

—————————————-
‘ನಾವು ಬಂದಿರುವುದೇ ಸಂವಿಧಾನ ಬದಲಿಸುವುದಕ್ಕೆ’ ಎಂದು ಹಿಂದೆ ಹೇಳಿದ್ದ ಬಿಜೆಪಿ ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆ ಈಗ ಮತ್ತೆ ಮುಂದಿನ ಚುನಾವಣೆ ಯಲ್ಲಿ 400 ಎಂಪಿ ಗಳನ್ನು ಗೆಲ್ಲಿಸಿ ನಾವು ಸಂವಿಧಾನ ಬದಲಿಸುತ್ತೇವೆ ಎಂದು ಹೇಳಿರುವುದು ಭಾರತದ ಜನಸಮುದಾಯಲ್ಲಿ ಆತಂಕ ಹಾಗೂ ಭಯವನ್ನು ಹುಟ್ಟಿಸುತ್ತದೆ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸುವದಾಗಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷರ ಶಾಂತಾರಾಮ ನಾಯಕ ತಿಳಿಸಿದ್ದಾರೆ,
ನಮ್ಮ ಹೆಮ್ಮೆಯ ಸಂವಿಧಾನದ ಅಡಿಯಲ್ಲಿ 5 ಸಲ ಎಂಪಿ ಆಗಿ ಅಧಿಕಾರ , ಸಂಪತ್ತು ಅನುಭವಿಸುತ್ತಿರುವ ಸಂಸದರು ನಾಲ್ಕುವರೇ ವರ್ಷದ ನಂತರ ಪ್ರತ್ಯಕ್ಷವಾಗಿ ದೇಶ ವಿರೋಧಿ ಹೇಳಿಕೆ ನೀಡುತ್ತಿರುವದು ಸಹಿಸಿಕೊಳ್ಳಲು ಸಾಧ್ಯವಿಲ್ಲ.
1950 ರಲ್ಲಿ ಸಂವಿಧಾನವನ್ನು ಅಂಗೀಕರಿಸಿದಾಗ ಆರ್ ಎಸ್ ಎಸ್ ಸಂವಿಧಾನ ವಿರೋಧಿಸಿತ್ತು, ಅದನ್ನೇ ಅನಂತಕುಮಾರ ಪುನ:ರುಚ್ಚರಿಸಿದ್ದಾರೆ, ಆರ್ ಎಸ್ ಎಸ್ ಮತ್ತು ಬಿಜೆಪಿ ಭಾರತೀಯ ಸಂವಿಧಾನ ಅಳಿಸಿಹಾಕಿ ಮನುಸ್ಮೃತಿ ಜಾರಿಗೆ ತರಲು ರಹಸ್ಯ ಕಾರ್ಯಸೂಚಿಯನ್ನು ಹೊಂದಿದೆ. ಅವರು ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಮತ್ತು ಧರ್ಮ ನಿರಪೇಕ್ಷತೆ ಮತ್ತು ಸ್ವಾತಂತ್ರ್ಯದ ಹಕ್ಕನ್ನು ಕಸಿದುಕೊಳ್ಳಲು ಪ್ರಯತ್ನ ನಡೆಸಿದ್ದಾರೆ,
ತೋರಿಕೆಗೆ ಅನಂತ ಕುಮಾರ್ ಹೇಳಿಕೆ ಪಕ್ಷದ ಹೇಳಿಕೆ ಅಲ್ಲ ಎನ್ನುವವರು ತಾಕತ್ತಿದ್ದರೆ ಬಿಜೆಪಿ ಯಿಂದ ಉಚ್ಚಾಟಿಸಲಿ ಎಂದು ಕರ್ನಾಟಕ ಪ್ರಾಂತ ರೈತ ಸಂಘದಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ ತಿಳಿಸಿದ್ದಾರೆ
