ಮಂಕಿ ಮಾಮರ ನೆನಪು…

ಮರೆಯಾದ ಮಂಕಿ ( ಹೊನ್ನಾವರ ತಾಲೂಕು) ಮಾಮ್…‌…‌
ಸಿದ್ದಾಪುರ (ಉ. ಕ ), ಹಳೆಯ ಪುಟಗಳಿಂದ ………ಶಾಂತಾ ನಾರಾಯಣ ಹೆಗಡೆ…

          ಮನೆಯಲ್ಲಿ ಚವತಿ ಹಬ್ಬದ ಸಲುವಾಗಿ ನಿನ್ನೆ ಸಿದ್ದಾಪುರ ಕ್ಕೆ ಹೋಗಿದ್ದೆನು.ಹಾಗೆಯೇ ಒಂದು ಸುತ್ತು ಸುತ್ತಿ ಬರೋಣವೆಂದು ನಿರ್ಮಾಣದ ಹಂತದಲ್ಲಿರುವ ಹೊಸ ಬಸ್ ನಿಲ್ದಾಣ ದ ಕಡೆಗೆ ಹೋದಾಗ, ಎದುರುಗಡೆ ,ಕ್ರಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಫಲಕವನ್ನು ನೋಡುತ್ತಿದ್ದಂತೆ,ಆ ಮಾರ್ಗಕ್ಕೆ ಹೊಂದಿಕೊಂಡಿರುವ ಬಿಡ್ಕೀ ಬೈಲ್ , ನನ್ನ ಮನಸ್ಸನ್ನು ೧೯೫೦ ರ ದಶಕಕ್ಕೆ ಸೆಳೆಯಿತು!

https://www.youtube.com/watch?v=5o3h3H7WV9Q&t=213s

         ಬಿಡ್ಕೀ ಬೈಲ್, ಎಂದರೆ,ಚಕ್ಕಡಿಗಳನ್ನು ಬೀಡು ಬಿಡುವ ಸ್ಥಳ. ಅಂದಹಾಗೆ,ಚಕ್ಕಡಿಗಳು, ಬರುವುದಾದರೂ ಎಲ್ಲಿಂದ ಮತ್ತು ಏಕೆ ಎನ್ನುವ ಪ್ರಶ್ನೆ ಗಳು ಉದ್ಭವ ವಾಗುವುದು ಸಹಜ.
         ಸಿದ್ದಾಪುರವು ೧೯೫೦ರ ದಶಕದ ಶುರುವಾತಿನಲ್ಲಿ ವಿದ್ಯುತ್ ದೀಪಗಳನ್ನು ಕಂಡಿರಲಿಲ್ಲ. ರಸ್ತೆಗಳಿಗೆ ಡಾಂಬರು ಲೇಪದ ಭಾಗ್ಯವೂ ಒದಗಿ ಬಂದಿರಲಿಲ್ಲ.ಸುತ್ತ ಮುತ್ತಲು ಹಳ್ಳಿಗಳ ಸಂಪರ್ಕಜಾಲದ ರಸ್ತೆಗಳೂ ಕೂಡ ಮೋಟಾರು ವಾಹನಗಳ ಸಂಚಾರಕ್ಕೆ ನಾವೊಲ್ಲೆ,ಎಂಬಂತ್ತಿದ್ದವು! ಆಧುನಿಕತೆಯ ಹವಾ,  ಸಿದ್ದಾಪುರದ ಕಡೆಗೆ ಸ್ವಲ್ಪ ತಡವಾಗಿಯೇ ಬೀಸಲಾರಂಭಿಸಿತೆನ್ನ ಬಹುದು.ಪೇಟೆಯಿಂದ ಹಳ್ಳಿಗಳಿಗೆ,ಹಳ್ಳಿಗಳಿಂದ ಪೇಟೆಗೆ ಸರಕು ಗಳ ಸಾಗಾಣಿಕೆಗೆ ಅಗತ್ಯ ಸಂಖ್ಯೆಗಳ  ವಾಹನಗಳ ಕೊರತೆ ಇತ್ತು.
        ಇತ್ತಕಡೆ, ಹೊನ್ನಾವರ ತಾಲೂಕಿನ ಕ್ರಷಿಕ  ಶೇರುಗಾರರು , ದೀಪಾವಳಿಯ ಆಸುಪಾಸಿನಲ್ಲಿ ತಮ್ಮ ಬೆಳೆಗಳ ಸುಗ್ಗಿಯನ್ನು ಆಚರಿಸಿ, ಮುಂಬರುವ ಮೇ ತಿಂಗಳವರೆಗೆ , ದುಡಿಮೆಗಾಗಿ, ಪರ್ಯಾಯ ವ್ಯವಸ್ಥೆ ಯ ರೂಪದಲ್ಲಿ,ತಮ್ಮ ಚಕ್ಕಡಿ ಬಂಡಿ ಗಳನ್ನು ಸರಕು ಸಾಗಾಣಿಕೆ ಗಳಿಗೆ ಬಳಸಲು ಅನುವಾಗುತ್ತಾರೆ. ಇದರ ಸಲುವಾಗಿ ಅವರು, ತಮ್ಮ ಸೇವೆಯ ಅಗತ್ಯ ವಿರುವ ಬೇರೆ ಬೇರೆ ಸ್ಥಳಗಳಿಗೆ ವಲಸೆ ಹೋಗುತ್ತಾರೆ.

