

ಉತ್ತರ ಕನ್ನಡ ಜಿಲ್ಲೆಯಲ್ಲಿ ಕರೋನಾ ಆರ್ಭಟ ಮುಂದುವರಿದಿದೆ. ಹಳಿಯಾಳ-ದಾಂಡೇಲಿಗಳ 50 ಪ್ರಕರಣಗಳು ಸೇರಿ ಇಂದು ಒಟ್ಟೂ 92 ಜನರಲ್ಲಿ ಕರೋನಾ ದೃಢವಾಗಿದೆ.
ಗುರುವಾರದಿಂದ ಸಿದ್ಧಾಪುರ ತಾಲೂಕಿನಲ್ಲಿ ಕರೋನಾ ಪ್ರಕರಣ ದೃಢಪಟ್ಟದ್ದಾಗಲಿ, ಕರೋನಾ ಚಿಕಿತ್ಸೆ ಪಡೆಯುತಿದ್ದವರಾಗಲಿ ಇಲ್ಲ. ಗುರುವಾರದವರೆಗೆ ಸಿದ್ಧಾಪುರದ 30 ಪ್ರಕರಣಗಳಲ್ಲಿ ಒಟ್ಟೂ ವ್ಯಕ್ತಿಗಳು ಗುಣಮುಖರಾಗಿದ್ದಾರೆ. ವಿಚಿತ್ರವೆಂದರೆ…. ಸಿದ್ಧಾಪುರ ತಾಲೂಕು ಕರೋನಾ ಮುಕ್ತವಾದ ದಿನವೇ ಸಿದ್ಧಾಪುರದ ಹೊಸೂರಿನ ವಕೀಲರ ಹೆಂಡತಿ ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ. ಇವರ ಹುಟ್ಟೂರು ಹೆಮ್ಮನಬೈಲ್ ಆಗಿದ್ದು, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತಿದ್ದರು ಎನ್ನಲಾಗಿದೆ. ಇವರ ಪತಿ ಸಿದ್ಧಾಪುರದ ಹೊಸೂರಿನವರಾಗಿದ್ದು ಬೆಂಗಳೂರಿನಲ್ಲಿ ವಕೀಲರಾಗಿದ್ದಾರೆ ಎಂದು ಬಲ್ಲ ಮೂಲಗಳು ಸಮಾಜಮುಖಿ ಗೆ ಮಾಹಿತಿ ನೀಡಿವೆ. ಈ ಮಹಿಳೆ ಕರೋನಾ ದಿಂದ ಮೃತರಾಗಿರುವುದಾಗಿ ಅವರ ಆಪ್ತವಲಯ ದೃಢಪಡಿಸಿದೆ.

