ನಾಮಧಾರಿಗಳ ಕುಲಮೂಲ ಮತ್ತು ಕುಲ ಸಾಧಕರ ವಿವರ ನೀಡುವ ಹಳೆಪೈಕರು : ಒಂದು ಅಧ್ಯಯನ.

ಋಷಿಮೂಲ, ನದಿಮೂಲ ಸ್ತ್ರೀ ಮೂಲದ ಕುರಿತು ಮಾತನಾಡುವುದು ತುಂಬಾ ಸವಾಲಿನದ್ದು. ಹಾಗೆಯೇ ಒಂದು ಜನಾಂಗದ ಕುಲಮೂಲದ ಕುರಿತು ಮಾತನಾಡುವುದು ಕೂಡ. ಉಪನ್ಯಾಸಕ ಮಿತ್ರ ಉಮೇಶ ನಾಯ್ಕರು ಹಳೆಪೈಕರು : ಒಂದು ಅಧ್ಯಯನ (ನಾಮಧಾರಿಗಳ ಕುಲಮೂಲ) ಎಂಬ ಕೃತಿ ರಚಿಸಿ ಅಂತಹ ಸಾಹಸಕ್ಕೆ ಕೈ ಹಾಕಿ ಕೈ ಸುಟ್ಟುಕೊಳ್ಳಲಿಲ್ಲ ಎಂಬುದು ಸಮಾಧಾನದ ವಿಷಯ.
ವಿಷಯಕ್ಕೆ ಪೂಕವಾದ ಬರಹಗಳ ಹಿನ್ನೆಲೆ; ಬರವಣಿಗೆಗೆ ಬೆಂಬಲವಾಗಿ ಸಹರಿಸಿದ ಬರಹಗಾರರ ಹಿನ್ನೆಲೆಯು ಬರಹವು ತೂಕತಪ್ಪದ ರೀತಿಯಲ್ಲಿ ಉಮೇಶ ನಾಯ್ಕರಿಗೆ ಸಹಕಾರಿಯಾಗಿದ್ದು ಈ ಕೃತಿಯಲ್ಲಿ ಕಂಡು ಬರುತ್ತದೆ. ತಳ ಸಮುದಾಯದವರು ಯಾವುದೇ ವಿಶೇಷ ಸಾಧನೆ ಮಾಡಿದರೆ ಅವರನ್ನು ಮೇಲ್ಪರ್ಗದಲ್ಲಿ ಬಿಂಬಿಸುವ ಪರಿಪಾಠ ಪುರಾಣ ಕಾಲದಿಂದಲೂ ಅನುಚಾನವಾಗಿ ಬೆಳೆದು ಬಂದಿದೆ. ಬುದ್ಧನನ್ನು ದಶಾವತಾರಗಳಲ್ಲಿ ಬಿಂಬಿಸಿದ ಮೇಲೆ ಇತಿಹಾಸದಲ್ಲಿ ರಾಜವಂಶದ ಮೂಲ ಪುರುಷರ ಕುರಿತು ಪವಾಡಗಳ ಮೂಲಕವೋ ಕಟ್ಟು ಕತೆಗಳ ಮೂಲಕವೋ ಹೇಳುವುದು ಕಷ್ಟವಲ್ಲ. ಕದಂಬರ ಮೂಲ ಪುರುಷ, ವಿಜಯ ನಗರದ ದೊರೆ ಕೃಷ್ಣದೇವರಾಯನ ಕುಲ ಪರಂಪರೆ ಇವುಗಳ ಕುರಿತು ಲೇಖಕರು ಪ್ರಸ್ತಾಪಿಸಿದ ಅಂಶಗಳನ್ನು ಗಮನಿಸಿದಾಗ ನಮ್ಮ ಪರಂಪರೆಯಲ್ಲಿಯ ಮೇಲರಿಮೆಯ ವ್ಯಾಮೋಹ ಹೇಗಿತ್ತು ಎಂಬುದು ಕಂಡುಬರುತ್ತದೆ.
ಸೈನ್ಯದಲ್ಲಿ ಸೇನಾ ನಾಯಕರಾಗಿದ್ದ ನಾಮಧಾರಿಗಳು ಬ್ರಿಟಿಷರ ಕಾಲದಲ್ಲಿ ನೆಲೆಯಿಲ್ಲದೆ ಹರಿದು ಹಂಚಿ ಹೋದ ಕಾರಣ ಶೇಂದಿ ಇಳಿಸುವ ದೀವರೆಂದು ಕರೆಸಿಕೊಂಡು ಇಂದಿಗೂ ಅದೇ ವೃತ್ತಿಯೇ ಕುಲಮೂಲ ಎಂದು ಹೇಳುವ ಕ್ರಮ ಇದೆಯಲ್ಲ ಇದೊಂದು ಚೋದ್ಯ. ಹಳೆಪೈಕರು ಶ್ರೀಲಂಕಾ ಕೇರಳ, ಆಂದ್ರ ಪ್ರದೇಶ ಹಾಗೂ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ವಾಸವಾಗಿರುವ ದ್ರಾವಿಡ ಪರಂಪರೆಯವರು.

