ನಾನು ಗಾಂಧಿಯವರನ್ನು ಕೊಂದ ನಾಥೂರಾಂ ಗೋಡ್ಸೆಯನ್ನು ಉಗ್ರಗಾಮಿ ಎಂದು ಹೇಳಲ್ಲ!

ನಾಥೂರಾಂ ಗೋಡ್ಸೆ ಭಾರತದ ಮೊಟ್ಟ ಮೊದಲ ಭಯೋತ್ಪಾದಕ: ಬಿ.ಕೆ.ಹರಿಪ್ರಸಾದ್

ನಾಥೂರಾಂ ಗೋಡ್ಸೆ ಭಾರತದ ಮೊದಲ ಭಯೋತ್ಪಾದಕ. ಗೋಡ್ಸೆಯಿಂದಾಗಿ ನಮ್ಮ ದೇಶಕ್ಕೆ ಭಯೋತ್ಪಾದನೆ ಪ್ರವೇಶಿಸಿದೆ. ಪ್ರಪಂಚದಾದ್ಯಂತ 144 ದೇಶಗಳು ಮಹಾತ್ಮ ಗಾಂಧಿಯವರ ಜನ್ಮ ದಿನಾಚರಣೆಯನ್ನು ಆಚರಿಸುತ್ತವೆ .

BK hariprasad

ಮಂಗಳೂರು: ನಾಥೂರಾಂ ಗೋಡ್ಸೆ ಭಾರತದ ಮೊದಲ ಭಯೋತ್ಪಾದಕ. ಗೋಡ್ಸೆಯಿಂದಾಗಿ ನಮ್ಮ ದೇಶಕ್ಕೆ ಭಯೋತ್ಪಾದನೆ ಪ್ರವೇಶಿಸಿದೆ. ಪ್ರಪಂಚದಾದ್ಯಂತ 144 ದೇಶಗಳು ಮಹಾತ್ಮ ಗಾಂಧಿಯವರ ಜನ್ಮ ದಿನಾಚರಣೆಯನ್ನು ಆಚರಿಸುತ್ತವೆ ಏಕೆಂದರೆ ಅವರು ಒಂದೇ ಒಂದು ಗುಂಡು ಹಾರಿಸದೆ ಸ್ವಾತಂತ್ರ್ಯವನ್ನು ತಂದರು ಎಂದು ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ.

ಮಂಗಳೂರಿನ ಸಹೋದಯ ಸಭಾಂಗಣದಲ್ಲಿ ನಡೆದ ವಿಚಾರ ಸಂಕೀರ್ಣದಲ್ಲಿ ಮಾತನಾಡಿದ ಅವರು, ಭಾರತದಲ್ಲಿರುವ ಸಾವಿರಾರು ಭಾಷೆ, ಜಾತಿಗಳನ್ನು ಒಂದಾಗಿ ಕೊಂಡೊಯ್ಯಬೇಕಾದರೆ ಯಾವುದಾದರೂ ಒಂದು ದೊಡ್ಡ ತತ್ವ ಅಥವಾ ಸಿದ್ಧಾಂತ ಬೇಕು. ಅದನ್ನೇ ಮಹಾತ್ಮಾ ಗಾಂಧಿಯವರು ಸರ್ವಧರ್ಮ ಸಮಭಾವ ಎಂದು ಕರೆದರು. ಆ ಸಿದ್ಧಾಂತಕ್ಕೋಸ್ಕರ ಪ್ರಾಣವನ್ನು ಬಿಟ್ಟರು.

ನಾನು ಗಾಂಧಿಯವರನ್ನು ಕೊಂದ ನಾಥೂರಾಂ ಗೋಡ್ಸೆಯನ್ನು ಉಗ್ರಗಾಮಿ ಎಂದು ಹೇಳಲ್ಲ. ಆತ ಈ ದೇಶದ ಮೊಟ್ಟ ಮೊದಲ ಭಯೋತ್ಪಾದಕ. ಈ ದೇಶದಲ್ಲಿ ಭಯೋತ್ಪಾದನೆ ಆರಂಭವಾಗಿದ್ದೇ ಗೋಡ್ಸೆಯಿಂದ. ಹಿಂದೂ ಧರ್ಮದ ಮೇಲೆ ನಂಬಿಕೆಯಿಟ್ಟಿದ್ದ ಗಾಂಧಿಯನ್ನು ಕೊಂದ ಹಿಂದೂವನ್ನು ಏನೆಂದು ಕರೆಯಬೇಕು ಎಂದು ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿದ್ದಾರೆ.

