

ಅದೀಕೃತ ಪರವಾನಗಿಯ ಎಮ್.ಎ ಸ್.ಆಯ್.ಎಲ್ ಬದಲು ಅಕ್ರಮ ಮದ್ಯ ಮಾರಾಟದ ವಿಚಾರ ಈಗ ಉತ್ತರ ಕನ್ನಡ ಜಿಲ್ಲೆಯಲ್ಲಿ ವಿವಾದದ ಸ್ವರೂಪ ಪಡೆದಿದೆ. ಜನಪ್ರತಿನಿಧಿಗಳ ದ್ವಂದ್ವಂ ನೀತಿಯಿಂದಾಗಿ ಅಕ್ರಮ ಮದ್ಯ ಮಾರಾಟ ಕುಡುಕರಿಗೆ ಮತ್ತು ಸಾರ್ವಜನಿಕರಿಗೆ ತಲೆ ನೋವಾಗಿದೆ.
ಅಕ್ರಮ ಮದ್ಯ ಮಾರಾಟ ತಡೆದು ಸರ್ಕಾರದ ಆದಾಯ ಹೆಚ್ಚಳ ಮತ್ತು ಗುಣಮಟ್ಟದ ಮದ್ಯ ಪೂರೈಕೆಗಾಗಿ ಸರ್ಕಾರ ಎಮ್.ಎಸ್. ಆಯ್. ಎಲ್. ಮೂಲಕ ಮದ್ಯ ಮಾರಾಟ ಮಾಡುತ್ತಿದೆ. ಆದರೆ ಈ ವ್ಯವ ಸ್ಥೆಗೆ ವಿರುದ್ಧವಾಗಿ ರಾಜ್ಯಾದ್ಯಂತ ಅಕ್ರಮ ಮದ್ಯ ಮಾರಾಟಜಾಲ ಜೀವಂತವಾಗಿದೆ. ಈ ಅನಧೀಕೃತ ಮದ್ಯ ಮಾರಾಟಗಾರರು ಎಂ.ಆರ್.ಪಿ.ಗೆ ಸಿಗುವ ಮದ್ಯವನ್ನು ಹೆಚ್ಚಿನ ಹಣಕ್ಕೆ ಮಾರುತ್ತಾರೆ. ಇಂಥ ಜಾಲದಿಂದಾಗಿ ಸರ್ಕಾರ ಮತ್ತು ಸಾರ್ವಜನಿಕರಿಗೆ ಹಾನಿಯಾಗುತ್ತಿರುವ ವಿದ್ಯಮಾನಕ್ಕೆ ಇಲ್ಲೊಂದು ಜ್ವಲಂತ ಉದಾಹರಣೆ ಇದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಸರ್ಕಾರದ ಅಧೀಕೃತ ಮದ್ಯ ಮಾರಾಟದ ಎಮ್.ಎಸ್. ಆಯ್. ಎಲ್. ಮಳಿಗೆಗಳು ಹೆಚ್ಚಿಲ್ಲ. ಯಾಕೆ ಇಲ್ಲಿ ಹೆಚ್ಚಿನ ಸರ್ಕಾರದ ಅಧೀಕೃತ ಮದ್ಯ ಮಾರಾಟದ ಅಂಗಡಿಗಳಿಲ್ಲ ಎನ್ನುವುದಕ್ಕೆ ಹಲವು ಕಾರಣಗಳಿವೆ. ಉತ್ತರ ಕನ್ನಡಕ್ಕೆ ಗೋವಾ ಮತ್ತು ಹುಬ್ಬಳ್ಳಿಯಿಂದ ಪೂರೈಕೆಯಾಗುವ ಮದ್ಯ ಹಳ್ಳಿಹಳ್ಳಿಗಳಲ್ಲಿ ಯತೇಚ್ಛವಾಗಿ ದೊರೆಯುತ್ತಿದೆ. ಈ ಮದ್ಯ ಮಾರಾಟ ಮಾಡುವ ಕೆಲವು ಉದ್ಯಮಿಗಳು ಸರ್ಕಾರದ ಅಧೀಕೃತ ಮದ್ಯ ಮಾರಾಟದ ಅಂಗಡಿ, ಮಳಿಗೆಗಳಿಗೆ ಅಡ್ಡಿ ಪಡಿಸುತ್ತಾರೆ. ಈ ವಿಚಾರ ಇಂದು ಸಿದ್ದಾಪುರದ ಪ್ರಕೃತಿ ವಿಕೋಪ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿಯವರ ಎದುರೇ ಪ್ರಸ್ಥಾಪವಾಯಿತು.

ರಸ್ತೆಯಂಚಿನ ತುಂಬರಗೋಡ್ ಸುಂದರಿ!
ಸಮಾಜಕಲ್ಯಾಣ ಸಚಿವ ಶ್ರೀನಿವಾಸ್ ಪೂಜಾರಿ ಜಿಲ್ಲೆಯಲ್ಲಿ ಮದ್ಯ ಮಾರಾಟಗಾರರು ಸರ್ಕಾರದ ಎಮ್.ಎಸ್.. ಆಯ್.ಎಲ್. ಪ್ರಾರಂಭಕ್ಕೆ ಅಡ್ಡಿಮಾಡುತಿದ್ದಾರೆ ಎಂದರೆ ವಿಶ್ವೇಶ್ವರ ಹೆಗಡೆ ಕಾಗೇರಿ ಆ ವಿಚಾರ ಪ್ರಸ್ಥಾಪಿಸದೆ ಅಬಕಾರಿ ಇಲಾಖೆ ಮದ್ಯ ಮಾರಾಟ ಗುರಿ ನಿಗದಿ ಮಾಡುವುದೇ ಸರಿಯಲ್ಲ ಎಂದರು. ಈ ವಿಷಯ ಸ್ಥಳಿಯ ಜನಪ್ರತಿನಿಧಿಗಳ ವಿರೋಧಕ್ಕೂ ಕಾರಣವಾಗಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಡುವೆ ಚರ್ಚೆಗೂ ಕಾರಣವಾಯಿತು. ಅಕ್ರಮ ಮದ್ಯ ಮಾರಾಟದ ವಿರುದ್ಧ ಧ್ವನಿ ಎತ್ತಿದ ಸ್ಥಳಿಯ ಜನಪ್ರತಿನಿಧಿಗಳನ್ನು ವಿಧಾನಸಭಾ ಅಧ್ಯಕ್ಷರೇ ಯಾಕೆ ನಿಯಂತ್ರಿಸಿದರು. ಎಮ್. ಎಸ್. ಆಯ್. ಎಲ್ ಬದಲು ಅಕ್ರಮ ಮದ್ಯಮಾರಾಟದಿಂದ ಸರ್ಕಾರಕ್ಕೆ ಹಾನಿ ಸಾರ್ವಜನಿಕರಿಗೆ ತೊಂದರೆ ಮಾಡುವವರ ವಿರುದ್ಧ ಉಸ್ತುವಾರಿ ಸಚಿವ ಮತ್ತು ಸ್ಥಳಿಯ ಶಾಸಕ ರಾಜ್ಯ ವಿಧಾನಸಭಾ ಅಧ್ಯಕ್ಷರ ನಡುವಿನ ದ್ವಂದ್ವದ ರಹಸ್ಯವೇನು ಎನ್ನುವ ಬಗ್ಗೆ ಚರ್ಚೆ ನಡೆಯಿತು.
