


ನೇಪಥ್ಯಕ್ಕೆ ಸರಿಯುವ ಮಾತನಾಡಿದ್ದ ಸಂಸದ ಅನಂತಕುಮಾರ ಹೆಗಡೆ ದಿಢೀರನೆ ಎದ್ದು ಕುಳಿತು ನಾನೇ ಅಭ್ಯರ್ಥಿ ಎಂದು ಹೂಂಕರಿಸಿ ಕ್ಷೇತ್ರದಾದ್ಯಂತ ಸುತ್ತಾಡತೊಡಗಿದಾಗ ಆಶ್ಚರ್ಯ ಚಕಿತರಾದ ಎಲ್ಲರೂ ಕೇಳಿದ್ದು ಅನಿ ಐಲ್ ಮರೆ ಅನಂತ ಹೆಗಡೆ ಎಂದು … ಯಾಕೆಂದರೆ ಸಂಸದ, ಸಚಿವರಾಗಿ ಮನೆಯೊಳಗೆ ಅವಿತಿದ್ದು ನಾಪತ್ತೆಯಾದರು ಎನ್ನುತ್ತಿರುವಾಗ ಅನಂತಕುಮಾರ ಹೆಗಡೆ ಹೊರಬಂದಿದ್ದರು.

ಮಾಜಿ ಸ್ಫೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಬಿ.ಜೆ.ಪಿ.ಯ ಉತ್ತರ ಕನ್ನಡದ ಅಭ್ಯರ್ಥಿಯಾಗುತ್ತಾರೆ ಎಂದು ಓಡಾಟ ಪ್ರಾರಂಭಿಸಿದ್ದಾಗ ಅನಂತಕುಮಾರ ಹೆಗಡೆ ಹಿಂದಿನ ಚುನಾವಣೆಗಳಂತೆ ಈ ಬಾರಿ ಕೂಡಾ ಗಡಿಬಿಡಿಯಿಂದ ಹೊರ ಬಂದಿದ್ದರು.

ಕಾಳಿಂಗ ಸರ್ಪದಂತೆ ಆರಾಂ ಆಗಿ ತಿಂದುಂಡು ಹಾಯಾಗಿ ನಿದ್ರೆ ಮಾಡುತಿದ್ದ ಅನಂತ ಕುಮಾರ ಹೆಗಡೆ ಪ್ರಾರಂಭದ ಒಂದೆರಡು ಅವಧಿ ಸ್ವಲ್ಫ ಕ್ಷೇತ್ರ ಸುತ್ತಿದ್ದನ್ನು ಬಿಟ್ಟರೆ ಆ ನಂತರ ಹಿಂದುತ್ವ ವಾದಿ ಹೆಗಡೆ ರೈಲ್ ಬಿಟ್ಟಿದ್ದೇ ಹೆಚ್ಚು. ಇಂಥ ಅನಂತ ಹೆಗಡೆ ಈ ಬಾರಿ ಸ್ಫರ್ಧೆಯಲ್ಲಿ ಇಲ್ಲ. ಬಿ.ಜೆ.ಪಿ. ಗೆ ಅಭ್ಯರ್ಥಿ ಮುಖ್ಯವಲ್ಲ ನಮಗೆ ಕಮಲವೇ ಅಭ್ಯರ್ಥಿ ಎಂದು ಹೇಳುವ ಬಿ.ಜೆ.ಪಿ.ಯ ಮಾಮೂಲು ಡೈಲಾಗ್ ಹೇಳುತ್ತಲೇ ಅನಂತಕುಮಾರ ಹೆಗಡೆ ಒಂದೆರಡು ಬಾರಿ ನಿಮ್ಮಲ್ಲ್ಲಿ ಯಾರಿಗಾದರೂ ಗಂಡಸ್ಥನವಿದ್ದರೆ, ತಾಕತ್ತಿದ್ದರೆ ಬನ್ನಿ ಎಂದು ಪಂಥಾಹ್ವಾನ ಮಾಡಿ ಕಾಲು ಕೆದರಿದ್ದ ಹೆಗಡೆಗೆ ಮರ್ಮಾಘಾತ ವಾಗುವಂತೆ ಅವರ ಜಾತಿಯ ಹಿರಿಯ ಮುಖಂಡ ವಿಶ್ವೇಶ್ವರ ಹೆಗಡೆ ಕಾಗೇರಿ ಸೆಡ್ಡು ಹೊಡೆದು ಟಿಕೆಟ್ ತಂದಿದ್ದಾರೆ.
ಈ ಹಿಂದಿನ ವಿಧಾನ ಸಭೆ ಚುನಾವಣೆಯಲ್ಲಿ ಅತಿ ಆತ್ಮವಿಶ್ವಾಸದಿಂದ ಸೋತ ವಿಶ್ವೇಶ್ವರ ಹೆಗಡೆ ಈ ಬಾರಿ ಮೋದಿ ನಾಮಬಲವೇ ತನಗೆ ಗೆಲ್ಲಿಸುತ್ತೆ ಎಂದು ನಂಬಿದ್ದಾರೆ. ಆದರೆ ವಾಸ್ತವ ಬೇರೆ. ಇವರ ಎದುರಾಳಿ ಡಾ. ಅಂಜಲಿ ನಿಂಬಾಳ್ಕರ್ ಉತ್ತರ ಕನ್ನಡ ಕ್ಷೇತ್ರದ ಬಹುಸಂಖ್ಯಾತ ಮರಾಠಿ ಭಾಷಿಕರ ಪ್ರತಿನಿಧಿ. ಆಡಳಿತ ಕಾಂಗ್ರೆಸ್ ನ ೫ ಜನ ಶಾಸಕರ ಬೆಂಬಲ ಕಾಂಗ್ರೆಸ್ ಅಭ್ಯರ್ಥಿಗಿದೆ.
ತನ್ನ ಮೂವತ್ತು ವರ್ಷಗಳ ರಾಜಕೀಯದಲ್ಲಿ ಅನಂತಕುಮಾರ ಹೆಗಡೆಯಂತೆ ಜಿಲ್ಲೆಯ ಈಡಿಗ-ನಾಮಧಾರಿ- ದೀವರನ್ನು ಬಳಸಿಕೊಂಡ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪರವಾಗಿ ನಿಂತಿದ್ದೇ ಇಲ್ಲ. ಅಲ್ಪಸಂಖ್ಯಾತರು, ಹಿಂದುಳಿದವರು, ಕೆಲವರು ಮೇಲ್ವರ್ಗದವರನ್ನೂ ತುಳಿದ ಕಾಗೇರಿ ಉತ್ತರ ಕನ್ನಡ ಜಿಲ್ಲೆಯ ಸಂಸದರ ಕ್ಷೇತ್ರ ಬಯಸುವ ವ್ಯಕ್ತಿತ್ವದವರಲ್ಲ. ಇಂಥ ಅನೇಕ ಮೈನಸ್ ಗಳ ನಡುವೆ ಹಾಲಿ ಸಂಸದ ಅನಂತಕುಮಾರ ಹೆಗಡೆಯವರ ವಿರೋಧ ವಿಶ್ವೇಶ್ವರ ಹೆಗಡೆಯವರ ಲಾಗಾಯ್ತಿನ ಅನಾನುಕೂಲ.
ಹೀಗೆ ಶಾಸಕರು, ಸಂಸದರು , ವಿಧಾನಸಭಾ ಅಧ್ಯಕ್ಷರು ಆಗಿದ್ದಾಗ ಹಿಂದುತ್ವದ ಹೆಸರಲ್ಲಿ ವೈದಿಕತೆ ಮೆರೆದ ವಿಶ್ವೇಶ್ವರ ಹೆಗಡೆ ಸಂಭಾವಿತರಾದರೂ ಅನಂತಕುಮಾರ ಹೆಗಡೆಯವರಂತೆ ನೇರ- ನಡೆಯವರಲ್ಲ ಈ ಅಂಶಗಳೇ ಮಾರಕವಾಗಿ ಈ ಬಾರಿ ಗ್ಯಾರಂಟಿ ಹೋಶ್ ನಲ್ಲಿರುವ ಕಾಂಗ್ರೆಸ್ ಮಹಿಳೆಯೊಬ್ಬರಿಂದ ವಿಶ್ವೇಶ್ವರ ಹೆಗಡೆಯವರನ್ನು ಸೋಲಿಸುವ ಮೂಲಕ ಬಿ.ಜೆ.ಪಿ.ಯ ಬಣ್ಣದ ಮಾತುಗಳಿಗೆ ಶಾಸ್ತಿ ಮಾಡಲಿರುವ ಲಕ್ಷಣ, ಉತ್ಸಾಹ ಜನಮಾನಸದಲ್ಲಿ ಕಾಣುತ್ತಿದೆ. ಮೋದಿ ನಾಮಬಲ ನಂಬಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಭಾವದಿಂದ ಟಿಕೆಟ್ ತಂದಂತೆ ಗೆದ್ದು ತೋರಿಸುವರೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.
