suresh naik road…. ಯೋಧರ ಸ್ಮರಣೆಯಿಂದ ಯುವಜನಾಂಗಕ್ಕೆ ಪ್ರೇರಣೆ…. ಹಳದೋಟ ರಸ್ತೆಗೆ ಯೋಧ ಸುರೇಶ್‌ ನಾಯ್ಕ ನಾಮಕರಣ!

ಯೋಧರನ್ನು ಸ್ಮರಿಸುವುದು ಯೋಧರ ಹೆಸರಲ್ಲಿ ಉತ್ತಮ ಕೆಲಸ ಮಾಡುವುದು ಸಮಾಜಮುಖಿ ನಡೆ ಇಂಥ ಕೆಲಸಗಳು ಮಾತ್ರ ಯುವಸಮೂಹಕ್ಕೆ ಪ್ರೇರಣೆ ನೀಡಬಲ್ಲವು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಅವರು ಸಿದ್ಧಾಪುರ ಹಳದೋಟದ ರಸ್ತೆ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಿ ಹಳದೋಟದ ರಸ್ತೆಗೆ ಯೋಧ ಸುರೇಶ್‌ ನಾಯ್ಕ ರಸ್ತೆ ನಾಮಕರಣದ ನಾಮಫಲಕ ಅನಾವರಣಗೊಳಿಸಿ ಮಾತನಾಡಿದರು.

ಸಿದ್ಧಾಪುರದಲ್ಲಿ ಮೊಟ್ಟ ಮೊದಲ ಬಾರಿಗೆ ಒಂದು ರಸ್ತೆಗೆ ಯೋಧರ ಹೆಸರು ನಾಮಕರಣ ಮಾಡಿರುವುದರ ಬಗ್ಗೆ ಹರ್ಷ ವ್ಯಕ್ತಪಡಿಸಿದ ಅವರು ಕೋಲಶಿರ್ಸಿ ಮತ್ತು ಬಿದ್ರಕಾನ, ಹಳದೋಟದ ನಾಗರಿಕರ ಈ ಪ್ರಯತ್ನ ಇತರರಿಗೂ ಮಾದರಿ ಎಂದರು. ಇದೇ ವೇಳೆ ಈ ಭಾಗದ ಜನಜೀವನದ ಅಭಿವೃದ್ಧಿ ತಮ್ಮ ಕನಸು ಎಂದ ಶಾಸಕರು ಯಾವುದೇ ಉತ್ತಮ ಕೆಲಸಕ್ಕೆ ನಮ್ಮ ಸಂಪೂರ್ಣ ಬೆಂಬಲ ಎಂದು ಘೋಶಿಸಿದರು. ಈ ವೇಳೆ ಉಪಸ್ಥಿ ತರಿದ್ದ ಗಣ್ಯರಿಗೆ ಸುರೇಶ್‌ ನಾಯ್ಕ ಕುಟುಂಬದಿಂದ ಗೌರವಿಸಿ, ಅಭಿನಂದಿಸಲಾಯಿತು.

ಈ ಉತ್ತಮ ಕೆಲಸಗಳಿಗೆ ಸಹಕರಿಸಿದ ಎಲ್ಲರನ್ನೂ ಅಭಿನಂದಿಸಿದ ಪತ್ರಕರ್ತ ಕೋಲಶಿರ್ಸಿ ಕನ್ನೇಶ್‌ ಉತ್ತಮ ಕೆಲಸಗಳಿಗೆ ಉತ್ತಮರ ಸಹಕಾರ ಕೂಡಾ ಅವಶ್ಯ ಹಲವು ಕೈಗಳು ಸೇರಿ ಇಂಥ ಸಮಾಜಮುಖಿ ಕೆಲಸ ಸಾಧ್ಯ ಮಾಡಬಹುದು ಎಂದು ಸರ್ವರಿಗೂ ವಂದಿಸಿದರು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

suresh naik road…. ಯೋಧರ ಸ್ಮರಣೆಯಿಂದ ಯುವಜನಾಂಗಕ್ಕೆ ಪ್ರೇರಣೆ…. ಹಳದೋಟ ರಸ್ತೆಗೆ ಯೋಧ ಸುರೇಶ್‌ ನಾಯ್ಕ ನಾಮಕರಣ!

ಯೋಧರನ್ನು ಸ್ಮರಿಸುವುದು ಯೋಧರ ಹೆಸರಲ್ಲಿ ಉತ್ತಮ ಕೆಲಸ ಮಾಡುವುದು ಸಮಾಜಮುಖಿ ನಡೆ ಇಂಥ ಕೆಲಸಗಳು ಮಾತ್ರ ಯುವಸಮೂಹಕ್ಕೆ ಪ್ರೇರಣೆ ನೀಡಬಲ್ಲವು ಎಂದು ಶಾಸಕ ಭೀಮಣ್ಣ...

anantkumar hegade….ಹೊಸ ಬಾಂಬ್‌ ಪ್ರಯೋಗದ ಹಿಂದೆ ಥರಾವರಿ ಲೆಕ್ಕಾಚಾರ ಅವ್ಯಾವುವೂ ಪ್ರಾಯೋಗಿಕವಲ್ಲ!

ಪೂರ್ವ ನಿಶ್ಚಯದಂತೆ ಮಾಜಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮತ್ತೊಂದು ಬಾರಿ ಮೂರ್ನಾಲ್ಕು ವರ್ಷದ ನಂತರ ಮತ್ತೊಂದು ಬಾಂಬ್‌ ಪ್ರಯೋಗಿಸಿದ್ದಾರೆ. ಹೀಗೆ ಹುಸಿ ಬಾಂಬ್‌...

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

Latest Posts

suresh naik road…. ಯೋಧರ ಸ್ಮರಣೆಯಿಂದ ಯುವಜನಾಂಗಕ್ಕೆ ಪ್ರೇರಣೆ…. ಹಳದೋಟ ರಸ್ತೆಗೆ ಯೋಧ ಸುರೇಶ್‌ ನಾಯ್ಕ ನಾಮಕರಣ!

ಯೋಧರನ್ನು ಸ್ಮರಿಸುವುದು ಯೋಧರ ಹೆಸರಲ್ಲಿ ಉತ್ತಮ ಕೆಲಸ ಮಾಡುವುದು ಸಮಾಜಮುಖಿ ನಡೆ ಇಂಥ ಕೆಲಸಗಳು ಮಾತ್ರ ಯುವಸಮೂಹಕ್ಕೆ ಪ್ರೇರಣೆ ನೀಡಬಲ್ಲವು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಅವರು ಸಿದ್ಧಾಪುರ ಹಳದೋಟದ ರಸ್ತೆ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಿ ಹಳದೋಟದ ರಸ್ತೆಗೆ ಯೋಧ ಸುರೇಶ್‌ ನಾಯ್ಕ ರಸ್ತೆ ನಾಮಕರಣದ ನಾಮಫಲಕ ಅನಾವರಣಗೊಳಿಸಿ ಮಾತನಾಡಿದರು. ಸಿದ್ಧಾಪುರದಲ್ಲಿ ಮೊಟ್ಟ...

Recommended For You

About the Author: Kanneshwar Naik

Leave a Reply

Your email address will not be published. Required fields are marked *