ಮೌಢ್ಯದ ಮಾರುಕಟ್ಟೆ & ಬಸವಣ್ಣನ ಮದ್ದು!

ಹೊನ್ನಾವರದಲ್ಲಿ ನಮ್ಮ ಸ್ನೇಹಿತನೊಬ್ಬನಿದ್ದ ಅವನು ಅನ್ಯರಿಗೆ ತಿಳಿಯದ ವಿಷಯವನ್ನೆತ್ತಿ ತಾನು ಬುದ್ಧಿವಂತ ಎಂದು ತೋರಿಸಿಕೊಳ್ಳುತಿದ್ದ. ಅವನ ವಾದ ಸರಣಿಗೆ ಸಿಕ್ಕವರು ಕೊನೆಗೆ ಇವನೆಂಥ ಅಲ್ಪ ಎನಿಸದೆ ಇರುತ್ತಿರಲಿಲ್ಲ. ಇಂಥವರ ವಿಚಾರ ಹಾಗಿರಲಿ, ಬದುಕಿನ ಕೊನೆಯ ಕ್ಷಣದವರೆಗೂ ಕಲಿಯುತ್ತಿರಬೇಕು ಎನ್ನುವ ಸಿದ್ಧಾಂತ ಒಪ್ಪಿಕೊಂಡಿರುವ ನಮಗೆ ಕೆಲವರು ಕೆಲವು ವಿಷಯಗಳಲ್ಲಿ ಬುದ್ಧಿವಂತರು, ಅರಿತವರಿರುತ್ತಾರೆ. ಎಲ್ಲರೂ ಎಲ್ಲವನ್ನೂ ತಿಳಿದಿರಲು ಸಾಧ್ಯವಿಲ್ಲ ಎನ್ನುವ ಅರಿವು (ನಮಗಿರಬೇಕು.) ಇರಬೇಕು.

ನಮ್ಮಂಥ ಕೆಲವರು ಈಗಿನ ಟಿ.ವಿ., ವಿಶೇಶವಾಗಿ ಸುದ್ದಿವಾಹಿನಿಗಳನ್ನು ನೋಡುವುದನ್ನೇ ಬಿಟ್ಟಿದ್ದೇವೆ. ದೂರದರ್ಶನ ಈಗ ಅವರವರ ಮೂಗಿನ ನೇರ ದರ್ಶನವಾಗಿ ಸತ್ಯ ಸಾಯುತ್ತಿದೆ. ಈ ಸತ್ಯೋತ್ತರ ಕಾಲದಲ್ಲಿ ಅಳಿವಿನಂಚಿನ ಸಾಯುವ ಸತ್ಯವನ್ನು ಉಳಿಸಿಕೊಳ್ಳುವುದೇ ಈಗ ಸವಾಲಿನ ಕೆಲಸ. ಸುಮಾರು ೧೫ ವರ್ಷಗಳಿಂದ ಟಿ.ವಿ. ಕಾರ್ಯಕ್ರಮದಿಂದ ದೂರ ಇರುವ ನನಗೆ ಮಕ್ಕಳ ಟಿವಿ ಸಮಯದ ದೆಸೆಯಿಂದಾಗಿ ಜೀ ಕನ್ನಡದಲ್ಲಿ ಬರುತ್ತಿರುವ ನಾ ನಿನ್ನ ಬಿಡಲಾರೆ, ಬ್ರಮ್ಹಗಂಟು ನೋಡುವ ದೌರ್ಭಾಗ್ಯ ಒದಗಿ ಬಂತು!

ನಾನಿನ್ನ ಬಿಡಲಾರೆಯಲ್ಲಿ ಸತ್ತ ಜೀವವೊಂದು ತನ್ನವರನ್ನು ರಕ್ಷಿಸುವ ವಿಧಾನ ವಿಶೇಶದ ಜೊತೆಗೆ ವಿಚಿತ್ರವೂ ಆಗಿದೆ. ದೇವರಂತೆ ಎಲ್ಲವನ್ನೂ ಮಾಡಲು ಬಿಟ್ಟು ಕೊನೆಗೆ ವಿರೋಧಿಗಳನ್ನು ಶಿಕ್ಷಿಸುವ, ತನ್ನವರನ್ನು ರಕ್ಷಿಸುವ ವಿಷಯ ನೋಡುಗರನ್ನು ಮೂರ್ಖರನ್ನಾಗಿಸುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕಾಂತಾರ ಸಿನೆಮಾಗಳಂತೆ ದೇವರು, ದೆವ್ವ, ಗುಳಿಕಗಳನ್ನು ವಿಜೃಂಬಿಸಿ ನಡುನಡುವೆ ಪ್ರಗತಿಪರತೆ, ಸುಧಾರಣಾ ವಾದಿ ಮಾತು ಹೇಳಿಸುವ ರಿಶಬ್‌ ಶೆಟ್ಟಿಯಂತೆ ಈ ಧಾರವಾಹಿಗಳ ನಿರ್ಧೇಶಕರು ಮನೋರಂಜನೆ ನೆಪದಲ್ಲಿ ಸುಳ್ಳು ನಂಬಿಕೆಯ ವಿಷವನ್ನು ಧರ್ಮ- ಆಚರಣೆ ಬಾಟಲ್‌ ಗಳಲ್ಲಿ ಹಾಕಿ ಸಾಯಿಸುವಂತಿದೆ.

ಮೌಢ್ಯ ತುಂಬಿ ವ್ಯಾಪಾರ ನಡೆಸುವುದು ಲಾಗಾಯ್ತಿನ ರೂಢಿ. ಟಿ.ಆರ್.ಪಿ. ನೆಪದಲ್ಲಿ ಸಿನೆಮಾ, ಧಾರವಾಹಿಗಳು ಅಂದರೆ ಮಾಧ್ಯಮಗಳ ಮೂಲಕ ಅಂಧಶೃದ್ಧೆ ಬೆಳೆಸುವುದು ಈಗೀಗಿನ ಖಯ್ಯಾಲಿ ಆಗುತ್ತಿದೆ.

ಗಾಂಧಿ ವಿಚಾರದಂತೆ ಕೆಟ್ಟದನ್ನು ಮಾಡಬೇಡಿ, ಕೆಟ್ಟದನ್ನು ನೋಡಬೇಡಿ, ಕೆಟ್ಟದನ್ನು ಕೇಳಬೇಡಿ ಎಂದು ಹೇಳುವ ಕಾಲ ಇದಲ್ಲ. ಇದು ಸತ್ಯೋತ್ತರ ಕಾಲ. ಇಲ್ಲಿ ಬೇಡವಾದದ್ದನ್ನು ನೋಡುವ ಕೇಳಿಸುವ ಟಿ.ವಿ, ಮೊಬೈಲ್‌ ಗಳಿವೆ. ಶಾಂತಿ ಹುಡುಕಿ ನಾಟ್‌ ರಿಚೇಬಲ್ ಪ್ರದೇಶ ತಲುಪಿಕೊಂಡರೆ ಜೀವನ, ಬದುಕು ನಡೆಯಲ್ಲ.

ಟಿ.ವಿ. ಮೊಬೈಲ್‌, ಧಾರವಾಹಿ- ಸಿನೇಮಾಗಳು ಈ ಆಧುನಿಕ ಕಾಲದಲ್ಲೂ ಮೌಢ್ಯ ಬಿತ್ತುವುದನ್ನು ತಡೆಯಬೇಕಾದ ವ್ಯವಸ್ಥೆ, ಸರ್ಕಾರಗಳು ದೇವರು-ಧರ್ಮ, ಸಂಪ್ರದಾಯದ ಹೆಸರಲ್ಲಿ ಮೂಢನಂಬಿಕೆ ಬೆಂಬಲಿಸುವವರನ್ನು ಕರೆದು ಸತ್ಕರಿಸುತ್ತಿವೆ. ಮೇಲಿಂದ ಇದು ಧಾರ್ಮಿಕ, ನಂಬಿಕೆಗಳ ವಿಚಾರ ಎನ್ನುವ ಒಗ್ಗರಣೆ ಬೇರೆ.

ಇಂಥ ಶೃತಿ ತಪ್ಪುತ್ತಿರುವ ಕಾಲದಲ್ಲಿ ನಮಗೆ ವಚನಗಳು ವಿವೇಕ ನೀಡುವ ಮೂಲಕ ಮದ್ದು ನೀಡಬಲ್ಲವು. ಜಗತ್ತಿಗೆ ಬೆಳಕು ನೀಡಿದ ಜಗಜ್ಯೋತಿ ಬಸವಣ್ಣ ಬಹುಹಿಂದೆ ಒಂದು ವಚನದಲ್ಲಿ ʼ ನೀರ ಕಂಡಲ್ಲಿ ಮುಳುಗುವರಯ್ಯ, ಮರನ ಕಂಡಲ್ಲಿ ಸುತ್ತುವರಯ್ಯ ಬತ್ತುವ ಜಲವ, ಒಣಗುವ ಮರನ ಮೆಚ್ಚಿದವರು ನಿಮ್ಮನೆತ್ತ ಬಲ್ಲರು?ʼ ಕೂಡಲಸಂಗಮದೇವಾ.. ಎನ್ನುತ್ತಾರೆ.

ಬಿಜ್ಜಳನ ಆಸ್ಥಾನದ ೧೨ ನೇ ಶತಮಾನದ ಕಂದಾಚಾರಗಳ ವೈದಿಕ ಕಪಟತನ ವಿರೋಧಿಸಿದ ಬಸವಣ್ಣನ ನಾಡಿನಲ್ಲಿ ಈಗಲೂ ಮೌಢ್ಯ ಬಿತ್ತಿ ಲಾಭದ ಬೆಳೆ ತೆಗೆಯುತ್ತಿರುವ ವ್ಯಾಪಾರಿಗಳಿಗೆ ಏನನ್ನೋಣ? ‌

-ನಿಮ್ಮ ಕನ್ನೇಶ್.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *