

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಸಿದ್ದಾಪುರ ಯೋಜನೆಯ ಹೊಸಳ್ಳಿಯ ಅಂಗನವಾಡಿ ಕಾರ್ಯಕರ್ತೆಯಾದ ಮಹಾದೇವಿ ಮಡಿವಾಳರಿಗೆ ಬೆಂಗಳೂರಿನಲ್ಲಿ ಜಿಲ್ಲಾ ಮಟ್ಟದ ಉತ್ತಮ ಕಾರ್ಯಕರ್ತೆ ಪ್ರಶಸ್ತಿ ನೀಡಿ ಸನ್ಮಾಸಲಾಯಿತು.

ಸಿದ್ಧಾಪುರದ ವಿದ್ಯಾರ್ಥಿ ಮಿತ್ರ ಬಳಗದಿಂದ ಗ್ರಾಮ ಒಕ್ಕಲ ಸಮುದಾಯದ ವಿದ್ಯಾರ್ಥಿಗಳಿಗೆ ಮತ್ತು ಇದರಿಂದ ಕಲಿತು ನೌಕರಿ ಪಡೆದವರಿಗೆ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಕಾರ್ಯಕ್ರಮ ಬೇಡ್ಕಣಿ ಕೋಟೆ ಆಂಜನೇಯ ದೇವಸ್ಥಾನ ದಲ್ಲಿ ಹಮ್ಮಿಕೊಳಲಾಗಿತ್ತು .
ಅಬುದಾಬಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಗಣೇಶ್ ಮೂರ್ತಿ ಅಳಗೋಡ ಕನಸಿನ ಕಾರ್ಯಕ್ರಮ ಇದಾಗಿದ್ದು ಇವರು ತಮ್ಮ ಸಮುದಾಯದ ವಿದ್ಯಾರ್ಥಿಗಳನ್ನು ಉತ್ತೇಜಿಸುವ ಬಗ್ಗೆ ಸಿದ್ದಾಪುರದಲ್ಲಿ ವಿದ್ಯಾರ್ಥಿ ಮಿತ್ರ ಬಳಗ ಎಂದು ಸಂಘಟನೆ ಮಾಡಿ ಗ್ರಾಮ ಒಕ್ಕಲು ಸಮಾಜದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಕರಿಂದ ಟ್ಯೂಷನ್ ನೀಡಿ ಪ್ರತಿ ವರ್ಷ SSLC /PUC/Degree ಮತ್ತು ಉನ್ನತ ಶಿಕ್ಷಣ ದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮುತ್ತು ಈ ಸಂಘಟನೆ ವತಿಯಿಂದ ಕಲಿತು ಉದ್ಯೋಗ ಪಡೆದವರಿಗೆ ಅಭಿನಂದನಾ ಕಾರ್ಯಕ್ರಮ ಹೊಮ್ಮಿಕೊಳ್ಳುತಿದ್ದಾರೆ. ಈ ಬಳಗದ 6ನೇ ವರ್ಷದ ಕಾರ್ಯಕ್ರಮವನ್ನು ಉದ್ಘಾಟಿಸಿ ಸಹಾಯಕ ಪೊಲೀಸ್ ನೀರಕ್ಸಕರು ರಮೇಶ ಎಸ್ ಗೌಡ ಸಿದ್ದಾಪುರದ ಗಣೇಶ್ ಮೂರ್ತಿಯವರ ನಿಸ್ವಾರ್ಥ ಸೇವೆ ಬಗ್ಗೆ ಶ್ಲಾಘಿಸಿದರು. ಶಿಕ್ಷಣ ದಿಂದ ಬಂದ ಶಕ್ತಿ ಮತ್ಯಾವುದರಿಂದಲೂ ದೊರೆಯಲು ಸಾಧ್ಯವಿಲ್ಲ, ಯಾವುದೆ ಉದ್ಯೋಗ ಸಿಕ್ಕರೂ ಪ್ರೀತಿಯಿಂದ ಕಾರ್ಯ ನಿರ್ವಹಿಸಿ ಎಂದು ತಿಳಿಸಿದರು.
ಆರ್. ಎನ್. ಪಟಗಾರ ಮಾತನಾಡಿ “”ಶಿಕ್ಷಣ ವೇ ಶಕ್ತಿ ಶಿಕ್ಷಣ ವೇ ಸಂಸ್ಕಾರ ” ಎಂದು ತಿಳಿಸಿದರು. ಮೋಹನ್ ಗೌಡ ಕಿಲವಳ್ಳಿ ಮನಸಿದ್ದರೆ ಮಾರ್ಗವಿದೆ ಇನ್ನು ಉತ್ತಮವಾಗಿ ಕಲಿಕೆಯಲ್ಲಿ ನುಗ್ಗಿ ಹೆಚ್ಚಿನ ಯಶಸ್ಸು ಸಿಗಲಿ ಎಂದು ಹಾರೈಸಿದರು. ಅಧ್ಯಕ್ಷ ಆರ್ ಜಿ ಗೌಡ ಅಳಗೋಡ ಮಾತನಾಡಿ ಇಂತಹ ಕಾರ್ಯಕ್ರಮ ಕ್ಕೆ ತಮ್ಮೆಲ್ಲರ ಸಹಕಾರ ಅತಿ ಅವಶ್ಯ ಒಬ್ಬರಿಂದ ಇಬ್ಬರು,ಇಬ್ಬರಿಂದ 10 ಜನ ಉನ್ನತ ಶಿಕ್ಷಣ ಪಡೆದು ಮೇಲೆ ಬರಬೇಕು ಎಲ್ಲಾ ಸಮುದಾಯಕ್ಕೂ ಸಹಕಾರಿ ಆಗಬೇಕು ಆಗ ಮಾತ್ರ ಸಮುದಾಯದ ಮತ್ತು ಈ ದೇಶದ ಋಣ ತೀರಿಸಿದ ಹಾಗೆ ಎಂದು ನುಡಿದರು ಸ್ವಾಗತ ಸುರೇಶ ಗೌಡ ಕೊಡ್ತಗಣಿ ಕಾರ್ಯಕಮ ನಿರ್ವಹಣೆ /ನಿರೂಪಣೆ ಉದಯ ಗೌಡ ಹುಲಿಮನೆ ಮತ್ತು ಗೋಪಾಲ ಗೌಡ ಹಿರೆಕೈ ಗದ್ದೆ

