

ಕಳೆದ ನಾಲ್ಕು ದಶಕಗಳಿಂದ ಅರಣ್ಯ ಭೂಮಿ ಸಾಗುವಳಿದಾರರ ಅರಣ್ಯ ಅತಿಕ್ರಮಣ ಹೋರಾಟ ಸಮೀತಿ ಮೂಲಕ ಹೋರಾಟ ಮಾಡುತ್ತಿರುವ ಎ.ರವೀಂದ್ರ ಉತ್ತರ ಕನ್ನಡ ಜಿಲ್ಲೆ, ರಾಜ್ಯ, ದೇಶದ ಅರಣ್ಯ ವಾಸಿಗಳ ವಾಸ್ತವ ಸ್ಥಿತಿ-ಗತಿಗಳ ಅಧೀಕೃತ ಅಂಕಿ-ಸಂಖ್ಯೆಗಳನ್ನು ಹೇಳಬಲ್ಲರು. 40 ವರ್ಷಗಳ ಹೋರಾಟದಲ್ಲಿ ಬುಡಮಟ್ಟದಿಂದ ಪ್ರಾರಂಭಿಸಿ ರಾಷ್ಟ್ರಮಟ್ಟದ ವರೆಗೆ ಅಧ್ಯಯನ, ಕಾನೂನು ಹೋರಾಟ ಮಾಡಿ ಅರಣ್ಯಭೂಮಿ ಸಾಗುವಳಿದಾರರನ್ನು ಭೂಮಾಲಿಕರನ್ನಾಗಿಸುವ ಅವರ ಹೋರಾಟದ ಬದ್ಧತೆಯನ್ನು ಅವರ ವಿರೋಧಿಗಳೂ ಮೆಚ್ಚಬೇಕು.
ಇಂಥ ರವೀಂದ್ರ ನಾಥ ನಾಯ್ಕ ಜಿಲ್ಲೆಯಿಂದ ಹೊರಗೆ ಕಾರ್ಯಕ್ರಮಕ್ಕೆ ಹೋದಾಗ ಭಾಷಣದಲ್ಲಿ ಹೇಳಿದ ಕರಾವಕ್ಕು ಅಂಕಿ-ಸಂಖ್ಯೆಗಳನ್ನು ದಾಖಲಿಸಿಕೊಂಡ ಪತ್ರಕರ್ತರೊಬ್ಬರು ನಂತರ ಇವರ ಸಂದರ್ಶನ ಮಾಡಿದಂತೆ ಮಾಡಿ! ಅರಣ್ಯ ಭೂಮಿ ಹಕ್ಕು ಹೋರಾಟ ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದರಂತೆ.
ಭಾಷಣ, ಸಂದರ್ಶನ, ಮಾತು ಎಲ್ಲಾ ಕಡೆ ಅಂಕಿ-ಸಂಖ್ಯೆ ಏರುಪೇರಾಗದಿರುವುದನ್ನು ದೃಢೀಕರಿಸಿಕೊಂಡ ನಂತರ ಎ. ರವೀಂದ್ರರಿಗೆ ‘ಸರ್ ನಿಮ್ಮ ಅಂಕಿಸಂಖ್ಯೆ ಗಳ ವಿಶ್ವಾಸಾರ್ಹತೆ ಬಗ್ಗೆ ನಾವು ಬೆಟ್ಟುಕಟ್ಟಿಕೊಂಡಿದ್ದೆವು. ಆದರೆ ನಿಮ್ಮ ಸತ್ಯ-ಬದಲಾಗದ ಅಂಕಿಸಂಖ್ಯೆ ಗಳ ಕರಾರುವಾಕ್ಕುತನ ನನಗೆ 5 ಸಾವಿರ ಉಳಿಸಿದೆ,’ ಎಂದರಂತೆ…. ಹೀಗೆ ಅರಣ್ಯಭೂಮಿ ಹಕ್ಕು ಹೋರಾಟ, ಅದಕ್ಕೆ ಸಂಬಂಧಿಸಿದ ದಾಖಲೆಗಳು, ಹೋರಾಟಗಳಿಂದ ಪ್ರಸಿದ್ಧರಾಗಿರುವ ಎ. ರವೀಂದ್ರ ಈಗಲೂ ಅರಣ್ಯ ಹಕ್ಕು ಹೋರಾಟ ಅಭಿಯಾನವನ್ನು ಚಳವಳಿಯಾಗಿ, ನ್ಯಾಯಾಂಗದಲ್ಲಿ ಅದನ್ನೊಂದು ಹೋರಾಟವಾಗಿ ಪರಿಗಣಿಸಿದ್ದಾರೆ. ರವೀಂದ್ರನಾಥ ನಾಯ್ಕ ನಮ್ಮ ಸಮಾಜಮುಖಿ ಯೂ ಟ್ಯೂಬ್ ಚಾನೆಲ್ ನ ಕಾರ್ಯಕ್ರಮಕ್ಕೆ ಮೂಖಾಮುಖಿಯಾಗಿ ತಮ್ಮ ಹೋರಾಟ, ಫಲಶೃತಿಗಳ ಬಗ್ಗೆ ಅವಶ್ಯ ದಾಖಲೆಗಳೊಂದಿಗೆ ವಿವರಿಸಿದರು ಅವರ ಸಂದರ್ಶನದ ಎರಡು ಕಂತುಗಳು ನಮ್ಮ samaajamukhi, samaajamukhi.net ನಲ್ಲಿ ಲಭ್ಯವಿವೆ. ಈ ಸಂದರ್ಶನ ಅವರ ಸಾಮರ್ಥ್ಯ, ವಿಮರ್ಶಕರ ಆರೋಪ,ಪ್ರಶ್ನೆಗಳಿಗೂ ತಕ್ಕ ಉತ್ತರ ನೀಡಿವೆ. samajamukhi.net ಮತ್ತು samaajamukhi ಯೂಟ್ಯೂಬ್ ಚಾನೆಲ್ ಗಳಿಗೆ subscibe ಆಗುವ ಮೂಲಕ ಸಹಕ ರಿಸಿ


1 Comment