


ಸಿದ್ದಾಪುರ ಉದ್ದೇಶಿತ ಶಿರಸಿ ಜಿಲ್ಲೆ ಸೇರಬೇಕೋ ಅಥವಾ ಸಾಗರ ಜಿಲ್ಲೆಯ ಭಾಗವಾಗಬೇಕೋ ಎನ್ನುವ ವಿಚಾರ

ಒಂದು ತಿಂಗಳೊಳಗೆ ಶಿರಸಿ ಜಿಲ್ಲೆಯಾಗಿ ಅದರ ಒಂದು ತಾಲೂಕು ಸಿದ್ದಾಪುರ ಆಗುವ ಸಾಧ್ಯತೆ ಇಲ್ಲದಿದ್ದ ಪ್ರಸಂಗದಲ್ಲಿ ಸಿದ್ಧಾಪುರ ಸಾಗರ ಜಿಲ್ಲೆಯ ಭಾಗವಾಗುವುದು ಉತ್ತಮ ಎನ್ನುವ ಅಭಿಪ್ರಾಯ ಇಂದು ಸಿದ್ದಾಪುರದ ಲಯನ್ಸ್ ಬಾಲಭವನದಲ್ಲಿ ನಡೆದ ಸಭೆಯಲ್ಲಿ ವ್ಯಕ್ತವಾಗಿದೆ.

ಇಂದು ಇಲ್ಲಿ ನಡೆದ ಸಭೆಯಲ್ಲಿ ಸಾಗರ ಜಿಲ್ಲೆ ಹೋರಾಟ ಸಮೀತಿಯ ಕೆಲವರು ಭಾಗವಹಿಸಿದ್ದರು. ಈ ಸಭೆಯಲ್ಲಿ ಪಾಲ್ಗೊಂಡ ಸಿದ್ದಾಪುರದ ಅನೇಕ ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.


ಕಾರವಾರ ಜಿಲ್ಲೆಯ ತುತ್ತ ತುದಿಯಲ್ಲಿ ಇರುವುದರಿಂದ ಅದು ಅನೇಕ ತಾಲೂಕುಗಳಿಗೆ ಜಿಲ್ಲಾ ಕೇಂದ್ರವಾಗುವುದು ಹಲವು ಕಾರಣಗಳಿಂದ ಸೂಕ್ತವಲ್ಲ, ಆದರೆ ಈಗಿರುವ ಉತ್ತರ ಕನ್ನಡ ಜಿಲ್ಲೆಯ ಕೇಂದ್ರ ಕಾರವಾರವನ್ನು ಹಾಗೇ ಉಳಿಸಿಕೊಂಡು ಘಟ್ಟದ ಮೇಲಿನ ಉತ್ತರ ಕನ್ನಡಕ್ಕೆ ಶಿರಸಿ ಕೇಂದ್ರವಾಗಬೇಕು. ಆದರೆ ಶಿರಸಿ ಜಿಲ್ಲೆ ಸ್ಥಾಪನೆ ರಾಜಕೀಯ ಡೊಂಬರಾಟವಾಗಿದೆ. ಹಾಗಾಗಿ ಸಿದ್ಧಾಪುರವನ್ನು ಉದ್ದೇಶಿತ ಸಾಗರ ಜಿಲ್ಲೆಗೆ ಸೇರಿಸುವುದು ಸೂಕ್ತ.
ಶಿರಸಿ ಜಿಲ್ಲೆ ಹೋರಾಟಗಾರರು ಮುಖಂಡರು ಶಿರಸಿ ಜಿಲ್ಲೆ ಸ್ಥಾಪನೆ ಬಗ್ಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿಲ್ಲ. ಸ್ಥಳೀಯ ಶಾಸಕರ ನೇತೃತ್ವದಲ್ಲಿ ಹೋರಾಟವಾಗಿ ಶಿರಸಿ ಜಿಲ್ಲೆ ಸ್ಥಾ ಪನೆಯಾಗುವುದಾದರೆ ಸಿದ್ಧಾಪುರ ಶಿರಸಿ ಜಿಲ್ಲೆಯ ಭಾಗವಾಗಲಿ. ಜಿಲ್ಲೆಯ ಹೋರಾಟ ರಾಜಕೀಯ ಅಸ್ತ್ರವಾಗಿ ಅನಾವಶ್ಯಕ ಕಾಲಹರಣ ಆಗುವುದಾದರೆ ಎಲ್ಲಾ ದೃಷ್ಟಿಯಿಂದ ಸೂಕ್ತ, ಸರಿಯಾಗಿರುವ ಉದ್ದೇಶಿತ ಸಾಗರ ಜಿಲ್ಲೆಗೆ ಸಿದ್ಧಾಪುರ ತಾಲೂಕು ಸೇರುವುದು ಉತ್ತಮ ಎನ್ನುವ ಅಭಿಪ್ರಾಯ ಈ ಸಭೆಯಲ್ಲಿ ಒಕ್ಕೋರಲಿನ ನಿರ್ಣಯವಾಯಿತು. ಈ ಸಭೆಯ ಚಿತ್ರ, ವಿಡಿಯೋಗಳು ಇಲ್ಲಿವೆ. ಇದಕ್ಕೆ ನಿಮ್ಮ ಅಭಿಪ್ರಾಯ, ಅನಿಸಿಕೆ. ಪ್ರತಿಕ್ರೀಯೆಗಳಿಗೆ ಸ್ವಾಗತ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಮಲೆನಾಡಿನ ಜನಧ್ವನಿ samaajamukhi youtube, samajamukhi.net news & samaajamukhi.net & ಸಮಾಜಮುಖಿ fb pages ಗಳನ್ನು ನೋಡಿ,ಓದಿ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






