


ಆಕಾಶಕ್ಕೆ ತೂತು ಬಿದ್ದು ಉತ್ತರ ಕನ್ನಡ ಜಿಲ್ಲೆ ಮಳೆಗೆ ತತ್ತರಿಸುತ್ತಿದೆ. ಈ ಸಮಯದಲ್ಲಿ ತುರ್ತು ಸೇವೆಗಳು ಅನಿವಾರ್ಯ ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ತುರ್ತು ಸೇವೆಗಳ ಸ್ಥಿತಿಯೇ ಚಿಂತಾಜನಕವಾಗಿರುವ ಪರಿಸ್ಥಿತಿ ಜನಸಾಮಾನ್ಯರ ಬೇಸರಕ್ಕೆ ಕಾರಣವಾಗಿದೆ.

ಜಿಲ್ಲಾ ಉಸ್ತುವಾರಿ ಮಂಕಾಳು ವೈದ್ಯರ ಸೋಮಾರಿತನಿಂದ ಒಂದೆಡೆ ಅಗ್ನಿ ಸಾಮಕ ವ್ಯವಸ್ಥೆ ಹಳ್ಳ ಹಿಡಿದಿದ್ದರೆ, ಈಗ ೧೧೨ ವ್ಯವಸ್ಥೆಯನ್ನೇ ಬುಡಮೇಲಾಗಿಸಿರುವ ವರ್ತಮಾನ ಜನರ ಆತಂಕಕ್ಕೆ ಕಾರಣವಾಗಿದೆ.
ಕಳೆದ ಹತ್ತು ವರ್ಷಗಳಿಂದ ರಾಜ್ಯದಾದ್ಯಂತ ಚಾಲ್ತಿಯಲ್ಲಿರುವ ಯೋಜನೆ ೧೧೨ ಈ ಯೋಜನೆಯ ಲಾಭ ಜನಸಾಮಾನ್ಯರಿಗಾಗುತ್ತಿರುವುದು ವಾಸ್ತವ ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ವ್ಯವಸ್ಥೆಯನ್ನೇ ಹಳ್ಳ ಹಿಡಿಸುತ್ತಿರುವ ಬಗ್ಗೆ ಸಾರ್ವಜನಿಕ ವಲಯ ಬೇಸರ ವ್ಯಕ್ತಪಡಿಸಿದೆ.
ತುರ್ತು ಸ್ಥಿತಿಯಲ್ಲಿ ಸ್ಥಳಕ್ಕೆ ತಲುಪುವ ಜವಾಬ್ಧಾರಿ ಇರುವ ೧೧೨ ಗಾಡಿಗೆ ಹಿಂದೆ ಆಯಾ ತಾಲೂಕಿನ ವ್ಯಾಪ್ತಿಯ ಸಿಬ್ಬಂದಿಗಳನ್ನು ನಿಯೋಜಿಸಲಾಗುತಿತ್ತು. ಆದರೆ ಈಗ ಒಂದು ತಾಲೂಕಿನ ಪೊಲೀಸ್ ಸಿಬ್ಬಂದಿಗಳನ್ನು ಇನ್ನೊಂದು ತಾಲೂಕಿಗೆ ನಿಯೋಜಿಸುತ್ತಿರುವ ಹೊಸ ವ್ಯವಸ್ಥೆ ಸಿಬ್ಬಂದಿಗಳ ನೈತಿಕ ಸ್ಥೈರ್ಯ ಕುಂದಿಸುತ್ತಿರುವ ಆರೋಪಕ್ಕೆ ಉತ್ತರ ಕನ್ನಡ ಪೊಲೀಸ್ ವ್ಯವಸ್ಥೆ ಗುರಿಯಾಗಿದೆ.
ಡಿ.ಆರ್. ಮತ್ತು ಸಿವಿಲ್ ಪೊಲೀಸ್ ಸೇರಿದ ೧೧೨ ಹಿಂದಿನ ತಂಡ ಅನಿವಾರ್ಯತೆಗೆ ಆಪದ್ಭಾಂದವನಾಗಿತ್ತು. ಆದರೆ ಈಗ ಬೇರೆ ಕಡೆ ಇಲ್ಲದ ಅನ್ಯ ಠಾಣೆ, ಅನ್ಯ ತಾಲೂಕುಗಳ ಸಿಬ್ಬಂದಿಗಳನ್ನು ಮನಸ್ಸು ಬಂದ ಕಡೆ ನಿಯೋಜಿಸಿರುವ ಪರಿಣಾಮ ೧೧೨ ಸಾಮರ್ಥ್ಯ ಕುಗ್ಗಿಸುತ್ತಿರುವ ವಿಷಯ ಈಗ ಪೊಲೀಸ್ ಇಲಾಖೆ ದಾಟಿ ಸಾರ್ವಜನಿಕ ಚರ್ಚೆಯ ವಿಷಯವಾಗಿದೆ. ನೂತನ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಈ ತುಘಲಕ್ ವ್ಯವಸ್ಥೆ ಸರಿಪಡಿಸಬೇಕೆಂಬ ಬೇಡಿಕೆ ವ್ಯಕ್ತವಾಗಿದೆ.
