


೧೨ ತಾಲೂಕುಗಳ ವಿಶಾಲ ಉತ್ತರ ಕನ್ನಡ ಜಿಲ್ಲೆ ಎರಡು ಜಿಲ್ಲೆಗಳಾಗಿ ವಿಭಾಗವಾದರೆ… ಶಿರಸಿ ಕೇಂದ್ರ ಮಾಡುವುದು ಎಲ್ಲಾ ಕೋನಗಳಿಂದ ಸರಿ ಎನ್ನುವ ಅಭಿಪ್ರಾಯವಿದೆ. ಉತ್ತರ ಕನ್ನಡದ ಹಳಿಯಾಳ-ದಾಂಡೇಲಿಗಳು ಧಾರವಾಡ ಜಿಲ್ಲೆಗೆ ಸೇರ್ಪಡೆಯಾಗುವುದು ಸೂಕ್ತ!


ಹಾಗೇಯೇ ಭಟ್ಕಳವನ್ನ ಉಡುಪಿ ಜಿಲ್ಲೆಗೆ ಸೇರಿಸುವುದು ಕಾರ್ಯಸಾಧು, ನಿರ್ಲಕ್ಷಿತ ಸಿದ್ಧಾಪುರ ಶಿರಸಿ ಜಿಲ್ಲೆಯಾಗುವುದಾದರೆ ಶಿರಸಿ ಜಿಲ್ಲೆ ಸೇರಲಿ, ಸಾಗರ ಜಿಲ್ಲೆಯಾದರೆ ಸಾಗರ ಜಿಲ್ಲೆ ಸೇರಲಿ ಎನ್ನುವ ಅಭಿಪ್ರಾಯವಿದೆ.
ಈಗ ದೇಶದ ಜನಗಣತಿಗೆ ದಿನಗಣನೆ ಪ್ರಾರಂಭವಾಗಿದೆ. ಇಂಡಿಯಾದ ಸಾರ್ವತ್ರಿಕ ಜನಗಣತಿಗೆ ಮೊದಲು ತಾಲೂಕು ರಚನೆ, ಜಿಲ್ಲೆ ರಚನೆ, ಜಿಲ್ಲೆ ವಿಭಾಗ, ತಾಲೂಕುಗಳನ್ನು ಅನ್ಯ ಜಿಲ್ಲೆ ಉದ್ದೇಶಿತ ಜಿಲ್ಲೆ ಗಳಿಗೆ ಸೇರಿಸಲು ಈ ವರ್ಷವೇ ಡೆಡ್ ಲೈನ್. ಆಡಳಿತಾತ್ಮಕ ಅನುಕೂಲ ಸೇರಿ ಅನೇಕ ಆಯಾಮಗಳ ದೃಷ್ಟಿಯಿಂದ ಈ ವರ್ಷವೇ ಹೊಸ ತಾಲೂಕು, ಜಿಲ್ಲೆ ರಚನೆಗಳ ಕೆಲಸ ಮುಗಿಯಬೇಕು.



ಉತ್ತರ ಕನ್ನಡ ಜಿಲ್ಲೆಯಲ್ಲಿ ಬನವಾಸಿ ಮತ್ತು ಗೋಕರ್ಣಗಳ ಪ್ರತ್ಯೇಕ ತಾಲೂಕುಗಳ ರಚನೆಗೆ ಬೇಡಿಕೆ ಇದೆ. ಶಿವಮೊಗ್ಗದಲ್ಲಿ ಆನವಟ್ಟಿ ಮತ್ತು ರಿಪ್ಪನ್ ಪೇಟೆಗಳನ್ನು ಪ್ರತ್ಯೇಕ ತಾಲೂಕುಗಳನ್ನಾಗಿಸಬೇಕೆಂಬ ಬೇಡಿಕೆ ವ್ಯಕ್ತವಾಗಿದೆ.
ದೇಶದ ಸಾರ್ವತ್ರಿಕ ಗಣತಿ ಮೊದಲು ಉದ್ದೇಶಿತ ಹೊಸ ತಾಲೂಕು-ಜಿಲ್ಲೆಗಳಾದರೆ ಆಡಳಿತಾತ್ಮಕವಾಗಿ ಅನುಕೂಲ ಹಾಗಾಗಿ ಹೊಸ,ಪ್ರತ್ಯೇಕ ತಾಲೂಕು,ಜಿಲ್ಲೆಗಳು ಆಗಬೇಕೆಂದರೆ ಈ ವರ್ಷವೇ ಆಗಬೇಕು. ಈ ವರ್ಷದಲ್ಲಿ ಉದ್ದೇಶಿತ ಹೊಸ ತಾಲೂಕು-ಜಿಲ್ಲೆಗಳ ರಚನೆ ಆಗದಿದ್ದರೆ ಈ ದಶಕದಲ್ಲಿ ಆ ಯೋಚನೆ ಜಾರಿಯಾಗುವಂತಿಲ್ಲ. ಈ ಹಿನ್ನೆಲೆಯಲ್ಲಿ ಬಹಳ ವರ್ಷಗಳ ಹಿಂದಿನ ಬೇಡಿಕೆಗಳಾದ ಶಿರಸಿ ಜಿಲ್ಲೆ ಮತ್ತು ಸಾಗರ ಜಿಲ್ಲೆಗಳ ಸ್ಥಾಪನೆ ವಿಚಾರ ಪ್ರಚಾರಕ್ಕೆ ಬಂದಿದೆ.
ಸೆ. ೧೩ ರ ಶನಿವಾರ ಸಿದ್ದಾಪುರ ಬಾಲಭವನದಲ್ಲಿ ಸಾಗರ ಜಿಲ್ಲೆ ರಚನೆ ಮತ್ತು ಉದ್ದೇಶಿತ ಸಾಗರ ಜಿಲ್ಲೆಗೆ ಸಿದ್ದಾಪುರ ತಾಲೂಕು ಸೇರಿಸುವ ಉದ್ದೇಶದ ಸಭೆ ನಡೆಯುತ್ತಿದೆ. ಈ ವಿದ್ಯಮಾನಗಳ ಹಿನ್ನೆಲೆಯಲ್ಲಿ ಸಿದ್ಧಾಪುರ ಉದ್ದೇಶಿತ ಸಾಗರ ಜಿಲ್ಲೆ ಸೇರುವುದು ಸೂಕ್ತವೆ ಎನ್ನುವ ಬಗ್ಗೆ ನಿಮ್ಮ ಅಭಿ ಪ್ರಾಯವನ್ನು ತಿಳಿಸಬಹುದು. ಸಿದ್ದಾಪುರ ಸಾಗರ ಜಿಲ್ಲೆ ಸೇರುವುದು ಸರಿಯೆ? ಈ ಬಗ್ಗೆ ಚುಟುಕಾಗಿ ಪ್ರತಿಕ್ರೀಯಿಸಿ… ನಿಮ್ಮ ಅಭಿಪ್ರಾಯ, ಸಲಹೆಗಳಿಗೆ ಸ್ವಾಗತ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






