ಡಿಯರ್ ಲೈಲಾ…. ಚಳಿಬಿಡುವ ಸಂಧಿ ಕಾಲದಲ್ಲಿ ನಿನ್ನ ನೆನಪಾಗಲು ಏನಾದರೂ ನೆಪ ಒಂದಿರಬೇಕಲ್ವ?
ನಾಳೆ ವೆಲೆಂಟೈನ್ ದಿನ….ನನ್ನ ವೆಲೆಂಟೈನ್ ಹೆಸರಿಗೂ ನಿನ್ನ ಮೋಹಕ್ಕು ಅದೆಂಥಾ ಬಾದರಾಯಣ ಸಂಬಂಧವೋ?
ನೆಲದ ಮಣ್ಣ ವಾಸನೆ ಮೂಗಿಗೆ ಬಡಿದದ್ದೇ… ಮಾವಿನ ತಳಿರು, ತೆನೆ ಹೀಚು ಮಿಡಿ ಎಲ್ಲವೂ ಘಮ್ ಎನ್ನುವಂತೆ ಕಣ್ಮುಂದೆ ಬಂದವು. ಈಗಲೂ ನಿನ್ನ
ತುಮ್ ಮಿಲೆ…ದಿಲ್ ಖಿಲೆ ಹಾಡು ನೆನಪಾಗದಿರುತ್ತಾ….!
ಶುದ್ಧ ಕನ್ನಡಪ್ಪ! ಇದರ ಅರ್ಥ ಹೇಳೋ ಎಂದು ನೀನು ನನ್ನ ಬೆನ್ನಿಗೆ ಮೊಟಕುತಿದ್ದೆ…
ನನ್ನ ಜೀವ ರೋಮಾಂಚನಗೊಂಡು ನೀ ಸಿಕ್ಕೆ…ಹೃದಯದ ಬಾಗಿಲು ತೆಗೆಯಿತು, ಮತ್ತೇನು ಬೇಕು ಬಾಳಲು ಎಂದು ಗುನಗಿದ್ದೇ ನಿನ್ನ ಕಣ್ಣು ಮಿನುಗುತಿದ್ದವು. ಎಂಥಾ ರೋಮಾಂಚನ!
ಮದ್ಯ ಪ್ರೀಯರು ಒಗರನ್ನು ಗುಟುಕರಿಸುತ್ತಾ ಎಂಥಾ ಮಜಾ ಅಂಥಾರಲ್ಲ…. ಅದೆಂಥಾ ಮಜಾ…. ನಿನ್ನ ಕಣ್ಣೋಟ, ಸ್ಫರ್ಶ, ಸಾನಿಧ್ಯದ ಮುಂದೆ ಯಾವ ಮದ್ಯ,ಮೋಹಿನಿಯೂ ಸಾಟಿಯಾಗರು…
ತು ಮಿಲೆ… ದಿಲ್ ಖಿಲೆ ಅವರ್ ಜೀನೆ ಕೊ ಕ್ಯಾ ಚಾಯಿಯೆ………
ನನ್ನದೂ ಒಂದು ಮಧುರ ಹಾಡಿತ್ತು ನೆನಪಿದೆಯಾ….?
ಕಣ್ಣಾಮುಚ್ಚಾಲೆ ಆಡೋಣ ಅಂದಾಗಲೆಲ್ಲಾ ನೆನಪಾಗುತಿದ್ದ ಹಾಡದು…..
ತೆರೆದಿದೆ ಬಾನು….. ಹಿತವಾದ ಗಾಳಿ… ನಾವು ಬಂದದ್ದೆಲ್ಲಿಗೆ ಎಲ್ಲೋ? ಯಾಕೋ? ಅದೆಲ್ಲಾ ಯಾಕೋ ನೀ ನನ್ನ ಸಾಥಿ ಆದ ಮೇಲೆ…..
ನೀನು ವರಿಜನಲ್ ಹಾಡತಿದ್ದೆ…… ನೆನಪಿಸಿಕೊ
ಎ ಹಸೀ ವಾದಿಯಾ…. ಎ ಖುಲಾ ಆಸಮಾ
ಆಗಯೆ ಹಮ್ ಕಹಾ…… ಹೈ ಮೆರಿ ಸಾಜನಾ… ಎ ಬಂಧನ್ ಹೈ ಪ್ಯಾರಕಾ ದೇಕೋ……
ಈ ಮಧುರ ಅನುಭೂತಿಗೆ ಹೆಸರಿಡಬೇಕೆ?
ಜನ, ಪ್ರೀತಿ-ಪ್ರೇಮ,ಸ್ಫರ್ಶ ಅನುರಾಗ,ಹೃದಯರಾಗ ಏನೇನೆಲ್ಲಾ ಹೆಸರಿಟ್ಟುಬಿಡುತ್ತಾರೆ!
ಇವೆಲ್ಲಾ ಸೇರಿಯೆ ಮಧುರಕಾವ್ಯವಾಗುವುದು.
ನೆನಪಿದೆಯಾ….
