ನಮ್ಮನ್ನಗಲಿದ ಜಾನಪದ ತಜ್ಞ ಡಾ. ಎನ್. ಆರ್.ನಾಯಕ.

*ಕನ್ನಡ ಜಾನಪದ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿರುವ ಡಾ ಎನ್.ಆರ್. ನಾಯಕರ ಅಗಲುವಿಕೆ ಜಾನಪದ ಕ್ಷೇತ್ರದ ಒಬ್ಬ ಹಿರಿಯ ಕೊಂಡಿ ಕಳಚಿದಂತಾಗಿದೆ. ಇವರೊಬ್ಬ ಅಪ್ಪಟ ಗ್ರಾಮೀಣ ಜಾನಪದ ತಜ್ಞರಾಗಿ ನಾಡು ಕಂಡ ಒಬ್ಬ ಅಪರೂಪದ ಸಾಧಕರು. ಕಳೆದ ಶತಮಾನದ ಆರಂಭದ ಒಂದೆರಡು ದಶಕಗಳ ನಂತರ ನಡೆದ ಜನಪದ ಕ್ಷೇತ್ರ ಕಾರ್ಯಗಳು, ವಿಚಾರ- ವಿಮರ್ಶೆ ಅಪೂರ್ವವಾದದ್ದು. ಆ ದಾರಿಯಲ್ಲಿ ತೊಡಗಿಸಿಕೊಂಡ ಕನ್ನಡದ ವಿದ್ವಾಂಸರಲ್ಲಿ ಡಾ. ಎನ್. ಆರ್. ನಾಯಕರು ಒಬ್ಬರು. ಸುಮಾರು ಐದು ದಶಕಗಳಿಗೂ ಹೆಚ್ಚು ಕಾಲ ಈ ಕ್ಷೇತ್ರವನ್ನು ತಮ್ಮ ಎದೆಗೆ ಹಚ್ಚಿಕೊಂಡು ಸಪತ್ನಿಕರಾಗಿ ನೂರು ಕಾಲ ನಿಲ್ಲುವಂತೆ ಕೆಲಸ ಮಾಡಿದ್ದಾರೆ. ಜೇಂಗೊಡ, ಪಡುಕೋಗಿಲೆ, ಕನ್ನಡ ಬಯಲಾಟ ಪರಂಪರೆ, ಕಾರವಾರ ಜಿಲ್ಲೆಯ ಜನಪದ ಗೀತೆಗಳು, ಹಾಲಕ್ಕಿ ಒಕ್ಕಲಿಗರ ಜನಪದ ಗೀತೆಗಳು, ಸುಗ್ಗಿಯ ಪದಗಳು, ತುಳಸಿ ತಿಮ್ಮಪ್ಪರಾಯ, ಗಾಮೊಕ್ಕಲ ಮಹಾಭಾರತ, ಮುಕ್ರಿಗಳ ಜನಪದ ಗೀತೆ ಮತ್ತು ಕಥೆಗಳು, ಉತ್ತರ ಕನ್ನಡ ಜಿಲ್ಲೆಯ ಗ್ರಾಮ ದೇವತೆಗಳ ಹಾಡುಗಳು ಹೀಗೆ ಪಟ್ಟಿ ಮಾಡುತ್ತಾ ಹೋದರೆ ನೂರಕ್ಕೂ ಹೆಚ್ಚು ಕೃತಿಗಳು ಇವರಿಂದ ಪ್ರಕಟಗೊಂಡಿದೆ.

ಅವರ ಕಥನ ಕವನಗಳಲ್ಲಿ ಅಚ್ಚ ದೇಶಿಯ ಎನ್ನಬಹುದಾದ ಪದಗಳಿಗೆ ಆಯಾ ಪುಟಗಳಲ್ಲಿ ಕೆಳಬದಿಗೆ ಅರ್ಥ ವಿವರಣೆ ನೀಡಿರುವುದು ಉತ್ತರ ಕನ್ನಡದವರಲ್ಲದವರಿಗೂ ಇಲ್ಲಿಯ ಹಾಡುಗಳ ಒಳ ಪ್ರವೇಶ ಮಾಡುವುದಕ್ಕೆ ಹೆಚ್ಚಿನ ಸಹಾಯ ನೀಡಬಹುದಾಗಿದೆ. ಅವರ ಜನಪದ ಕಥೆಗಳಲ್ಲಿ, ಕವನಗಳಲ್ಲಿ ಬರುವ ಪವಾಡ ಸದೃಶ ಘಟನೆಗಳು ಕವನ ಸಂಕಲನದ ಎಲ್ಲಾ ಕವನಗಳಲ್ಲೂ ಸಿಗುತ್ತವೆ.ತಮ್ಮ ಬದುಕಿನ ಬಹುಪಾಲು ದಿನಗಳನ್ನು ಜಾನಪದ ಕ್ಷೇತ್ರಕ್ಕೆ ಮೀಸಲಾಗಿಟ್ಟು ನಿರಂತರವಾಗಿ ಆ ಕ್ಷೇತ್ರದ ಮುನ್ನಡೆಗೆ ತೊಡಗಿಸಿಕೊಂಡವರು. ಜಾನಪದ ದೀಪಾರಾಧನೆಯ ಜೊತೆಗೆ ಅವರ ಕಾವ್ಯರಾಧನೆಯು ಮುಂದುವರಿದಿರುವುದು ಅವರ ಬದುಕಿಗೆ ಹಿಡಿದ ಕೈಗನ್ನಡಿಯಾಗಿದೆ.