ಈ ರೀತಿಯಾಗಿ,ಮಂಕಿ ಗ್ರಾಮದ ಹಲವು ಶೇರೂಗಾರರು ಸಿದ್ದಾಪುರವನ್ನು ತಮ್ಮ,ಬಿಡುವಿನ ಕಾರ್ಯಕ್ಷೇತ್ರವನ್ನಾಗಿ ಆಯ್ಕೆ ಮಾಡಿ ,ಬಿಡ್ಕೀ ಬೈಲ್ ನಲ್ಲಿ ಠಿಕಾಣಿ ಹೂಡುತ್ತಿದ್ದರು. ಅವರು ಕಟ್ಟುಮಸ್ತಾದ ಆಳುಗಳು.ಬಕ್ಕಣಗಳ (ಜೇಬು) ಒಳ ಅಂಗಿ,ಅದರ ಮೇಲೆ ಪೂರ್ಣ ತೋಳಿನ ಶರ್ಟ್, ಉಡಲಿಕ್ಕೆ ಲುಂಗಿ ಮತ್ತು ತಲೆಯಮೇಲೆ ಸುತ್ತಿದ ರುಮಾಲು,ಇವು ಅವರ ಸಾಮಾನ್ಯ ವೇಶ ಭೂಷಣ.ಆಚ್ಛಾದಿತ ಚಕ್ಕಡಿ ಬಂಡಿಗಳು ಮತ್ತು ಸದ್ರಢ ಜೋಡೆತ್ತು ಗಳು ಅವರ ಸಾಧನಗಳು.ಪುರ ಮತ್ತು ಹಳ್ಳಿ ಗಳ ನಡುವೆ ಪರಸ್ಪರ ಸರಕು ಸಾಗಾಣಿಕೆ ಅವರ ಕಾಯಕ.ಇವರ ಸೇವೆಯನ್ನು ಬಳಸುವವರಿಗೆ ಒಂದು ಪ್ಲಸ್ ಪಾಯಿಂಟ್ ಏನೆಂದರೆ,ಈ ಶೇರೂಗಾರರು ಥ್ರೀ ಇನ್ ವನ್! ಸರಕುಗಳ ಲೋಡಿಂಗ್ ಮತ್ತು ಅನ್ ಲೋಡಿಂಗ್ ಕೂಡ ಅವರೇ ಮಾಡುತ್ತಾರೆ !ಹೀಗೆ,ಅವರು,ಸರಕು ಸಾಗಣೆಗೆ ಬಾಡಿಗೆ ಸಹಿತ ಕೂಲಿಯ ರೂಪದಲ್ಲಿಯೂ ಕೂಡ ಸಂಪಾದನೆಯನ್ನು ಮಾಡುತ್ತಿದ್ದರು. ಸರಿಸುಮಾರು,೧೫ ರಿಂದ ೨೦ ಚಕ್ಕಡಿ ಬಂಡಿ ಗಳ ಮೇಳ ಅಲ್ಲಿ ಜಮಾಯಿಸುತ್ತಿತ್ತು. ಅವರ ಕಾರ್ಯಕ್ರಮಗಳ ಕಾರ್ಯಕಾಲ, ಸಂಜೆಯ ನಂತರ ಆರಂಭವಾಗಿ ಬೆಳಗಿನ ವರೆಗೆ ಇರುತ್ತಿತ್ತು.ಹೀಗಾಗಿ,ಸೀಮೆ ಎಣ್ಣೆ ದೀಪದ ಲಾಟೀನು,ಅವರ ಅವಿಭಾಜ್ಯ ಅಂಗವಾಗಿತ್ತು. ಗಮನಿಸಬೇಕಾದ ಅಂಶವೆಂದರೆ , ಅವರು ಒಬ್ಬಂಟಿಯಾಗಿ ಪ್ರಯಾಣಮಾಡುತ್ತಿರಲಿಲ್ಲ! ತಮ್ಮ ರಕ್ಷಣೆಗಾಗಿ ಒಂದು ಕತ್ತಿ ಅವರ ಸಂಗಾತಿಯಾಗಿತ್ತು.ಮತ್ತು, ಹಾದಿ ಬದಿಯಲ್ಲಿನ ಒಣ ಕಟ್ಟಿಗೆ ಯನ್ನು ಸಂಗ್ರಹಿಸಲೂ ಸಹಕಾರಿ ಆಗಿದ್ದಿತು. ಅದು ,ಅವರ ,ಅಡಿಗೆ ತಯಾರಿಕೆಗಾಗಿ ಉರುವಲಿಗೆ ಬೇಕಿತ್ತಲ್ಲ. ಅವರ ರಾತ್ರಿ ಸಂಚಾರದ ಸಮಯದಲ್ಲಿ ಅವರ ಕಣ್ಣಿಗೆ ಜೋಂಪು ಹತ್ತಿದರೂ ಸಮಸ್ಯೆ ಆಗುತ್ತಿರಲಿಲ್ಲ. ಕಾರಣ,ಅವರ ಬೆನ್ನೆಲುಬು ಗಳಾದ ಎತ್ತುಗಳು ಸರಿಯಾದ ಮಾರ್ಗದಲ್ಲಿಯೇ ಸಾಗುತ್ತಿದ್ದವು! ಆ ಸಮಯದಲ್ಲಿ, ಸಿದ್ದಾಪುರ ದಲ್ಲಿ, ಹುಲೇಕಲ್ ಮತ್ತು ಬೇಂಗ್ರೆ ಕುಟುಂಬಗಳ ದಿನಸಿ ವ್ಯವಹಾರಗಳ ಭರಾಟೆ ಇದ್ದಿತು. ಆಸುಪಾಸಿನ, ದೊಡ್ಮನೆ,ವಂದಾನೆ,ಇಟಗಿ,ಕ್ಯಾದಗಿ, ಬಿಳಗಿ, ಬೇಡ್ಕಣಿ ಮುಂತಾದ ಹಳ್ಳಿಗಳಿಗೆಲ್ಲ ಕಿರಾಣಿ ಸಾಮಾನುಗಳ ಸರಬರಾಜನ್ನು ಈ ಚಕ್ಕಡಿ ಗಾಡಿಗಳೇ ನಿರ್ವಹಿಸುತ್ತಿದ್ದವು.ಅದೂ ಅಲ್ಲದೆ,ಅವರು, ಮರಳಿ ಬರುವಾಗ, ಖಾಲಿ ಬಂಡಿಯಲ್ಲಿ ಬರುತ್ತಿರಲಿಲ್ಲ. ಕ್ರಷಿಕರು ಬೆಳೆದ, ತೆಂಗು, ಅಡಿಕೆ, ಕರಿಮೆಣಸು, ಬಾಳೆಕಾಯಿ ಮುಂತಾದವುಗಳನ್ನು ಹೇರಿಕೊಂಡು ಬರುತ್ತಿದ್ದರು. ಕೊನೆಪಕ್ಷ,ಮರಳನ್ನಾದರೂ ತುಂಬಿಕೊಂಡು ಬಂದು,ಅಗತ್ಯ ಇರುವವರಿಗೆ ಪೂರೈಸುತ್ತಿದ್ದರು.