ಪಂಚ ನದಿಗಳ ನಾಡು ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೇರಿದ್ದು, ಪಂಜಾಬ್ ರಾಜ್ಯ ಬಳಿಕ ಆಪ್ ಗಮನ ಇದೀಗ ಕರ್ನಾಟಕದತ್ತ ಹೊರಳಿದೆ.
ಬೆಂಗಳೂರು: ಪಂಚ ನಂದಿಗಳ ನಾಡು ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೇರಿದ್ದು, ಪಂಜಾಬ್ ರಾಜ್ಯ ಬಳಿಕ ಆಪ್ ಗಮನ ಇದೀಗ ಕರ್ನಾಟಕದತ್ತ ಹೊರಳಿದೆ.
ರಾಜ್ಯದ ಚುನಾವಣೆ ಕುರಿತ ಯೋಜನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಎಪಿಯ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಅವರು, 2023ರ ಚುನಾವಣಗೆ ನಾವು 224 ಕ್ಷೇತ್ರಗಳಲ್ಲೂ ಸ್ಪರ್ಧಿಸುತ್ತೇವೆ. ಮೂರು ತಿಂಗಳಿನಲ್ಲಿ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಮನೆ ಮನೆ ತೆರಳಿ ಪ್ರಚಾರ ನಡೆಸಲು ಅವರಿಗೆ ಕಾಲಾವಕಾಶ ನೀಡಲಾಗುತ್ತದೆ. ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳನ್ನು ಶೀಘ್ರದಲ್ಲಿಯೇ ಗುರ್ತಿಸಲಾಗುತ್ತದೆ ಎಂದು ಹೇಳಿದ್ದಾರೆ.
ನಾವು ಉತ್ತಮ ಕೆಲಸ ಮಾಡುತ್ತಿದ್ದೇವೆಂದು ಎಲ್ಲರೂ ಹೇಳುತ್ತಿದ್ದರು. ಆದರೆ, ಸಾಂಪ್ರದಾಯಿಕ ಪಕ್ಷಗಳ ಸೋಲಿಸುತ್ತಾರೆಂದು ನಿರೀಕ್ಷಿಸಿರಲಿಲ್ಲ. ನಾವು ಅಡೆತಡೆಗಳನ್ನು ದಾಟಿದ್ದೇವೆ. ಪಂಜಾಬ್ ನಲ್ಲಿ ನಾವು ಉತ್ತಮ ಕಾರ್ಯಗಳನ್ನು ಮಾಡುತ್ತೇವೆ. ಕರ್ನಾಟಕದಲ್ಲೂ ಅದರ ಪರಿಣಾಮ ತಿಳಿದುಬರಲಿದೆ ಎಂದು ತಿಳಿಸಿದ್ದಾರೆ.
ಎಎಪಿ ದೆಹಲಿಯಲ್ಲಿ ಸರ್ಕಾರಿ ಶಾಲಾ ವ್ಯವಸ್ಥೆಯನ್ನು ಮಾದರಿ ಶಾಲೆಗಳಾಗಿ ಪರಿವರ್ತಿಸಿದೆ, ಅಲ್ಲಿ ಶಿಕ್ಷಣ ಉಚಿತವಾಗಿದೆ. ಉಚಿತ ನೀರು ಮತ್ತು ವಿದ್ಯುತ್ ಯೋಜನೆಗಳು ದೆಹಲಿಯಲ್ಲಿ ಸಾಕಷ್ಟು ಕೆಲಸ ಮಾಡಿದೆ ಎಂದು ಹೇಳಿದ್ದಾರೆ.
ನಿವೃತ್ತ ಐಎಎಸ್ ಅಧಿಕಾರಿ ರೇಣುಕಾ ವಿಶ್ವನಾಥನ್ ಅವರು, ಶಾಂತಿನಗರದಲ್ಲಿ ತಮ್ಮ ಪಿಂಚಣಿ ಹಣದಿಂದ ಕಳೆದ 13 ತಿಂಗಳಿಂದ ಮೊಹಲ್ಲಾ ಕ್ಲಿನಿಕ್ ನಡೆಸುತ್ತಿದ್ದಾರೆ.
ಕರ್ನಾಟಕದಲ್ಲಿ ಪ್ರಚಾರದ ಯೋಜನೆಗಳ ಕುರಿತು ಮಾತನಾಡಿ, ದೆಹಲಿಯಲ್ಲಿ ಜಾರಿಗೆ ತರಲಾಗಿರುವ ಯೋಜನೆಗಳನ್ನು ಕರ್ನಾಟಕದಲ್ಲೂ ಜಾರಿಗೆ ತರಲಾಗುತ್ತದೆ ಎಂದು ಹೇಳಿದ್ದಾರೆ.
ದೇಶದ 13 ದೊಡ್ಡ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮತ್ತು ಪಂಜಾಬ್ ಸ್ಥಾನ ಪಡೆದಿವೆ. ಪಂಜಾಬ್‌ನಲ್ಲಿ ಏನು ಮಾಡಬಹುದೋ ಅದನ್ನು ಕರ್ನಾಟಕದಲ್ಲೂ ಪುನರಾವರ್ತಿಸಲಾಗುತ್ತದೆ ಎಂದು ತಿಳಿಸಿದ್ದಾರೆ. (kpc)