ಕೃಷ್ಣಸರ್ಪ_ಮತ್ತು_ಅಂಧಶ್ರದ್ಧೆ!

ಚಿತ್ರ, ಲೇಖನ: Gururaj Sanil

“ಸರ್ ನಾವು ಉಡುಪಿಯ ಇಂಥ (ಊರಿನ ಹೆಸರು ಬೇಡ) ಗ್ರಾಮದಿಂದ ಮಾತಾಡ್ತಿದ್ದೇವೆ. ಇಲ್ಲಿ ನಮ್ಮ ಮನೆಯಂಗಳದಲ್ಲಿ ನಾಗರ ಹಾವಿನ ಮರಿಯೊಂದನ್ನು ಬೆಕ್ಕು ಹಿಡಿದು ಗಾಯಗೊಳಿಸಿಬಿಟ್ಟಿದೆ. ದಯವಿಟ್ಟು ನೀವು ಬಂದು ಅದನ್ನು ಚಿಕಿತ್ಸೆಗೆ ಕೊಂಡು ಹೋಗಬೇಕು!” ಎಂದು 20-01-2021ರಂದು ಸಂಜೆ ಒಬ್ಬ ಯುವಕ ಬಹಳ ಆತಂಕ ಮತ್ತು ಗೊಂದಲದಿಂದ ವಿನಂತಿಸಿದ. ನಾನು ಆಹೊತ್ತು ಪಶ್ಚಿಮಘಟ್ಟದ ಸ್ವರ್ಗಸುಖದಲ್ಲಿ ತಲ್ಲೀನನಾಗಿದ್ದೆನಾದರೂ ತಕ್ಷಣ ಬರುತ್ತೇನೆಂದು ಸೂಚಿಸಿದ ಬಳಿಕ ಆ ಹಾವಿನ ಬಗ್ಗೆ ವಿವರ ಕೇಳಿದೆ. ಅವನು ತಿಳಿಸಿದ ಮಾಹಿತಿಯಿಂದ ಅದು ನಾಗರಹಾವು ಅಲ್ಲ ಎಂದು ತಿಳಿಯಿತು. ಹಾಗಾಗಿ ಆ ಹಾವಿನ ಬಗ್ಗೆ ಅವನಿಗೆ ವಿವರಿಸಿದೆ. ಅದರಿಂದ ಅವನು ನಿರಾಳನಾಗಿ ಆ ಹಾವಿನ ಚಿತ್ರವನ್ನು ವಾಟ್ಸ್ಯಾಪ್ ಮಾಡಿದ. ಈ ಹಾವಿನ ಕನ್ನಡ ಹೆಸರು: ಡುಮೇರಿಲ್ಸ್ ಕಪ್ಪು ತಲೆಯ ಹಾವು.ತುಳು: ಕೊಡ್ಯಾಣಇಂಗ್ಲಿಷ್: ಡುಮೆರಿಲ್ಸ್ ಬ್ಲ್ಯಾಕ್ ಹೆಡ್ಡೆಡ್ ಸ್ನೇಕ್ (dumerils black headed snake)ವೈಜ್ಞಾನಿಕ: ಸಿಬಿನೋಫಿಸ್ ಸಬ್ ಪಂಕ್ಟಟಸ್ (sibynophis subpunctatus)ಕರ್ನಾಟಕ, ಗೋವಾ, ಮಹಾರಾಷ್ಟ್ರ, ಗುಜರಾತ್, ಆಂಧ್ರ, ಕೇರಳ, ಮಧ್ಯಪ್ರದೇಶ, ಛತ್ತೀಸ್ ಗಡ, ಒರಿಸ್ಸಾ, ಪಶ್ಚಿಮ ಬಂಗಾಲ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ನೇಪಾಳದಲ್ಲಿ ಈ ಹಾವುಗಳು ಕಂಡುಬರುತ್ತವೆ.

