


ಸಿದ್ದಾಪುರ: ಸ್ವಂತ ಬಂಡವಾಳದಿಂದ ವರ್ಷದಿಂದ ವರ್ಷಕ್ಕೆ ಲಾಭ ಗಳಿಸುತ್ತಿರುವ ಸಿದ್ದಾಪುರದ ಜಿ.ಎಸ್.ಬಿ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ರಜತ ಮಹೋತ್ಸವ ಕಾರ್ಯಕ್ರಮ ಜನವರಿ 11 ರಂದು ಪಟ್ಟಣದ ವಿದ್ಯಾಧಿರಾಜ ಕಲಾಮಂದಿರದಲ್ಲಿ ವಿಜೃಂಭಣೆಯಿಂದ ಜರುಗಲಿದೆ ಎಂದು ಸೊಸೈಟಿ ಅಧ್ಯಕ್ಷ ನಾಗೇಶ ದಾಮೋದರ ಹುಲೇಕಲ್ ತಿಳಿಸಿದರು.


ಈ ಕುರಿತು ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿ, ಸಮಾಜದ 12 ಜನ ಸಮಾನ ಮನಸ್ಕರು ಸೇರಿ 1999 ರಲ್ಲಿ ಪ್ರಾರಂಭಿಸಿದ ಸೊಸೈಟಿಯು 25 ವರ್ಷ ಪೂರೈಸಿದ್ದು, ರಜತ ಮಹೋತ್ಸವ ಸಮಾರಂಭವನ್ನು ಜನವರಿ 11 ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ಆಯೋಜಿಸಲಾಗಿದೆ. ಶಿರಳಗಿಯ ಚೈತನ್ಯ ರಾಜಾರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮೀಜಿ ರಜತ ಮಹೋತ್ಸವ ಉದ್ಘಾಟಿಸುವರು. ಸಂಘದ ಅಧ್ಯಕ್ಷ ನಾಗೇಶ ಹುಲೇಕಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಿರಾಲಿ ಮಾರುತಿ ಸಹಕಾರಿ ಪತ್ತಿನ ಸಂಘದ ಅಧ್ಯಕ್ಷ ಅಶೋಕ ಪೈ ಹೆಗ್ಗಾರ, ತೀರ್ಥಹಳ್ಳಿ ಸರಸ್ವತಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಬಾಳೇಬೈಲು ರಾಘವೇಂದ್ರ ನಾಯಕ, ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಅಜಿತ ಶಿರಹಟ್ಟಿ, ಶಿರಶಿಯ ಲೆಕ್ಕ ಪರಿಶೋಧಕ ಮಂಜುನಾಥ ಶೆಟ್ಟಿ, ಸಿದ್ದಾಪುರದ ಲಕ್ಷ್ಮೀ ವೆಂಕಟೇಶ ದೇವಾಲಯದ ಮೊಕ್ತೇಸರ ಕೃಷ್ಣ ಮಹಾಲೆ ಉಪಸ್ಥಿತರಿರುವರು ಎಂದರು.
ಸಭಾ ಕಾರ್ಯಕ್ರಮದ ನಂತರ ಮಧ್ಯಾಹ್ನ 3 ಗಂಟೆಯಿಂದ ದಾಸವಾಣಿ ಮತ್ತು ಚಿತ್ರಕಲಾ ವೈಭವ ಕಾರ್ಯಕ್ರಮ ನಡೆಯಲಿದೆ. ಗಾಯನದಲ್ಲಿ ಅನಂತ ಕುಲಕರ್ಣಿ ಬಾಗಲಕೋಟೆ, ಕೀರ್ತಿಕುಮಾರ ಬಡಶೇಷಿ, ಮಾಲೂರಿನ ಪ್ರಸನ್ನ ವೆಂಕಟೇಶ ಕೊರ್ತಿ, ತಬಲಾದಲ್ಲಿ ಮಧುಸೂದನ ಕೊಪ್ಪ, ಗುರುರಾಜ ಹೆಗಡೆ ಅಡುಕಳಿ, ಹಾರ್ಮೋನಿಯಂನಲ್ಲಿ ಸತೀಶ ಭಟ್ಟ ಹೆಗ್ಗಾರ ಹಾಗೂ ಚಿತ್ರಕಲೆಯಲ್ಲಿ ನೀರ್ನಳ್ಳಿ ಗಣಪತಿ ಪಾಲ್ಗೊಳ್ಳಲಿದ್ದಾರೆ ಎಂದರು.



ಈ ಸಂದರ್ಭದಲ್ಲಿ ಸೊಸೈಟಿಯ ಉಪಾಧ್ಯಕ್ಷೆ ಸವಿತಾ ಕಾಮತ, ನಿರ್ದೇಶಕರಾದ ಮರ್ತು ರಾಮಚಂದ್ರ ನಾಯಕ ಬೇಂಗ್ರೆ, ಸುರೇಶ ಲಕ್ಷ್ಮಣ ಪೈ, ವಾಮನ ಸರ್ವೋತ್ತಮ ಪೈ, ಕೃಷ್ಣಾನಂದ ನರಸಿಂಹ ದೇವನಳ್ಳಿ, ವಾಸುದೇವ ಸುಬ್ರಾಯ ಶೇಟ್, ರಾಮಪ್ಪ ಗೋವಿಂದ ಕೊಂಡ್ಲಿ, ಸ್ವಾತಿ ನಾಯಕ ಬೇಂಗ್ರೆ ಉಪಸ್ಥಿತರಿದ್ದರು.


_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






