

ಕನ್ನಡ ಟ್ಯಾಬ್ಲಾಯ್ಡ್ ಪತ್ರಿಕೆಗಳ ದೊಡ್ಡ ಹೆಸರು ಉತ್ತರ ಕನ್ನಡ ಮೂಲದ ರಾ. ಸೋಮನಾಥ್ ಅಪಘಾತಕ್ಕೀಡಾಗಿದ್ದಾರೆ. ನಾಲ್ಕೈದು ದಶಕಗಳಿಂದ ಕನ್ನಡದ ಪ್ರಮುಖ ಪತ್ರಿಕೆಗಳ ಅಪರಾಧ ಸುದ್ದಿ, ತನಿಖಾ ವರದಿಗಳಿಂದ ಜನಮನಗೆದ್ದಿದ್ದ ಸೋಮನಾಥ ಬೆಂಗಳೂರಿನಲ್ಲಿ ನೆಲೆ ನಿಂತು ಅನಾಥ ಪ್ರಾಣಿಗಳ ಸೇವೆಯಲ್ಲಿ ತೊಡಗಿಕೊಂಡಿದ್ದರು.

ಸುಧಾರಣಾ ವಾದಿ, ಸೈದ್ಧಾಂತಿಕ ಬದ್ಧತೆಯ ರಾ. ಸೋಮನಾಥ್ ಕನ್ನಡದ ಪ್ರಮುಖ ಪತ್ರಿಕೆಗಳು, ಟಿ.ವಿ.ಗಳಿಗೆ ಸುದ್ದಿ ನೀಡುತ್ತಾ ಹೆಸರು ಮಾಡಿದ್ದರು.
ಕಳೆದ ಎರಡು ದಿವಸಗಳ ಹಿಂದೆ ರಾತ್ರಿ ಅನಾಥ ನಾಯಿಗಳಿಗೆ ಆಹಾರ ನೀಡುತಿದ್ದಾಗ ವಾಹನವೊಂದು ಹಿಟ್ ಎಂಡ್ ರನ್ ಮಾಡಿದೆ. ಉತ್ತರ ಕನ್ನಡ ಮೂಲದ ಅವರ ಕುಟುಂಬ ಬೆಂಗಳೂರು, ಸೊರಬಾ, ಶಿರಸಿಗಳಲ್ಲಿ ಚದುರಿ ಸೆಟ್ಲ್ ಆಗಿದೆ. ಬೆಂಗಳೂರಿನಲ್ಲಿ ತನ್ನದೇ ಮನೆಯಲ್ಲಿ ಏಕಾಂಗಿಯಾಗಿ ಬದುಕುತಿದ್ದ ಸೋಮನಾಥ್ ರ ತಲೆಗೆ ಏಟು ಬಿದ್ದಿದ್ದು ಈಗ ಬೆಂಗಳೂರಿನ ಆಸ್ಫತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.


_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






