


ಪ್ರೇಕ್ಷಕರು,ವಿಮರ್ಶಕರ ಮೆಚ್ಚುಗೆ ಗಳಿಸಿದ ಇತ್ತೀಚಿನ ಕನ್ನಡ ಚಿತ್ರ ಕೆರೆಬೇಟೆ. ಕೆರೆಬೇಟೆ ಎಂದರೆ ಮಲೆನಾಡಿನ ಜನ ಆಚರಿಸುವ ಮೀನು ಹಿಡಿಯುವ ದೇಶೀ ಕೆರೆ ಹಬ್ಬ. ಈ ಕೆರೆಬೇಟೆ ಗ್ರಾಮೀಣ ಕ್ರೀಡೆಯ ವ್ಯಾಮೋಹಿಯಾದ ಹುಲಿಮನೆ ನಾಗ ಕೆರೆಬೇಟೆ ಅದಲ್ಲಿ ಹೋಗುತ್ತಾ ಮೀನುಹಿಡಿಯುವ ಕುಶಲನಾಗಿ ಬದುಕುತ್ತಿರುತ್ತಾನೆ. ಈ ನಾಗನ ವೃತ್ತಿ ಕಾಡು ಕಡಿದು ನಾಟಾ ಮಾರುವ ವ್ಯವಹಾರ.
ಕ್ರೀಯಾಶೀಲ, ಉತ್ಸಾಹಿ ಯುವಕನಾದ ನಾಗನ ಬದುಕಿನಲ್ಲಿ ಪ್ರೇಮ ಪಲ್ಲವಿಸುತ್ತದೆ.

ಈ ಪ್ರೇಮಕ್ಕೆ ಮಾಮೂಲು ಬೆರಕೆ ಹಿನ್ನೆಲೆಯ ಅಮ್ಮನ ಅಂತರ್ಜಾತಿ ವಿವಾಹದ ಪ್ರಕರಣ ಅಡ್ಡಿ ಬರುತ್ತದೆ. ಈ ಜಾತಿ ವ್ಯವಸ್ಥೆಯನ್ನು ನಾಗ ಗೆದ್ದನೆ? ಎಂಬುದು ಚಿತ್ರದ ತಿರುಳು. ಮಲೆನಾಡಿನ ಬಿಂಗಿಪದ,ಅಂಟಿಕೆ ಪಂಟಿಕೆ, ಕಾಯಿ ಒಡೆಯುವ ಆಟ ಎಲ್ಲವೂ ಸೇರಿದ ಚಿತ್ರಕತೆ ಅದಕ್ಕೊಪ್ಪುವ ವಾಸ್ತವದ ಚಿತ್ರಣ ಇಲ್ಲಿದೆ.
ಸರಿಸುಮಾರು ಎರಡು ತಾಸುಗಳ ವರೆಗೆ ಮೂಮೂಲು ಸಿನೆಮಾದಂತೆ ಸಾಗುವ ಈ ಕತೆ ಕೊನೆಯ ಅರ್ಧಗಂಟೆ ಮೊದಲು ತನ್ನ ದಾಟಿ-ದಾರಿ ಬದಲಿಸುತ್ತದೆ.
ಇದೇ ಚಿತ್ರದ ಟ್ವಿಸ್ಟ್ ಎರಡು ಗಂಟೆ ನೋಡಿಸಿಕೊಂಡು ಹೋಗುವ ಸಿನೆಮಾ ಒಮ್ಮೇಲೇ ನೋಡುಗನನ್ನು ಕುರ್ಚಿಯ ತುದಿಗೆ ತಂದು ಕೂರಿಸುವ ಅದ್ಭುತ ತಿರುವು ಮತ್ತು ಕ್ಲೈಮ್ಯಾಕ್ಸ್ ಈ ಚಿತ್ರದ ವಿಶೇಶ ಮತ್ತು ಹೈಲೈಟ್.

ಈ ಚಿತ್ರ ಕಟ್ಟಿಕೊಟ್ಟ ನಿರ್ಧೇಶಕ ರಾಜ್ಗುರು ಮತ್ತು ನಟ, ನಿರ್ಮಾಪಕ ಗೌರಿಶಂಕರ್ ಶಿವಮೊಗ್ಗದ ಸೊರಬಾ ಮೂಲದವರು. ಸೊರಬಾದ ದೇಶೀ ಕನ್ನಡವನ್ನು ಬಳಸಿಕೊಂಡ ಈ ತಂಡ ಮಲೆನಾಡಿನ ಕೋಗಾರು,ಸಿದ್ಧಾಪುರ, ಸೊರಬಾಗಳ ಪ್ರಕೃತಿ ಸೊಬಗನ್ನು ಕಟ್ಟಿಕೊಟ್ಟಿದೆ.
ಈ ಚಿತ್ರಕ್ಕಿಂತ ಮೊದಲು ಡೊಳ್ಳು ಸಿನೆಮಾದ ಭಾಗವಾಗಿದ್ದ ರಾಜ್ ಗುರು ತಂಡ ಮಲೆನಾಡಿನ ವೀಶಿಷ್ಟ್ಯವನ್ನು ಬೆಳ್ಳಿತೆರೆಗೆ ತರುವ ಮೂಲಕ ಮಲೆನಾಡಿನ ಅನನ್ಯ ವೈಶಿಷ್ಟ್ಯಗಳನ್ನು ಜಗತ್ತಿಗೆ ಕಾಣಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಮುಂಗಾರಿನ ಮಿಂಚು, ಮುಂಗಾರಿನ ಮಳೆ ಸೇರಿದಂತೆ ಅನೇಕ ಕನ್ನಡ ಚಿತ್ರಗಳಲ್ಲಿ ಮಲೆನಾಡನ್ನು ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಟ್ಟಿದ್ದಾರೆ. ಆದರೆ ಇಂಥ ಪ್ರಸಿದ್ಧ ಸಿನೆಮಾಗಳಲ್ಲಿ ಕಾಣದ ನೇಟಿವಿಟಿಯನ್ನು ಕೆರೆಬೇಟೆ ಪರಿಚಯಿಸಿದೆ.
ಪುನೀತ್ ರಾಜ್ ಕುಮಾರ, ಪವನ್ ಒಡೆಯರ್, ಕೋಮಲ್, ದಿ.ಎ.ಆರ್. ಬಾಬು ಸೇರಿದಂತೆ ಅನೇಕ ತಂತ್ರಜ್ಞರು ನಟರ ಜೊತೆ ಪಳಗಿದ ರಾಜ್ ಗುರು ತಮ್ಮ ಅನುಭವವನ್ನು ಈ ಚಿತ್ರದಲ್ಲಿ ಎರಕ ಹೊಯ್ದಿದ್ದಾರೆ. ನಾಯಕ ಗೌರಿ ಶಂಕರ್ ಸೇರಿದಂತೆ ಅನೇಕರ ಶ್ರಮ ಈ ಚುತ್ರದುದ್ದಕ್ಕೂ ಢಾಳಾಗಿ ಕಾಣುತ್ತದೆ.
ಸ್ಯಾಂಡಲ್ ವುಡ್ ನಲ್ಲಿ ಮಲ್ನಾಡ್ ವುಡ್ ಶಕೆ ಪ್ರಾರಂಭಿಸಿರುವ ಮಲೆನಾಡಿನ ಪ್ರತಿಭೆಗಳ ಈ ತಂಡ ಕನ್ನಡ ಚಿತ್ರರಂಗಕ್ಕೆ ಹೊಸ ಟ್ರೆಂಡ್ ನ ಸಿನೆಮಾ ಕೊಡುವ ಮೂಲಕ ರಿಸ್ಕ್ ತೆಗೆದುಕೊಂಡಿದ್ದನ್ನು ಕಾಣಬಹುದು. ಸವಕಲು ನಿರೂಪಣೆಗೆ ಜೋತು ಬೀಳದೆ ಹೊಸತನ ಪರಿಚಯಿಸಿರುವ ರಾಜ್ಗುರು ಕನ್ನಡ ಚಿತ್ರರಂಗದಲ್ಲಿ ಮಲ್ನಾಡ್ ವುಡ್ ಪರಿಚಯಿಸಿರುವಂತಿದೆ. ಇಂಥ ಚಿತ್ರದ ಗೆಲುವು, ಪ್ರೋತ್ಸಾಹ ಇಂಥ ಹೊಸ ಪ್ರಯೋಗಗಳಿಗೆ ಉತ್ತೇಜನವಾಗಬಲ್ಲದು.ಹೊಸ ಚಿಂತನೆಯ ಯುವಕರ ಈ ತಂಡ ಕನ್ನಡ ಚಿತ್ರರಂಗಕ್ಕೆ ದಾರಿದೀಪವಾಗಬಹುದೆಂದು ನಿರೀಕ್ಷಿಸಬಹುದು.