ಇವರು ದೇಶದಾದ್ಯಂತ ಇಂದು ವಿವಿಧ ಹೆಸರುಗಳಿಂದ ಕರೆಯುವುದನ್ನು ಲೇಖಕರು ದಾಖಲು ಮಾಡಿದ್ದಾರೆ. ಅಷ್ಟೇ ಅಲ್ಲ ಈ ಸಮುದಾಯವು ಬುಡಕಟ್ಟು ಸಂಸ್ಕೃ ತಿಯ ಲಕ್ಷಣಗಳನ್ನು ಹೊಂದಿರುವುದರಿಂದ ಅವರನ್ನು ಬುಡಕಟ್ಟಿಗೆ ಏಕೆ ಸೇರಿಸಬಾರದು? ಎಂಬ ಪ್ರಶ್ನೆಯನ್ನೂ ಲೇಖಕರು ಎತ್ತಿದ್ದಾರೆ.

ಉಳಿದಂತೆ ಹಳೆ ಪೈಕರ ಬಗೆಗಿನ ಹೆಚ್ಚಿನ ವಿವರ ಉತ್ತರ ಕನ್ನಡ ಜಿಲ್ಲೆಯನ್ನು ಕೇಂದ್ರಿಕರಿಸಿರುವುದು ಎದ್ದು ಕಾಣುತ್ತದೆ. ಕುಲಮೂಲದ ಕುರಿತು ಈ ಹಿಂದೆ ಹಲವು ಲೇಖಕರು ಎತ್ತಿದ ಪ್ರಶ್ನೆಗಳನ್ನು ಎತ್ತಿಕೊಂಡು ಉಮೇಶ ನಾಯ್ಕರು ಮಾತನಾಡಿದ್ದಾರೆ. ತಮ್ಮ ನಿಲುವುಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದಾರೆ ಎನ್ನಬಹುದು. ಕುಲಮೂಲದವರ ಬಗೆಗಿನ ಮಾಹಿತಿ ಸಂಗ್ರಹ ಅಪೂರ್ಣವೇ. ಆದರೆ ಆ ದಾರಿಯಲ್ಲಿ ಸಾಗುವ ಎಷ್ಟೋ ಮನಸ್ಸುಗಳಿಗೆ ಈ ಕೃತಿ ಕೈದೀವಿಗೆಯಂತೆ ಎನ್ನಬಹುದು.
ಉಮೇಶ ನಾಯ್ಕರು ತಮ್ಮ ಅಧ್ಯಯನವನ್ನು ಕುಲಮೂಲದ ಕುರಿತು ಮಾತ್ರ ಕೇಂದ್ರಿಕರಿಸದೆ ಕುಲಮೂಲದವರ ಸಾಧನೆಯನ್ನು ಕ್ಷೇತ್ರವಾರು ಸಂಗ್ರಹ ಮಾಡಿದ್ದಾರೆ. ಕ್ಷೇತ್ರ ಕಾರ್ಯದಲ್ಲಿ ಸಂಪೂರ್ಣ ನ್ಯಾಯವನ್ನು-ಪ್ರಾದೇಶಿಕವಾಗಿ_ ಒದಗಿಸದಿದ್ದರೂ ಅವರ ಪ್ರಯತ್ನ ಮತ್ತೊಬ್ಬರಿಗೆ ಅಧ್ಯಯನಕ್ಕೆ ಆಕರವಾಗುವುದನ್ನು ಅಲ್ಲಗಳೆಯುವಂತಿಲ್ಲ.

ಕ್ಷೇತ್ರ ಕಾರ್ಯವನ್ನು ಬಯಸುವ ಹೆಚ್ಚು ವಲಯಗಳ ಕುರಿತು _ ಯಕ್ಷಗಾನ, ಸ್ವಾತಂತ್ರ್ಯ ಹೋರಾಟ, ರೈತ ಹೋರಾಟ, ಸಾಹಿತ್ಯ, ಮತ್ತು ಹಲವು ಸಂಪ್ರದಾಯಿಕ ಆಚರಣೆ ಮುಂ _ ಸಂಗ್ರಹಿಸಿದ ಕುಲಮೂಲದವರ ಮಾಹಿತಿ ಸಂಗ್ರಹ ಅಪೂರ್ಣವಾಗಿದೆ. ಅದೇ ವೇಳೆಯಲ್ಲಿ ಈ ಎಲ್ಲ ವಲಯಗಳ ಕುರಿತು ಸಂಗ್ರಹಿಸಿದ ಹೆಚ್ಚು ವಿವರಗಳು ಕರಾವಳಿ ತಾಲೂಕುಗಳಷ್ಟು ವ್ಯಾಪಕವಾಗಿ ಘಟ್ಟದ ಮೇಲಿನ ತಾಲೂಕುಗಳಲ್ಲಿ ಆಗಿಲ್ಲ ಎಂಬುದು ಸತ್ಯ. ಬಹುಶಃ ಲೇಖಕರು ಕರಾವಳಿ (ಅಂಕೋಲಾ) ಮೂಲದವರಾಗಿದ್ದದ್ದು ಒಂದು ಪ್ರಬಲ ಕಾರಣವಾಗಿರಬಹುದು. ಸಂಗ್ರಹದ ವ್ಯಾಪ್ತಿ ಘಟ್ಟದ ಮೇಲಿನ ತಾಲೂಕುಗಳಲ್ಲಿ ಇನ್ನೂ ವ್ಯಾಪಕವಾಗಿದೆ. ಅವನ್ನೆಲ್ಲ ಪೂರ್ತಿಯಾಗಿ ಸಂಗ್ರಹಿಸುವ ಸಾಹಸಕ್ಕೆ ಕೈ ಹಾಕದೇ ಇರುವುದು ಕೊರತೆಯಾಗಿ ಕಂಡರೂ ಅದು ಲೇಖಕರ ಮಿತಿ ಎಂದು ಅಂತಿಮ ನಿರ್ಣಯಕ್ಕೆ ಬರುವುದು ತಪ್ಪು.

