ಪ್ರಜಾವಾಣಿಯ ವ್ಯಾಮೋಹದಲ್ಲಿ….
ಪ್ರಜಾವಾಣಿ ಮಾಲಿಕರು ನಾನು ಹುಟ್ಟಿದ ಜಾತಿಯವರು ಎಂದು ನನಗೆ ಪ್ರಜ್ಞಾಪೂರ್ವಕವಾಗಿ ತಿಳಿಯುವ ಹೊತ್ತಿಗೆ ನಾನು ಸ್ನಾತಕೋತ್ತರ ಪದವಿ ಮುಗಿಸಿ ಏಳೆಂಟು ವರ್ಷವೇ ಕಳೆದಿತ್ತು. ಪಿಯುಸಿ ಪದವಿ ಸಾಗರ ಮುಗಿಸಿ ಕುವೆಂಪು ಯೂನಿವರ್ಸಿಟಿಯಲ್ಲಿ ಎಂ ಎ ಮಾಡುವಾಗಲೂ ಪ್ರಜಾವಾಣಿ ನಿತ್ಯ ಓದಲೇಬೇಕು. ಅದರ ಅಂಕಣ, ವರದಿ, ವಿಶೇಷ ವರದಿ. ವಿಶ್ಲೇಷಣೆ ಮತ್ತು ಸಿನೆಮಾ ಪುರವಾಣಿ, ಸಾಪ್ತಾಹಿಕ ಮಯೂರ ಕಥೆಗಳ ಜತೆ ಮೈಸೂರು ಪ್ರಿಂಟರ್ಸ್ ಪ್ರಕಟಣೆ ಅಂದರೆ ಬಿಡದ ವ್ಯಾಮೋಹ.
ಸ್ನಾತಕೋತ್ತರ ಪದವಿ ಮುಗಿಸಿ ಉಪ ಸಂಪಾದಕ ಹುದ್ದೆ ಗೆ ಅರ್ಜಿ ಸಲ್ಲಿಸಿದಾಗ ಯಾರೋ ನನ್ನ ಜಾತಿ ಕೇಳಿ ಅಷ್ಟೆಲ್ಲಾ ಯಾಕೆ ತಲೆಬಿಸಿ ಹೋಗಿ ಬಂಗಾರಪ್ಪನವರ ಕಾಣು ಎಂದ ಸಲಹೆ ಮೇರೆಗೆ ರಾತ್ರೋ ರಾತ್ರಿ ಬಸ್ಸು ಹತ್ತಿ ಅವರ ಆಪ್ತರಾಗಿದ್ದ ಬೇಳೂರು ಗೋಪಾಲಕೃಷ್ಣ ಭೇಟಿಯಾಗಿ ಬೆಳಗ್ಗೆ ಸ್ವತಃ ಬೇಳೂರು ಬಂಗಾರಪ್ಪ ದರ್ಶನ ಮಾಡಿಸಿದ್ದರು. ಬಂಗಾರಪ್ಪನವರು ಹಾಗೆ ವಿದ್ಯಾರ್ಹತೆ ಊರು ಕೇಳಿ (ಜಾತಿ ಕೇಳಲಿಲ್ಲ) ಬೆನ್ನು ತಟ್ಟಿ ತನ್ನ ಮಗ ಮಧು ಬಂಗಾರಪ್ಪನವರಿಗೆ ಮಾತಾಡಲು ಸೂಚನೆ ನೀಡಿದರು. ಅದೊಂದು ಪುಳಕದ ಹೊತ್ತು ಕೂಡಾ. ದಾವಣಗೆರೆ ಲಿಖಿತ ಪರೀಕ್ಷೆ ಬರೆದು ಇಂಟರ್ವ್ಯೂ ಹರಿಪ್ರಸಾದ್ ಸರ್ ಎದುರು ಕೂತಾಗ ನನ್ನ ಲಿಖಿತ ಪರೀಕ್ಷೆ ಬರಹ ನೋಡಿ ಖುಷಿ ಆಗಿದ್ದರು. ಆದರೆ ನನ್ನ ಇಂಗ್ಲೀಷ್ ಬಡತನ ಕಾರಣ ಆ ಹುದ್ದೆ ಸಿಗಲಿಲ್ಲ. ನಿರಾಶೆಯಿಂದ ಮನೆ ಸೇರಿದೆ.
ಪ್ರಜಾವಾಣಿ ಪ್ರೀತಿ ಹೋಗಲಿಲ್ಲ.
