

ಪ್ರಜಾವಾಣಿ ಬಿಟ್ಟರೆ ಕನ್ನಡದಲ್ಲಿ ಮತ್ತ್ಯಾವ ಪತ್ರಿಕೆಯೂ ಓದಲು ಅರ್ಹವಲ್ಲ ಎಂದು ವಿಶ್ಲೇಶಿಸಿರುವ ಹಿರಿಯ ಪತ್ರಕರ್ತ ಶಶಿಧರ ಭಟ್ ಓದುಗರು ಮನಸ್ಸು ಮಾಡಿದರೆ ಒಳ್ಳೆಯ ಪತ್ರಿಕೆಯನ್ನು ಬೆಳೆಸಬಹದುಎಂದರು. ಸಿದ್ಧಾಪುರ ಬಾಲಭವನದಲ್ಲಿ ನಡೆದ ಆಧಾರ ಸಂಸ್ಥೆ ಆಯೋಜಿಸಿದ್ದ ಬರೆದಂತೆ ಬದುಕಿದ ರವೀಂದ್ರಭಟ್ ಬದುಕು ಬರಹ,ಬದ್ಧತೆ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರನ್ನು ಸನ್ಮಾನಿಸಿ ಮಾತನಾಡಿದ ಅವರು ಆಧುನಿಕ ವ್ಯವಸ್ಥೆ ಪರಸ್ಫರರ ಮೇಲೆ ಅನುಮಾನ ಹುಟ್ಟುಹಾಕುತ್ತಿದೆ ಸಾರ್ವಜನಿಕರನ್ನು ನಿರ್ಧೇಶಿಸಬೇಕಿದ್ದ ಮಾಧ್ಯಮಗಳು ಜನಸಾಮಾನ್ಯರ ದೂಷಣೆ,ಕೋಪಕ್ಕೆ ಗುರಿಯಾಗಿರುವುದು ವಿಪರ್ಯಾಸ ಎಂದರು.

ಕಾರ್ಯಕ್ರಮದಲ್ಲಿ ದಿ. ರವೀಂದ್ರಭಟ್ ರ ಬದ್ಧತೆ ಬಗ್ಗೆ ಮಾತನಾಡಿದ ಸಮಾಜಮುಖಿ ಕನ್ನೇಶ್ ಕೋಲಶಿರ್ಸಿ ಜಿಯೋ ಏಕಸ್ವಾಮ್ಯತ್ವದ ಬಗ್ಗೆ ವಿರೋಧಿಸಿದ್ದ ರವೀಂದ್ರ ಭಟ್ ಸ್ಥಿತಪ್ರಜ್ಞೆಯಿಂದ,ಪ್ರಾಮಾಣಿಕವಾಗಿ ಬದ್ಧತೆಯಿಂದ ಸೇವೆ ಸಲ್ಲಿಸಿ ಹೊಸ ಪೀಳಿಗೆಗೆ ಮಾದರಿಯಾಗಿದ್ದರು ಎಂದು ಪ್ರಶಂಸಿಸಿದರು.

ರವೀಂದ್ರ ಭಟ್ ರ ಬರಹದ ಬಗ್ಗೆ ಮಾತನಾಡಿದ ಪ್ರಜಾವಾಣಿ ಪತ್ರಿಕೆಯ ಸಂಪಾದಕ ರವೀಂದ್ರಭಟ್ ಐನಕೈ ಕನ್ನಡದಲ್ಲಿ ಶುದ್ಧವಾಗಿ ಬರೆಯಲು ಬಾರದ ಹೊಸ ಪೀಳಿಗೆಯ ನಡುವೆ ರವೀಂದ್ರಭಟ್ ತಾಲೂಕಾ ವರದಿಗಾರರಾಗಿ ಪತ್ರಿಕಾಲಯದಲ್ಲಿ ತಿದ್ದಲು ಅವಕಾಶ ನೀಡದ ಸುಧೀರ್ಘ ಕಾಲ ಪ್ರಜಾವಾಣಿಯ ಪ್ರಮುಖ ವರದಿಗಾರರಾಗಿ ಛಾಪು ಮೂಡಿಸಿದ್ದರು ಎಂದರು.

ಕಾರ್ಯಕ್ರಮಕ್ಕೆ ಪತ್ರಕರ್ತ ದಿವಾಕರ ನಾಯ್ಕ ಸ್ವಾಗತಿಸಿದರು. ಆಧಾರ ಸಂಸ್ಥೆಯ ಅಧ್ಯಕ್ಷ ನಾಗರಾಜ್ ನಾಯ್ಕ ಮಾಳ್ಕೋಡು ಅಧ್ಯಕ್ಷತೆ ವಹಿಸಿ ಪ್ರಾಸ್ಥಾವಿಕ ಮಾತನಾಡಿದರು. ಸುರೇಶ್ ಮಡಿವಾಳ ನಿರೂಪಿಸಿದರು. ಗಣಪತಿ ಹುಲಿಮನೆ ವಂದಿಸಿದರು.

ಈ ಕಾರ್ಯಕ್ರಮದ ಅಂಗವಾಗಿ ಹಿರಿಯ ಪತ್ರಕರ್ತರಾದ ಶಿವಾನಂದ ಹೊನ್ನೆಗುಂಡಿ ಮತ್ತು ಜಿ.ಜಿ. ಹೆಗಡೆ ಬಾಳಗೋಡು ರನ್ನು ಸನ್ಮಾನಿಸಿ ಗೌರವಿಸಲಾಯಿತು. ರವೀಂದ್ರ ಭಟ್ ಬಳಗುಳಿಯವರ ಪುತ್ರ ಕಾರ್ತಿಕ ಉಪಸ್ಥಿತರಿದ್ದರು.
- ಅಂತರ್ಮುಖಿಯಾದ ನನ್ನ ತಮ್ಮ ಅನೇಕ ವಿಷಯ,ವಿಚಾರಗಳನ್ನು ಅಂತರಂಗದಲ್ಲಿಟ್ಟುಕೊಂಡು ಬೇಯುತ್ತಾ ಬದುಕು ಸಾಗಿಸಿದರು.ಅವರು ನನ್ನ ನಡುವೆ ಸಹೋದರತ್ವಕ್ಕಿಂತ ಸ್ನೇಹಶೀಲತೆ ವಿಶೇಶವಾಗಿತ್ತು.-ಶಶಿಧರ ಭಟ್
- ಮೂರುವರ್ಷ ಅರೆಕಾಲಿಕ ವರದಿಗಾರರಾಗಿ ದುಡಿಯುವುದು ಅಪರೂಪವಾಗಿರುವ ಈ ದಿನಗಳಲ್ಲಿ ಮೂವತ್ತು ವರ್ಷ ತಾಲೂಕಾ ವರದಿಗಾರರಾಗಿ ಸೇವೆ ಸಲ್ಲಿಸಿದ ರವೀಂದ್ರ ಭಟ್ ಬಳಗುಳಿ ಅಪರೂಪದ ಸರಳ,ಸಜ್ಜನ ಬದ್ಧತೆಯ ಪತ್ರಕರ್ತರಾಗಿ ಪತ್ರಿಕೆಯ ಆಸ್ತಿಯಾಗಿದ್ದರು.
- ಈ ಕಾರ್ಯಕ್ರಮ ನನ್ನ ಬರವಣಿಗೆಯ ದಿನಗಳನ್ನು ನೆನಪಿಸಿತು.-ಶಿವಾನಂದ ಹೊನ್ನೆಗುಂಡಿ
- ವಿ.ಜೆ. ಬಟ್ಟರು ನನ್ನ ಗುರುಗಳಾಗಿದ್ದರು ಹಾಗಾಗಿ ಶಶಿಧರ ಮತ್ತು ರವೀಂದ್ರ ಭಟ್ಟರ ಮೇಲೆ ನನಗೆ ವಿಶೇಶ ಪ್ರೀತಿ ಇತ್ತು.-ಜಿ.ಜಿ. ಹೆಗಡೆ ಬಾಳಗೋಡು