ಬೆಳೆಯುವ ಗರಿಷ್ಠ ಉದ್ದ: 40-45 ಸೆಂಟಿಮೀಟರ್. ಅಂದರೆ ಒಂದು, ಒಂದೂವರೆ ಅಡಿಗಳಷ್ಟು. ಇವು ರಾತ್ರಿ ಹಗಲು ಚಟುವಟಿಕೆಯಿಂದಿರುತ್ತ ಜನವಸತಿಗಳ ಆಸುಪಾಸು ಹೆಚ್ಚಾಗಿ ಜೀವಿಸುತ್ತವೆ.ಉಡುಪಿಜಿಲ್ಲೆ ಮತ್ತು ದಕ್ಷಿಣ ಕನ್ನಡಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಹಾವುಗಳಿವು. ಆದರೆ ಇವುಗಳ ಬಗ್ಗೆ ನಮ್ಮಲ್ಲಿ ಬಹುತೇಕರಿಗೆ ಸೂಕ್ತ ಮಾಹಿತಿಯಿಲ್ಲ ಮಾತ್ರವಲ್ಲದೇ ಇದು “ಕೃಷ್ಣ ಸರ್ಪ” ಎಂಬ ತಪ್ಪು ನಂಬಿಕೆಯೊಂದು ಬಲವಾಗಿ ಬೇರೂರಿಬಿಟ್ಟಿದೆ. ಈ ಹಾವುಗಳು ತಮ್ಮ ತಲೆಯ ಮೇಲೆ ಎರಡು ಬಿಳಿ ಅಥವಾ ಹಳದಿಬಣ್ಣದ ಚಿಹ್ನೆಗಳು ಮತ್ತು ಅದೇ ಬಣ್ಣಗಳ ಕತ್ತಿನ ಪಟ್ಟಿಯನ್ನು ಹೊಂದಿದ್ದು ಪಕ್ಕನೆ ಕಾಣುವಾಗ ನಾಗರ ಹಾವಿನ ಮರಿಯೆಂದು ತಪ್ಪುಗ್ರಹಿಕೆ ಹುಟ್ಟುವುದರಿಂದ ಯಾರೋ “ಕೃಷ್ಣಸರ್ಪ”ಎಂದು ನಾಮಕರಣ ಮಾಡಿರಬೇಕು.

ಆದರೆ ಇದು ನಾಗರ ಹಾವಿನ ಜಾತಿ ಮತ್ತು ಪ್ರಭೇದಕ್ಕೆ ಸೇರಿದ ಹಾವೇ ಅಲ್ಲ ಹಾಗೂ ವಿಷಕಾರಿ ಉರಗವೂ ಅಲ್ಲ!ಪ್ರತಿವರ್ಷ ಮೇ, ಜೂನ್ ತಿಂಗಳಲ್ಲಿ ಹುಟ್ಟುವ ಒಂದೆರಡು ತಿಂಗಳ ಮರಿ ನಾಗರ ಹಾವಿನ ಶರೀರ ಬಣ್ಣವು ಕಂದು ಮಿಶ್ರಿತ ನೀಲಿ ಬಣ್ಣದಿಂದ ಕೂಡಿ ಸೂರ್ಯನ ಬೆಳಕಿಗೆ ಫಳಫಳ ಹೊಳೆಯುವುದರಿಂದಲೂ, ಶ್ರೀ ಕೃಷ್ಣನ ಪರಮಾತ್ಮನ ಬಣ್ಣವೂ ಶ್ಯಾಮಲವರ್ಣದಿಂದ ಚಿತ್ರಿತವಾಗಿರುವುದರಿಂದಲೂ ಯಾರೋ ನಾಗರ ಮರಿಯನ್ನು ಕೃಷ್ಣಸರ್ಪವೆಂದು ಕರೆದಿರಬಹುದು ಹಾಗೂ ಉಡುಪಿಜಿಲ್ಲೆಯ ಕನ್ನಡ ಪ್ರದೇಶದ ಕೆಲವೆಡೆ ಕಾಳಿಂಗಸರ್ಪವನ್ನೂ ಕೃಷ್ಣಸರ್ಪ ಎಂದು ಕರೆಯುತ್ತಾರೆ. ಇದನ್ನು ಹೊರತುಪಡಿಸಿ “ಕೃಷ್ಣಸರ್ಪ” ಎಂಬ ಒಂದು ಜಾತಿ, ಪ್ರಭೇದದ ಹಾವು ಈವರೆಗೆ ಎಲ್ಲೂ ಪತ್ತೆಯಾಗಿಲ್ಲ!- ಎಂದು ನನಗೆ ಕರೆ ಮಾಡಿದ ಯುವಕನಿಗೆ ಕಾಳಜಿಯಿಂದ ವಿವರಿಸಿದೆ. ಆದ್ದರಿಂದ ಅವನು ನೆಮ್ಮದಿಯಿಂದ ಫೋನಿಟ್ಟ. ಆದರೆ ಐದು ನಿಮಿಷದ ಬಳಿಕ ಮತ್ತೆ ಕರೆ ಮಾಡಿದವನು, “ಸರ್ ತಪ್ಪು ತಿಳ್ಕೋಬೇಡಿ. ಇಲ್ಲಿ ಎಲ್ಲರೂ ಆ ಹಾವನ್ನು ಕೃಷ್ಣಸರ್ಪ ಎಂದೇ ಹೇಳುತ್ತಿದ್ದಾರೆ. ಹಾಗಾಗಿ ನೀವೇ ಬಂದು ನಮ್ಮವರಿಗೆ ತಿಳಿಹೇಳಬೇಕು. ನೀವು ಬಂದು ಹೋಗುವ ಖರ್ಚುವೆಚ್ಚ ಎಷ್ಟಾದರೂ ಕೊಡುತ್ತೇವೆ!” ಎಂದು ತಡವರಿಸುತ್ತ ವಿನಂತಿಸಿದ. ಆದರೆ ಅಷ್ಟು ದೂರ ಹೋಗುವುದು ನನಗೆ ಅನಿವಾರ್ಯವೆಂದು ತೋರದಿದ್ದುದರಿಂದ ಆತನಿಗೆ ಫೋನ್ ನ ಲೌಡ್ ಸ್ಪೀಕರ್ ಆನ್ ಮಾಡಲು ಹೇಳಿ, ಈ ಮೇಲಿನ ಮಾಹಿತಿಯನ್ನು ಮರಳಿ ಗಟ್ಟಿಯಾಗಿ ವಿವರಿಸಿದೆ. ಆಮೇಲೆ ಅಲ್ಲಿನವರು ಸುಮಾರಾಗಿ ಭಯದಿಂದ ಬಿಡುಗಡೆ ಹೊಂದಿದಂತೆ ತೋರಿತು.”ನಾಗದೋಷ” ಎಂಬ ಅಸಹಜ ಭಯವೊಂದು ನಮ್ಮ ಒಂದಷ್ಟು ಅಮಾಯಕ ಜನರಲ್ಲಿ ಎಷ್ಟೊಂದು ಆಳವಾಗಿ ಬೇರುಬಿಟ್ಟಿದೆ ಹಾಗೂ ನಮ್ಮ ಪೂರ್ವಜರ “ನಾಗಾರಾಧನೆ” ಎಂಬ ನಿಸರ್ಗದತ್ತ ಸುಂದರ ನೈಸರ್ಗಿಕ ಆಚರಣೆಯೊಂದು ಹೇಗೆ ಅಂಧಶ್ರದ್ಧೆಯಾಗಿ ಮಾರ್ಪಡುತ್ತಿದೆ ಎಂಬುದಕ್ಕೆ ಇದೊಂದು ಸಣ್ಣ ಉದಾಹರಣೆಯಾಗಬಹುದು.

ಹಿಂದೂಧರ್ಮದ ಸಂಸ್ಕೃತಿ, ಸಂಪ್ರದಾಯ ಮತ್ತು‌ ಆಚರಣೆಗಳು ಯಾವುವೂ ಮೂಢನಂಬಿಕೆಯಿಂದ ಸೃಷ್ಟಿಯಾದುವುಗಳಲ್ಲ. ಅವೆಲ್ಲದಕ್ಕೂ ಆಳವಾದ ಅರ್ಥ ಮತ್ತು ಮಹತ್ವಗಳಿವೆ ಎಂದು ಈಗಿನ ವೈಜ್ಞಾನಿಕ ಯುಗದಲ್ಲೂ ಅದು ಸ್ಪಷ್ಟವಾಗಿ ದೃಢಪಟ್ಟಿದೆ. ಹೀಗಾಗಿ ನಮ್ಮ ಮೇರು ಧರ್ಮ, ನಂಬಿಕೆ ಮತ್ತು ಆಚರಣೆಗಳನ್ನು ನಶ್ವರ ಬದುಕಿನ ಕ್ಷಣಿಕ ಸ್ವಾರ್ಥಗಳಿಗಾಗಿ ತಿರುಚುವ, ಹಾನಿಗೊಳಿಸುವ ಪ್ರಮಾದವನ್ನು ಮಾಡದೆ ಕಾಪಾಡಿಕೊಂಡು ಮುಂದುವರೆಯುವುದು ನಮ್ಮೆಲ್ಲರ ಹೊಣೆಯಾಗಬೇಕಿದೆ.ಈ ಲೇಖನವನ್ನು ಸಾಧ್ಯವಾದಷ್ಟು ಜನರಿಗೆ ಹಂಚುವ ಮೂಲಕ ಈ ಹಾವಿನ ಕುರಿತು ಜಾಗ್ರತಿ ಮೂಡಿಸುವ ಕಾಯಕವೂ ನಮ್ಮದಾಗಲಿ ಎಂದು ನಮ್ರ ಅರಿಕೆ.ಇಲ್ಲಿನ ಮೂರು ಚಿತ್ರಗಳೂ ಒಂದೇ ಹಾವಿನದ್ದು. ಆದರೆ ಬೇರೆ ಬೇರೆ ಜಾಗ ಮತ್ತು ಬೆಳಕಿನಲ್ಲಿ ಕ್ಲಿಕ್ಕಿಸಿರುವುದರಿಂದ ತುಸು ಬಣ್ಣ ವ್ಯತ್ಯಾಸ ಕಾಣುತ್ತದೆಯಷ್ಟೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮನುಷ್ಯನ ಒಳಿತನ್ನೇ ಧ್ಯಾನಿಸುತ್ತಾ……‌

ಒಂದು ಅಪರೂಪದ ಡೊಳ್ಳಿನ ಸ್ಫರ್ಧೆ ನೋಡಿದೆ. ನಮ್ಮದೇ ತಾಲೂಕಿನ ಅರೆಹಳ್ಳದ ತಂಡ ಎಷ್ಟು ಸೊಗಸಾಗಿ ಡೊಳ್ಳು ನೃತ್ಯ ಕುಣಿಯಿತು! ಕೊಡಗಿಬೈಲ್‌ ಎಂಬ ಹಳ್ಳಿಯ ಒಕ್ಕಲಿಗ...

ಶಿಕಾರಿಪುರ ಪ್ರಥಮ, ಸಿದ್ಧಾಪುರ ದ್ವಿತೀಯ, ಸಾಗರ ತೃತೀಯ

ಸಿದ್ದಾಪುರದಲ್ಲಿ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ರಾಜ್ಯ ಮಟ್ಟದ ಡೊಳ್ಳು ಕುಣಿತ ಸ್ಪರ್ಧೆಯಲ್ಲಿ ಬೀರಲಿಂಗೇಶ್ವರ ಡೊಳ್ಳಿನ ಸಂಘ ಅಂಬಾರಗೊಪ್ಪ ಶಿಕಾರಿಪುರ ಪ್ರಥಮ,ಸಿದ್ದಿವಿನಾಯಕ...

ಮಕ್ಕಳಿಗೆ ಆಸ್ತಿಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸಿ

ಮಕ್ಕಳಿಗೆ ಆಸ್ತಿ,ಆಭರಣ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾ ಗಿಸಿ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದ್ದಾರೆ. ಸಿದ್ಧಾಪುರ ಹಾಳದಕಟ್ಟಾ ಮತ್ತು ಕೊಳಗಿ ಪ್ರಾಥಮಿಕ ಶಾಲೆಗಳಲ್ಲಿ...

ಮಾಧ್ಯಮ ಪ್ರತಿನಿಧಿಗಳ ಸಂಘದ ಪದಾಧಿಕಾರಿಗಳ ಅಯ್ಕೆ

ಸಿದ್ದಾಪುರ: ತಾಲೂಕಿನಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಮಾಧ್ಯಮ ಪ್ರತಿನಿಧಿಗಳ ಸಂಘ (ರಿ) ಸಿದ್ದಾಪುರ ದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘದ ಅಧ್ಯಕ್ಷರಾಗಿ ಸಮಾಜಮುಖಿ...

ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು

ಉತ್ತರ ಕನ್ನಡ: ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು ಶಾಲೆಯ ಶೌಚಾಲಯದ ಬಳಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *