

ಬಂಗಾರದ ಆಸೆಗಾಗಿ ಒಂಟಿಮನೆಯ ವಿಧವೆಯೊಬ್ಬರನ್ನು ಕೊಂದ ಆರೋಪದ ಮೇಲೆ ಬಿಳೇಗೋಡಿನ ರಾಜು ಗೌಡ ಎನ್ನುವ ವ್ಯಕ್ತಿಯೊಬ್ಬನನ್ನು ಸಿದ್ಧಾಪುರ ಪೋಲಿಸರು ಬಂಧಿಸಿದ್ದಾರೆ.


ಈ ವ್ಯಕ್ತಿ ಮೊನ್ನೆಯ ಶನಿವಾರ ರಾತ್ರಿ ದೊಡ್ಮನೆ ಜಕ್ಕಾರಿನ ಒಂಟಿಮನೆಯ ವಿಧವೆ ಗೌರಿ ನಾಯ್ಕರನ್ನು ಕೊಲೆ ಮಾಡಿ ಬಂಗಾರ ಅಪಹರಿಸಿದ್ದ.
ಪ್ರಕರಣದ ವಿವರ-
ಸಿದ್ಧಾಪುರದ ದೊಡ್ಮನೆಯ ಜಕ್ಕಾರು ದುರ್ಗಮ ಹಳ್ಳಿ, ಆ ಕಾಡುಗ್ರಾಮದ ನಡುವೆ ಇದ್ದಿದೊಂದೇ ಮನೆ. ಆ ಒಂಟಿಮನೆಯಲ್ಲಿ ವಾಸಿಸುತಿದ್ದವಳು ಗೌರಿ ನಾಯ್ಕ. ಒಬ್ಬ ಗಂಡು ಮತ್ತು ಒಬ್ಬಳು ವಿವಾಹಿತ ಮಕ್ಕಳನ್ನು ಹೊಂದಿದ್ದ ಗೌರಿ ನಾಯ್ಕ ಮಗ ತೀರ್ಥಳ್ಳಿಯಲ್ಲಿ ಮಗಳು ಸಿದ್ಧಾಪುರ ಹೊಸೂರಿನಲ್ಲಿ ಇರುತಿದ್ದರು.
ನಾಲ್ಕು ವರ್ಷದ ಕೆಳಗೆ ಗಂಡನನ್ನು ಕಳೆದುಕೊಂಡಿದ್ದ ಈ ಮಹಿಳೆ ಜಕ್ಕಾರಿನಲ್ಲಿ ಒಂಟಿಯಾಗಿ ಇರುತಿದ್ದರು. ಮೊನ್ನೆ ಶನಿವಾರ ಬೀರಲಮಕ್ಕಿಗೆ ಅಂಗಡಿಯ ದಿನಸಿ ತರಲು ಬಂದಿದ್ದ ಮಹಿಳೆಗೆ ಅಂಗಡಿಯ ಮಾಲಿಕ ಅಲ್ಲಿದ್ದ ವ್ಯಕ್ತಿಯೊಬ್ಬನಿಗೆ ಇವರಿಗೆ ಬಿಟ್ಟು ಬಾ ಎಂದು ತನ್ನ ಬೈಕ್ ಕೊಟ್ಟು ಮಹಿಳೆಯನ್ನು ಮನೆಗೆ ತಲುಪಿಸುತ್ತಾನೆ.
ಹೀಗೆ ಗೌರಿ ನಾಯ್ಕರನ್ನು ಮನೆಗೆ ತಲುಪಿಸಿದ ರಾಜುಗೌಡನ ಕಳ್ಳ ಬುದ್ದಿ ಗೌರಿ ನಾಯ್ಕರ ಬಂಗಾರದ ಮೇಲೆ ಆಸೆ ಪಡುತ್ತದೆ. ಅಂಗಡಿ ಮಾಲಿಕನಿಗೆ ಬೈಕ್ ಮರಳಿಸಿದ ರಾಜುಗೌಡ ಅಂದೇ ರಾತ್ರಿ ತನ್ನೂರು ಉಡಳ್ಳಿ ಯಿಂ ದ ಬಂದು ಮಹಿಳೆಯ ಮನೆಯಲ್ಲಿ ಮದ್ಯಪಾನ ಮಾಡಿ ಕೈಹಾರೆ ಎನ್ನುವ ಕಬ್ಬಿಣದ ಆಯುಧದಿಂದ ಗೌರಿ ನಾಯ್ಕರಿಗೆ ಹೊಡೆದು ಕೊಲ್ಲುತ್ತಾನೆ. ಜೀವ ಹೋದ ಗೌರಿಯ ದೇಹದಿಂದ ಬಂಗಾರ ಕಳಚುವ ರಾಜು ಒಂಟಿಮನೆಯ ವಿದ್ಯುತ್ ಸಮಪರ್ಕದ ಪ್ಯೂಜ್ ಕಿತ್ತು ಅಲ್ಲಿಂದ ಪರಾರಿಯಾಗುತ್ತಾನೆ.
ಮಾರನೇ ದಿನ ವಿದ್ಯುತ್ ಬಿಲ್ ನೀಡಲು ಹೋದ ಸ್ಥಳಿಯ ವಿದ್ಯುತ್ ಬಿಲ್ ಸಂಗ್ರಹಕಾರ ಈ ವಿಚಾರವನ್ನು ಸ್ಥಳಿಯರಿಗೆ ತಿಳಿಸಿ ಸಿದ್ಧಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತದೆ. ಶಿರಸಿ ಪೊಲೀಸ್ ಉಪ ವರಿಷ್ಠಾಧಿಕಾರಿ ಗೋಪಾಲಕೃಷ್ಣ ನಾಯಕ ಮತ್ತು ಪಿ.ಆಯ್. ಪ್ರಕಾಶ ತನಿಖೆ ಆರಂಭಿಸಿ ಮಹಿಳೆಯ ಪ್ರವಾಸ ಚರಿತ್ರೆ ತಿಳಿದು ಸಂಶಯದ ಆಧಾರದಲ್ಲಿ ಉಡಳ್ಳಿಯ ರಾಜುಗೌಡನನ್ನು ಬಂಧಿಸುತ್ತಾರೆ. ಮೊದಮೊದಲು ಪೊಲೀಸರಿಗೇ ದಿಕ್ಕುತಪ್ಪಿಸುವಂತೆ ವರ್ತಿಸಿದ ರಾಜುಗೌಡ ನಂತರ ಪೊಲೀಸ್ ಭಾಷೆಯಲ್ಲಿ ಮಾತನಾಡಿಸಿದಾಗ ಶನಿವಾರ ಗೌರಿ ನಾಯ್ಕರನ್ನು ಡ್ರಾಪ್ ಮಾಡಿದ ನಂತರ ರಾತ್ರಿ ಒಬ್ಬನೇ ಬಂದು ಕೊಲೆ ಮಾಡಿ ಬಂಗಾರ ಅಪಹರಿಸಿದ್ದನ್ನು ಒಪ್ಪಿಕೊಳ್ಳುತ್ತಾನೆ. ಈ ಹಿಂದೆ ಕೂಡಾ ಕೆಲವು ಕಳ್ಳತನಗಳಲ್ಲಿ ಆರೋಪಿಯಾಗಿರುವ ಈ ರಾಜುಗೌಡ ಜಕ್ಕಾರು ಒಂಟಿಮನೆಯ ವಿಧವೆಯನ್ನು ಬಂಗಾರದ ಆಸೆಗಾಗಿ ಕೊಲೆಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಒಂಟಿಮನೆಯ ವಿಧವೆ ಕೊಲೆ ಪ್ರಕರಣವನ್ನು ಬೇಧಿಸಿದ ಪೊಲೀಸರ ಕೆಲಸದ ಬಗ್ಗೆ ಸ್ಥಳಿಯರು ಪ್ರಶಂಸಿಸಿದ್ದಾರೆ. ಈ ಪ್ರಕರಣದ ವಿವರ ನೋಡಿ- @ಸಮಾಜಮುಖಿ ಕನ್ನೇಶ್ samajamukhi youtube channel https://www.youtube.com/watch?v=XfTPvIVw7tM
