ಭಯೋತ್ಪಾದಕ ಚಟುವಟಿಕೆಗಳಲ್ಲಿ ಸಿಕ್ಕಿಬಿದ್ದ ವ್ಯಕ್ತಿಗಳ ಜೊತೆ ಬಿಜೆಪಿ ನಾಯಕರ ನಿಕಟ ಸಂಪರ್ಕ ಇದೆ ಎಂದು ಕಾಂಗ್ರೆಸ್ ವಕ್ತಾರ ಅಜಯ್ ಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ನವದೆಹಲಿ: ಭಯೋತ್ಪಾದಕ ಚಟುವಟಿಕೆಗಳಲ್ಲಿ ಸಿಕ್ಕಿಬಿದ್ದ ವ್ಯಕ್ತಿಗಳ ಜೊತೆ ಬಿಜೆಪಿ ನಾಯಕರ ನಿಕಟ ಸಂಪರ್ಕ ಇದೆ ಎಂದು ಕಾಂಗ್ರೆಸ್ ವಕ್ತಾರ ಅಜಯ್ ಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉದಯಪುರದಲ್ಲಿ ನಡೆದ ಕನ್ಹಯ್ಯಾ ಲಾಲ್ ಅವರ ಭೀಕರ ಹತ್ಯೆ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಮೊಹಮ್ಮದ್ ರಿಯಾಜ್ ಅಟ್ಟಾರಿ ಬಿಜೆಪಿ ಕಾರ್ಯಕರ್ತ ಅಂತಾ ಗೊತ್ತಾಗಿದೆ. ಸ್ಥಳೀಯ ಹಿರಿಯ ಮುಖಂಡರೊಬ್ಬರ ಸಮ್ಮುಖದಲ್ಲಿ ಬಿಜೆಪಿಗೆ ಮೊಹಮ್ಮದ್ ರಿಯಾಜ್ ಅಟ್ಟಾರಿ ಸೇರ್ಪಡೆಯಾಗಿದ್ದ. ರಾಜಸ್ಥಾನ ಬಿಜೆಪಿಯ ವಿಪಕ್ಷದ ನಾಯಕ ಗುಲಾಬ್ ಚಂದ್ ಕಟಾರಿಯಾ ಅವರ ಅಳಿಯ ಅಟ್ಟಾರಿ ಅವರನ್ನು ನೇಮಿಸಿಕೊಂಡಿದ್ದರು. ಈ ಬಗ್ಗೆ ಮಾಧ್ಯಮಗಳು ಸಹ ವರದಿ ಮಾಡಿವೆ ಎಂದು ತಿಳಿಸಿದರು.
ಬಿಜೆಪಿಯ ಹಿರಿಯ ನಾಯಕರ ಸಮ್ಮುಖದಲ್ಲಿ ಅವರು ಪಕ್ಷದ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಇತ್ತೀಚೆಗಷ್ಟೇ ಸ್ಥಳೀಯರಿಂದ ಲಷ್ಕರ್-ಎ-ತೊಯ್ಬಾ ಉಗ್ರ ತಾಲಿಬ್ ಹುಸೇನ್ ಷಾ ಸೆರೆ ಸಿಕ್ಕಿದ್ದ. ಈತ ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ಪದಾಧಿಕಾರಿ ಅಂತಾ ತಿಳಿದುಬಂದಿದೆ. ತಾಲಿಬ್ ಹುಸೇನ್ ಶಾ ಈ ಹಿಂದೆ ಗೃಹ ಸಚಿವ ಅಮಿತ್ ಶಾ ಜೊತೆಯೂ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲ ಇತರೆ ಹಿರಿಯ ಬಿಜೆಪಿ ನಾಯಕರೊಂದಿಗೆ ಫೋಟೋಗಳಲ್ಲಿ ಕಾಣಿಸಿಕೊಂಡಿದ್ದರು. ಈ ಬಗ್ಗೆ ಆರೋಪಿ ಜೊತೆ ಬಿಜೆಪಿ ಲೀಡರ್ ಗಳ ಫೋಟೋ ಇರೋ ಸ್ಕ್ರೀನ್ ಶಾಟ್ ಗಳನ್ನ ಬಹಿರಂಗಪಡಿಸಿದ್ದೇನೆ. ಬಂಧನಕ್ಕೊಳಗಾದಾಗ ಈತ ಅಮರನಾಥ ಯಾತ್ರೆ ಮೇಲೂ ದಾಳಿ ನಡೆಸಲು ಈತ ಯೋಜನೆ ರೂಪಿಸಿದ್ದ ಎಂದು ಹೇಳಿದರು.
ಅಮರಾವತಿಯ ಕೆಮಿಸ್ಟ್ ಉಮೇಶ್ ಕೋಲ್ಹೆ ಹತ್ಯೆಯ ಮಾಸ್ಟರ್ ಮೈಂಡ್ ಇರ್ಫಾನ್ ಖಾನ್ ಆಗಿದ್ದಾನೆ. ಈತ ಸಂಸದ ನವನೀತ್ ರಾಣಾ ಮತ್ತು ಅವರ ಪತಿ ರವಿ ರಾಣಾ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ. ರಾಣಾ ಮತ್ತು ಬಿಜೆಪಿ ನಡುವಿನ ಸಂಬಂಧ ಎಲ್ಲರಿಗೂ ತಿಳಿದಿದೆ. ಇರ್ಫಾನ್ ಖಾನ್ ಅವರು ರಾಣಾ ಪರ ಪ್ರಚಾರ ನಡೆಸಿ ಮತ ಯಾಚಿಸಿದ್ದಾನೆ. 2017ರಲ್ಲಿ ಬಿಜೆಪಿ ಐಟಿ ಸೆಲ್ ಸದಸ್ಯ ದ್ರುವ ಸಕ್ಸೇನಾ ಸೇರಿ 10 ಮಂದಿಯನ್ನು ಬಂಧಿಸಲಾಗಿತ್ತು.
ಭಯೋತ್ಪಾದಕ ನಿಗ್ರಹ ದಳ ದಾಳಿ ನಡೆಸಿತ್ತು. ಇವರ ವಿರುದ್ಧ ಕಾನೂನುಬಾಹಿರ ಟೆಲಿಫೋನ್ ಎಕ್ಸ್ ಚೇಂಜ್ ಹೊಂದಿದ್ದ ಆರೋಪ ಇದೆ. ಈ ಬಗ್ಗೆ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚವ್ಹಾಣ್ ಕೂಡ ಫೋಟೋ ವೈರಲ್ ಮಾಡಿದ್ದರು. ಎರಡು ವರ್ಷದ ಬಳಿಕ ಬಲರಾಮ್ ಸಿಂಗ್ ಎಂಬಾತನನ್ನ ಬಂಧಿಸಿದ್ದರು. ಈತ ಮಧ್ಯಪ್ರದೇಶದ ಬಜರಂಗದಳದ ಮುಖ್ಯಸ್ಥ. ಭಯೋತ್ಪಾದಕರಿಗೆ ಹಣ ಒದಗಿಸಿದ ಆರೋಪ ಈತನ ಮೇಲಿದೆ ಎಂದು ಅಜಯ್ ಕುಮಾರ್ ತಿಳಿಸಿದರು. (kpc)