

ಸಾಹಿತ್ಯ ಪರಿಷತ್ತನ್ನು ಸಂಕುಚಿತತೆಗಳಿಂದ ಬಿಡಿಸಿ ಕನ್ನಡ ದ ಬೆಳವಣಿಗೆ ಮೀಸಲಿಡುವುದು , ಜಾತ್ಯತೀತತೆಯ ಸಾಂಸ್ಕ್ರತಿಕ ಪರಿಷತ್ತನ್ನಾಗಿ ಕಟ್ಟುವುದು ಕನ್ನಡದ ಬೆಳವಣಿಗೆಗೆ ಪೂರಕವಾದ ಚಟುವಟಿಕೆಗಳ ಮೂಲಕ ಪರಿಷತ್ತನ್ನು ಕ್ರೀಯಾಶೀಲವಾಗಿಡುವುದಕ್ಕೆ ಆದ್ಯತೆ ನೀಡುವುದಾಗಿ ಸಾಹಿತ್ಯ ಪರಿಷತ್ ರಾಜ್ಯಅಧ್ಯಕ್ಷತೆಯ ಆಕಾಂಕ್ಷಿ ಸಿ . ಕೆ. ರಾಮೇಗೌಡ ಹೇಳಿದ್ದಾರೆ.
ಶಿರಸಿಯಲ್ಲಿ ಕರೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಸಾಹಿತ್ಯ ಪರಿಷತ್ತಿನ ನಾನಾ ಹುದ್ದೆಗಳು, ಜವಾಬ್ಧಾರಿ ನಿರ್ವಹಿಸಿ ಅನುಭವ ಹೊಂದಿದ್ದೇನೆ ಬೆಂಗಳೂರಿನೊಂದಿಗೆ ಹಳೆಮೈಸೂರು, ಉತ್ತರ ಕರ್ನಾಟಕ ಸೇರಿ ಬಹುತೇಕ ಕಡೆ ನಮ್ಮ ಸಂಘಟನೆ, ಕೆಲಸ,ಹೋರಾಟ ನೋಡಿರುವ ಆಜೀವ ಸದಸ್ಯರು ನನ್ನನ್ನು ಈ ಬಾರಿ ರಾಜ್ಯ ಸಾಹಿತ್ಯ ಪರಿಷತ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುತ್ತಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ಸಾಹಿತ್ಯ ಸಮ್ಮೇಳನಗಳಲ್ಲಿ ಕುಂಬಮೇಳ ಮಾಡುವ ಬದಲು ಕನ್ನಡ ಪುಸ್ತಕಗಳ ಮೆರವಣಿಗೆ ಮಾಡುವುದು ಸೇರಿದಂತೆ ಸುಧಾರಣಾವಾದಿ ಕ್ರಮಗಳ ಜೋಡನೆ ಕನ್ನಡ ನಾಡು-ನುಡಿ ಕಟ್ಟುವ ಸರಳ ಕಾರ್ಯಕ್ರಮಕ್ಕೆ ತಮ್ಮ ಆದ್ಯತೆ ಎಂದು ಅವರು ವಿವರಿಸಿದರು. ಮಾಧ್ಯಮಗೋಷ್ಠಿಯಲ್ಲಿ ಕರ್ನಾಟಕ ಸ್ವಾಭಿಮಾನಿ ವೇದಿಕೆಯ ಶಂಕರ್ ಹೂಗಾರ್ ಇದ್ದರು.