ಒನ್ ವೇ ಲವ್ ರೀತಿಯಲ್ಲಿಯೇ ಮುಂದಕ್ಕೆ ಸಾಗಿತ್ತು. ಅದೇ ಹೊತ್ತಿನಲ್ಲಿ ದ್ವೀಪದಲ್ಲಿ ನಾವು “ನಮ್ಮೂರಿಗೆ ಸಾರಾಯಿ ಬೇಡ” ಹೋರಾಟ ಆರಂಭಿಸಿ ವರ್ಷಗಟ್ಟಲೆ ಅದು ಸಾವಿರಾರು ಸಂಖ್ಯೆ ಬೆಂಬಲ ಜತೆ ಮುನ್ನಡೆದು ಅಬಕಾರಿ ಗುತ್ತಿಗೆದಾರರು ನಮಗೆ ಹಲ್ಲೆ ಮಾಡಿ ದೊಡ್ಡ ಸುದ್ದಿಯಾಗಿ ಸಾಗರ ಶಿವಮೊಗ್ಗ ದಲ್ಲಿ ಪ್ರತಿಭಟನೆ ನಡೆವಾಗ ಎಲ್ಲಾ ಪತ್ರಿಕೆಗಿಂತ ಪ್ರಜಾವಾಣಿ ಜನಪರ ಹೋರಾಟ ಸ್ಪಷ್ಟ ನಿಲುವಲ್ಲಿ ಬೆಂಬಲಿಸಿತು. ಗೆಳೆಯ Raghavendra MSagar ಸಾಗರ ದಿಂದ ಸುದ್ದಿ ವಿಶ್ಲೇಷಣೆ ಜತೆ ಮಿತ್ರರಾಗಿ ತುಮರಿ ವರದಿಗಾರ ಹುದ್ದೆ ಶಿಪಾರಸ್ಸು ಮಾಡಿ ನನ್ನ ವರದಿಗಾರ ಆಗುವಂತೆ ನೋಡಿಕೊಂಡರು.
ನಾನು ಪ್ರಜಾವಾಣಿ ಬಳಗ ಸೇರಿಕೊಂಡೆ.
ಇವೆಲ್ಲ ಆಗಿ 17 ವರ್ಷವೆ ಕಳೆದಿದೆ
ಪ್ರಜಾವಾಣಿ ವರದಿಗಾರ ಇರುವಾಗಲೇ ಬಂಗಾರಪ್ಪನವರ ಪರ ಮೂರು ಚುನಾವಣೆ ಪ್ರಚಾರದಲ್ಲೀ ಅವರ ಜತೆಗೆ ದ್ವೀಪದ think tank ನಲ್ಲಿ ನಾನಿದ್ದೆ. ಕಾಗೋಡು ತಿಮ್ಮಪ್ಪನವರ ಜನಪರ ಹೋರಾಟ ಮತ್ತು ಚುನಾವಣೆ ಹೊತ್ತಿನಲ್ಲು ಕೂಡ ತಾಂತ್ರಿಕವಾಗಿ ಜತೆ ಇದ್ದೆ.
ಆದರೆ ವರದಿಗಾರನಾಗಿ ರಾಜಿ ಇಲ್ಲದೇ ದ್ವೀಪದ ಸಮಸ್ಯೆಗಳ ಮುಖವಾಣಿಯಾಗಿ ಪತ್ರಿಕೆ ವರದಿ ನೀಡುವುದಕ್ಕೆ ಪ್ರಜಾವಾಣಿ ಬಳಗ ನೈತಿಕ ಬಲ ತುಂಬಿತು. ನಾನೂ ಬರೆದೆ. ನನ್ನ ಪ್ರೀತಿಯ ಪ್ರಜಾವಾಣಿ ಅಲ್ಲವೆ..?
2015 ರಲ್ಲಿ ನಾನು ತುಮರಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ನಾದಾಗ ಪತ್ರಿಕೆ ನಿಯಮ ಪ್ರಕಾರ ಸ್ವಯಂ ರಾಜೀನಾಮೆ ನೀಡಿ ಈಚೆಗೆ ಪುನಃ ಖಾಲಿಯಾದ ತುಮರಿ ಪ್ರಜಾವಾಣಿ ಹುದ್ದೆಗೆ ಅರ್ಜಿ ಹಾಕಿ ಕಾಯುತ್ತಾ ಇದ್ದರೆ ನನಗೆ ಕನಿಷ್ಠ ಮಾಹಿತಿಯು ನೀಡದೇ ಪ್ರಜಾವಾಣಿ ಆಯ್ಕೆ ಪ್ರಕ್ರಿಯೆ ಮುಗಿಸಿತ್ತು.
ಪ್ರಜಾವಾಣಿ ಈ ನಡೆ ಬಹಳ ಬೇಸರ ತಂದಿತು. ದಶಕ ಕಾಲ ಕೆಲಸ ಮಾಡಿದ ಪತ್ರಿಕೆಯ ವರದಿಗಾರಿಕೆ ತಪ್ಪಿಸಲು ಕಾಣದ ಕೈಗಳು ಕೆಲಸ ಮಾಡಿದ್ದವು. ಹಾಗೆ ತಪ್ಪಿಸಲು ಅವರಿಗೆ ಇದ್ದ ಕಾರಣದಲ್ಲೀ “ಪ್ರಜಾವಾಣಿ” ನನ್ನ ಕೈ ಸೇರಲೇ ಬಾರದು ಎನ್ನುವ ಜನರ ದ್ವನಿ ತುಳಿವ ಪಟ್ಟಬದ್ದ ಹಿತಾಸಕ್ತಿ, ಒಂದು ಪ್ರಮಾಣದಲ್ಲಿ ಜಾತಿಯ ಹೆಸರಿನ ಸ್ಥಳೀಯ ಬಿಕ್ಕಟ್ಟು, ವಯಕ್ತಿಕ ಈರ್ಷೆ, ಒಳ ಏಟು ಕೊಡುವ ಸಣ್ಣತನ ಕಾರಣ ಆಯ್ತು.
ಪ್ರಜಾವಾಣಿ ಕೈ ತಪ್ಪಿಸಿದರು.
ಪ್ರಜಾವಾಣಿಯು ಬದಲಾಗಿತ್ತಾ…?
ಹಾಗಂತ ನಮ್ಮ ಜನರ ಪರ ದ್ವನಿಯನ್ನು, ಜನ ದ್ವನಿಯಾಗುವ ಬದ್ಧತೆ ಕಸಿದು ಕೊಳ್ಳಲು ಸಾಧ್ಯವೇ..? ಮೊನ್ನೆ ನನ್ನ truth ನಲ್ಲಿ ಆಡಗಳಲೇ ಗ್ರಾಮದ ಸ್ಥಳ ಭೇಟಿ ವರದಿ ನೀಡಿದೆ. ಪ್ರಜಾವಾಣಿ ಜಿಲ್ಲಾ ವರದಿಗಾರರಾದ ವೆಂಕಟೇಶ್ ಸರ್ ಕರೆ ಮಾಡಿ ಪೋಟೊ ಮತ್ತು ಹೇಳಿಕೆಗಳನ್ನ ಬಳಸಿಕೊಳ್ಳುವುದಾಗಿ ತಿಳಿಸಿದರು. ಪತ್ರಕರ್ತರಾಗಿ ಅವರ ನೈತಿಕ ನೆಲೆ ಇಷ್ಟ ಆಯ್ತು. ನನ್ನ ಪ್ರೀತಿಯ ಪ್ರಜಾವಾಣಿ ಕೇಳಿದಾಗ ಇಲ್ಲ ಎನ್ನುವದು ಉಂಟೆ. ಮಾರನೇ ದಿನ ನಾನು ಕ್ಲಿಕ್ಕಿಸಿದ ಪೋಟೊ ಮತ್ತು ಪಡೆದ ಹೇಳಿಕೆ ಪ್ರಜಾವಾಣಿ ಲೀಡ್ ಸುದ್ದಿಯಾಗಿ ಪ್ರಕಟ ಮಾಡಿದೆ. Thank u.
ಮೊನ್ನೆ ಪ್ರಜಾವಾಣಿ ಕೈ ತಪ್ಪುವಾಗ ನನ್ನ ಪರ ಗಟ್ಟಿ ನಿಲ್ಲಬೇಕಾದ madhu bangarappa ನನ್ನ ಪರ ನಿಲ್ಲಲಿಲ್ಲ. ಅಧ್ಯಕ್ಷನಾಗಿದ್ದಾಗ ಅವರ ಎರಡು ಎಂ ಪೀ ಚುನಾವಣೆ ಮನೆ ಮನೆ ತಿರುಗಿದ್ದೆ.
ಈಗಲೂ ತುಮರಿ ಬಂದಾಗ ಟೀ ಪ್ರಜಾವಾಣಿ ಜತೆ ಆಗಲೆಬೇಕು. ಅದು ನನ್ನ ಪ್ರೀತಿ. ಅದು ನೀತಿಯ ಕಾರಣದ ಪ್ರೀತಿ. ಹೆಂಡ ಮಾರುವುದಕೆ ಹೋಗಿ ಅಂತ ತಲೆ ಮಾಸಿದವ ಒಬ್ಬ ನೀಡಿದ ಪ್ರತಿಕ್ರಿಯೆ ನೋಡಿದ ಮೇಲೆ ಹಲವು ಪ್ರಜಾವಾಣಿ ತಾಲೀಮುಗಳ ತಕರಾರು ನಡುವೆಯು ಪತ್ರಿಕೆ ಮೇಲೆ ಅಭಿಮಾನ ಹೆಚ್ಚಾಗಿದೆ.
ಇವುಗಳ ನಡುವೆ
ಕೊನೆಗೂ ಅನ್ನಿಸಿದ್ದು ಇಷ್ಟು.
ವಯಕ್ತಿಕವಾಗಿ ನನಗೆ ಇವರಿಗೆಲ್ಲ ಉತ್ತರ ಕೊಡಲು
ನನ್ನ ಪ್ರೀತಿಯ ನಾಯಕ ಬಂಗಾರಪ್ಪ ಇರಬೇಕಿತ್ತು.
ಜಿ. ಟಿ ತುಮರಿ.
14-07-2022