ಇಬ್ಬರು ಆತ್ಮೀಯ ಸ್ನೇಹಿತರು ಸದಾ ಕೆಲಸ,ಪ್ರಗತಿ, ಹಣ ಎಂದೆಲ್ಲಾ ಯೋಚಿಸುತಿದ್ದರು. ತಮ್ಮ ಸಾಮರ್ಥ್ಯಕ್ಕೆ ಈ ಊರೇನು,ತಾಲೂಕು, ಜಿಲ್ಲೆ, ರಾಜ್ಯ, ರಾಜಧಾನಿ,ದೇಶದ ರಾಜಧಾನಿ ಗಳೆಲ್ಲಾ ಬೇಡ ವಿದೇಶಕ್ಕೇ ಹೋಗಿ ದುಡಿದು ಬಂದು ಇಲ್ಲಿ ಏನಾದರೂ ಮಾಡೋಣ ಎಂದು ನಿರ್ಧರಿಸಿ ಹೊರದೇಶಕ್ಕೂ ಹೊರಟು ಹೋದರು. ಅಲ್ಲಿ ಹಗಲಿರುಳೆನ್ನದೆ ದುಡಿದರು. ನಿರಂತರ ದುಡಿಮೆ ಒಬ್ಬನಿಗೆ ಸಕ್ಕರೆ ಖಾಯಿಲೆಯನ್ನೂ ದಯಪಾಲಿಸಿತು. ಸಕ್ಕರೆ ಖಾಯಿಲೆಯಿಂದ ಹೆದರಿದ ಮೊದಲ ಸ್ನೇಹಿತ ಮತ್ತೊಬ್ಬನ ಬಳಿ ಅಲವತ್ತುಕೊಂಡ ತಾನೊಂದು ಬಗೆದರೆ ದೈವವೊಂದು ಬಗೆಯಿತು ಎಂದು ಬೇಸರಿಸಿದ. ಇದಕ್ಕೆ ನಿರುತ್ತರನಾದ ಮೊದಲಸ್ನೇಹಿತ ಸಕ್ಕರೆ ಖಾಯಿಲೆ ಬದುಕನ್ನೇ ಮುಳುಗಿಸುವಷ್ಟು ಅಪಾಯಕಾರಿಯೇ ಎಂದು ಯೋಚಿಸಿದ.
ಡಯಾಬಿಟಿಕ್ ಸ್ನೇಹಿತನಿಗೆ ನೀನು ಊರಿಗೆ ಮರಳು ಅಲ್ಲಿ ನಿನ್ನ ಸಕ್ಕರೆ ಖಾಯಿಲೆ ಚಿಕಿತ್ಸೆ ಜೊತೆಗೆ ಈ ಬಾರಿ ಶಾಸಕನಾಗುವ ಬಗ್ಗೆಯೂ ತಯಾರಿ ಮಾಡಿಕೊ ನಿನ್ನ ಎಲ್ಲಾ ಕೆಲಸಕ್ಕೆ ನನ್ನ ನೆರವಂತೂ ಇದ್ದೇ ಇರುತ್ತದೆ ಎಂದೂ ಭರವಸೆ ಕೊಟ್ಟ. ಸಕ್ಕರೆ ಸ್ನೇಹಿತ ಊರಿಗೆ ಮರಳಿದ ಸಕ್ಕರೆ ಖಾಯಿಲೆ ನಿಯಂತ್ರಿಸಿಕೊಂಡ ಸಾಮಾಜಿಕ ಕೆಲಸಗಳನ್ನೂ ಶುರು ಹಚ್ಚಿಕೊಂಡ ನೋಡುನೋಡುತ್ತಲೇ ಸಕ್ಕರೆ ಸ್ನೇಹಿತನ ಪ್ರಚಾರ,ಪ್ರಭಾವ ಬೆಳೆಯತೊಡಗಿತು. ಚುನಾವಣೆ ಸಮೀಪಿಸಿ ಶಾಸಕನೂ ಆಗಿಬಿಟ್ಟ. ಎಲ್ಲದಕ್ಕೂ ನೆರವಾಗುತಿದ್ದ ಸ್ನೇಹಿತ ಗ್ರಾಮಕ್ಕೆ ಮರಳಿ ಸ್ನೇಹಿತನ ಸಾಧನೆ ಮೆಚ್ಚಿ ನಾನೂ ಕೆಲವು ವರ್ಷ ಮಾತ್ರ ಅಲ್ಲಿ, ಕಡೆಗೆ ಇತ್ತ ಬಂದರಾಯಿತು. ಎಂದುಕೊಂಡ ಅದಕ್ಕೊಂದು ನೀಲನಕ್ಷೆಯನ್ನೂ ಹಾಕಿಕೊಂಡ. ಈಗ ಎಲ್ಲವೂ ಅಂದುಕೊಂಡಂತೇ ನಡೆಯತೊಡಗಿತ್ತು. ಸಕ್ಕರೆ ಸ್ನೇಹಿತ ಎಣಿಸಿದಂತೆ ಎಲ್ಲವೂ ನಡೆಯುತ್ತಿರಲಿಲ್ಲ. ಸಕ್ಕರೆಪ್ರಮಾಣ ಹೆಚ್ಚತೊಡಗಿತು. ಕನಸು ನನಸಾಗಿತ್ತಾದರೂ ಸದನದ ಒಳಗೆ ಹೊರಗೆ ಎಲ್ಲವೂ ಈತನಿಗೆ ವ್ಯತಿರಕ್ತವಾಗೇ ನಡೆಯತೊಡಗಿದ್ದವು.
ಸಕ್ಕರೆ ಸ್ನೇಹಿತ ಆತ್ಮೀಯ ಸ್ನೇಹಿತನಿಗೆ ವಾಸ್ತವ ತಿಳಿಸಿದ. ಶಾಸಕತ್ವ, ಜನಪ್ರತಿನಿಧಿ ಎಂದರೆ ನಾವಂದುಕೊಂಡಂತಲ್ಲ ಕಾಲಮಿತಿಯಲ್ಲ ನಾವು ಎಲ್ಲವನ್ನೂ ಸಾಧಿಸಲೂ ಸಾಧ್ಯವಿಲ್ಲ. ನನಗ್ಯಾಕೋ ಮರಳಿ ನೀನಿದ್ದಲ್ಲಿಗೇ ಬಂದು ಬಿಡಬೇಕು ಎನಿಸುತ್ತದೆ ಎಂದು ಎಲ್ಲಾ ಸಾಧನಗಳ ಮೂಲಕ ಸ್ಫಷ್ಟಪಡಿಸಿದ. ಆತ್ಮೀಯ ಸ್ನೇಹಿತ ಹುಟ್ಟೂರಿಗೆ ಮರಳಬೇಕು ಸಕ್ಕರೆ ಸ್ನೇಹಿತ ವಿದೇಶಕ್ಕೆ ಹಾರಬೇಕು ಎನ್ನುವ ಯೋಚನೆಗಳೆಲ್ಲಾ ಮನೋವೇಗದಂತೇ ನಡೆದುಹೋದವು. ಸಕ್ಕರೆ ಸ್ನೇಹಿತ ಊರುಬಿಟ್ಟ, ಆತ್ಮೀಯ ಸ್ನೇಹಿತ ಮರಳಿಬಿಟ್ಟ ವಿಧಿಲಿಖಿತವೋ? ಕಾಕತಾಳೀಯವೋ ಎಲ್ಲವೂ ಸಣ್ಣ ಸಮಯದಲ್ಲೇ ಸಂದು ಹೋದವು.
ಸಕ್ಕರೆ ಸ್ನೇಹಿತನ ಶಾಸಕತ್ವದ ರಾಜೀನಾಮೆ ಆತ್ಮೀಯ ಸ್ನೇಹಿತನ ಕೆಲಸದ ರಾಜೀನಾಮೆಏಕಸಮಯದಲ್ಲೇ ನಡೆದುಹೋದವು. ಸಕ್ಕರೆ ಸ್ನೇಹಿತ ವಿದೇಶ ಸೇರಿಕೊಂಡ ಅವನ ದುಡುಕಿನ ತೀರ್ಮಾನದ ಬಗ್ಗೆ ಆತ್ಮೀಯ ಸ್ನೇಹಿತನಿಗೂ ಹಿತವೆನಿಸಲಿಲ್ಲ. ಇಬ್ಬರ ದಾರಿಗಳೂ ಬೇರೆ ಆದಂತಾದವು ವಿದೇಶದಿಂದ ಮರಳಿದ ಆತ್ಮೀಯ ಸ್ನೇಹಿತ ಕೃಷಿ ಆಯ್ದುಕೊಂಡ ಮಾಜಿ ಶಾಸಕರೂ ಮರಳಿ ಕೃಷಿಗೇ ಧುಮಿಕಿದರು. ಬರಗಾಲ ಹೆಚ್ಚಾಯಿತು. ಸಕ್ಕರೆ ಕಡಿಮೆಯಾಯಿತು.