ಸರ್ವಋತು ಜಲಪಾತವಾಗಲಿದೆಯೆ ಹುಸೂರು ಜಲಾಗಾರ!

ಮಲೆನಾಡಿನ ಮಳೆ, ಜಲಪಾತಗಳ ವೈಭವ ವರ್ಣಿಸಲಸದಳ ಉತ್ತರ ಕನ್ನಡ ಜಿಲ್ಲೆಯಲ್ಲಿ ತುಸು ಬಿಡುವು ನೀಡಿರುವ ಮಳೆ ಪ್ರವಾಸಿಗರಿಗೆ ಅನುಕೂಲ ಮಾಡಿಕೊಟ್ಟಿದೆ. ಉತ್ತರ ಕನ್ನಡ ಜಿಲ್ಲೆಯನ್ನು ಜಲಪಾತಗಳ ಸ್ವರ್ಗ ಎನ್ನಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯ ಗಡಿಭಾಗದ ಜೋಗ ಜಲಪಾತ ಸೇರಿ ಇಲ್ಲಿ ಪ್ರತಿ ತಾಲೂಕಿನಲ್ಲೂ ಜಲಪಾತಗಳ ಸೊಬಗು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ಹುಸೂರು ಜಲಪಾತ ಇಂಥ ಆಕರ್ಷಕ ಜಲಪಾತಗಳಲ್ಲೊಂದು ಜೋಗದಿಂದ ಹದಿನೈದು ಕಿಲೋ ಮೀಟರ್‌ ದೂರದ ಈ ಜಲಪಾತ ಈಗ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ.


ಹುಸೂರಿನಲ್ಲಿರುವ ಆಣೆಕಟ್ಟು (ಜಲಾಗಾರ) ವರ್ಷದ ಆರು ತಿಂಗಳು ತುಂಬಿರುತ್ತದೆ. ಇನ್ನುಳಿದ ಆರು ತಿಂಗಳಲ್ಲಿ ಈ  ಆಣೆಕಟ್ಟೆಯಲ್ಲಿ ನೀರಿಲ್ಲದಿರುವುದರಿಂದ ಹುಸೂರು ಜಲಪಾತ ಬಡವಾಗುತ್ತದೆ. ಈ ವರ್ಷ ವಿಳಂಬವಾಗಿ ಸುರಿದಿರುವ ಮಳೆ ಈಗ ಎಲ್ಲಾ ಜಲಪಾತಗಳನ್ನು ಮೈದುಂಬಿಸಿದೆ. ಈ ಜಲಪಾತದ ಹುಸೂರಿನ ಆಣೆಕಟ್ಟೆಯ ನೀರು ವರ್ಷಂಪ್ರತಿ ಇಲ್ಲದಿರುವುದರಿಂದ ಹುಸೂರು ಜಲಪಾತ ಕೇವಲ ಆರು ತಿಂಗಳು ಮಾತ್ರ ಮೈತುಂಬಿಕೊಂಡಿರುತ್ತದೆ. ಇದೇ ಆಣೆಕಟ್ಟೆಗೆ ಸಾಗರದ ಲಿಂಗನಮಕ್ಕಿ ಜಲಾಶಯದ ನೀರು ಹರಿಸುವುದರಿಂದ ಈ ಜಲಪಾತವನ್ನು ಸರ್ವಋತು ಜಲಪಾತವನ್ನಾಗಿ ಅಭಿವೃದ್ಧಿ ಪಡಿಸಬಹುದು ಎನ್ನುವ ಅಭಿಪ್ರಾಯವಿದೆ.


ಸಿದ್ಧಾಪುರ ತಾಲೂಕಿಗೆ ಲಿಂಗನಮಕ್ಕಿಯಿಂದ ಹಿನ್ನೀರನ್ನು ತರಲು ಯೋಜನೆ ಸಿದ್ಧವಾಗಿದೆ. ಈ ಯೋಜನೆಯನ್ನು ತುಸು ಬದಲಿಸಿ ಹುಸೂರುಜಲಾಶಯಕ್ಕೆ ಲಿಂಗನಮಕ್ಕಿ ಹಿನ್ನೀರನ್ನು ಹರಿಸಿ ಅದರಿಂದ ಹುಸೂರಿನ ಜಲಪಾತವನ್ನು ವರ್ಷವಿಡೀ ಜೀವಂತವಿಡಬಹುದು ಎನ್ನುವ ಅಭಿಪ್ರಾಯ ಸ್ಥಳೀಯರದ್ದು. ಹುಸೂರಿನ ರಮಣೀಯ ಪರಿಸರದ ಜಲಪಾತ ಈಗ ಎಲ್ಲರನ್ನೂ ಆಕರ್ಷಿಸುತ್ತಿದೆ. ಈ ವೈಭವವನ್ನು ವರ್ಷವಿಡೀ ವಿಸ್ತರಿಸಲು ಸ್ಥಳೀಯ ಆಡಳಿತ ಪ್ರಯತ್ನಿಸಿದರೆ ಸಿದ್ಧಾಪುರಕ್ಕೆ ವರ್ಷವಿಡೀ ಕುಡಿಯುವ ನೀರಿನ ಜೊತೆಗೆ ತಾಲೂಕಿನ ಪ್ರವಾಸೋದ್ಯಮವನ್ನೂ ಅಭಿವೃದ್ಧಿಪಡಿಸಬಹುದೆನ್ನುವ ಆಶಯ ಈಗ ಸಾರ್ವಜನಿಕ ಅಭಿಪ್ರಾಯವಾಗುತ್ತಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *