

34ನೇ ವರ್ಷಕ್ಕೆ ಕಾಲಿಟ್ಟ ಭುವನೇಶ್ವರಿ ತಾಳಮದ್ದಳೆ ಕೂಟ.
ಸಿದ್ದಾಪುರ. ತಾಲೂಕಿನ ಗುಂಜುಗೋಡು ಜಯರಾಮ್ ಭಟ್ ಅವರ ಮನೆಯಲ್ಲಿ ರವಿವಾರ ಪ್ರಥಮ ಏಕಾದಶಿಯ ನಿಮಿತ್ತ ತಾಳಮದ್ದಳೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಭುವನಗಿರಿ ಭುವನೇಶ್ವರಿ ದೇವಾಲಯದ ಪ್ರಧಾನ ಅರ್ಚಕ ವೇ.ಮೂ. ಶ್ರೀಧರ ಭಟ್ ಮುತ್ತಿಗೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಭುವನಗಿರಿಯ ಭುವನೇಶ್ವರಿ ತಾಯಿ ಹೆಸರಿನಲ್ಲಿ 33 ವರ್ಷಗಳ ಹಿಂದೆ ಸ್ಥಾಪಿತವಾದ ಭುವನೇಶ್ವರಿ ತಾಳಮದ್ದಳೆ ಕೂಟ 34ನೇ ವರ್ಷಕ್ಕೆ ಕಾಲಿಡುತ್ತಿರುವುದು ಹರ್ಷದ ಸಂಗತಿ .ಈ ಕೂಟವು ಇದೇ ರೀತಿ ಮುಂದುವರೆಯಲಿ ಎಂದು ಆಶಿಸಿದರು . ನಂತರ ಕಚ ದೇವಯಾನೆ ಎಂಬ ಆಖ್ಯಾನದ ತಾಳಮದ್ದಳೆ ನಡೆಯಿತು.

ಹಿಮ್ಮೇಳದಲ್ಲಿ ಭಾಗವತರಾಗಿ ತ್ರಯಂಬಕ ಹೆಗಡೆ ಇಡುವಾಣಿ ಮತ್ತು ಮಾಧವ ಭಟ್ ಕೊಳಗಿ ಮಧುರ ಕಂಠದ ಗಾಯನದಿಂದ ರಂಜಿಸಿದರು. ಮದ್ದಳೆ ವಾದಕರಾಗಿ ಮಂಜುನಾಥ ಹೆಗಡೆ ಕಂಚಿಮನೆ ಉತ್ತಮ ಸಾತ್ ನೀಡಿದರು. ಅರ್ಥಧಾರಿಗಳಾಗಿ ಶ್ರೀಧರ ಭಟ್ ಮುತ್ತಿಗೆ (ಇಂದ್ರ) ಎಂ.ಕೆ. ಹೆಗಡೆ ಹಳದೋಟ (ಬೃಹಸ್ಪತಿ) ವಿ.ಶೇಷಗಿರಿ ಭಟ್ಟ ಗುಂಜಗೋಡು (ಕಚ ),ಜಿ.ಕೆ. ಭಟ್ ಕಶಿಗೆ( ಶುಕ್ರಾಚಾರ್ಯ), ಗಣಪತಿ ಹೆಗಡೆ ಗುಂಜಗೋಡ( ದೇವಯಾನೆ), ಎಂ.ಕೆ.ನಾಯ್ಕ ಹೊಸಳ್ಳಿ (ವೃಷಪರ್ವ), ವಿನೀತ ಹೆಗಡೆ ಗುಂಜಗೋಡ (ನಾರದ), ಜೈರಾಮ ಭಟ್ಟ ಗುಂಜಗೋಡ (ದೇವಯಾನೆ ಮತ್ತು ಧೂಮಕೇತು), ಪಾತ್ರಗಳನ್ನು ಸುಂದರವಾಗಿ ನಿರ್ವಹಿಸಿದರು. ಜೈರಾಮ ಭಟ್ಟ ಸ್ವಾಗತಿಸಿ, ವಂದಿಸಿದರು.

ಸಿದ್ದಾಪುರ: ಹೊಸೂರು ಶ್ರೀ ಬಂಕೇಶ್ವರ ಪ್ರೌಢಶಾಲೆಯಲ್ಲಿ 2022-23 ನೇ ಸಾಲಿನ 8ನೇ ತರಗತಿಯ ವಿದ್ಯಾರ್ಥಿಗಳ ಸ್ವಾಗತ ಹಾಗೂ ಆರ್ಥಿಕ ಸಾಕ್ಷರತಾ ಕಾರ್ಯಕ್ರಮ ನಡೆಯಿತು
ವಿಜಯ ಆರ್ಥಿಕ ಸಾಕ್ಷರತಾ ಕೇಂದ್ರಸಮಾಲೋಚಕರಾದ ಶಿವಶಂಕರ್ ಎನ್. ಕೆ.ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳು ಮೋಬೈಲ್ ಗಳನ್ನು ಹೆಚ್ಚೆಚ್ಚು ಬಳಸುವುದಕ್ಕಿಂತ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಓದಿನ ಕಡೆಗೆ ಹೆಚ್ಚಿನ ಗಮನವನ್ನು ನೀಡಿ ಜೀವನದ ಮುಂದಿನ ಗುರಿ ಮುಟ್ಟುವಲ್ಲಿ ಪ್ರಯತ್ನಿಸಿಲ ರಾಗಬೇಕು ಎಂದ ಅವರು
ವಿದ್ಯಾರ್ಥಿಗಳಿಗೆ ಉಳಿತಾಯ ಮತ್ತು ಶೈಕ್ಷಣಿಕ ಸಾಲ ಸೌಲಭ್ಯಗಳು ಉದ್ಯೋಗ ತರಬೇತಿಗಳು ಸೇರಿದಂತೆ ಆರ್ಥಿಕ ಸಾಕ್ಷರತೆ ಕುರಿತು ಮಾಹಿತಿಯನ್ನು ನೀಡಿದರು.
ವಿದ್ಯಾರ್ಥಿಗಳಿಗೆ ಗುಲಾಬಿ ಹೂವು ನೀಡುವುದರ ಮೂಲಕ ಸ್ವಾಗತಿಸಲಾಯಿತು
ಅಧ್ಯಕ್ಷ ತೆ ವಹಿಸಿದ್ದ ಮುಖ್ಯೋಧ್ಯಾಪ ಕರಾದ ಲೊಕೇಶ ನಾಯ್ಕ ಮಾತನಾಡಿ ಶಾಲೆಯ ನಿಯಮದಂತೆ ನಡೆದು ಮಾದರಿಯಾಗಬೇಕು.ನಿಮ್ಮ ಆದರ್ಶ ಇತರರು ಪಾಲಿಸುವಂತಾಗಬೇಕು. ಮಕ್ಕಳು ಪಠ್ಯ ಪಠ್ಯೇತರ ಚಟುವಟಿಕೆ ಯಲ್ಲಿ ತೋಡಗಿಕೊಳ್ಳಬೇಕು. ಶಾಲೆಯ ಹಿರಿಮೆ ಹೆಚ್ಚಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ದೇವೇಂದ್ರ ನಾಯ್ಕ, ರವೀಂದ್ರ ನಾಯ್ಕ, ಶ್ರೀ ಮತಿ ಕಮಲಾಕ್ಷಿ ಆರ್, ಉಪಸ್ಥಿತರಿದ್ದರು.
ಕುಮಾರಿ ನಯನ ಸಂಗಡಿಗರು ಪ್ರಾರ್ಥನೆ ಗೀತೆಹಾಡಿದರು. ಶಿಕ್ಷಕರಾದ ಟಿ ಸಿ ನಾಯ್ಕ ಸ್ವಾಗತಿಸಿದರು .ಎಂ ಬಿ ನಾಯ್ಕ ನಿರೂಪಿಸಿದರು ವಿ ಟಿ ನಾಯ್ಕ ವಂದಿಸಿದರು.

