

ಸಿದ್ದಾಪುರ: ತಾಲೂಕಿನ ಕೆಲವು ಪಡಿತರ ಅಂಗಡಿಗಳಲ್ಲಿ ನೀಡುವ ಅಕ್ಕಿ ಕಳಪೆಯಾಗಿದೆ. ಪ್ಲಾಸ್ಟಿಕ್ ಅಕ್ಕಿ ಮಿಶ್ರಣ ಮಾಡಿದ್ದಾರೆಂದು ಜನ ಮಾತನಾಡುತ್ತಿದ್ದು, ಸಂಬಂಧಪಟ್ಟವರು ಪರಿಶೀಲಿಸಿ ಸಾರ್ವಜನಿಕರ ಆತಂಕ ದೂರ ಮಾಡಬೇಕು ಎಂದು ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಆಗ್ರಹಿಸಿದರು.
ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಸಿದ್ದಾಪುರ ತಾಲೂಕಿನ ಕೆಲ ನ್ಯಾಯಬೆಲೆ ಅಂಗಡಿಗಳಲ್ಲಿ ನೀಡುವ ಅಕ್ಕಿಯಲ್ಲಿ ಎರಡು ತರಹದ ಅಕ್ಕಿ ಬರುತ್ತಿದೆ. ರೇಶನ್ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಮಿಕ್ಸ್ ಆಗಿದೆ ಎಂದು ಜನ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇದನ್ನು ಕ್ಲಿಯರ್ ಮಾಡಬೇಕು. ಎರಡು ಕ್ವಾಲಿಟಿ ಅಕ್ಕಿ ಬರುತ್ತಿದ್ದು, ಒಂದು ಬೇಯುತ್ತಿದೆ. ಮತ್ತೊಂದು ಬೇಯುತ್ತಿಲ್ಲ. ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.

ತಾಲೂಕಿನ ಜನರ ಸಮಸ್ಯೆಗೆ ಸ್ಪಂದಿಸದೇ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಬಸ್ಸಿನ ಸೌಲಭ್ಯವಿಲ್ಲದೇ ಪರದಾಡುತ್ತಿದ್ದಾರೆ. ಸಭಾಧ್ಯಕ್ಷರಿಗೆ ತಿಳಿಸಿದರೂ ಸ್ಪಂದನೆಯಿಲ್ಲ. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಶಿನ್ ಇಲ್ಲದೇ ಒಂದು ತಿಂಗಳಿನಿಂದ ರೋಗಿಗಳು ಸಾಗರ-ಶಿರಸಿಗೆ ಹೋಗಿ ಡಯಾಲಿಸಿಸ್ ಮಾಡಿಸಿಕೊಂಡಿದ್ದಾರೆ. ಟಿ.ಎಚ್.ಓ ಹಾಗೂ ಡಿ.ಎಚ್.ಓ ಅವರಿಗೆ ಪೋನ್ ಮಾಡಿ ಧರಣಿ ಕುಳಿತುಕೊಳ್ಳುವುದಾಗಿ ಎಚ್ಚರಿಕೆ ನೀಡಿದ ಮೇಲೆ ಬೇರೆ ಕಡೆಯಿಂದ ಡಯಾಲಿಸಿಸ್ ಯಂತ್ರ ತಂದು ಅಳವಡಿಸಿದ್ದಾರೆ. ಇನ್ನು ಆಸ್ಪತ್ರೆಯಲ್ಲಿ ರಾತ್ರಿ ವೈದ್ಯರು ಸಿಗುವುದೆ ಕಷ್ಟವಾಗಿದೆ. ಇಷ್ಟೆಲ್ಲ ಸಮಸ್ಯೆಯಿದ್ದರೂ ಸಹ ಕ್ಷೇತ್ರದ ಶಾಸಕರು ಯಾವುದಕ್ಕೂ ಸ್ಪಂದಿಸದೇ ಕೇವಲ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದರು.

ಲೋಕೋಪಯೋಗಿ ಇಲಾಖೆ ರಸ್ತೆಗಳಲ್ಲಿ ಚರಂಡಿಯಿಲ್ಲದೇ ನೀರು ರಸ್ತೆ ಮೇಲೆ ಹರಿದು ಸಂಪೂರ್ಣ ಹೊಂಡಗಳಾಗಿವೆ. ಅಧಿಕಾರಿಗಳನ್ನು ಕೇಳಿದರೆ ಕಳೆದ ವರ್ಷದ ನಿರ್ವಹಣೆಯ ಹಣವೇ ಬಂದಿಲ್ಲ ಎನ್ನುತ್ತಾರೆ. ಶಾಸಕರಂತೂ ಜನರ ಯಾವ ಸಮಸ್ಯೆಯನ್ನು ಸಹ ಆಲಿಸುತ್ತಿಲ್ಲ. ಇಂತಹ ಬೇಜವಾ ಬ್ದಾರಿ ಶಾಸಕರು ಹಾಗೂ ಸಭಾಧ್ಯಕ್ಷರನ್ನು ಎಂದೂ ಕಂಡಿಲ್ಲ. ಶಾಸಕರು ಜನಸ್ಪಂದನ ಸಭೆ ನಡೆಸಿ ಜನರ ಅಹವಾಲು ಆಲಿಸಬೇಕು. ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಪಾಲರಿಗೆ ಮನವಿ ಮಾಡಲಾಗುವುದು ಎಂದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಬಾಲಕೃಷ್ಣ ನಾಯ್ಕ, ಪ್ರಧಾನ ಕಾರ್ಯದರ್ಶಿ ಮುನಾವರ್ ಗುರಕಾರ್, ಕಾರ್ಮಿಕ ವಿಭಾಗದ ರಾಜು ನಾಯ್ಕ ಕತ್ತಿ, ಪ್ರಮುಖರಾದ ಮಲ್ಲಿಕಾರ್ಜುನ, ಗಣಪತಿ ಮಡಿವಾಳ ಉಪಸ್ಥಿತರಿದ್ದರು.

ಮಳೆಗಾಲ ಬರುತ್ತದೆ ಎಂದು ತಿಳಿದಿದ್ದರೂ ಸಹ ಕಾಮಗಾರಿ ಅಪೂರ್ಣ ಗೊಳಿಸಿರುವುದು ಜನರ ಆರೋಪ ಕ್ಕೆ ಕಾರಣವಾಗಿದೆ
ರಸ್ತೆಯಿಂದ ಮನೆಗೆ ಬಸ್ ನಿಲ್ದಾಣ ಗಳಿಗೆ ತೆರಳಲು ಅನಾನುಕೂಲತೆ ಉಂಟಾಗಿದ್ದು ಸ್ಥಳೀಯ ಜನಪ್ರತಿನಿದಿನಗಳು, ಅಧಿಕಾರಿಗಳ ವಿರುದ್ಧ ಆರೋಪ ವ್ಯಕ್ತಪಡಿಸಿ ಕೂಡಲೇ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಸಾರ್ವಜನಿಕ ರಿಗೆ ತೊಂದರೆ ಆಗದಂತೆ ವ್ಯವಸ್ಥಿತ ಕ್ರಮ ಕೈ ಗೊಳ್ಳಬೇಕು ಎಂದು ಆಗ್ರಹ ಮಾಡಿದ್ದಾರೆ

