ಸಿದ್ದಾಪುರ
ಸ್ಥಳೀಯ ಆಯುಷ್ ಪಾಲಿ ಕ್ಲಿನಿಕ್ ಮತ್ತು ಆಯುಷ್ ಮೆಡಿಕಲ್ಸ್ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆ.೨೯ರಂದು ಮಧ್ಯಾಹ್ನ ೨ರಿಂದ ಪಟ್ಟಣದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಜರುಗಲಿದೆ.
ಶಾಸಕ ಭೀಮಣ್ಣ ನಾಯ್ಕ ಶಿಬಿರಕ್ಕೆ ಚಾಲನೆ ನೀಡುವರು. ಕಾಂಗ್ರೆಸ್ ಮುಖಂಡ ವೆಂಕಟೇಶ ಹೆಗಡೆ ಹೊಸಬಾಳೆ ಹಾಗೂ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮನಮನೆ ಉಪಸ್ಥಿತರಿರುತ್ತಾರೆ.
ಶಿಬಿರದಲ್ಲಿ ತಜ್ಞವೈದ್ಯರಾದ ಡಾ ಸುಷ್ಮಾ ಬಿ.ಎಸ್.(ಚರ್ಮರೋಗ), ಡಾ.ನವೀನ್ ಕೆ(ಮಕ್ಕಳ),ಡಾ.ಶ್ರೀಶೃತಿ ಹೆಗಡೆ(ಕಣ್ಣು), ಡಾ.ಅನೀಲ್ ಎಸ್(ಕಿವಿ, ಮೂಗು, ಗಂಟಲು),ಡಾ.ಅಜಯ್ ಹೆಗಡೆ(ಮಧುಮೇಹ ಮತ್ತು ಹೃದಯರೋಗ), ಡಾ.ನಿರಂಜನ ಹೆಗಡೆ(ನರ ಹಾಗೂ ಮಾನಸಿಕ),ಡಾ.ಮಲ್ಲಿಕಾರ್ಜುನ್ ಸುತಾರ್ ಹಾಗೂ ಡಾ.ಚೈತ್ರಿಕಾ (ಸಾಮಾನ್ಯ) ಪಾಲ್ಗೊಳ್ಳಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ೮೧೪೭೪೧೬೪೬೨ ಸಂಪರ್ಕಿಸುವಂತೆ ಸಂಘಟಕರು ತಿಳಿಸಿದ್ದಾರೆ.
ನಿಧನ-
ಸಿದ್ದಾಪುರ
ಹಿರಿಯ ಕೃಷಿಕ ಮಹದೇವಪ್ಪ ಚನ್ನಬಸಪ್ಪ ದೋಶೆಟ್ಟಿ(೮೭) ಶನಿವಾರ ಪಟ್ಟಣದ ತಮ್ಮ ಸ್ವಗೃಹದಲ್ಲಿ ಲಿಂಗೈಕ್ಯರಾಗಿದ್ದಾರೆ. ಅವರು ಪತ್ನಿ, ಸಹೋದರ,ಸಹೋದರಿ ಹಾಗೂ ಅಪಾರ ಬಂದುಬಳಗವನ್ನು ಅಗಲಿದ್ದಾರೆ.