ದೈನಂದಿನ ಸ್ಥಿತಿಗತಿಗಳು ಮತ್ತು ಶೈಕ್ಷಣಿಕ ಸವಾಲುಗಳು

ಏಕೋಪಾಧ್ಯಾ ಯ” ಶಾಲೆ ~

ದೈನಂದಿನ ಸ್ಥಿತಿಗತಿಗಳು ಮತ್ತು ಶೈಕ್ಷಣಿಕ ಸವಾಲುಗಳು

ಏಕೋಪಾದ್ಯಾಯ ಶಾಲೆಯ ಮುಖ್ಯೋಪಾಧ್ಯಾಯರಿದ್ದಂತೆ ಎಂಬ ಮಾತನ್ನು ನಾವು ಒಂದಲ್ಲ ಒಂದು ಬಾರಿ ಕೇಳಿಯೇ ಇರುತ್ತೇವೆ ., ಒಬ್ಬನೇ ವ್ಯಕ್ತಿ ಹಲವಾರು ಕೆಲಸಗಳನ್ನು

 ನಿಭಾಯಿಸಬೇಕಾದ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಈ ಮಾತನ್ನು ವ್ಯಂಗ್ಯವಾಗಿ ಬಳಸುವುದು ವಾಡಿಕೆ. 

ಏಕೋಪಾದ್ಯಾಯ ಶಾಲೆಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ  ಹೆಚ್ಚಾಗಿ ಕಾಣಬಹುದು .ಅಷ್ಟಕ್ಕೂ RTE ನೀತಿಯಂತೆ ಇಂತಹ ಶಾಲೆಗಳೇ ಅಸ್ತಿತ್ವದಲ್ಲಿ ಇರುವಂತಿಲ್ಲ

ಆದರೆ ಸ್ಥಳೀಯ ಅಗತ್ಯತೆ ಇಂದಲೋ ಮಕ್ಕಳ ಕೊರತೆ ಇಂದಲೋ ಅಥವ ಇನ್ಯಾವುದೋ ಅನಿವಾರ್ಯತೆಯ  ಕಾರಣಗಳಿಂದಾಗಿ ಇಂದಿಗೂ ದೇಶಾದ್ಯಂತ ಲಕ್ಷಾಂತರ ಏಕೋಪಾಧ್ಯಾ ಯ ಶಾಲೆಗಳು ಅಸ್ತಿತ್ವದಲ್ಲಿವೆ. ಕರ್ನಾಟಕದಲ್ಲಿಯೇ ಹತ್ತಕ್ಕಿಂತ ಕಡಿಮೆ ಮಕ್ಕಳನ್ನು ಹೊಂದಿರುವ 4500 ಕ್ಕೂ ಹೆಚ್ಚು ಏಕೋಪಾಧ್ಯಾ ಯ ಶಾಲೆಗಳಿವೆ.

ಮಕ್ಕಳ ಸಂಖ್ಯೆ ಕಡಿಮೆ ಇರುವಾಗ ಅಷ್ಟೇನು ಕೆಲಸ ಇರುತ್ತದೆ ಎಂಬುದೇ ಬಹುತೇಕರ ಪ್ರಶ್ನೆ.ಇವುಗಳಲ್ಲಿ ಕೆಲಸ ನಿರ್ವಹಿಸುವುದು ತುಂಬಾ ಸುಲಭ ಎಂಬ ಭಾವನೆಯು ಬರಬಹುದು  .. ಇಡೀ ಭೂಮಿಯ ಭಾರವನ್ನು ತಲೆಯ ಮೇಲೆ ಹೊತ್ತಷ್ಟು ಕಷ್ಟಕರ ಸ್ಥಿತಿ ಇಲ್ಲದಿದ್ದರೂ ತನ್ನದೇ ಆದ ಹಲವಾರು ಸವಾಲುಗಳಿವೆ.ಹಾಗೆಯೇ ವಸ್ತುಸ್ಥಿತಿಗಳು ಸಹ ಬೇರೆಯೇ ಇವೆ .

