


ಸಿದ್ಧಾಪುರ ನಗರದಲ್ಲಿ ಟ್ರ್ಯಾಫಿಕ್ ಸಮಸ್ಯೆ ಬಗ್ಗೆ ಯಾರು ಕ್ರಮಕೈಗೊಳ್ಳಬೇಕು, ಸಂಚಾರಿ ನಿಯಮ ಹೇಳುವ ಭಿತ್ತಿ ಫಲಕಗಳೆಲ್ಲಿ?

ನಗರದಲ್ಲಿ ಅಕ್ರಮ ಕಟ್ಟಡ ನಿರ್ಮಾಣದ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ?
(ಪ.ಪಂ ಸಭೆಯ ಲೈವ್ ವಿಡಿಯೋ ನೋಡಲು samajamukhinews yOutube channel & samaajamukhi fb page ನೋಡಿ)
ಸಿಬ್ಬಂದಿಗಳು ಬೆಳಿಗ್ಗೆ ಬಂದು ಸಾಯಂಕಾಲ ಮನೆಗೆ ಹೋದರೆ ಆಯಿತೆ ನಿಮ್ಮ ಕೆಲಸ? ಕೆಲಸ ಮಾಡತೀರೋ? ಜಾಗ ಖಾಲಿ ಮಾಡತೀರೋ?
ಪ್ಲೆಕ್ಸ್, ಬ್ಯಾನರ್ ಗಳ ಮೇಲೆ ವಿಧಿಸಿದ ತೆರಿಗೆ ಮೊತ್ತ ಎಷ್ಟು?
ನಗರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲ ಪಾರ್ಕಿಂಗ್ ಜಾಗ ಯಾವಾಗ ತೆರವು ಮಾಡುತ್ತೀರಿ? ಹೀಗೆ ಸಿದ್ಧಾಪುರ ಪ.ಪಂ. ನಲ್ಲಿ ನಡೆದ ಸಭೆಯಲ್ಲಿ ಪ.ಪಂ. ಸದಸ್ಯರು ಬ್ಯಾಟ್ ಮಾಡುತಿದ್ದರೆ ಸಿಬ್ಬಂದಿಗಳು ಎಲ್ಲಾ ಪ್ರಶ್ನೆಗಳಿಗೂ ಬೋಲ್ಡ್!
ಉತ್ತರ ನೀಡಲು ಸಾಧ್ಯ ವಾಗದ ಸಿಬ್ಬಂದಿಗಳು ಮೌನ ಧರಿಸದೆ ಬೇರೆ ಆಯ್ಕೆಯೇ ಇರಲಿಲ್ಲ ಇದು ಇಂದು ಸಿದ್ಧಾಪುರ ಪ.ಪಂ. ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯ ವಾತಾವರಣ.
ಸಭೆ ಪ್ರಾರಂಭ ವಾಗುತಿದ್ದಂತೆ ಪ್ಲೆಕ್ಸ್, ಬ್ಯಾನರ್ ಪರವಾನಗಿ ಶುಲ್ಕದ ಬಗ್ಗೆ ಮಾರುತಿ ನಾಯ್ಕ ಪ್ರಸ್ಥಾ ಪಿಸಿದರು. ಅದಕ್ಕೆ ಉತ್ತರ ನೀಡಿದ ಸಿಬ್ಬಂದಿಗಳು ಇಡೀ ತಿಂಗಳಲ್ಲಿ ಎರಡು ಬ್ಯಾನರ್ ಗಳ ಶುಲ್ಕ ಬಂದಿರುವುದನ್ನು ತಿಳಿಸಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಮಾರುತಿ ನಾಯ್ಕರ ಆಕ್ಷೇಪಕ್ಕೆ ಉತ್ತರಿಸುವಂತೆ ವಿವರಣೆ ನೀಡಿದ ಹಿರಿಯ ಸದಸ್ಯ ಕೆ.ಜಿ.ನಾಯ್ಕ ಸರ್ಕಾರೇತರ ಕಾರ್ಯಕ್ರಮಗಳನ್ನು ಬಿಟ್ಟು ಇತರ ಕಾರ್ಯಕ್ರಮಗಳ ಪ್ಲೆಕ್ಸ್, ಬ್ಯಾನರ್ ಗಳಿಗೆ ಕಡ್ಡಾಯವಾಗಿ ಶುಲ್ಕ ಆಕರಿಸಲು ತಿಳಿಸಿದರು.
ಸಂಚಾರಿ ನಿಯಮ- ನಗರದಲ್ಲಿ ಸಂಚಾರಿ ನಿಯಮ ಉಲ್ಲಂಘನೆ ತಡೆ ಮತ್ತು ಅಕ್ರಮ ಕಟ್ಟಡ ತೆರವಿನ ಬಗ್ಗೆ ಮಾತನಾಡಿದ ಕೆ.ಜಿ.ನಾಯ್ಕ ತೆರಿಗೆ ಸಂಗ್ರಹ, ಆದಾಯ ಕ್ರೋಢೀಕರಣ, ಅಕ್ರಮ ಕಟ್ಟಡ ತೆರವು ಸೇರಿದಂತೆ ಬಹುತೇಕ ಕೆಲಸಗಳು ಆಗುತ್ತಿಲ್ಲ. ಸಿಬ್ಬಂದಿಗಳು ಕೆಲಸ ಮಾಡದೆ ಸದಸ್ಯರು ಸಾರ್ವಜನಿಕರಿಗೆ ಉತ್ತರ ಕೊಡುವುದು ಕಷ್ಟವಾಗುತ್ತಿದೆ. ಸರಿಯಾಗಿ ಕೆಲಸ ಮಾಡುವುದಿದ್ದರೆ ಮಾಡಿ ಇಲ್ಲ ವರ್ಗಾವಣೆ, ನಿಯೋಜನೆ ಮೇಲೆ ತೆರಳಿ ನಾವು ಸಿಬ್ಬಂದಿಗಳೇ ಇಲ್ಲ ಹಾಗಾಗಿ ಕೆಲಸ ಆಗುತ್ತಿಲ್ಲ ಎಂದಾದರೂ ಕಾರಣ ಹೇಳಬಹುದು ಎಂದು ಗದರಿಸಿದರು.
ಪಾರ್ಕಿಂಗ್ ಮತ್ತು ಸಂಚಾರಿ ವ್ಯವಸ್ಥೆ ಸರಿಪಡಿಸಲು ಪೊಲೀಸ್ ನೆರವು ಪಡೆದು ಶೀಘ್ರ ಕಾರ್ಯಾಚರಣೆ ಪ್ರಾರಂಭಿಸಿ ಎಂದು ಕೆ.ಜಿ. ನಾಯ್ಕ ಸಿಬ್ಬಂದಿಗಳಿಗೆ ಆದೇಶಿಸಿದರು.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