ಸಂಕೀರ್ಣತೆಗಿಂತ ಸರಳತೆ ಅವರಿಗೆ ಇಷ್ಟ. ಛಂದೋ ರೂಪಗಳಲ್ಲಿ ವೈವಿಧ್ಯ ಕಡಿಮೆಯಾಗಿದ್ದರು ಜಾನಪದ ಹಾಗೂ ಜಾನಪದ ಲಯವನ್ನು ತಮ್ಮದಾಗಿಸಿಕೊಂಡು ತನ್ನತನವನ್ನು ಬಿಟ್ಟುಕೊಡದೆ ಮಾನವೀಯತೆ, ನಿಸರ್ಗ ಪ್ರೀತಿ ಹಾಗೂ ಆಧ್ಯಾತ್ಮಿಕ ವಲಯವನ್ನು ಕಳಕಳಿಯಿಂದ ಪ್ರದರ್ಶಿಸಿದವರು. ದಲಿತರ ಬಗೆಗಿನ ಕಾಳಜಿಯೊಂದಿಗೆ ಸಾಮಾಜಿಕ ಬದ್ಧತೆಯುಳ್ಳವರು. ಮಕ್ಕಳ ಬಗ್ಗೆ ವಿಶೇಷ ಕಾಳಜಿಯುಳ್ಳ ಶ್ರೀಯುತರು ಮಕ್ಕಳ ಬೇಕು ಬೇಡಗಳನ್ನು, ಹಿರಿಯರು ನಿರ್ವಹಿಸಬೇಕಾದ ಕರ್ತವ್ಯಗಳನ್ನು, ಮಕ್ಕಳ ಸೃಜನಾತ್ಮಕ, ಬೌದ್ಧಿಕ, ಮಾನಸಿಕ, ನೈತಿಕ,ಆಧ್ಯಾತ್ಮಿಕ ವಿಕಸನಕ್ಕಾಗಿ ಶಿಕ್ಷಣ ತಜ್ಞರು ಪಾಲಿಸಬೇಕಾದ ಎಚ್ಚರಿಕೆಗಳನ್ನು ತಮ್ಮ “ಬದುಕು ಮಹಾಕಾವ್ಯ” ಗ್ರಂಥದಲ್ಲಿ ಕಟ್ಟಿಕೊಟ್ಟಿದ್ದಾರೆ.

*ಮೂಲತಃ ಅಂಕೋಲಾ ತಾಲೂಕಿನ ಬಾವಿಕೇರಿಯಲ್ಲಿ ೧೯೩೫ರಂದು ಜನಿಸಿದರು.ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಜಾನಪದ ವಿದ್ವಾಂಸರಾಗಿ ಸಲ್ಲಿಸಿದ ಸೇವೆ ಅವಿಸ್ಮರಣೀಯ.*

*ಹೊನ್ನಾವರ ಎಸ್.ಡಿ.ಎಮ್. ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾದ ಡಾ ಎನ್. ಆರ್. ನಾಯಕರು ಕನ್ನಡದ ವಿದ್ವಾಂಸರು. ಕಾವ್ಯ,ನಾಟಕ, ಸಂಶೋಧನಾ ಪ್ರಬಂಧ, ಜಾನಪದ, ಸಂಘಟನೆ ಮುಂತಾದ ಕ್ಷೇತ್ರಗಳಲ್ಲಿ ಪ್ರಾಮಾಣಿಕವಾಗಿ ದುಡಿದು ಆ ಕ್ಷೇತ್ರಕ್ಕೆ ಬಲತಂದು ಕೊಟ್ಟ ಪುಣ್ಯಾತ್ಮರು*.

*ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯರಾಗಿಯೂ, ಕನ್ನಡ ಪ್ರಾಧಿಕಾರದ ಸದಸ್ಯರಾಗಿಯೂ, ಕರ್ನಾಟಕ ವಿಶ್ವವಿದ್ಯಾಲಯದ ಅಕಾಡೆಮಿಯ ಕೌನ್ಸಿಲರಾಗಿಯೂ, ಕನ್ನಡ ಅಭ್ಯಾಸ ಮಂಡಳಿಯ ಸದಸ್ಯರಾಗಿಯೂ, ಕಾಲೇಜ್ ಡೆವೆಲಪ್ಮೆಂಟ್ ಕೌನ್ಸಿಲ್ ಸಮಿತಿಯ ಸದಸ್ಯರಾಗಿಯೂ, ಉಡುಪಿಯ ಪ್ರಾದೇಶಿಕ ಜಾನಪದ ರಂಗ ಕಲೆಗಳ ಅಧ್ಯಯನ ಕೇಂದ್ರದ ಸಲಹಾ ಸಮಿತಿಯ ಸದಸ್ಯರಾಗಿಯೂ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದ ಸದಸ್ಯರಾಗಿಯೂ, ಶಿವರಾಂ ಕಾರಂತ್ ನಿಸರ್ಗಧಾಮದ ಸಮಿತಿಯ ಸದಸ್ಯರಾಗಿಯೂ, ಅಪಾರ ಅನುಭವ ಗಳಿಸಿ ೧೯೮೬ ರಲ್ಲಿ ಕುಮಟಾದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲೆಯ ಪ್ರಥಮ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರಾಗಿಯೂ, ೧೯೯೧ ರಲ್ಲಿ ಗೋಕರ್ಣದಲ್ಲಿ ಜರುಗಿದ ಉತ್ತರ ಕನ್ನಡ ಜಿಲ್ಲೆಯ ೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಜನಾನುರಾಗಿ ಯಾಗಿದ್ದರು.*

*ಜಾನಪದ ಪ್ರಸಾರಕ್ಕಾಗಿ ೧೯೮೨ ರಲ್ಲಿ ಜಾನಪದ ಪ್ರಕಾಶನ ಎಂಬ ಪ್ರಕಾಶನ ಸಂಸ್ಥೆಯನ್ನು ಹುಟ್ಟು ಹಾಕಿ ಈವರೆಗೆ ಜಾನಪದಕ್ಕೆ ಸಂಬಂಧಿಸಿದ ೬೦ ಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿರುತ್ತಾರೆ.೧೯೮೩ರಿಂದ ಜಾನಪದ ದೀಪಾರಾಧನೆಯ ಎನ್ನುವ ವಿಶಿಷ್ಟ ಕಾರ್ಯಕ್ರಮವನ್ನು ಏರ್ಪಡಿಸಿ ಉತ್ತರ ಕನ್ನಡ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿಯೂ, ೧೯೯೮ ರಲ್ಲಿ ನಾಡಿನ ಬೇರೆ ಬೇರೆ ಪ್ರದೇಶಗಳಲ್ಲಿಯೂ ಅದನ್ನು ವಿಸ್ತರಿಸಿ ಹಲವು ಜಾನಪದ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿ ಗೌರವಿಸಿ ಆ ಕ್ಷೇತ್ರಕ್ಕೆ ವಿಶಿಷ್ಟ ಸೇವೆ ಸಲ್ಲಿಸಿರುತ್ತಾರೆ*

*ಹೊನ್ನಾವರದಲ್ಲಿ ತಮ್ಮ ವೃತ್ತಿ ಬದುಕಿನ ಜೊತೆಗೆ ಇತರ ಸಂಘಟನೆಯಲ್ಲಿಯೂ ತೊಡಗಿಸಿಕೊಂಡು ಸ್ವತಃ ಸಂಘಟಕರಾಗಿ ಅನೇಕ ಕಾರ್ಯಕ್ರಮಗಳನ್ನು ಸಂಘಟಿಸಿದ ಹೆಗ್ಗಳಿಗೆ ಇವರದ್ದಾಗಿದೆ. ಕರ್ನಾಟಕ ಸಂಘದ ಅಧ್ಯಕ್ಷರಾಗಿ ಕರ್ನಾಟಕ ನಾಟಕ ಅಕಾಡೆಮಿ ಸಹಕಾರದಿಂದ ಮುಖ್ಯಮಂತ್ರಿ ಚಂದ್ರು ಅವರಿಂದ ನಾಟಕ ತರಬೇತಿ, ಕಮ್ಮಟ ರಾಜ್ಯಮಟ್ಟದ ನಾಟಕೋತ್ಸವ ಸಂಘಟಿಸಿರುತ್ತಾರೆ. ನಾಡಿನ ಖ್ಯಾತ ರಂಗ ನಿರ್ದೇಶಕರಿಂದ ನಾಟಕ ತರಬೇತಿ ಕಮ್ಮಟಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳಲ್ಲಿ ನಾಟಕದ ಆಸಕ್ತಿ ಮೂಡಿಸಿರುತ್ತಾರೆ. ಮುಡೇ೯ಶ್ವರದಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸಹಕಾರದಿಂದ ಕರ್ನಾಟಕ ಜಾನಪದ ಮತ್ತು ಕಲಾ ಮೇಳ ಸಂಘಟಿಸಿರುತ್ತಾರೆ.*

*ಜನಾಂಗಿಯ ಅಧ್ಯಯನಕರಾರಾದ ಇವರು ಉತ್ತರಕನ್ನಡ ಜಿಲ್ಲೆಯ ಸಿದ್ದಿ ಜನಾಂಗ, ಹಾಲಕ್ಕಿ,ಒಕ್ಕಲಿಗರ ಸಮೃದ್ಧಿ, ಜಿಲ್ಲೆಯ ನಾಡವರ ಸಂಸ್ಕೃತಿ, ಗಾಮೊಕ್ಕಲು ಒಂದು ಸಾಂಸ್ಕೃತಿಕ ಅಧ್ಯಯನ, ನಾಡವರ ಒಂದು ಸಾಂಸ್ಕೃತಿಕ ಅಧ್ಯಯನ, ಹಾಲಕ್ಕಿ ಒಕ್ಕಲಿಗರು ಮುಂತಾದ ಜನಾಂಗ ಅಧ್ಯಯನ ನಡೆಸಿ ಅವರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯುವಲ್ಲಿ ಇವರ ಕೃತಿ ತುಂಬಾ ಮಹತ್ವದ್ದಾಗಿರುತ್ತದೆ*.

*ಹೇಳ್ತೇವೋ ಗುಮಟೆ ಪದಾನಾ, ಉತ್ತರ ಕನ್ನಡ ಜಿಲ್ಲೆಯ ಜನಪದ ಆಟಗಳು, ಜೇಂಗೊಡ, ನ್ಯಾಯಗಾರನ ಹೆಂಡತಿ,ಕನ್ನಡ ಬಯಲಾಟ ಪರಂಪರೆ ಮುಂತಾದ ಜಾನಪದ ವಿಷಯಗಳು ಕುವೆಂಪು ವಿಶ್ವವಿದ್ಯಾಲಯದ ಎಂ.ಎ. ಜಾನಪದ ಪಠ್ಯದಲ್ಲಿಯೂ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಎಂ.ಎ.ಜಾನಪದ ತರಗತಿಯ ಪಠ್ಯವಾಗಿಯೂ ಸೆರ್ಪಡಿಗೊಂಡಿದೆ.*

*ಕೂಸಾಯ್ತು ನಮ್ಮ ಕೋಮರಾಗೆ ಕೃತಿಗೆ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಿಂದ, ಗಾಮೊಕ್ಕಲ, ಸುಗ್ಗಿ ಹಬ್ಬ, ಹಾಲಕ್ಕಿ ಒಕ್ಕಲಿಗರು ಕೃತಿಗೆ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಯಿಂದ ಪ್ರಶಸ್ತಿ ಲಭಿಸಿದೆ. ೨೦೦೩ ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗೌರೀಶ ಕಾಯ್ಕಿಣಿ ಪ್ರತಿಷ್ಠಾನ ಪ್ರಶಸ್ತಿ,ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಿಂದ ಪ್ರಶಸ್ತಿ, ದೆಹಲಿಯ ಕರ್ನಾಟಕ ಸಂಘದಿಂದ ಪ್ರಶಸ್ತಿ, ಗೊರುಚ ಪ್ರಶಸ್ತಿ, ವಿ.ಸಿ.ಸನ್ಮಾನ, ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿಯಿಂದ, ಜಿ. ನಾರಾಯಣ ಅಡಿಗ ಪ್ರಶಸ್ತಿ ಹತ್ತು ಹಲವು ಪ್ರಶಸ್ತಿಗಳು ಇವರನ್ನರಸಿ ಬಂದಿದೆ. ಜಾನಪದ ತಜ್ಞರಾಗಿ ಇವರು ನಿವ೯ಹಿಸಿದ ಕೆಲಸಗಳು ನಾಡಿನ ಜನತೆ ಮರೆಯುವಂತಿಲ್ಲ.*

ಪಿ.ಆರ್. ನಾಯ್ಕ

ಹೊಳೆಗದ್ದೆ ಕುಮಟಾ

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *