಂಗನವಾಡಿಗಳಲ್ಲಿ ಆಹಾರ ತಯಾರಿಸಿ ಮಕ್ಕಳಿಗೆ,ಮಹಿಳೆಯರಿಗೆ ನೀಡುವ ವ್ಯವಸ್ಥೆ ಜಾರಿಯಲ್ಲಿತ್ತು ಆದರೆ ಇದೇ ವರ್ಷದಿಂದ ಅಂಗನವಾಡಿಗಳಲ್ಲಿ ಆಹಾರ ತಯಾರಿಕೆ ನಿಲ್ಲಿಸಿ, ಆಹಾರ ಸಾಮಗ್ರಿಗಳನ್ನು ನೇರವಾಗಿ ಮಹಿಳೆಯರು, ಮಕ್ಕಳಿಗೆ ತಲುಪಿಸುವ ವ್ಯವಸ್ಥೆಯನ್ನು ಕಾರ್ಮಿಕ ಸಂಘಟನೆಗಳು ವಿರೋಧಿಸಿವೆ.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