ನನ್ನ ಅಪಘಾತಕ್ಕೆ ಮೊದಲು ನಾವು ಕಟ್ಟಿಕೊಂಡ ಕನಸುಗಳೇನು? ನಾನು ಮಧುರ ದುರಂತ ಮದುವೆ ಎನ್ನುತಿದ್ದೆ ನೀನು ದುರಂತ ತೆಗೆದುಬಿಡು…. ಜೀವನವಿಡಿ ಮಧುರವಾಗಿರುವುದೇ ಬದುಕು ಎಂದುಬಿಡುತಿದ್ದೆ!.
ಹೌದು ಮಾರಾಯ್ತಿ ಹುಡುಗಿಯರಿಗೆ ಅದೆಷ್ಟು ಬೇಗ ಮೆಚ್ಯುರಿಟಿ ಬಂದುಬುಡುತ್ತೆ. ನಿಮ್ಮ ದೈಹಿಕ ಮೆಚ್ಯುರಿಟಿಗೂ ಭೌತಿಕ ಬೆಳವಣಿಗೆಗಳಿಗೂ ಅದೆಂಥಾ ಸಂಬಂಧವೋ…
ನಮ್ಮದು ಗಂಡು ಪ್ರಾಣಿ ಜನ್ಮ, ದೈಹಿಕ ಮೆಚ್ಯರಿಟಿಯೂ ಇಲ್ಲ ಭೌತಿಕ ಕೂಡಾ…!
ಬದುಕಿಡೀ ಹುಚ್ಚಾಡುತ್ತಲೇ ಮದುಕರಾಗಿಬಿಡುತ್ತೀವಿ. ಮರ ಮುಪ್ಪಾದರೂ ಹುಳಿ ಮುಪ್ಪೆ, ಮುಪ್ಪೇ ಬಾರದ ಇಮ್ಯಾಚುರಿಟಿಗೆ ಏನಾದರೂ ಮೌಲ್ಯವಿದೆಯಾ?
ನಿನ್ನ ಧ್ಯಾನದಲ್ಲಿದ್ದಾಗಲೆಲ್ಲಾ ಎಂ.ಡಿ. ಪಲ್ಲವಿಯ ಸ್ವರದಲ್ಲಿ ನೆನಪಾಗುವ ಹಾಡು
ಎಲ್ಲಿ ಜಾರಿತು ಮನವು ಎಲ್ಲೆ ಮೀರಿತು…
ಎಲ್ಲಿ ಅಲೆಯುತಿಹುದೋ ಯಾಕೆ ನಿಲ್ಲದಾಯಿತು…..
ಹೀಗೆ ನನ್ನ ನಿನ್ನ ಸಮ್ಮಿಲನ, ಸಾಂಗತ್ಯವೆಂದರೆ ಅದು ಹಾಡು, ಗೀತೆ, ಹಾಡು ಸಂಗೀತ, ಮತ್ತದೇ ಹಾಡು ಸಾಹಿತ್ಯ ಹಾಡು, ಬೇಂದ್ರೆ, ಕುವೆಂಪು, ಹಂಸಲೇಖ,ಜಯಂತ್ ಕಾಯ್ಕಿಣಿ, ಇತ್ಯಾದಿ … ಇತ್ಯಾದಿ.
ಆಮೇಲೆ… ಅಮೇಲೇನು ಗೊತ್ತಾ?
ಯಾವ ಕವಿಯು ಬರೆಯಲಾರ,
ಒಲವಿನಿಂದ…. ಕಣ್ನೋಟದಿಂದ
ಹೃದಯದಲ್ಲಿ ನೀ ಬರೆದ ಈ ಪ್ರೇಮಗೀತೆಯ…
ನಿನ್ನ ಕವಿತೆ ಎಂಥ ಕವಿತೆ ರಸಿಕರಾಡೊ ನುಡಿಗಳಂತೆ ಮಲ್ಲೆ ಹೂವು ಅರಳಿದಂತೆ…
ಚಂದ್ರ ಕಾಂತಿ ಚೆಲ್ಲಿದಂತೆ…… ಇಂಥ ನಿನ್ನ ಸ್ಫರ್ಶ ಮಾತ್ರದಿಂದಲೇ ಇಂದು ನಿನ್ನೆ, ನಾಳೆಗಳೆಲ್ಲಾ ಬದಲಾಯ್ತು
ಜಸ್ಟ್ ಖುಷಿ ಮಿಲ್ ಗಯಿ….
ಈ ಹಿಡಿ ಖುಷಿ, ಪ್ರೀತಿಗಾಗಿ ಜನರಾಡುವ ಆಟ ನೋಡಿದಾಗ ನನಗನಸುತ್ತೆ ಪ್ರತಿದಿನ ಪ್ರೇಮಿಗಳ ದಿನ, ವೆಲೆಂಟೈನ್ ಡೇ ಆಗಬಾರದೆ?
ಇಂತಿ ನಿನ್ನ ವೆಲೆಂಟೈನ್
(ಹಕೋಕ) 13-02-2024