

ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಇಲಾಖೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ SSLC ಫಲಿತಾಂಶವನ್ನು ಪ್ರಕಟಿಸಿದರು.

ಶಿಕ್ಷಣ ಸಚಿವ ಮಧು ಬಂಗಾರಪ್ಪ
ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ(KSEAB) 2024-25ನೇ ಸಾಲಿನ SSLC-1 ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಇಂದು ಶುಕ್ರವಾರ ಪ್ರಕಟಿಸಿದ್ದು, ಈ ವರ್ಷ ಶೇ. 66.14ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಒಟ್ಟಾರೆ ಫಲಿತಾಂಶ ಕಳೆದ ವರ್ಷಕ್ಕಿಂತ ಶೇ.8ರಷ್ಟು ಹೆಚ್ಚಾಗಿದೆ.
ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಇಲಾಖೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ SSLC ಫಲಿತಾಂಶವನ್ನು ಪ್ರಕಟಿಸಿದ್ದು, ಇಂದು ಮಧ್ಯಾಹ್ನ 12.30ರ ನಂತರ ಇಲಾಖೆಯ ವೆಬ್ ಸೈಟ್ ಗಳಲ್ಲಿ ಫಲಿತಾಂಶಗಳನ್ನು ವೀಕ್ಷಿಸಬಹುದು.
ಈ ವರ್ಷ ಶೇ. 91.12ರಷ್ಟು ಫಲಿತಾಂಶದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ, ಶೇ.89.96ರಷ್ಟು ಫಲಿತಾಂಶದೊಂದಿಗೆ ಉಡುಪಿ ಜಿಲ್ಲೆ ದ್ವಿತೀಯ, ಶೇ. 83.19 ಫಲಿತಾಂಶದೊಂದಿಗೆ ಉತ್ತರ ಕನ್ನಡ ತೃತೀಯ, ಶೇ.82.29 ರಷ್ಟು ಫಲಿತಾಂಶದೊಂದಿಗೆ ಶಿವಮೊಗ್ಗ ನಾಲ್ಕನೇ ಸ್ಥಾನ ಹಾಗೂ ಶೇ. 42.43 ಫಲಿತಾಂಶದೊಂದಿಗೆ ಕಲಬುರಗಿ ಕೊನೆಯ ಸ್ಥಾನದಲ್ಲಿದೆ.

ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆ 1 ಬರೆದ ಒಟ್ಟಾರೆ ವಿದ್ಯಾರ್ಥಿಗಳ ಸಂಖ್ಯೆ 8,42,173 ವಿದ್ಯಾರ್ಥಿಗಳ ಪೈಕಿ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ 201790 ವಿದ್ಯಾರ್ಥಿಗಳು, ಅನುದಾನಿತ ಶಾಲೆಯಲ್ಲಿ ವ್ಯಾಸಂಗ ಮಾಡಿದ 118066 ವಿದ್ಯಾರ್ಥಿಗಳು, ಅನುದಾನರಹಿತ ಶಾಲೆಯಲ್ಲಿ ವ್ಯಾಸಂಗ ಮಾಡಿದ 203219 ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ಈ ವರ್ಷ 625ಕ್ಕೆ 625 ಅಂಕಗಳನ್ನು ರಾಜ್ಯದಲ್ಲಿ 22 ವಿದ್ಯಾರ್ಥಿಗಳು ಪಡೆದಿದ್ದಾರೆ. 624 ಅಂಕಗಳನ್ನು 65 ವಿದ್ಯಾರ್ಥಿಗಳು, 623 ಅಂಕಗಳನ್ನು 108 ವಿದ್ಯಾರ್ಥಿಗಳು, 622 ಅಂಕಗಳನ್ನು 189 ವಿದ್ಯಾರ್ಥಿಗಳು ಪಡೆದಿದ್ದಾರೆ.

625 ಅಂಕಗಳಿಗೆ 625 ಅಂಕ ಗಳಿಸಿರುವವರು ಅಖೀಲ್ ಅಹ್ಮದ್ ನದಾಫ್: ವಿಜಯಪುರ ಜಿಲ್ಲೆ ಸಿ. ಭಾವನಾ: ದೇವನಹಳ್ಳಿ ಎಸ್.ಧನುಷ್: ಮೈಸೂರು ಜಿಲ್ಲೆಯ ಜೆ.ಧೃತಿ: ಮಂಡ್ಯ ಜಿಲ್ಲೆಯ ಎಸ್.ಎನ್.ಜಾಹ್ನವಿ: ಬೆಂಗಳೂರು ದಕ್ಷಿಣ ಮಧುಸೂಧನ್ ರಾಜ್: ಬೆಂಗಳೂರು ಉತ್ತರದ ಮೊಹಮ್ಮದ್ ಮಸ್ತೂರ್: ತುಮಕೂರು ಜಿಲ್ಲೆ ಮೌಲ್ಯ ಡಿ. ರಾಜ್: ಚಿತ್ರದುರ್ಗ ಜಿಲ್ಲೆ ಕೆ.ನಮನ: ಶಿವಮೊಗ್ಗ ಜಿಲ್ಲೆ ನಮಿತಾ: ಬೆಂಗಳೂರು ದಕ್ಷಿಣ ಜಿಲ್ಲೆ ನಂದನ್: ಚಿತ್ರದುರ್ಗ ಜಿಲ್ಲೆ ನಿತ್ಯ ಎಂ.ಕುಲಕರ್ಣಿ: ಶಿವಮೊಗ್ಗ ರಂಜಿತಾ: ಬೆಂಗಳೂರು ಗ್ರಾಮಾಂತರ ರೂಪಾ ಚೆನ್ನಗೌಡ ಪಾಟೀಲ್: ಬೆಳಗಾವಿ ಜಿಲ್ಲೆ ಸಹಿಷ್ಣು ಎನ್: ಶಿವಮೊಗ್ಗ ಜಿಲ್ಲೆ ಶಗುಫ್ತಾ ಅಂಜುಮ್: ಶಿರಸಿ ಸ್ವಸ್ತಿ ಕಾಮತ್: ಉಡುಪಿ ಜಿಲ್ಲೆ ಆರ್.ಎನ್.ತಾನ್ಯಾ: ಮೈಸೂರು ಜಿಲ್ಲೆ ಉತ್ಸವ್ ಪಾಟೀಲ್: ಹಾಸನ ಜಿಲ್ಲೆ ಯಶ್ವಿತಾ ರೆಡ್ಡಿ ಕೆ.ಬಿ: ಮಧುಗಿರಿಯ ಎಂ.ಧನಲಕ್ಷ್ಮೀ
ಮಾರ್ಚ್ 21 ರಿಂದ ಏಪ್ರಿಲ್ 4 ರವರೆಗೆ ಕರ್ನಾಟಕದಾದ್ಯಂತ 2,818 ಪರೀಕ್ಷಾ ಕೇಂದ್ರಗಳಲ್ಲಿ SSLC ಪರೀಕ್ಷೆ ನಡೆಸಲಾಗಿತ್ತು. ಒಟ್ಟು ಸುಮಾರು 8.96 ಲಕ್ಷ ವಿದ್ಯಾರ್ಥಿಗಳು, 4,61,563 ಬಾಲಕರು ಮತ್ತು 4,34,884 ಬಾಲಕಿಯರು ಪರೀಕ್ಷೆ ಬರೆದಿದ್ದಾರೆ.
ಪೂರಕ ಪರೀಕ್ಷೆ
ಇಂದಿನಿಂದ ಮೇ-7 ರವರೆಗೆ ಸ್ಕ್ಯಾನ್ ಪ್ರತಿ ಪಡೆಯಲು ಅವಕಾಶ ಇರಲಿದೆ. ಮೇ 4 ರಿಂದ 11ನೇ ತಾರೀಖಿನವರೆಗೂ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಇರಲಿದೆ. SSLC ಪರೀಕ್ಷೆ-2 ಮೇ26ರಿಂದ ಜೂನ್ 2ರವರೆಗೆ ನಡೆಯಲಿದೆ. SSLC ಪರೀಕ್ಷೆ-3 ಜೂನ್ 23-ಜೂನ್ 30 ನಡೆಯಲಿದೆ.
