



ಸಿದ್ದಾಪುರ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ತಾಲೂಕ ಪಂಚಾಯತ, ತಾಲೂಕಾ ಆಡಳಿತ ಹಾಗೂ ತಾಲೂಕಾ ಸ್ವೀಪ್ ಸಮಿತಿ ವತಿಯಿಂದ ತಾಲೂಕಿನ ನಿಡಗೋಡ ಮಾರಿಕಾಂಬಾ ಜಾತ್ರೆಯಲ್ಲಿ ಮತದಾನ ಜಾಗೃತಿಯ ಸೆಲ್ಫಿ ಕಾರ್ನರ್ ಕಾರ್ಯಕ್ರಮ ನಡೆಸಲಾಯಿತು.
ಸೆಲ್ಫಿ ಕಾರ್ನರ ಕಾರ್ಯಕ್ರಮಕ್ಕೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವಿಜಯಾ ಚಾಲನೆ ನೀಡಿದರು.
ಈ ವೇಳೆ ಮತದಾನ ಜಾಗೃತಿ ಗೀತೆಗಳನ್ನು ಪ್ರಸಾರ ಮಾಡಲಾಯಿತು. ಜನಜಾಗೃತಿ ಬ್ಯಾನರ್ ಹಾಗೂ ಬಂಟಿಂಗ್ ಪ್ರದರ್ಶಿಸಲಾಯಿತು. ಜಾತ್ರಗೆ ಬಂದಂತಹ ಭಕ್ತಾಧಿಗಳು ಹಾಗೂ ಗ್ರಾಮಸ್ಥರು ಸೆಲ್ಫಿ ಸ್ಟ್ಯಾಂಡ್ ಹತ್ತಿರ ನಿಂತುಕೊಂಡು ಮತದಾನ ಜಾಗೃತಿ ಸೆಲ್ಫಿ ಪಡೆಡದುಕೊಂಡರು.
ಈ ಸಂದರ್ಭದಲ್ಲಿ ತಾಲೂಕಾ ಯೋಜನಾಧಿಕಾರಿ ಬಸವಾರಾಜ ಗುಲೇರ್, ಸಹಾಯಕ ನಿರ್ದೇಶಕಿ ವಿದ್ಯಾ ದೇಸಾಯಿ , ವ್ಯವಸ್ಥಾಪಕ ಮಹ್ಮದ ರಿಯಾಜ ಹಾಗೂ ಎನ್.ಆರ್.ಎಲ್.ಎಮ್ ಸಿಬ್ಬಂದಿಗಳು ಹಾಜರಿದ್ದರು.