ಇದು,ಅವರ ದುಡಿಮೆಯ ಚಾಕ ಚಕ್ಯತೆಗಳಿಗೊಂದು ನಿದರ್ಶನ ! ವರ್ಷಂಪ್ರತಿ,ಅವರ ಸತತ ಸಂಪರ್ಕಗಳಿಂದಾಗಿ,ಮತ್ತು ಅವರ ಪ್ರಾಮಾಣಿಕತೆಯಿಂದಾಗಿ, ಕಾಯಂ ಗಿರಾಕಿಗಳಿಗೆ, ಅವರ ಕುರಿತು ಒಂದು ಗಾಢ ವಿಶ್ವಾಸ ಮೂಡಿತ್ತು. ಇದಕ್ಕೆ ಫಲಶ್ರುತಿಯಾಗಿ,ಗ್ರಾಹಕರು ಕಳಿಸಿದ ಚೀಟಿ ಯ ಪ್ರಕಾರ,ಅಂಗಡಿಯ ಮಾಲೀಕರು, ಸರಕುಗಳನ್ನು ಸಾಗಣೆಗೆ ಇವರಿಗೆ ಕೊಡುತ್ತಿದ್ದರು. ಇನ್ನು, ಬೆಳಗಿನಿಂದ ಸಾಯಂಕಾಲದ ವರೆಗೆ ಇವರ ಸ್ವಂತ ನಿತ್ಯ ಕಾರ್ಯಗಳಲ್ಲಿ ತೊಡಗಿಸಿ ಕೊಳ್ಳುತ್ತಿದ್ದರು. ಮೂರು ಕೆಂಪು ಮಣ್ಣಿನ ಕಲ್ಲುಗಳೇ ಇವರ ಒಲೆ. ಕಟ್ಟಿಗೆಯ ಉರಿಯಲ್ಲಿ ಕುಚುಲಕ್ಕಿ ಅನ್ನವನ್ನು ಬೇಯಿಸಿ ಕೊಳ್ಳುತ್ತಿದ್ದರು. ಕೆಂಪು ಒಣ ಮೆಣಸಿನ ಕಾಯಿ , ಕೊತ್ತಂಬರಿ ಬೀಜ, ಮುಂತಾದವುಗಳ ಮಸಾಲೆ ಅರೆದು, ಘಮ ಘಮ ಸಾಂಬಾರ್ ತಯಾರಿಸುತ್ತಿದ್ದರು. ಶ್ರಮಿಕರಾದ ಇವರು,ಗಡದಸ್ತಆಗಿ ಮತ್ತು ಹಿತವಾಗಿ ಊಟ ಮಾಡುವುದನ್ನು ಕಂಡಾಗ,ಹಸಿವೆ ಇಲ್ಲದವರಿಗಷ್ಟೇ ಅಲ್ಲ,ಊಟ ಬಯಸದವರಿಗೂ ಬಾಯಿ ನೀರೂರುತ್ತಿತ್ತು ! ಅವರದ್ದಾಯಿತು,ಇನ್ನು ಅವರ ಜೀವನಾಡಿ ಗಳಾದ ಎತ್ತು ಗಳ ಬಗ್ಗೆಯೂ ಅವರು ವಿಶೇಷ ಕಾಳಜಿ ಹೊಂದಿದ್ದರು. ಒಣ ಹುಲ್ಲಿನ ಒಟ್ಟಿಗೆ ,ಟಿನ್ನಿನಲ್ಲಿ ಬೇಯಿಸಿದ ಹುರುಳಿಕಾಳು ಗಳನ್ನು ಅವಕ್ಕೆ ನೀಡುತ್ತಿದ್ದರು. ಇನ್ನು, ಹುರುಳಿಕಾಳು ಬೇಯಿಸುವಾಗ , ಆ ಬೇಯಿಸಿದ ನೀರು ,ನಮ್ಮ ಕೊಂಕಣಿಗರಿಗೆ ,ಇಷ್ಟ ದೇವತೆಯಾದ ಹುರುಳಿ ಸಾರು (ಕುಳಿತಾ ಸಾರು)ತಯಾರಿಸಲಿಕ್ಕೆ ಅನುವಾಯಿತು!

