


ಸಿದ್ದಾಪುರ
ಯಾವುದೇ ವಿಷಯ ಕಲಿತದ್ದು ಜೀವನಕ್ಕೆ ಆಸರೆಯಾಗಬೇಕು, ದಾರಿಯಾಗಬೇಕು. ಹೆಚ್ಚು ಅಂಕ ಪಡೆದು ಉನ್ನತ ಹುದ್ದೆ ಪಡೆಯುವ ಮನೋಭಾವದ ಬದಲು ಸಮಾಜದಲ್ಲಿ ಉತ್ತಮ ಪ್ರಜೆಯಾಗುವ ಮನಸ್ಸು ಬರಬೇಕು ಎಂದು ಖ್ಯಾತ ವೈದ್ಯ ಡಾ|ಶ್ರೀಧರ ವೈದ್ಯ ಹೇಳಿದರು.
ಅವರು ಪಟ್ಟಣದ ಬಾಲಭವನದಲ್ಲಿ ಸಿದ್ದಾಪುರ ಸ್ಪೋರ್ಟ್ಸ ಅಕಾಡೆಮಿ ಆಯೋಜಿಸಿದ ಕ್ರೀಡಾ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಕ್ರೀಡೆ ದೈಹಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಸಹಕಾರಿ.ಇಲ್ಲಿ ಕ್ರೀಡಾ ಅಕಾಡೆಮಿ ಆರಂಭಿಸಿ ಆಸಕ್ತ ಯುವ ಕ್ರೀಡಾಪಟುಗಳಿಗೆ ತರಬೇತಿ ನೀಡಲು ಮುಂದಾಗಿರುವದು ಶಾಘ್ಲನೀಯ ಕಾರ್ಯ. ಕೇವಲ ಮಕ್ಕಳು ಮಾತ್ರವಲ್ಲದೇ ಪಾಲಕರು ಇದರ ಸದುಪಯೋಗಪಡೆಯಲು ಮುಂದಾಗಬೇಕು ಎಂದರು.


ಮುಖ್ಯ ಅತಿಥಿ ಲಯನ್ಸ ಕ್ಲಬ್ ಅಧ್ಯಕ್ಷ ರವಿ ಎಂ.ಪಾಟೀಲ ಮಾತನಾಡಿ ಸಮರ್ಪಕವಾದ ತರಬೇತಿ ದೊರೆತರೆ ಉತ್ತಮ ಕ್ರೀಡಾಪಟುಗಳು ರೂಪುಗೊಳ್ಳುತ್ತಾರೆ. ಹಿಂದಿನ ವರ್ಷದಲ್ಲಿ ನಮ್ಮ ಅಕಾಡೆಮಿಯಿಂದ ತರಬೇತಿ ನೀಡುತ್ತಿರುವ ತರಬೇತುದಾರರು ಯಾವ ಫಲಾಪೇಕ್ಷೆಯಿಲ್ಲದೇ ತರಬೇತಿ ನೀಡುತ್ತ ಬಂದಿದ್ದು ಶಿಬಿರದ ಯಶಸ್ಸಿಗೆ ಕಾರಣವಾಗಿದೆ ಎಂದರು.
ಮುಖ್ಯ ಅತಿಥಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಕೊಳಗಿ ಮಾತನಾಡಿ ಕ್ರೀಡೆ ಅತ್ಯಂತ ಮಹತ್ವದ್ದು. ಎಲ್ಲ ಕ್ಷೇತ್ರಗಳಲ್ಲಿಯೂ ಕ್ರೀಡಾ ಮನೋಭಾವ ಇರಬೇಕು ಎನ್ನುವ ಮಾತಿನಲ್ಲೇ ಅದರ ಮಹತ್ವವಿದೆ. ಏಕಾಗ್ರತೆ,ಶ್ರಮ ಕ್ರೀಡಾ ಸಾಧನೆಗೆ ಅನಿವಾರ್ಯ. ಅರೆ ನಗರ-ಗ್ರಾಮೀಣ ಕ್ಷೇತ್ರವಾದ ಇಲ್ಲಿ ಕ್ರೀಡಾ ಅಕಾಡೆಮಿ ಸಂಘಟಿಸಿ, ಮುಂದಿನ ತಲೆಮಾರಿನ ಕಿರಿಯ ಆಸಕ್ತರಿಗೆ ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಲು ಅವಕಾಶ ಕಲ್ಪಿಸಿದ್ದರ ಅತ್ಯುತ್ತಮ ಫಲಿತಾಂಶ ಮುಂದಿನ ವರ್ಷಗಳಲ್ಲಿ ಕಾಣುತ್ತದೆ ಎಂದರು. ಮುಖ್ಯ ಅತಿಥಿ ಅಕಾಡೆಮಿಯ ನಿರ್ದೇಶಕ ಡಾ|ನಂದಕುಮಾರ ಪೈ ಮಾತನಾಡಿ ಭರವಸೆಯ ಬೆಳಕು ನಮ್ಮ ಅಕಾಡೆಮಿಯ ಘೋಷವಾಕ್ಯ. ಆಸಕ್ತ ಮಕ್ಕಳಿಗೆ ಸಮರ್ಪಕ ತರಬೇತಿ ನೀಡಿ ಕ್ರೀಡಾರಂಗದಲ್ಲಿ ಸಾಧನೆ ಮಾಡುವಂತೆ ಪ್ರೆರೇಪಿಸುವದು ನಮ್ಮ ಉದ್ದೇಶ ಎಂದರು.
ಮುಖ್ಯ ಅತಿಥಿ ಅಕಾಡೆಮಿಯ ಉಪಾಧ್ಯಕ್ಷ ಪಿ.ಬಿ.ಹೊಸೂರ ಮಾತನಾಡಿ ಉತ್ತಮ ಕ್ರೀಡಾಪಟುಗಳು ರೂಪುಗೊಳ್ಳಲಿ ಎನ್ನುವ ಸದಸುದ್ದೇಶದಿಂದ ಆಸಕ್ತ ಬಾಲ ಕ್ರೀಡಾಪಟುಗಳಿಗೆ ನಾವು ವೇದಿಕೆ ಒದಗಿಸುತ್ತಿದ್ದೇವೆ ಎಂದರು. ಅಕಾಡೆಮಿಯ ಖಜಾಂಚಿ ಸುದರ್ಶನ ಪಿಳ್ಳೆ ಮಾತನಾಡಿ ನಮ್ಮಲ್ಲಿ ಉತ್ತಮ ಕ್ರೀಡಾ ತರಬೇತುದಾರರಿದ್ದಾರೆ. ಪ್ರೋತ್ಸಾಹಕರಿದ್ದಾರೆ. ಮುಂದಿನ ಪೀಳಿಗೆ ಉತ್ತಮ ತರಬೇತಿ ಪಡೆದು ಕ್ರೀಡಾರಂಗದಲ್ಲಿ ಸಾಧನೆ ಮಾಡಬೇಕು ಎನ್ನುವದು ನಮ್ಮ ಕಾಳಜಿ ಎಂದರು.
ಅಧ್ಯಕ್ಷತೆವಹಿಸಿದ್ದ ಸ್ಪೋರ್ಟ್ಸ ಅಕಾಡೆಮಿ ಅಧ್ಯಕ್ಷ ವಿನಾಯಕ ಶೇಟ್ ಸ್ವಾಗತಿಸಿ,ಪ್ರಾಸ್ತಾವಿಕ ಮಾತನಾಡಿ ಕ್ರೀಡಾ ಸಂಸ್ಕೃತಿ ಬೆಳೆಸುವ ಉದ್ದೇಶದಿಂದ ೨ ವರ್ಷದ ಹಿಂದೆ ಸಮಾನಮನಸ್ಕರು ಕೂಡಿ ಆರಂಭಿಸಿದ ಅಕಾಡೆಮಿಯ ೨ನೇ ವರ್ಷದ ಶಿಬಿರ ಇದು.ಇದಕ್ಕೆ ಸಾರ್ವಜನಿಕರ,ಮುಖ್ಯವಾಗಿ ಮಕ್ಕಳ ಪಾಲಕರ ಸಹಕಾರ ಬೇಕು ಎಂದರು. ಅಕಾಡೆಮಿ ನಿರ್ದೇಶಕ ಮಹೇಶ ಭಟ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿವಿಧ ಕ್ರೀಡೆಗಳ ತರಬೇತುದಾರರಾದ ಮಾಧವ ನಾಯ್ಕ(ವಾಲಿಬಾಲ್),ಡೊಮೆನಿಕ್ ಫರ್ನಾಂಡಿಸ್(ಕ್ರಿಕೆಟ್),ಆನ ಂದ ನಾಯ್ಕ(ಕರಾಟೆ),ಸಂಕೇತ ವೈದ್ಯ(ಬಾಡ್ಮಿಂಟನ್),ಆನಂದ ಸ್ವಾಮಿ(ಚೆಸ್),ಮಂಜುನಾಥ ನಾಯ್ಕ(ಯೋಗ),ಹರ್ಷ ಚಂದಾವರಕರ್ ಹಾಗೂ ಅನಿಲ್ ಅಲ್ಮೇಡಾ(ಅಥ್ಲೆಟಿಕ್ಸ) ಅವರನ್ನು ಸನ್ಮಾನಿಸಲಾಯಿತು.
ಅಕಾಡೆಮಿ ನಿರ್ದೇಶಕ ಪ್ರಶಾಂತ ಶೇಟ್ ನಿರೂಪಿಸಿದರು.ಚಂದನ ಕೇರಕರ ವಂದಿಸಿದರು.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
