

ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಪ್ರಮುಖ ಪಕ್ಷಗಳಲ್ಲಿ ಒಡಕು, ಬಂಡಾಯಗಳು ಕಾಣುತಿದ್ದು ಕೆಲವರು ಅಭ್ಯರ್ಥಿಗಳಾಗಲು ಯೋಚಿಸಿದ್ದರೆ ಕೆಲವರು ಪಕ್ಷ ತ್ಯಜಿಸಲು ಯೋಜಿಸಿರುವ ಬಾತ್ಮಿ ಸಮಾಜಮುಖಿಡಾಟ್ ನೆಟ್ ಗೆ ಲಭಿಸಿದೆ.
ಜಿಲ್ಲೆಯ ಜೆ.ಡಿ.ಎಸ್. ನ ಕೆಲವರು ಕಾಂಗ್ರೆಸ್ ಸೇರಲು ಯೋಚಿಸಿದ್ದರೆ, ಬಿ.ಜೆ.ಪಿ.ಯ ಕೆಲವರು ಕಾಂಗ್ರೆಸ್ ಹಾಗೂ ಜಾತ್ಯಾತೀತ ಜನತಾದಳ ಸೇರುವ ಸಾಧ್ಯತೆಗಳು ನಿಚ್ಚಳವಾಗಿವೆ.
ಬಿ.ಜೆ.ಪಿ.ಯ ಕೇ.ಜಿ. ನಾಯ್ಕ ಹಣಜಿಬೈಲ್ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರ ವಿರುದ್ಧ ಸೆಡ್ಡು ಹೊಡೆದಿದ್ದು ಬಿ.ಜೆ.ಪಿ. ಯಿಂದ ಬಂಡಾಯ ಸ್ಫರ್ಧೆ ಅಥವಾ ಗೆಲ್ಲುವ ಅನ್ಯ ಪಕ್ಷದ ಅಭ್ಯರ್ಥಿ ಬೆಂಬಲಿಸುವ ಯೋಚನೆಯಲ್ಲಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ನಲ್ಲಿ ಎ.ರವೀಂದ್ರ ಮತ್ತು ವೆಂಕಟೇಶ ಹೆಗಡೆ ಹೊಸಬಾಳೆ ನಾನಾ ನಾಯಕರ ಬೆಂಬಲಗಳಿಂದ ಕಾಂಗ್ರೆಸ್ ಅಧೀಕೃತ ಅಭ್ಯರ್ಥಿಯ ವಿರುದ್ಧ ಬಂಡಾಯ ಮಾಡುವ ಮುನ್ಸೂಚನೆ ದೊರೆತಿದೆ.
ಜಿಲ್ಲೆಯಲ್ಲಿ ಎಲ್ಲರಿಗಿಂತ ಮೊದಲು ಏಕೈಕ ಅಭ್ಯರ್ಥಿ ಘೋಶಿಸಿರುವ ಆಪ್ ಸಂಘಟನೆಯಾಗುವ ಮೊದಲೇ ಒಡೆಯುವ ಸಾಧ್ಯತೆ ಹೆಚ್ಚಿದೆ. ಸಮಾಜಮುಖಿ ಡಾಟ್ ನೆಟ್ ಗೆ ಲಭಿಸಿರುವ ಮಾಹಿತಿಯ ಪ್ರಕಾರ ಆಪ್ ಪಕ್ಷದ ಜಿಲ್ಲಾ ಪದಾಧಿಕಾರಿಗಳು ಶಿರಸಿ ಕ್ಷೇತ್ರದ ಅಭ್ಯರ್ಥಿಯ ವಿರುದ್ಧ ಬಂಡಾಯ ಮಾಡಿದ್ದು ಆಪ್ ಜಿಲ್ಲಾ ಉಪಾಧ್ಯಕ್ಷರ ನೇತೃತ್ವದಲ್ಲಿ ಕನಿಷ್ಟ ಐದು ಜನ ಪ್ರಮುಖ ಪದಾಧಿಕಾರಿಗಳು ಆಪ್ ಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರುವ ಬಗ್ಗೆ ಯೋಚಿಸಿದ್ದಾರೆ ಎನ್ನಲಾಗಿದೆ,.
ಚುನಾವಣಾ ರಾಜಕಾರಣ, ಸಾಮಾಜಿಕ ಬದುಕಿನ ಲವಲೇಶಗಳೂ ಇಲ್ಲದ ಆಪ್ ಅಭ್ಯರ್ಥಿ ಪಕ್ಷದ ಪ್ರಮುಖರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಗುವವರ ನಡುವೆ ತಾನು ಈಗಲೇ ಗೆದ್ದೆದ್ದೇನಿ ತನ್ನ ೭೦ ಸಾವಿರ ಮತಗಳು ಈಗಲೇ ಭದ್ರವಾಗಿವೆ ಎನ್ನುವ ಬಾಲೀಶ ಹೇಳಿಕೆಗಳ ಮೂಲಕ ಪಕ್ಷ ಮತ್ತು ಪಕ್ಷದ ಪ್ರಮುಖರಿಗೆ ಮುಜುಗರ ಮಾಡುವ ಶಿರಸಿ ಕ್ಷೇತ್ರದ ಅಭ್ಯರ್ಥಿಯ ಹಿತ-ಮಿತ ವರಿಯದ ಅತರೇಕದ ವರ್ತನೆ, ನಡವಳಿಕೆಗಳಿಂದ ಬೇಸತ್ತು ಪಕ್ಷ ತ್ಯಜಿಸುತ್ತಿರುವುದಾಗಿ ಐದು ಜನ ಜಿಲ್ಲಾ ಪದಾಧಿಕಾರಿಗಳು ಆಪ್ ಪ್ರಮುಖರಿಗೆ ಮಾಹಿತಿ ನೀಡಿರುವ ಬಗ್ಗೆ ಸಮಾಜಮುಖಿ ನ್ಯೂಸ್ ಗೆ ವಿಷಯ ತಿಳಿದಿದೆ.