ಕೃತಿಯೇ ಹೇಳುವಂತೆ ಕುಲಮೂಲವನ್ನು ಬಿಚ್ಚಿಡುವ ಪ್ರಯತ್ನದೊಂದಿಗೆ ಕುಲಮೂಲದವರ ಮಾಹಿತಿ ಸಂಗ್ರಹ ಕೇಂದ್ರ ವಿಷಯವಲ್ಲ ಎಂಬ ಅರಿವು ಲೇಖಕರಿಗೆ ಇದ್ದಂತೆ ಕಾಣುತ್ತದೆ. ಶಿಕ್ಷಣ ವಲಯದಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳ ಏಳು ಬೀಳುಗಳನ್ನು ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿ ದಿ. ಎಸ್. ಬಂಗಾರಪ್ಪ ನವರು ನಡೆಸಿಕೊಂಡು ಬರುತ್ತಿದ್ದ ಮಲೆನಾಡು ಪ್ರೌಢಶಾಲೆಯ ಸಾಧನೆ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಅವುಗಳ ಬೆಳವಣಿಗೆಯ ಕುರಿ ತ ವಿವರವೇ ಇಲ್ಲ. ಈ ರೀತಿ ಇನ್ನೂ ಹಲವು ವಲಯಗಳ/ ಸಾಧಕರ ಕುರಿತು ಪ್ರಸ್ತಾಪಿಸದೇ ಇದ್ದದ್ದು ಎದ್ದು ಕಾಣುತ್ತದೆ.
ಸಂಗೀತ ಕ್ಷೇತ್ರ ವ್ಯವಧಾನ-ಅವಧಾನವನ್ನು ಬಯಸುವಂತದ್ದು. ಹಳೆಪೈಕರಿಗೆ/ನಾಮಧಾರಿಗಳಿಗೆ ಈ ವ್ಯವಧಾನ ಮತ್ತು ಅವಧಾನ ಅಷ್ಟಕ್ಕಷ್ಟೇ. ಇಲ್ಲಿ ಆರಂಭ ಶೂರರು ಹೆಚ್ಚಿದ್ದರೂ ಇತ್ತೀಚೆಗೆ ಹಲವು ಹೊಸ ಪ್ರತಿಭೆಗಳ ಪ್ರವೇಶ ಮತ್ತು ಪರಿಚಯ ಮೆಚ್ಚುವ ರೀತಿ ಇದೆ.
ಮಾತನಾಡಲು, ಬರೆಯಲು ಇಳಾನಾಥರನ್ನು ಓಲೈಸುವುದು ಕಷ್ಟವಾದ ಈ ಕಾಲದಲ್ಲಿ ಸರಕಾರಿ ವಲಯದಲ್ಲಿ ಇದ್ದು ಉಮೇಶ ನಾಯ್ಕರು ಮಾಡಿದ ಈ ಪ್ರಯತ್ನ ಮೆಚ್ಚುವಂತದ್ದು. ನಾಡಿನ ಹೆಮ್ಮೆಯ ಸಾಹಿತಿ ಮತ್ತು ಪ್ರಕಾಶಕರಾದ ವಿಷ್ಣು ನಾಯ್ಕರ ಮುನ್ನುಡಿ ಲೇಖಕರಿಗೆ ಓದುಗರಿಗೆ ಬೆಂಬಲವಾಗಿ ನಿಂತಿದ್ದು ಕೃತಿಯ ಮೌಲ್ಯವನ್ನು ಇನ್ನಷ್ಟು ಹೆಚ್ಚಿಸಿದೆ.

ಕವಿ ಮನಸಿನ ಉಮೇಶ ನಾಯ್ಕರಿಂದ ಇನ್ನೂ ಹೆಚ್ಚಿನ ಕೃತಿಗಳು ಬರಲಿ ಎಂದು ಆಶಿಸುತ್ತೇನೆ.
24-01-2021 – ರತ್ನಾಕರ ನಾಯ್ಕ ಸಿದ್ದಾಪುರ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *