ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಗೃಹಲಕ್ಷ್ಮಿ’ ಯೋಜನೆಗೆ ನಾಳೆಯಿಂದ ಅರ್ಜಿ ಸಲ್ಲಿಕೆ ಆರಂಭ

ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ‘ಗೃಹ ಲಕ್ಷ್ಮಿ’ ಯೋಜನೆಗೆ ನಾಳೆಯಿಂದ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.

Laxmi_Hebbalkar1

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ‘ಗೃಹ ಲಕ್ಷ್ಮಿ’ ಯೋಜನೆಗೆ ನಾಳೆಯಿಂದ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.
ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು,  ಬಿಪಿಎಲ್ ಕಾರ್ಡ್, ಅಂತ್ಯೋದಯ ಕಾರ್ಡ್ ನವರಿಗೆ ಈ ಯೋಜನೆ ಲಾಭ ಸಿಗುತ್ತದೆ. ನಾಳೆಯಿಂದ ಆಫ್ ಲೈನ್ ಹಾಗೂ ಅನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದರು.

ನಾಳೆ ಮಧ್ಯಾಹ್ನ 1.30ಕ್ಕೆ ‘ಗೃಹಲಕ್ಷ್ಮೀ’ ಅರ್ಜಿ ಸಲ್ಲಿಕೆಗೆ ಸಿಎಂ ಸಿದ್ದರಾಮಯ್ಯ ಸಾಂಕೇತಿಕವಾಗಿ ಚಾಲನೆ ನೀಡಲಿದ್ದಾರೆ. ಸೇವಾ ಸಿಂಧು ಪೋರ್ಟಲ್​ನಲ್ಲಿ ಚಾಲನೆ ನೀಡಲಿದ್ದಾರೆ. ಶಕ್ತಿಭವನದಲ್ಲಿ ಸೇವಾ ಸಿಂಧು ವೆಬ್​ಪೋರ್ಟಲ್​ ಸಿಎಂರಿಂದ ಲಾಂಚ್ ಮಾಡಲಿದ್ದಾರೆ ಎಂದು ಅವರು ತಿಳಿಸಿದರು. 

https://imasdk.googleapis.com/js/core/bridge3.578.0_en.html#goog_975663134

ಅರ್ಜಿಗಳನ್ನು ಆನ್‌ಲೈನ್ ಮೂಲಕ ಅಥವಾ ಭೌತಿಕವಾಗಿ ಗ್ರಾಮ ಒನ್/ಬೆಂಗಳೂರು ಒನ್/ಕರ್ನಾಟಕ ಒನ್ ಕೇಂದ್ರಗಳಲ್ಲಿ ಸೇವಾಸಿಂಧು ಪೋರ್ಟಲ್ ಮೂಲಕ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಅರ್ಜಿದಾರರ ಹಾಗೂ ಪತಿಯ ಆಧಾರ್ ಕಾರ್ಡ್ ಸಂಖ್ಯೆ ಮೊಬೈಲ್ ಸಂಖ್ಯೆ ಹಾಗೂ ಅರ್ಜಿದಾರರ ಬ್ಯಾಂಕ್‌ ಖಾತೆ ವಿವರಗಳು ಅಗತ್ಯವಾಗಿರುತ್ತದೆ ಎಂದು ಅವರು ಹೇಳಿದರು. 

ಅರ್ಜಿ ಸಲ್ಲಿಕೆಗೆ ಯಾವುದೇ ಕೊನೆಯ ದಿನಾಂಕ ಇರುವುದಿಲ್ಲ. ವರ್ಷವಿಡೀ ನಿರಂತರ ಪ್ರಕ್ರಿಯೆಯಾಗಿರುತ್ತದೆ.  ಅರ್ಜಿ ಸಲ್ಲಿಕೆಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ, ಸಂಪೂರ್ಣ ಉಚಿತವಾಗಿರುತ್ತದೆ. ಯೋಜನೆಯ ಕುರಿತಂತೆ ಸಂದೇಹ/ ಕುಂದುಕೊರತೆಗಳಿದ್ದಲ್ಲಿ ಸಹಾಯವಾಣಿ (Helpline) – 1902 ಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ಮಾಹಿತಿ ನೀಡಿದರು. 

ಗೃಹಲಕ್ಷ್ಮಿ, ಯೋಜನೆಯು ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿದ್ದು, ಬಿಪಿಎಲ್/ಎಪಿಎಲ್/ಅಂತ್ಯೋದಯ ಕಾರ್ಡ್ ನಲ್ಲಿ ನಮೂದಿಸಿರುವಂತೆ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ.2000/- ಗಳನ್ನು ನೇರ ನಗದು ವರ್ಗಾವಣೆ ಮೂಲಕ ನೀಡಲಾಗುತ್ತದೆ. 

ಇ- ಗವರ್ನೆನ್ಸ್ ಮೂಲಕ ಅರ್ಜಿ ಹಾಕುವ ವ್ಯವಸ್ಥೆ ಮಾಡಿದ್ದೇವೆ. ಅರ್ಜಿದಾರರ ಪತಿ ತೆರಿಗೆದಾರರು ಆಗಿದ್ರೆ ಅರ್ಜಿ ಸ್ವೀಕಾರ ಆಗೋದಿಲ್ಲ. ಹೀಗಾಗಿ ಸುಳ್ಳು ಮಾಹಿತಿ ನೀಡಿ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ತಿಳಿಸಿದರು.  (kpc)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಅಕ್ಷತಾ ಸಾವು… ಆಶಯ ಮಾತಿನ ನೋವು……

rcb ಕಲ್ತುಳಿತದ ಶವ ಸಿದ್ಧಾಪುರಕ್ಕೆ……. ಅಕ್ಷತಾ ಅಂಬಳ್ಳಿ ಅಂತ್ಯ ಕ್ರೀಯೆಗೆ ತಯ್ಯಾರಿ breaking…… rcb ಕಲ್ತುಳಿತದ ಪ್ರತ್ಯಕ್ಷ ಅನುಭವ…… ಆಶಯ ಅಂಬಳ್ಳಿ ಮಾತು….. ಬೆoಗಳೂರಿನ...

ಕಾಗೇರಿ ವ್ಯಂಗ್ಯಕ್ಕೆ ಕಾಂಗ್ರೆಸ್‌ ಉತ್ತರ……! ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! -part-04-

ಬಿ.ಜೆ.ಪಿ. ಮಟ್ಟಿಗೆ ಉತ್ತರ ಕನ್ನಡದ ವರಿಷ್ಠರಾದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಧ್ಯಮಗೋಷ್ಠಿ ನಡೆಸುವುದರಲ್ಲಿ ಮಾಧ್ಯಮಗಳಿಗೆ ಬೇಕಾದಷ್ಟೇ ಚುಟುಕಾಗಿ ಉತ್ತರಿಸುವುದರಲ್ಲಿ ನಿ಼ಷ್ಣಾತರು. ಆಗಾಗ ಮಾಧ್ಯಮಗೋಷ್ಠಿ...

ನಾಯಕರಿಗೆ ಇಂಬು, ಕಾರ್ಯಕರ್ತರಿಗೆ ಚೊಂಬು!!! ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! -part-03-

ಬಿ.ಜೆ.ಪಿ. ಸೋಲಿಸಲು ಸಾಧ್ಯವಿಲ್ಲ, ಕಾಂಗ್ರೆಸ್‌ ಗೆ ಅಧಿಕಾರವಿಲ್ಲದೆ ಅಲ್ಲಿಯ ಕಾರ್ಯಕರ್ತರು ಅನಿವಾರ್ಯವಾಗಿ ಬಿ.ಜೆ.ಪಿ. ಸೇರುತ್ತಾರೆ. ಹೀಗಾದರೆ ನೀವೆಲ್ಲಾ ಕಾಂಗ್ರೆಸ್‌ ನಲ್ಲಿದ್ದು ಏನು ಪ್ರಯೋಜನ? ಎಂದು...

ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! part-02- ವೀಶ್ವೇಶ್ವರ ಹೆಗಡೆಗೆ ಮೃಧುವಾಗೇ ತಿವಿಯುತ್ತಿರುವ ಗ್ಯಾರಂಟಿಯಣ್ಣ!

ಮೇಲ್ವರ್ಗದ ಓಲೈಕೆ, ವೈದಿಕ ತುಷ್ಟೀಕರಣಗಳ ಬಿ.ಜೆ.ಪಿ. ಅನಿವಾರ್ಯವಾದಾಗ, ಮೇಲ್ನೋಟಕ್ಕೆ ಪ್ರದರ್ಶನಕ್ಕೆ ಅಹಿಂದ್‌ ಗಳನ್ನು ಬಳಸುವುದನ್ನು ಬಿಟ್ಟರೆ ಅದು ತನ್ನ ಅಜೆಂಡಾ ಉಳ್ಳವರ ಪರ ನೀತಿಯನ್ನು...

don,t do it- ಮಗುವಿನೊಂದಿಗೆ ಪೋಷಕರ ಅಪಾಯಕಾರಿ ಸೆಲ್ಫಿ; ಸ್ಮಾರ್ಟ್ ಸಿಸಿಟಿವಿಯಿಂದ ತಪ್ಪಿದ ಸಂಭಾವ್ಯ ದುರಂತ!

ಗೋಕರ್ಣ: ಪೊಲೀಸರ ಈ ಮುನ್ನೆಚ್ಚರಿಕಾ ಕ್ರಮ ಗೋಕರ್ಣದಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ಪೊಲೀಸರು ತಮ್ಮನ್ನು ಕ್ಯಾಮರಾ ಮೂಲಕ ನೋಡುತ್ತಿದ್ದಾರೆ ಎಂದು ದಂಪತಿಗೆ ತಿಳಿದಿರಲಿಲ್ಲ. ಮಗುವಿನೊಂದಿಗೆ ಪೋಷಕರ...

Latest Posts

ಅಕ್ಷತಾ ಸಾವು… ಆಶಯ ಮಾತಿನ ನೋವು……

rcb ಕಲ್ತುಳಿತದ ಶವ ಸಿದ್ಧಾಪುರಕ್ಕೆ……. ಅಕ್ಷತಾ ಅಂಬಳ್ಳಿ ಅಂತ್ಯ ಕ್ರೀಯೆಗೆ ತಯ್ಯಾರಿ breaking…… rcb ಕಲ್ತುಳಿತದ ಪ್ರತ್ಯಕ್ಷ ಅನುಭವ…… ಆಶಯ ಅಂಬಳ್ಳಿ ಮಾತು….. ಬೆoಗಳೂರಿನ ಚಿನ್ನಸ್ವಾಮಿ ಕ್ರೀಡಾoಗಣ ದಲ್ಲಿ ಕಲ್ತುಳಿತಕ್ಕೆ ಒಳಗಾಗಿ ಜೀವತೆತ್ತ ಅಕ್ಷತಾ ಪೈ ಶವ ಸಿದ್ಧಾಪುರಕ್ಕೆ ಆಗಮಿಸಿದೆ. ಮೃತ ಅಕ್ಷತಾ ಪತಿ ಆಶಯ ನಿನ್ನೆ ಅಲ್ಲಿದ್ದರು. ನಿನ್ನೆಯ ಘಟನೆಯ ಬಗ್ಗೆ ಅವರು...

Recommended For You

About the Author: Kanneshwar Naik

Leave a Reply

Your email address will not be published. Required fields are marked *