ಇದರಿಂದಾಗಿ, ಗೃಹಿಣಿಯರಿಗೂ ಅನುಕೂಲವಾದಂತಾಯಿತು. ಇದಕ್ಕೆ ಪ್ರತಿಯಾಗಿ ಅಲ್ಲದಿದ್ದರೂ,ಈ ಶೇರೂಗಾರರು, ಮಾತೆಯ ರಿಂದ ಉಪ್ಪಿನ ಕಾಯಿ ವಗೈರೆ ಬೇಡಿ ಪಡೆದುಕೊಳ್ಳುತ್ತಿದ್ದರು!
ಹೀಗೆ,ಹಗಲಿನಲ್ಲಿ ಇವರ ನಿತ್ಯ ಕರ್ಮಗಳ ಜೊತೆಗೆ ತಾವು ವಿಶ್ರಾಂತಿ ಪಡೆಯುವದಲ್ಲದೇ,ಎತ್ತುಗಳಿಗೂ ಸಾಕಷ್ಟು ಬಿಡುವು ಕೊಡುತ್ತಿದ್ದರು.ಬಿಡ್ಕೀ ಬೈಲಗಿಂತ ಮೊದಲು ಈ ಚಕ್ಕಡಿ ಬಂಡಿಗಳು ,ಈಗಿರುವ, ಶ್ರೀ ರಾಮನಾಥ ಸ್ಟೋರ್ಸ ಸ್ಥಳದಲ್ಲಿ ತಂಗುತ್ತಿದ್ದಂತೆ ನನ್ನ ನೆನಪು.
ಕಾಲಕಳೆದಂತೆ,ಸಿದ್ದಾಪುರದಲ್ಲಿ, ಜೀಪು, ವ್ಯಾನ್ ಮತ್ತು ರಿಕ್ಷಾಗಳು ಪ್ರತ್ಯಕ್ಷವಾಗುತ್ತಿದ್ದಂತೆ,ಈ ಚಕ್ಕಡಿ ಗಾಡಿಗಳು ಸಹಜ ವಾಗಿಯೇ ಅಪ್ರಸ್ತುತ ವಾಗತೊಡಗಿ,೧೯೮೦ ರ ಆರಂಭಿಕ ದಶಕದಲ್ಲಿ ತೆರೆಯಿಂದ ಮರೆಗೆ ಸರಿದವು!
ನಿನ್ನೆ ಕಂಡ ಬಿಡ್ಕೀ ಬೈಲ್, ” ಬಿಡ್ಕೀ” ಯನ್ನು ಕಳಚಿಕೊಳ್ಳುವ ದರಜೊತೆಗೆ “ಬಯಲು” ಕೂಡ ಬಯಲಾಗುಳಿದಿಲ್ಲ ಎನ್ನುವುದು ದಿಟವಾದರೂ, ಅದಿನ್ನೂ ” ಬಿಡ್ಕೀ ಬೈಲ್” !! ಅಲ್ಲಿ, ಪಂಚಾಯಿತಿ ಅಧ್ಯಕ್ಷರಾದ ಸಂದರ್ಭದಲ್ಲಿ ಮಾನ್ಯ ಶ್ರೀ ಗೋವಿಂದ ಶಾಂತಾರಾಮ್ ಶಾನುಭಾಗ್ ರವರು, ಸಾರ್ವಜನಿಕರು ಮತ್ತು ಬಿಡ್ಕೀಯವರ ಉಪಯೋಗಕ್ಕಾಗಿ ಕೊರೆಸಿದ ಬಾವಿಯು,ಏನು, ಇತ್ತಬಂದಿದ್ದು,ಎಂದು,ನನ್ನನ್ನು ಕೇಳುವಂತಿತ್ತು!
ನಮ್ಮ ಪರಿಚಯಸ್ಥರು ಮತ್ತು ಆತ್ಮೀಯರನ್ನು ನಾವು ಗೌರವಿಸುತ್ತೇವೆ ಮತ್ತು ಅದರಂತೆ ಅವರನ್ನು ಸಂಬೋಧಿಸುತ್ತೇವೆ. ಅದರಂತೆ,ಮಂಕಿ ಯಿಂದ ಬಂದು, ನಮ್ಮೊಂದಿಗೆ ಬಹು ಸಮಯ ಒಡನಾಟ ಮಾಡಿದ ಈ ಶೇರೂಗಾರರನ್ನು ನಾವು “ಮಂಕೀ (ಹೊನ್ನಾವರ ತಾಲೂಕು) ಮಾಮ್” ಎಂದು ಕರೆದರೆ,ಇದನ್ನು ಅನುಚಿತ ಎಂದು ಯಾರು ತಾನೇ ಹೇಳಿಯಾರು❓ –

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

ಸಮಾಜಮುಖಿ ಡಾಟ್‌ ನೆಟ್‌ ಬ್ರೇಕಿಂಗ್……‌ ಅವರಗುಪ್ಪಾದ ಮಹಿಳೆ ಸೊರಬಾದಲ್ಲಿ ಆತ್ಮಹತ್ಯೆ

ಸೊರಬಾದ ವಸತಿನಿಲಯದ ಮುಖ್ಯ ಅಡುಗೆ ಸಿಬ್ಬಂದಿ ಮಹಿಳೆ ವಸತಿ ನಿಲಯದಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಸಿದ್ಧಾಪುರದ ಅವರಗುಪ್ಪಾ ಮೂಲದ ನೇತ್ರಾವತಿ ನಾಯ್ಕ ಆತ್ಮಹತ್ಯೆಗೆ...

ಹೋರಾಟಗಳ ಮೂಲಕ ಸುಧಾರಣೆ ಇಂದಿನ ಅನಿವಾರ್ಯತೆ

ಬಹುಜನ ಚಳವಳಿಗಳಿಗೆ ನಾರಾಯಣ ಗುರುಗಳು ಮತ್ತು ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಚಿಂತನೆಗಳು ಪೂರಕ ಎಂದಿರುವ ಯುವ ಚಿಂತಕ ಲೋಹಿತ್‌ ನಾಯ್ಕ ಈಗಲೂ ಸೈದ್ಧಾಂತಿಕ...

ಅಕ್ರಮ ಮದ್ಯ ಮಾರಾಟ, ಮದ್ಯ ಸೇವಿಸಿ ವಾಹನ ಚಾಲನೆ ನಿಯಂತ್ರಣಕ್ಕೆ ಭೀಮಣ್ಣ ಆದೇಶ

ಶಿರಸಿ-ಸಿದ್ಧಾಪುರಗಳಲ್ಲಿ ಸಾಮಾಜಿಕ ಪಿಡುಗಾಗಿ ಜನರ ಜನಜೀವನಕ್ಕೆ ತೊಂದರೆ ಕೊಡುತ್ತಿರುವ ಅಕ್ರಮ ಮದ್ಯ ಮತ್ತು ಮದ್ಯ ಸೇವಿಸಿ ವಾಹನ ಚಲಾಯಿಸುವ ಬಗ್ಗೆ ಸ್ಥಳೀಯ ಶಾಸಕ ಭೀಮಣ್ಣ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *