ಪಠ್ಯ ಪರಿಷ್ಕರಣೆ ಹಿಂದು ಮುಂದಿನ ಕತೆ

Pravara kotturu ಬರೆಯುತ್ತಾರೆ……

ಪಠ್ಯಪುಸ್ತಕಗಳು ಮುದ್ರಣಗೊಂಡಿವೆ ಹಿಂಪಡೆಯಲು ಸಾದ್ಯವೆ ಇಲ್ಲ. ಪುಸ್ತಕಗಳನ್ನು ಶಾಲೆಗಳಿಗಾಗಲೇ ಸರಬರಾಜು ಮಾಡಿಯಾಗಿದೆ. ಎಲ್ಲಕ್ಕೂ ಹೆಚ್ಚು ಇದಕ್ಕಾಗಿ ಹಲವು ಕೋಟಿಗಳನ್ನು ವ್ಯಯಿಸಲಾಗಿದೆ ಹಾಗಾಗಿ ಹಿಂಪಡೆಯುವ ಯಾವುದೇ ಮಾತಿಲ್ಲ ಎಂದು ಸರಕಾರ ಸಣ್ಣ ಮಕ್ಕಳಂತೆ ರಚ್ಚೆ ಹಿಡಿದಿದೆ.

ಬಿಜೆಪಿ ಸರಕಾರ ನಡೆಯುತ್ತಿದ್ದರೂ ಅದು ನಾಮಕಾವಸ್ಥೆಗೆ ಅಷ್ಟೆ. ಎಲ್ಲೆಲ್ಲಿ ಏನೇನು ಆಗಬೇಕು ಅನ್ನುವುದನ್ನು ಸಂಘ ಹಿಂದೆ ನಿಂತು ತುಂಬಾ ಅಚ್ಚುಕಟ್ಟಾಗಿ ಮಾಡಿಸುತ್ತದೆ. ಅಂದರೆ ಕರ್ನಾಟಕದ ಯಾವ ಯಾವ ಜಾಗದಲ್ಲಿ ಗಲಾಟೆಗಳು ದೊಂಬಿ ನಡಿಬೇಕು ಮತ್ತದನ್ನು ಯಾರಿಂದ ಮಾಡಿಸಬೇಕು, ಸರಕಾರದ ಯಾವೆಲ್ಲ ಹುದ್ದೆಗಳನ್ನು ಯಾರ್ಯಾರು ಅಲಂಕರಿಸಬೇಕು, ತಮ್ಮ ಅಜೆಂಡಾಗಳು ಜನರನ್ನು ಅದರಲ್ಲೂ ತಮ್ಮ ಓಟ್ ಬ್ಯಾಂಕಿನ ದೊಡ್ಡ ಪಾಲುದಾರರಾದ ವಿದ್ಯಾರ್ಥಿಗಳನ್ನು ತಲುಪುವಲ್ಲಿ ಏನೇನು ಮಾಡಬೇಕು ಮತ್ತು ಏನೆಲ್ಲಾ ವಿಷಯಗಳು ತಲುಪಬೇಕು ಮತ್ತಾ ವಿಷಯಗಳು ಆ ಯುವಕರನ್ನು ಎಷ್ಟರ ಮಟ್ಟಿಗೆ ಉದ್ದೀಪಿಸಬಲ್ಲವು ಅನ್ನುವುದು. ಈ ಅಜೆಂಡಾಗಳನ್ನು ತಲುಪುವಂತೆ ಬರೆಯಲು ಅಂದರೆ ಉಪ್ಪು ಖಾರ ಸವರಿ ರೋಮಾಂಚನಕಾರಿಯಾಗಿ ಬರೆಯಬಲ್ಲ ಒಂದಷ್ಟು ಬರಹಗಾರರನ್ನು ಫೇಸ್ಬುಕ್ಕಿನಿಂದ ಮತ್ತೊಂದಷ್ಟನ್ನು ಪತ್ರಿಕೋದ್ಯಮದಿಂದ ಆರಿಸಿಕೊಳ್ಳುವುದು. ಸುಮ್ಮನೆ ಉದಾಹರಣೆಗೆ ಅಂತ ನೋಡುವುದಾದರೆ ರೋಹಿತ್ ಮುಂಚಿನಿಂದಲೂ ಈ ವಿಜ್ಞಾನ ಮತ್ತು ಗಣಿತ ವಿಷಯಗಳನ್ನು ವಿಷಯವಾಗಿಟ್ಟುಕೊಂಡು ಬರಹಗಳನ್ನು ಕನ್ನಡದ ಮಟ್ಟಿಗೆ ಚೆನ್ನಾಗೆ ಬರೆಯಬಲ್ಲ ಬರಹಗಾರನೇನೋ ಹೌದು. ೨೦೧೪ ರ ನಂತರ ಸಂಘವು ಬರಹ ಲೋಕ ಅಷ್ಟಾಗಿ ಗುರುತಿಸದ ಮತ್ತು ಇಗ್ನೋರ್ಡ್ ಅನ್ನಿಸುವ ಇಂಥದ್ದೋಂದಷ್ಟು ಹುಡುಗರನ್ನು ಗುಪ್ಪೆ ಹಾಕಿಕೊಂಡಿತು. ಇದೆ ತೆರನಾಗಿ ಸಿನಿಮಾಗಳಲ್ಲಿ ಒಂದೊಳ್ಳೆ ಫೇಸ್ ವ್ಯಾಲ್ಯೂ ಇದ್ದ ಪ್ರಕಾಶ್ ಬೆಳವಾಡಿಯವರನ್ನು, ಅನಂತ್ ನಾಗ್ ರನ್ನು, ಇನ್ನು ಸಾಹಿತ್ಯ ಕ್ಷೇತ್ರಕ್ಕೆ ವಾಲಿಕೊಂಡರೆ ಅಲ್ಲಿ ಖ್ಯಾತ ಕಾದಂಬರಿಕಾರರಾದ ಎಸ್.ಎಲ್.ಭೈರಪ್ಪನವರನ್ನು ಖ್ಯಾತ ಸಂಶೋಧಕರಾದ ದಿ.ಚಿಮೂ ಅವರನ್ನು, ನಾಟಕಕಾರರಾದ ಸೇತುರಾಮ್ ಅವರನ್ನು ಹೀಗೆ ಹಲವರನ್ನು ತನ್ನ ಪ್ರಭಾವಕ್ಕೆ ಒಳಗಾಗಿಸಿಕೊಂಡು ಪ್ರಚಾರಕ್ಕೆ ಏನೇನು ತಯಾರಿ ಮಾಡಿಕೊಳ್ಳಬೇಕಿತ್ತೋ ಮಾಡಿಕೊಂಡಿತು.

ಸುಮ್ಮನೆ ಆರು ವರ್ಷಗಳ ಟೈಂ ಲೈನ್ ಅನ್ನು ನೋಡಿಕೊಂಡು ಬಂದರೆ ಹಂತ ಹಂತವಾಗಿ ಅವರ ಬರಹಗಳ ಮೂಲಕ, ಭಾಷಣಗಳ ಮೂಲಕ ಅವರ ಅಭಿಮಾನಿಗಳನ್ನು ಸಂಘದ ಅಜೆಂಡಾಗಳನ್ನು ಸಲೀಸಾಗಿ ತುಂಬುವಲ್ಲಿ ಯಶಗೊಂಡರು. ನಿಮಗೇನಾದರು ಇದಕ್ಕೆ ಪುರಾವೆ ಬೇಕಾದಲ್ಲಿ ಸುಮ್ಮನೆ ಅವರ ಅಭಿಮಾನಿ ಸರ್ಕಲ್ಲಿನಲ್ಲಿ ಬರುವ ಒಂದಷ್ಟು ಸ್ಕೂಲು ಟೀಚರ್ರುಗಳನ್ನು, ಧಾರವಾಹಿ ವೀಕ್ಷಕರನ್ನು, ನಿವೃತ್ತರನ್ನು ಸುಮ್ಮನೆ ಹೀಗೆ ಏನಾದರೊದು ಕೇಳಿ ನೋಡಿ. ನಿಮಗೆ ಅವರು ಕೊಡುವ ಉತ್ತರ ಅಥವಾ ರೆಫರೆನ್ಸ್ ಸಂಘ ನೇಮಿಸಿದ ಯಾರಾದರೊಬ್ಬರ ಬರಹದಿಂದಲೋ ಅಥವಾ ಮೈ ನವಿರೇಳಿಸುವ ಭಾಷಣದಿಂದಲೋ ಹೆಕ್ಕಿದ್ದೇ ಆಗಿರುತ್ತದೆ ತಪ್ಪಿದಲ್ಲಿ ಸಂಘ ಇಂಥವರಿಗೆಂದೇ ಸರ್ಕ್ಯೂಲೇಟ್ ಮಾಡಿದ ಮೆಸೇಜಿನದ್ದೇ ಆಗಿರುತ್ತದೆ.

ಇಷ್ಟು ಸಾಕಾಗುವುದಿಲ್ಲ ಅಂತ ಅನ್ನಿಸುತೋ ಏನೋ ಜನರನ್ನು ಮತ್ತಷ್ಟು ತೀವ್ರವಾಗಿ ತಲುಪಲಿಕ್ಕೆ ಸಂವಾದ, ವಿಕ್ರಮ ಅನ್ನುವ ಒಂದಷ್ಟು ಯುಟ್ಯೂಬ್ ಚಾನೆಲ್ಲುಗಳನ್ನು ಸಾಕಿಕೊಂಡಿತು. ತುಂಬಾ ಚೆನ್ನಾಗಿ ವೀಡಿಯೋಗಳ ಮೂಲಕ ವಿಷಯಗಳನ್ನು ತಲುಪಿಸುತ್ತಿದ್ದ ಮೀಡಿಯಾ ಮಾಸ್ಟರ್ಸ್ ಎಂಬ ಲಕ್ಷಗಟ್ಟಲೆ ಸಬ್ಕ್ರೈಬರ್ಸ್ ಇರುವ ಚಾನೆಲ್ಲನ್ನು ತನ್ನ ಪ್ರಭಾವ ಬೀರಲು ಬಳಸಿಕೊಳ್ಳುತ್ತಿದೆ ಅನ್ನುವ ಅನುಮಾನವಂತೂ ಇದೆ. ಮೇಲಿನ ಎರಡು ಚಾನೆಲ್ ಗಳು ಸಂಘದವೇ ಅಂತ ಪ್ರೂವ್ ಮಾಡುವ ಅಗತ್ಯವೇ ಇಲ್ಲ, ಅದು ತೀರಾ ಢಾಳಾಗಿ ಕಾಣಸಿಗುತ್ತದೆ ನೀವು ನೋಡಿ. ಬರಿ ಅಜೆಂಡಾಗಳನ್ನೇ ತೋರಿಸದರೆಲ್ಲಿ ಜನರಿಗೆ ಬೋರ್ ಹೊಡೆದೀತು ಅಂತ ಸಂಸ್ಕೃತಿ, ಕೃಷಿ ಎಂಬಿತ್ಯಾದಿಗಳನ್ನು ಜೊತೆ ಸೇರಿಸಿಕೊಳ್ಳುತ್ತಾರೆನ್ನುವುದೇ ಖುಷಿ.

ಇನ್ನು ಯಾವ ಯಾರ ಪತ್ರಿಕೆಗಳು, ನ್ಯೂಸ್ ಚಾನೆಲ್ ಗಳು ನೇರಾ ನೇರವಾಗಿ ಸಂಘದ ಮುಖವಾಣಿಗಳಾಗಿ ಕೆಲಸ ಮಾಡುತ್ತಿವೆ ಅಂತ ಹೇಳಬೇಕಿಲ್ಲ. ದಿನ ಬೆಳಗೆದ್ದರೆ ಅವರು ಮಾಡುವ ಭಜನೆಯಲ್ಲಿ ಲಾಜಿಕ್ ಇಲ್ಲದೆ ಕೊಡುವ ನ್ಯೂಸ್ ಗಳನ್ನು ನೋಡಿದರೆ ಸಾಕು ಯಾವುದೇ ಪರಿಶ್ರಮವಿಲ್ಲದೇ ಆರಾಮವಾಗಿ ಗುರುತಿಸಬಹುದು. ಅವರ ಹಾವ ಭಾವಗಳ, ಅವರ ಉದ್ವೇಗ, ಮಾತಿನ ಓಘ ಎಲ್ಲವೂ ಮಿಥುನ್ ಸೇಠಣ್ಣರನ್ನು ಅಲಿಯಾಸ್ ಚಕ್ರವರ್ತಿ ಸೂಲಿಬೆಲೆ ಮತ್ತದೇ ಥರದ ಒಂದಷ್ಟು ಜನರ ಹಾವಭಾವಗಳನ್ನು ಹೋಲುತ್ತದೆ ಆಸಕ್ತಿ ಇದ್ದಲ್ಲಿ ತಾಳೆ ಮಾಡಿ ನೋಡಬಹದು.

ಛೇ… ಇದ್ಯಾಕೆ ಕೊಂಕಣ ಸುತ್ತಿಕೊಂಡು ಮೈಲಾರಕ್ಕೆ ಬರುತ್ತಿದ್ದೇನೆ. ಎಲ್ಲಿದ್ದೆ? ಓಹ್ ಪಠ್ಯಪುಸ್ತಕ, ಖರ್ಚು ಗಳ ನಡುವೆ ಇದ್ದೆ ಅಲ್ಲವಾ… ಆಗಾಗ ಪಠ್ಯಗಳ ಪರಿಷ್ಕರಣೆಯಾಗಬೇಕು ಹೌದು, ಈಗಿನ ಅಗತ್ಯಕ್ಕೆ ತಕ್ಕಂತೆ ಅಪ್ಡೇಟ್ ಆಗಬೇಕು ಅದೆಲ್ಲಾ ಹೌದು ಹೌದು, ಇಲ್ಲವೆನ್ನುತ್ತಿಲ್ಲ ಆದರೆ… ಈ ಪಠ್ಯಗಳನ್ನು ಲಕ್ಷಾಂತರ ಮಕ್ಕಳು ಓದುತ್ತಾರೆ ಎನ್ನುವುದನ್ನು ಮೊದಲು ನಮಗೆ ತಿಳಿದಿರಬೇಕು. ಈಗ ಓದಿದ ವಿಷಯಗಳ ಮಕ್ಕಳ ಭವಿಷ್ಯವನ್ನೇ ರೂಪಿಸಬಲ್ಲುವು ಮತ್ತು ಅವುಗಳ ಮಾನಸಿಕ ಬೌದ್ಧಿಕ ವಿಕಾಸದ ಮೇಲೆ ಪ್ರಭಾವ ಬೀರಬಲ್ಲವು. ನಾವುಗಳೆಲ್ಲಾ ಯಾವುದೇ ಕಾಲದಲ್ಲಿ ಓದಿದ ಒಗ್ಗಟ್ಟಿನಲ್ಲಿ ಬಲವಿದೆ, ಆಮೆ ಮತ್ತು ಹಂಸ ಇತ್ಯಾದಿ ಕಥೆಗಳು ಇಂದಿಗೂ ನೆನಪಿವೆ ಅಂದರೆ ಅವುಗಳ ಪ್ರಾಮುಖ್ಯತೆಯ ಅರಿವು ನಮಗಿರಬೇಕು. ಮಗು ಯಾವುದೋ ತರಗತಿಯಲ್ಲಿ ಓದಿದ್ದನ್ನು ತನ್ನ ಬದುಕಿಗೆ ಸಮೀಕರಿಸಿಕೊಳ್ಳುತ್ತದೆ, ಅದನ್ನೇ ಯೋಚಿಸಲು ಯತ್ನಿಸುತ್ತಿರುತ್ತದೆ.

ನಮ್ಮ ಅಗತ್ಯಗಳನ್ನು ಪೂರೈಸುವ ಸಲುವಾಗಿ,ನಾವು ಕಟ್ಟಿದ ತರಿಗೆಯನ್ನು ಸದುಪಯೋಗ ಪಡಿಸಿಕೊಂಡು ಶಿಕ್ಷಣ, ಆರೋಗ್ಯ, ರಸ್ತೆ, ನೀರು, ಆಹಾರ ಇತ್ಯಾದಿಗಳನ್ನು ಯಾವುದೇ ಸಮಸ್ಯೆಗಳಿಲ್ಲದೇ ಒದಗಿಸಲೆಂದು ನಾವು ಆರಿಸಿದ ಮಾಡಿಕೊಂಡ ವ್ಯವಸ್ಥೆಯಷ್ಟೆ, ಇವರೇನು ಆಕಾಶದಿಂದ ಉದುರಿಬಿದ್ದವರೇನು ಅಲ್ಲ.

ಮೊದಲಿಗೆ ಲಕ್ಷಾಂತರ ಮಕ್ಕಳು ಓದುವ ಘನತೆಯುಳ್ಳ ಪಠ್ಯಕ್ರಮ ಪರಿಷ್ಕರಣಾ ದಂಥಾ ಸಮಿತಿಯಲ್ಲಿ ರೋಹಿತ್ ನನ್ನು ತಂದು ಕೂರಿಸಲು ಯಾವೆಲ್ಲಾ ಮಾನದಂಡಗಳನ್ನು ಸರಕಾರ ಅನುಸರಿಸಿತೆನ್ನುವುದು ದೊಡ್ಡ ಸೋಜಿಗದ ಸಂಗತಿ. ಪಠ್ಯಗಳನ್ನು ಫ್ರೇಮ್ ಮಾಡುವಾಗ ಹತ್ತಾರು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ ವಿವಿಧ ಪ್ರದೇಶಗಳ ಮಕ್ಕಳ ಸೈಕಾಲಜಿ, ಅವುಗಳ ಬುದ್ಧಿಮಟ್ಟ, ಪ್ರಾದೇಶಿಕ ಅಸಮಾನತೆ, ಯೋಚನಾಶಕ್ತಿ, ಕಲಿಕಾಶಕ್ತಿ, ಮುಖ್ಯವಾಗಿ ಬದುಕನ್ನು ಚೆಂದವಾಗಿ ರೂಪಿಸಬಲ್ಲ ವಿಷಯಗಳು. ಇವೆಲ್ಲವುಗಳ ಬಗ್ಗೆ ಕನಿಷ್ಠ ಮಟ್ಟದ ಯೋಚನೆ ಮಾಡಬೇಕಾದಲ್ಲಿ ಮಕ್ಕಳ ಜೊತೆ ಒಡನಾಟವಿದ್ದಿರಬೇಕು, ಸಾಕಷ್ಟು ವರ್ಷಗಳ ಭೋಧನಾ ಅನುಭವವಿರಬೇಕು, ಆಯಾ ವಿಷಯ ಮೇಲೆ ಆಳವಾದ ಜ್ಞಾನವಿರಬೇಕು, ಮುಖ್ಯವಾಗಿ ಯಾವುದೇ ಇಸಂಗಳಿಗೆ ಒಳಪಟ್ಟಿರಬಾರದು. ಮೇಲೆ ಹೇಳಿದ ಅಷ್ಟೂ ಮಾನದಂಡಗಳಲ್ಲಿ ಒಂದೇ ಒಂದನ್ನು ರೋಹಿತ್ ಹೊಂದಿಲ್ಲ. ಬೇರೆಲ್ಲಾ ಹಿರಿಯರನ್ನು ಬಾಯಿಗೆ ಬಂದಂತೆ ಆಡಿಕೊಳ್ಳುವ , ತಾನೊಬ್ಬ ಮಹಾನ್ ಸಾಚಾ ಅನ್ನುವ ಥರ ದೊಡ್ಡ ದೊಡ್ಡ ಮಾತುಗಳನ್ನು ಉದುರಿಸುವ ರೋಹಿತ್ ಈ ಜಾಗದಲ್ಲಿ ಕುಳಿತುಕೊಳ್ಳಲು ಯಾವುದೇ ರೀತಿಯಿಂದಲೂ ಯೋಗ್ಯನಲ್ಲವೇ ಅಲ್ಲ ಎಂದು ಕಡ್ಡಿ ಮುರಿದಂತೆ ಹೇಳಬಹುದಿತ್ತು.

೨೦೧೬ ರಿಂದ ರೋಹಿತ್, ಬರಗೂರು ಸಮಿತಿ ಪರಿಷ್ಕರಿಸಿದ ಪಠ್ಯದಲ್ಲಿ ಆ ತಪ್ಪಿದೆ ಇದೊಂದು ತಪ್ಪಿದೆ ಅಂತ ಸುಮಾರು ಗುರುತು ಹಾಕಿ ಸೋಷಿಯಲ್ ಮೀಡಿಯಾದಲ್ಲಿ ಸುಮಾರು ಪೋಸ್ಟ್ ಮಾಡಿದ್ದೂ ಇದೆ, ಈ ವಿಷಯಗಳನ್ನಿಟ್ಟುಕೊಂಡು ಒಂದಷ್ಟು ಭಾಷಣಗಳಲ್ಲಿ ತಮ್ಮ ಪಾಂಡಿತ್ಯ ಪ್ರದರ್ಶನ ಮಾಡಿದ್ದೂ ಇದೆ. ಸಂಘದವರು ಇದೆಲ್ಲವನ್ನು ಗಮನಿಸುತ್ತಿದ್ದರು ಎನ್ನಿಸುತ್ತದೆ ಸುತ್ತಲಿದ್ದವರ ಕೈಯಿಂದ ಹಾರ ತುರಾಯಿ ಹಾಕಿಸಿಕೊಳ್ಳುತ್ತಿರುವ ರೋಹಿತನನ್ನು ಬರಗೂರರಂಥಾ ಹಿರಿಯರು ಇದ್ದ ಸಮಿತಿಯಲ್ಲಿ ತಂದು ಕೂರಿಸಿದರು.

ಸಂಘ ಪರಿವಾರಕ್ಕೆ ತನ್ನ ಅಜೆಂಡಾಗಳನ್ನು ಹರಡುವುದಕ್ಕೆ ಏನಾದರೊಂದು ಚಾನೆಲ್ ಬೇಕೆಲ್ಲವೇ ಲಕ್ಷಾಂತರ ಮಕ್ಕಳು ಓದುವ ಈ ಪಠ್ಯಗಳನ್ನೇ ಚಾನೆಲ್ ಆಗಿ ಮಾಡಿಕೊಂಡರೆ. ಹೌದು ತಮ್ಮ ಮೆದುಳಿನಲ್ಲಿ ಸೃಜಿಸಿದ ವಿಷವನ್ನು ಮಕ್ಕಳ ಮೆದುಳಿಗೆ ಪಠ್ಯದ ಮುಖೇನ ವರ್ಗಾಯಿಸುವ ಅದ್ಬುತವಾದ ಅವಕಾಶವನ್ನು ಉಪಯೋಗಿಸಿಕೊಳ್ಳದಿದ್ದರೆ ಹೇಗೆ!.

ಕನ್ನಡ ಸಾಹಿತ್ಯದ ಬೇರು ಬಿಳಲುಗಳ ಕನಿಷ್ಠ ಜ್ಞಾನವಿಲ್ಲದ ಸಂಘ ಹಿಂದೆ ನಿಂತು ನಡೆಸುವ ಈ ಸರಕಾರಕ್ಕೆ ನಾಡಿನ ಬಗ್ಗೆ ಕಾಳಜಿಯಂತೂ ಇಲ್ಲವೇ ಇಲ್ಲ. ಇಂಥದ್ದೊಂದು ವಿಷಯ ಬಂದಾಗ ಸಂಘದವರು ಟೈಪು ಮಾಡಿಕೊಟ್ಟದ್ದನ್ನು ಮರುಮಾತನಾಡದೇ ತಮ್ಮ ಅಕೌಂಟುಗಳಲ್ಲಿ ಪೋಸ್ಟ್ ಮಾಡುವ ಇವರುಗಳ ನಾಡಿನ ಬಗೆಗಿನ ಕಾಳಜಿ ದೇವರಿಗೇ ಪ್ರೀತಿ. ಮಾನ್ಯ ಶಿಕ್ಷಣ ಸಚಿವರು ಒಂದು ಹೆಜ್ಜೆ ಮುಂದೆ ಹೋಗಿ ಒಂದು ಟ್ಯೂಷನ್ ನಡೆಸುತ್ತಿದ್ದ, ನಾಡಗೀತೆಯನ್ನು ಅತ್ಯಂತ ಕೆಟ್ಟದಾಗಿ ಆಡಿಕೊಂಡ ಆ ಮನುಷ್ಯ ರೋಹಿತನನ್ನು ಐಐಟಿ ಫ್ರೊಫೆಸರ್ ಶಿಕ್ಷಣ ತಜ್ಞ ಅಂತ ಬಾಯಿಗೆ ಬಂದಿದ್ದನ್ನು ಹೇಳಿ ಪರವಹಿಸಿಕೊಳ್ಳುವ ಕಸರತ್ತು ಮಾಡುತ್ತಾರೆ.

ಮು.ಮಂ ಗಳಾದ ಬಸವರಾಜ ಬೊಮ್ಮಾಯಿಯವರು ಒಂಚೂರು ಪ್ರಜ್ಞಾವಂತ ರಾಜಕಾರಣಿ ಅಂತ ಶುರುವಿನಲ್ಲಿ ಎಲ್ಲರೂ ಹೇಳುವುದನ್ನು ಕೇಳು ನಾನು ನಂಬಿದ್ದೆ. ಆದರೆ ಯಡೆಯೂರಪ್ಪನವರೇ ಸಾವಿರ ಪಾಲು ಉತ್ತಮರು ಅಂತ ಈಗ ಅನ್ನಿಸುತ್ತಿದೆ. ಕನ್ನಡ ಆತ್ಮವೇ ಆಗಿಹೋದ ಕುವೆಂಪು, ಬವಸಣ್ಣರನ್ನು ಸಂಘದ ಅಣತಿಯಂತೆ ಮಕ್ಕಳಿಗೆ ಬೇಕಂತಲೇ ತಪ್ಪಾಗಿ ಓದಿಸುವುದು, ಪಠ್ಯದ ಮುಖೇನ ಬ್ರಾಹ್ಮಣ್ಯದ ಸನಾತನಿ ವಿಷಯಗಳನ್ನು ತುಂಬುತ್ತಿರುವುದು ಮತ್ತು ಇಂಥಹಾ ನಾಲಾಯಕ್ ಕೆಲಸ ಮಾಡಿದ ರೋಹಿತನೊಬ್ಬ ಪರಮ ಅಯೋಗ್ಯ ಎಂಬೆಲ್ಲಾ ವಿಚಾರಗಳು ಬೊಮ್ಮಾಯಿಯವರಿಗೆ ತಿಳಿದಿದ್ದರೂ ಸಂಘದ ಮಾತಿಗೆ ವಿರುದ್ಧ ನಡೆಯಲಿಕ್ಕೆ ಹೆದರುತ್ತಿದ್ದಾರೋ ಅಥವಾ ವಾಪಾಸು ಪಡೆದರೆ ಕಿರೀಟ ಬಿದ್ದು ಹೋಗುತ್ತದೆ ಅನ್ನುವ ಪುಕ್ಕಲುತನವೋ ಅರ್ಥವಾಗುತ್ತಿಲ್ಲ. ಇಷ್ಟೊಂದು ವಿರೋಧ, ಇಷ್ಟೊಂದು ಪ್ರತಿಭಟನೆ ಅದೂ ಪಠ್ಯದ ವಿರುದ್ಧವೆಂದರೆ ಸರಕಾರ ಗಂಭೀರವಾಗಿ ಯೋಚಿಸಲೇಬೇಕು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *