

ಕನಸುಗಾರ’ ಚಿತ್ರೀಕರಣ ಭರದಿಂದ ನಡೆದಿತ್ತು !ಆ ಹೊತ್ತಿಗೆ ಅನೇಕ ಚಿತ್ರಗಳಲ್ಲಿ ನಟಿಸಿದ್ದ ನಟನೊಬ್ಬನನ್ನು ನಾನು ಸಮೀಪದಲ್ಲಿ ನೋಡಿದೆ.ನನ್ನನ್ನು ಕಂಡವರೇ ಹತ್ತಿರ ಕರೆದು, ಕುಳಿತು ಎಷ್ಟೋ ವರ್ಷಗಳ ಗೆಳೆಯ ಎಂಬಂತೆ ಮಾತನಾಡಿಸಿದರು.ರಂಗಭೂಮಿ, ಮಾಧ್ಯಮಗಳು ,ಸಾಮಾಜಿಕ ವರ್ತಮಾನ, ರಾಜಕೀಯ ,ಸಾಹಿತ್ಯ ..ಅನೇಕ ವಿಷಯಗಳ ಬಗ್ಗೆ ಮಾತನಾಡುತ್ತಲೇ ಹೋದರು.ಸಾಮಾನ್ಯವಾಗಿ ಕಮರ್ಷಿಯಲ್ ಸಿನಿಮಾಗಳಲ್ಲಿ ಪೋಷಕ ನಟ ಎಂದರೆ ಉಪ್ಪಿನಕಾಯಿ ಇದ್ದಹಾಗೆ! ಅಪರೂಪಕ್ಕೊಮ್ಮೆ ಬಂದು ಹೋಗುತ್ತೇವೆ ಅಷ್ಟೇ! ಶೂಟಿಂಗ್ನಲ್ಲಿ ತುಂಬಾ ಬಿಡುವು ಇರುತ್ತದೆ!.. ಆಗೆಲ್ಲ ಒಳ್ಳೆಯದನ್ನು ಕುರಿತು ಮಾತನಾಡುವ,, ಚರ್ಚೆಮಾಡಲು ಯಾರಾದರೂ ಸಿಕ್ಕದಿದ್ದರೆ ಅವನು ಬೋರ್ ಆಗುವುದಂತೂ ಗ್ಯಾರಂಟಿ

..ನನಗೆ ಕೆಲವೇ ಕ್ಷಣಗಳಲ್ಲಿ ಈ ವ್ಯಕ್ತಿ ಆಪ್ತನಾಗಿ ಬಿಟ್ಟರು. ಅವರ ಮಾತುಗಳಿಂದ ವಿಚಾರಗಳಿಂದ , ಸಾಧನೆಗಳಿಂದ, ಸಾಧ್ಯತೆಗಳಿಂದ ಪ್ರಭಾವಿತನಾದೆ ಆ ವ್ಯಕ್ತಿ ಕನ್ನಡದ ಹೆಮ್ಮೆಯ ಬಹುಮುಖ ಪ್ರತಿಭೆಯ #ಮಿಮಿಕ್ರಿ#ದಯಾನಂದ !ಈ ಟಿವಿಯಲ್ಲಿ ಅವರು ನಡೆಸಿಕೊಡುತ್ತಿದ್ದ ಏಕವ್ಯಕ್ತಿ ಪ್ರದರ್ಶನಗಳು ಮತ್ತು ರಾಜಕುಮಾರ್ ಅಪಹರಣವಾದಾಗ ಅವರು ಸೃಷ್ಟಿಸಿದ ಸಿ .ಡಿ, ಅವರ ಅನೇಕ ವಿಚಾರಪೂರ್ಣ ಮತ್ತು ಆಕರ್ಷಕ ಗುಣಗಳು ಎರಡೂ ಮೇಳವಿಸಿದ ಅಪರೂಪದ ಮಿಮಿಕ್ರಿ ಕಾರ್ಯಕ್ರಮಗಳು,ಮಜಾ ಟಾಕೀಸ್ ಒಡನಾಟ ,ಆಸ್ಟ್ರೇಲಿಯಾ ಪ್ರವಾಸ.. ನನ್ನನ್ನುಮತ್ತಷ್ಟು ಹತ್ತಿರಕ್ಕೆ ಸೆಳೆಯಲು ಕಾರಣವಾದವು.
ಗುರು ಕಾರಂತರು ಮಿಮಿಕ್ರಿ ಎಂದರೆ ಅಷ್ಟೇನೂ ಹತ್ತಿರಕ್ಕೆ ಬಿಟ್ಟು ಕೊಂಡವರಲ್ಲ !ಆದರೆ ಈ ವ್ಯಕ್ತಿಯ ಮಿಮಿಕ್ರಿ ಗಳು ಇತರರಿಗಿಂತ ಭಿನ್ನವಾಗಿದ್ದವು ಆ ಕಾರಣಕ್ಕಾಗಿ ದಯಾನಂದರದೆ ಒಂದು ವಿಶಿಷ್ಟ ಶೈಲಿ ಇತ್ತು. ನಟನ ಕಟ್ಟುವ ಆರಂಭದ ದಿನಗಳಲ್ಲಿ ಹಣದ ತೊಂದರೆಯಾಗಿ ನಾನು ಒದ್ದಾಡುತ್ತಿದ್ದ ನೋಡಿ ಒಮ್ಮೆ ಸಾಲ ಕೊಟ್ಟಿದ್ದರು! ಅದನ್ನು ಮರಳಿಸಿದೆ. ಪ್ರತಿವರ್ಷ ನಮ್ಮ ಮಕ್ಕಳ ಬೇಸಿಗೆ ರಂಗ ಶಿಬಿರ ರಜಾ-ಮಜಾಕ್ಕೆ ಆಗಮಿಸಿ, ಶಿಬಿರದ ಮಕ್ಕಳಿಗೆ ಧ್ವನಿಯ ಬಳಕೆ, ಏರಿಳಿತಗಳು, ಮಾತನಾಡುವ ಕಲೆಯನ್ನು ಕುರಿತು ವೈಶಿಷ್ಟ್ಯಪೂರ್ಣವಾಗಿ ತರಬೇತು ಗೊಳಿಸಿದರು. ಇವತ್ತಿಗೂ ಅವರೊಂದಿಗೆ ಮಾತನಾಡುತ್ತಿದ್ದರೆ, ಕಲಾವಿದನೊಬ್ಬನ ಯಾನವೊಂದನ್ನು ನವಿರಾದ ನಿರೂಪಣೆಯೊಂದಿಗೆ ಮನದಣಿಯೆ ಸವಿಯಬಹುದು.


ಸಾವಿರಾರು ಕಾರ್ಯಕ್ರಮಗಳು, ಅಸಂಖ್ಯ ವಿದೇಶ ಪ್ರವಾಸಗಳು, ಲಕ್ಷಾಂತರ ಅಭಿಮಾನಿಗಳು, ಎಲ್ಲವನ್ನು ಮೀರಿ ಮಾನವೀಯ ನೆಲೆಯಲ್ಲಿಯೇ ಮನದಣಿಯೆ ಅನುಭವಿಸುವ ಕಥನ ನಮ್ಮ ಮುಂದೆ ಅನಾವರಣಗೊಳ್ಳುತ್ತದೆ.ಕಾರ್ಯಕ್ರಮಗಳಿಗೆ ಸುತ್ತಿ ಸುತ್ತಿ ಸುಸ್ತಾಗಿದ್ದಾರೆ, ಚೈತನ್ಯ ಬತ್ತಿಲ್ಲ!”ಮನೆಗೆ ಬಾ” ಅಂತ ಫೋನಾಯಿಸಿದರು! ಇವತ್ತು ಹೋದೆ, ಅವರನ್ನು ಜನಪ್ರೀತಿ ಮಾಡಿರುವ ರೀತಿ ನೋಡಿ ಬೆರಗಾದೆ .ನಟನದ ನಾಟಕಗಳಿಗೆ ಸಹಾಯವಾಗುವ ಅನೇಕ ಕೋಟು, ವಿಗ್ ಗಳನ್ನು ಕಾರಿನ ತುಂಬೆಲ್ಲ ಭರ್ತಿ ತುಂಬಿ ಬಿಟ್ಟರು.!ಸ್ನೇಹಕ್ಕೆ, ಮಾತು ಬಾರದಾಯಿತು!ಎದ್ದು ಬರುವ ಮುಂಚೆ “ಏನು ಬೇಕು”? ಎಂದರು . ಮೇಲಂತಸ್ತಿನಲ್ಲಿ #ಬಾಬಾಸಾಹೇಬರು ನಿಂತಿದ್ದರು.ಅಪರೂಪದ ಮೂರ್ತಿ.”ಅದು ಬೇಕು” ಅಂದೆ. ಪ್ರೀತಿಯಿಂದ “ತೆಗೆದುಕೋ” ಅಂತ ಕೊಟ್ಟರು.ಮರಳಿ ಬರುವಾಗ ಶಿಷ್ಯ ಜಗ್ಗಿ “ಅದೇನು ಸರ್ ಅಂಬೇಡ್ಕರ್ ತೆಗೆದುಕೊಂಡಿದ್ದು” ಅಂದ.”ನೀನ್ ಇವತ್ತು ನನ್ನ ಪಕ್ಕದಲ್ಲಿ ಇರೋದಕ್ಕೆ ಅವರೇ ಕಾರಣ” ಅಂದೆ ನಗುತ್ತಾ !’ನಟನ’ ದಲ್ಲಿ ಈಗಾಗಲೇ ಗಾಂಧಿ ಕೂತಿದ್ದಾರೆ.ಈಗ ನಿಂತ ಅಂಬೇಡ್ಕರ್ ಬಂದರು .ಒಳಗೆ ಬುದ್ಧ- ಬಸವಣ್ಣ ವಿವೇಕಾನಂದ ,ಕುವೆಂಪು- ಕಾರಂತರು ಇದ್ದಾರೆ ..”ಇವರ ಘರ್ಷಣೆಗಳಲ್ಲಿ- ಹೊಂದಾಣಿಕೆಯಲ್ಲಿನಾವು ಬದುಕಬೇಕು” ಅಂದೆ! ಮಗ ಶಿಶಿರ “ಕಷ್ಟ” ಅಂದ !.”ಗೊತ್ತು” ಎಂದು ನಕ್ಕೆ! ‘#ದಯೆ‘ಯಲ್ಲಿ ‘#ಆನಂದ‘ವಿದೆ ! -ಮಂಡ್ಯ ರಮೇಶ್

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
