

ಮಾಧ್ಯಮಗೋಷ್ಠಿ ಮುಖ್ಯಾಂಶಗಳು……

- ನಿಮ್ಮ ಬಗ್ಗೆ ಏನಿಲ್ಲ ನಮಗೆ, ನಮ್ಮವನೊಬ್ಬನನ್ನು ಅವರು ತಗೊಂಡ್ಹೋಗಿದ್ದಾರೆ ಹಾಗಾಗಿ ನಾವು ನಿಮಗೆ ಕರಕೊಂಡೋಗತಿದ್ದೀವಿ ಅಷ್ಟೆ…. ಅಂತ ವಸಂತ ಹೇಳಿದ್ರು – ಬಿಳಿಯಾ ಗೊಂಡ
- * ವಸಂತ ನಾಯ್ಕ ಮೇಲಿಂದ ಮೇಲೆ ಇಂಥ ಕೆಲಸ ಮಾಡತಿದ್ದಾರೆ ಅವರುಸೋಶಿಯಲ್ ಮೀಡಿಯಾದಲ್ಲಿ ಅಧಿಕಾರಸ್ಥರ ಜೊತೆ ನಿಂತಿರುವ ಫೋಟೋ ಹಾಕೊಳದ್ ರಿಂದ ಪೊಲೀಸರು ಬಿಡತಿದ್ದಾರೆ ಇರಬೇಕು…. – ಕೆ.ಜಿ.ನಾಯ್ಕ


ಗಾಳಿಸುದ್ದಿಯಾಗಿ ಚರ್ಚೆಯಲ್ಲಿದ್ದ ಕಾವಂಚೂರು ಅಪಹರಣ ಪ್ರಕರಣ ಈಗ ಮುನ್ನೆಲೆಗೆ ಬಂದಿದೆ. ಸಿದ್ಧಾಪುರದಲ್ಲಿ ಮಾಧ್ಯಮಗೋಷ್ಠಿ ಮಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕರನ್ನು ಟಾರ್ಗೆಟ್ ಮಾಡುವ ಮೂಲಕ ಬಿ.ಜೆ.ಪಿ., ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ ಮತ್ತು ಕಾಂಗ್ರೆಸ್ ಗುರಿಮಾಡಿ ಸ್ವತಂತ್ರ ಅಸ್ಥಿತ್ವವೇ ಇಲ್ಲದ ಬಿ.ಜೆ.ಪಿ. ಕಾಂಗ್ರೆಸ್ ಹೆಬ್ಬಾಗಿಲ ಬಳಿ ನಿಂತಿರುವ ಶಿವರಾಮ ಹೆಬ್ಬಾರ್ ಬಣ ಬೆಂಬಲಿಸುವ ಸೂಚನೆ ನೀಡಿದೆ.

ಕಾಂಗ್ರೆಸ್ ಆಡಳಿತದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ ತಮ್ಮ ಶಾಸಕರ ವಿರುದ್ಧವೇ ಕೆಲಸ ಮಾಡುತ್ತಾ ಪರ್ಯಾಯ ನಾಯಕತ್ವ ಸೃಷ್ಟಿಗೆ ಪ್ರಯತ್ನಿಸುತಿದ್ದಾರೆ. ಇದರ ಅಂಗವಾಗಿ ಸಿದ್ಧಾಪುರದ ಪ್ರಾಥಮಿಕ ಸಹಕಾರಿ ಸಂಘಗಳ ಚುನಾವಣೆಯಲ್ಲಿ ಶಿವರಾಮ ಹೆಬ್ಬಾರ್ ಹಳೆ ತಂಡವನ್ನು ಬೆಂಬಲಿಸಿದ್ದರೆ… ಮಂಕಾಳು ವೈದ್ಯ ಹೊಸ ತಂಡ ಕಟ್ಟಲು ಪ್ರಯತ್ನಿಸಿ ವಿಫಲವಾದದ್ದು ಹಳೆಯ ಕತೆ.



ಈ ಪ್ರಹಸನದ ಮುಂದುವರಿಕೆ ಎಂಬಂತೆ ಸಿದ್ಧಾಪುರ ಕಾವಂಚೂರು ವಿ.ಎಸ್.ಎಸ್. ನಲ್ಲಿ ಕೆ.ಡಿ.ಸಿ.ಸಿ. ಬ್ಯಾಂಕ್ ಪ್ರತಿನಿಧಿ ಆಯ್ಕೆ ಸಂಬಂಧ ಸಭೆ ನಡೆದು, ಸಭೆಯಲ್ಲಿ ಕೋರಂ ಮಾಡಲು ವಿಫಲವಾದ ಆಡಳಿತಾರೂಢ ಬಿ.ಜೆ.ಪಿ. ತಂಡ. ಈ ಹಿನ್ನೆಡೆಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕರ ದೌರ್ಜನ್ಯ, ಗೂಂಡಾಗಿರಿ ಕಾರಣ ಎಂದು ಪರೋಕ್ಷವಾಗಿ ಹೇಳಿದೆ.

ಕಾವಂಚೂರು ವಿ.ಎಸ್.ಎಸ್. ಪ್ರಮುಖವಾಗಿಟ್ಟುಕೊಂಡು ವಸಂತ ನಾಯ್ಕ ಕಾನೂನು ಬಾಹೀರ ಚಟುವಟಿಕೆ ನಡೆಸುತ್ತಾ ತಾಲೂಕಿನ ಶಾಂತಿ-ಸುವ್ಯವಸ್ಥೆ ಹಾಳುಮಾಡುತಿದ್ದಾರೆ ಎಂದು ಆರೋಪಿಸಿರುವ ಬಿ.ಜೆ.ಪಿ,. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಶಾಸಕರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ರ ಹೆಸರುಗಳನ್ನು ಹೇಳಿಕೊಂಡು ಅಧಿಕಾರಿಗಳು, ವ್ಯವಸ್ಥೆಯ ದುರ್ಬಳಕೆ ಮಾಡಿಕೊಳ್ಳುತಿದ್ದಾರೆ ಇದನ್ನು ನಿಯಂತ್ರಿಸದಿದ್ದರೆ ಅದಕ್ಕೆ ಸರಿಯಾಗಿ ಸೂಕ್ತಸಮಯದಲ್ಲಿ ಉತ್ತರ ನೀಡುವುದಾಗಿ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದೆ. ಈ ಬಗ್ಗೆ ವಿವರವಾದ ವಿಡಿಯೋ ಕ್ಲಿಪ್ಪಿಂಗ್ಗಳು samaajamukhi ಯೂ ಟ್ಯೂಬ್ ಚಾನಲ್ ನಲ್ಲಿವೆ.


_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