ಮಕ್ಕಳ ಸಂಖ್ಯೆ ಕಡಿಮೆ ಇರಬಹುದು ಆದರೆ ಕರ್ತವ್ಯ ,ಜವಾಬ್ದಾರಿಗಳ ಸಂಖ್ಯೆ ಕಡಿಮೆಯಾಗಿಲ್ಲ. ಅದರಲ್ಲೂ ಎಲ್ಲಾ ಮಕ್ಕಳಿಗೂ ಎಲ್ಲಾ ವಿಷಯಗಳನ್ನೂ ಕಲಿಸುವ ಅನಿವಾರ್ಯತೆ,ಅದಕ್ಕೆ ತಕ್ಕಂತೆ ವೇಳಾಪಟ್ಟಿಯನ್ನು ಹೊಂದಿಸಿಕೊಳ್ಳುವ ಚಾಕಚಕ್ಯತೆ ,ಬಹುವರ್ಗ ಭೋಧನೆಯಲ್ಲಿನ ಸೂಕ್ಷ್ಮತೆ ,ಶಾಲೆಯ ಅನಿವಾರ್ಯತೆಗೆ ತಕ್ಕಂತೆ ಹೊಂದಿಕೊಳ್ಳುವ ಸಡಿಲತೆ ಇಲ್ಲಿನ ಶಿಕ್ಷಕರಿಗೆ ಇರಬೇಕಾಗುತ್ತದೆ.ಬೇರೆ ಶಾಲೆಗಳಲ್ಲಿ ಶೈಕ್ಷಣಿಕ ರಥವನ್ನು ಎಳೆಯಲು ಸಹೋದ್ಯೋಗಿಗಳ ನೆರವಿದ್ದರೆ ಇಲ್ಲಿ ಒಬ್ಬರೇ ಎಳೆಯಬೇಕಾಗುತ್ತದೆ.ಇಲಾಖೆಯ ಅಧಿಕಾರಿಗಳು CRP ಗಳು ನೆರವಾಗುತ್ತಾರಾದರು ಅವರು ಶಾಲೆಗೆ ಹೊರಗಿನವರೆ ಆಗಿರುತ್ತಾರೆ.ಶಾಲೆಯ ದೈನಂದಿನ ಅಗತ್ಯಗಳಿಗೆ ಎಲ್ಲಾ ಸಮಯದಲ್ಲೂ ಅವರ ಉಪಸ್ಥಿತಿಯನ್ನು ನಿರೀಕ್ಷಿಸುವುದು ಸರಿಯಲ್ಲ ಹಾಗೂ ಅವರ ವಿಶಾಲವಾದ ಜವಾಬ್ದಾರಿಗಳ ನಡುವೆ ಅದು ಅಸಾಧ್ಯವೂ ಸಹ ಹೌದು.ಇನ್ನೂ sdmc ಯವರ ಸಹಕಾರ ಇರುತ್ತದೆಯಾದರು ತರಗತಿ ಪರಿಸರದಲ್ಲಿ ಅವರು ಸುಗಮಕಾರರಾಗಲಾರರು.ಕೆಲವು ಕಡೆ ಆಯಾ ಊರಿನ ಕಲಿತವರು ಕೆಲವೊಮ್ಮೆ ಅಕ್ಷರ ಸೇವೆಗೆ ಮುಂದೆ ಬರಬಹುದಾದರೂ ಎಲ್ಲಾ ಕಡೆಯೂ ಅಂತಹ ಸೇವೆಯನ್ನು ನಿರೀಕ್ಷಿಸಲಾಗದು.

1ರಿಂದ 3 ನೆ ತರಗತಿವರೆಗೂ ನಲಿಕಲಿ ಪದ್ಧತಿ ಜಾರಿಯಲ್ಲಿರುವುದರಿಂದ ಒಬ್ಬ ಶಿಕ್ಷಕನು ಸಂಪೂರ್ಣವಾಗಿ ಇದರಲ್ಲಿ ತೊಡಗಿ ಕೊಂಡರಷ್ಟೇ ಇದರ ಉದ್ದೇಶ ಈಡೇರಿಕೆ ಸಾಧ್ಯ. ಆದರೆ ಇದೇ ಅವಧಿಯಲ್ಲಿ 4 ಮತ್ತು 5 ನೆ ತರಗತಿಗಳಿಗೂ

 ಮಾರ್ಗದರ್ಶಿಸುವ ಹೊಣೆಗಾರಿಕೆಯೂ ಇರುತ್ತದೆ. ಸದ್ಯದ ನಿಯಮಗಳಂತೆ ನಲಿಕಲಿ ತರಗತಿಗಳ ಪ್ರತಿಯೊಂದು ಅವಧಿ 80 ನಿಮಿಷಗಳಾಗಿದ್ದು ಕಲಿ ನಲಿ ತರಗತಿಗೆ 45 ನಿಮಿಷ ಇರುತ್ತದೆ .ನಲಿಕಲಿಯ 3 ವಿಷಯಗಳು  ಮತ್ತು 4 ನೆ ತರಗತಿಯ 4 ವಿಷಯಗಳು 5 ನೆ ತರಗತಿಯ 4 ವಿಷಯಗಳು ಹಾಗೆಯೇ ನಲಿಕಲಿ ತರಗತಿಗಳ 3 ಇಂಗ್ಲಿಷ್ ಸೇರಿದಂತೆ ಒಂದು ದಿನಕ್ಕೆ 14 ಅವಧಿ ಗಳನ್ನು ಒಬ್ಬ ಶಿಕ್ಷಕ ನಿರ್ವಹಿಸುವ ಸವಾಲು ಇಲ್ಲಿರುತ್ತದೆ ಕೇವಲ 7 ಅಥವ 8 ಪೀರಿಯಡ್ ಗಳಲ್ಲಿ ಇಷ್ಟೆಲ್ಲಾ ವಿಷಯಗಳನ್ನೂ  ಭೋದಿಸುವುದು ಸಾದ್ಯವೇ? , ಅದರಲ್ಲೂ ಬೇರೆ ಬೇರೆ ತರಗತಿಗಳಿಗೆ? .

ಇದರ ಜೊತೆಗೆ ಮೌಲ್ಯ ಶಿಕ್ಷಣ , ಕಾರ್ಯ ಶಿಕ್ಷಣ, ಸಹ ಪಠ್ಯ ಚಟುವಟಿಕೆಗಳು ಸಹ . ಸಮಯ ಹೊಂದಾಣಿಕೆ ಮಾಡಿಕೊಂಡು ಹೇಗೋ ನಿಭಾಯಿಸಿದರು ಕೂಡಾ ಮಕ್ಕಳಿಗೆ ಇದು ಅನ್ಯಾಯವೇ ಸರಿ . ಆಯಾ ತರಗತಿಯ ಮಕ್ಕಳಿಗೆ ಶಿಕ್ಷಕರ ಮಾರ್ಗದರ್ಶನದ ಅವಧಿ ಕಡಿತ ಗೊಳ್ಳುವುದು ಅಲ್ಲದೆ ಅವರೊಂದಿಗಿನ ಒಡನಾಟ, ಸಂವಹನ,ಕಡಿಮೆಯಾಗುತ್ತದೆ .ಸಿಗುವ ಅಲ್ಪ ಅವಧಿಯಲ್ಲೇ ಕಲಿಯುವ ಒತ್ತಡ ಉಂಟಾಗುತ್ತದೆ. ಸ್ವ ಕಲಿಕೆ ಸ್ವ ವೇಗದ ಕಲಿಕೆಗೆ ತಕ್ಕಂತೆ ಪುಸ್ತಕವನ್ನು ರೂಪಿಸಿದ್ದರೂ ಸಹ ಮಕ್ಕಳ ಮನಸಿನ ಜೊತೆ ಶಿಕ್ಷಕರ ಮಾರ್ಗದರ್ಶನ ನಿರಂತರವಾಗಿ ಸಂವಹನ ಮಾಡಿದರಷ್ಟೇ ಕಲಿಕೆ ಪರಿಣಾಮಕಾರಿಯಾಗಲು ಸಾಧ್ಯ .ಇಲ್ಲದೇ ಹೋದರೆ ಅದು ಹೊಳೆಯಲ್ಲಿ ಹುಣಸೆ ಹಣ್ಣನ್ನು ತೊಳೆದಂತೆಯೆ ಸರಿ.ಇನ್ನೂ cce ಗೆ ತಕ್ಕಂತೆ ಎಲ್ಲವನ್ನೂ ಯೋಜಿತವಾಗಿಯೆ ನಿರ್ವಹಿಸಿದರು ಕೂಡ ನಲಿಕಲಿ ಅಥವ 4 ಮತ್ತು 5 ನೆ ತರಗತಿ ಇಬ್ಬರಲ್ಲಿ ಒಬ್ಬರು ನೇರ ಮಾರ್ಗದರ್ಶನ ಪಡೆದರೆ ಮತ್ತೊಬ್ಬರು ತಾವೇ ಏನಾದರೂ ಮಾಡುತ್ತಾ ಕೂರಬೇಕಾಗುತ್ತದೆ.ಎಷ್ಟೇ ಯೋಜಿಸಿ ಯೋಚಿಸಿ ಚಟುವಟಿಕೆಗಳನ್ನು ರೂಪಿಸಿದರು ಸಹ  ಎಲ್ಲಾ ಸಂದರ್ಭಗಳಲ್ಲೂ ಅವು ನೂರಕ್ಕೆ ನೂರರಷ್ಟು ಪರಿಣಾಮಕಾರಿಯಾಗಿ ಕಲಿಕಾ ಸನ್ನಿವೇಶ ಸೃಷ್ಟಿಸಲಾರವು.

ಅದರ ಜೊತೆಗೆ ಅಕ್ಷರ ದಾಸೋಹ ಕ್ಷೀರಭಾಗ್ಯ ಶಾಲಾ ಕೈ ತೋಟ , ಶಾಲಾ ದಾಖಲಾತಿಗಳ ನಿರ್ವಹಣೆ ,ಮೌಲ್ಯ ಮಾಪನ,ಪರೀಕ್ಷೆಗಳು,sdmc ಸಭೆಗಳು, ಮುಖ್ಯ ಶಿಕ್ಷಕರ ಸಭೆಗಳು,ವಿದ್ಯಾರ್ಥಿ ವೇತನ,ಹಣಕಾಸು ವಿಷಯಗಳು,ಪ್ರತಿಭಾ ಕಾರಂಜಿ ಇನ್ನಿತರ ಕರ್ತವ್ಯಗಳ ನಿರ್ವಹಣೆಗೆ  ಇಲ್ಲಿ ಯಾರ ಸಹಕಾರವೂ ದೊರೆಯದು ಮುಖ್ಯವಾಗಿ ಸಹೋದ್ಯೋಗಿಗಳಿಂದ ದೊರೆಯುವ ಭಾವನಾತ್ಮಕ ಬೆಂಬಲ, ಶ್ರಮದ ಹಂಚಿಕೆ ಹಾಗೂ ವಿವಿಧ ಸವಾಲುಗಳನ್ನು ಎದುರಿಸುವಲ್ಲಿ ಬೇಕಾದ ಅನುಭವಗಳ ಪಾಠವು ಏಕೋಪಾದ್ಯಾಯ ಶಾಲೆಗಳಲ್ಲಿ ತಕ್ಷಣಕ್ಕೆ ದೊರೆಯಲಾರದು.

ಇಲ್ಲಿನ ಶಿಕ್ಷಕ ಯಾವುದೋ ಕಾರಣಗಳಿಂದಾಗಿ ರಜೆ ಪಡೆದಾಗಲೋ ಅಥವಾ ವೃತ್ತಿಪರ ತರಬೇತಿಗಳಿಗೆ ಹೋದಾಗಲೋ ಶಾಲಾ ಶೈಕ್ಷಣಿಕ ಚಟುವಟಿಕೆಗಳು ಭಾಗಶಃ ನಿಂತುಬಿಡುವ ಸಾಧ್ಯತೆಯೇ ಹೆಚ್ಚು . ಆ ಸಮಯದಲ್ಲಿ ಬೇರೆ ಶಾಲೆಯಿಂದ ಯಾರಾದರೂ ಬರುತ್ತಾರಾದರು ತರಗತಿ ಪರಿಸರದಲ್ಲಿನ ಪೂರ್ವನಿರ್ಧರಿತ ನಿರಂತರತೆಯನ್ನು ಖಂಡಿತ ಕಾಯ್ದುಕೊಳ್ಳಲಾಗದು .

ಇಷ್ಟೆಲ್ಲಾ ಸವಾಲು, ಇತಿಮಿತಿ ಗಳ ನಡುವೆಯೂ  ಶಿಕ್ಷಣ ನೀಡುವಿಕೆಯ ತಮ್ಮ ಮೂಲ ಉದ್ದೇಶಕ್ಕೆ ಕಿಂಚಿತ್ತೂ ಧಕ್ಕೆಯಾಗದಂತೆ ಹೇಗೋ ಹೊಂದಿಕೊಂಡು, ಸವಾಲುಗಳನ್ನು ಮೆಟ್ಟಿನಿಂತು ಮುದ್ದುಮಕ್ಕಳ ಭವಿಷ್ಯವನ್ನು ಕಟ್ಟುವ , ಅವರ ಬಾಲ್ಯವನ್ನು ಸಾರ್ಥಕವಾಗಿಸುವ ,ಅವರ ಆಸೆ ಆಕಾಂಕ್ಷೆ ಕನಸುಗಳಿಗೆ ಚಿಮ್ಮು ಹಲಗೆಯಾಗುವ ಕೆಲಸಗಳನ್ನು ಏಕೋಪಾದ್ಯಾಯ ಶಾಲೆಗಳು ಪರಿಣಾಮಕಾರಿಯಾಗಿ ಮಾಡುತ್ತಾ ಬಂದಿವೆ ಹಾಗೂ ಮಾಡುತ್ತವೆ ಕೂಡ.ಆದರೂ ಸಾಂಘಿಕ ಪ್ರಯತ್ನದಲ್ಲಿನ ಗುಣಮಟ್ಟವನ್ನು ಇಲ್ಲಿ ಕಾಣಲಾಗದು ಎಂಬ ಸತ್ಯವನ್ನು ಅನಿವಾರ್ಯವಾಗಿ ಒಪ್ಪಲೇಬೇಕಾಗಿದೆ ಮತ್ತು ಇಂತಹ ಅಸಹಾಯಕ ಸ್ಥಿತಿಯನ್ನು ತಪ್ಪಿಸಲು ಪ್ರತಿ ಏಕೋಪಾಧ್ಯಾ ಯ ಶಾಲೆಗೂ ಇನ್ನೊಬ್ಬ ಶಿಕ್ಷಕರನ್ನು ನೀಡಬೇಕಿದೆ.ಬಿಡುವಿನ ವಿರಾಮಗಳಲ್ಲಿ ಬ್ಯಾಟು ಬಾಲು  ಹಿಡಿದು” sir ಆಟ ಆಡುವ ಬನ್ನಿ” ಎನ್ನುವ ಮಕ್ಕಳ ಕೂಗಿಗೆ ಸ್ಪಂದಿಸಲಾರದ ಸ್ಥಿತಿ ಶಾಲೆಗಳಲ್ಲಿ ಸೃಷ್ಟಿಯಾಗದಿದ್ದರೆ ಮಾತ್ರ ಶಿಕ್ಷಣದ ಗುಣಮಟ್ಟಕ್ಕೊಂದು ಅರ್ಥವಿರುತ್ತದೆ.

ಮನು ಪುರ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

1 Comment

Leave a Reply

Your email address will not be published. Required fields are marked *