ದೇಶದಲ್ಲಿ ಇಂದು ಭಯದ, ಬೇಧ – ಪಕ್ಷಪಾತದ ವಾತಾವರಣವನ್ನು ಸೃಷ್ಟಿ ಮಾಡಿರುವ ಪ್ರತಿಗಾಮಿ ಶಕ್ತಿಗಳು, ಉಗ್ರ ಬಲಪಂಥಿಯರನ್ನು ನಾವು ಎದುರಿಸಲು ಮಹಾತ್ಮಾಗಾಂಧಿ ಒಂದೇ ಮಂತ್ರ ಬಳಸಿಕೊಳ್ಳಬೇಕು. ಗಾಂಧಿಯವರನ್ನು ಬಲಪಂಥೀಯ ಉಗ್ರಗಾಮಿಗಳು ಖಳನಾಯಕನಂತೆ ಮಾಡಲು ಹೊರಟಿದ್ದಾರೆ. 1991ರಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಬಳಿಕದಿಂದ ಗುಜರಾತ್‌ನ ಪೋರಬಂದರ್ ಮಾಫಿಯಾದ ನಿಯಂತ್ರಣದಲ್ಲಿದೆ. ಇದು ಸದ್ಯ ದೇಶದಲ್ಲಿನ ಮಹಾತ್ಮಾ ಗಾಂಧಿಯವರ ಸ್ಥಿತಿಯನ್ನು ತೋರಿಸುತ್ತಿದೆ. ಇಲ್ಲಸಲ್ಲದ ಆರೋಪವನ್ನು ವಾಟ್ಸ್ಆ್ಯಪ್ ಯುನಿವರ್ಸಿಟಿ ಮೂಲಕ ಮಾಡುತ್ತಿದ್ದಾರೆ.‌ ಗಾಂಧಿ‌ಚಿಂತನೆ ಎಂದಿಗೆ ಮುಗಿಯುತ್ತೆದೆಯೋ ಅಂದಿಗೆ ಈ ದೇಶವು ಮುಗಿಯುತ್ತದೆ ಎಂದು ಬಿ.ಕೆ.ಹರಿಪ್ರಸಾದ್ ಹೇಳಿದರು.

ನಾವು ಸನಾತನ ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ಮಾತನಾಡುತ್ತಿದ್ದೇವೆ ಆದರೆ ನಮಗೆ ಧರ್ಮ ಯಾವುದು ಎಂದು ತೋರಿಸಿಕೊಟ್ಟವರು ಗಾಂಧಿ, ಯಾರನ್ನೂ ಸೋಲಿಸಲು ಗಾಂಧಿ ಹೋರಾಡಲಿಲ್ಲ ಬದಲಾವಣೆ ತರಲು ತಮ್ಮ ಹೋರಾಟ ನಡೆಸಿದ್ದರು. ಗಾಂಧಿ ಕರಾವಳಿ ಕರ್ನಾಟಕಕ್ಕೆ ಮೂರು ಬಾರಿ ಭೇಟಿ ನೀಡಿ ಹಿಂದೂ ಮತ್ತು ಮುಸ್ಲಿಮರಿಗೆ ಏಕತೆಯ ಸಂದೇಶವನ್ನು ನೀಡಿದರು. ಸ್ವಾವಲಂಬಿ ಬದುಕು, ಸ್ವರಾಜ್ಯದ ಕಲ್ಪನೆ, ಅಸ್ಪೃಶ್ಯತೆ ನಿವಾರಣೆ ಬಗ್ಗೆ ಉಪದೇಶ ನೀಡಿದ್ದರು.

ಮಂಡ್ಯದ ಕೆರೆಗೋಡು ಎಂಬಲ್ಲಿ ಬಿಜೆಪಿ ರಾಷ್ಟ್ರಧ್ವಜದ ಜಾಗದಲ್ಲಿ ಭಗವಾ ಧ್ವಜಾರೋಹಣ ಮಾಡುವ ಮೂಲಕ ಶಾಂತಿ ಕದಡುತ್ತಿದೆ ಎಂದು ಆರೋಪಿಸಿದ್ದಾರೆ. ಕಿಡಿಗೇಡಿಗಳ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಜಗದೀಶ್ ಶೆಟ್ಟರ್ ಬಿಜೆಪಿಗೆ ಮರುಸೇರ್ಪಡೆಯಾದ  ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಶೆಟ್ಟರ್ ಒಬ್ಬ ಸಜ್ಜನ ವ್ಯಕ್ತಿಯಾಗಿದ್ದು, ಅವರು ಕಾಂಗ್ರೆಸ್ ಪಕ್ಷದಲ್ಲಿ ಉಳಿಯಬೇಕಿತ್ತು, ಆದರೆ ಅವರ ಮುಂದಿನ ಜೀವನ ಚೆನ್ನಾಗಿರಲಿ ಎಂದು ಹಾರೈಸಿದರು.

ಲೋಕಸಭೆ ಚುನಾವಣೆಯ ನಂತರ ರಾಜ್ಯ ಸರ್ಕಾರ ಪತನವಾಗಲಿದೆ ಎಂಬ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿಕೆಗೆ ಹರಿಪ್ರಸಾದ್, ಅಶೋಕ್ ಮುಖ್ಯಮಂತ್ರಿಯಾಗುವ ಹಗಲುಗನಸು ಕಾಣುತ್ತಿದ್ದಾರೆ.  ಆದರೆ, ಆ ಹುದ್ದೆಗೆ ಅವರ ಪಕ್ಷದಲ್ಲಿ ಉದ್ದನೆಯ ಸರತಿ ಇದೆ ಮತ್ತು ಅವರ ಕನಸು ಈಡೇರುವುದಿಲ್ಲ ಎಂದು ಹೇಳಿದರು. (kpc)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *